ಎಸ್ಪೆರಾಂಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೈಸೂರು ವಿವಿ ವಿಶ್ವಕೋಶದಿಂದ ಮಾಹಿತಿ ಸೇರ್ಪಡೆ
ಚುNo edit summary
೨೮ ನೇ ಸಾಲು:
 
 
 
'''ಎಸ್ಪರಾಂಟೊ''' ಒಂದು ನಿರ್ಮಿತ ಭಾಷೆ. [[ಪೋಲೆಂಡ್‌]]ನ ಎಲ್.ಎಲ್.ಜಹ್ಮೆನಾಪ್ ಇದನ್ನು ನಿರ್ಮಿಸಿ [[೧೮೮೭]]ರಲ್ಲಿ ಮೊದಲು ಪ್ರಕಟಿಸಿದ.
ಎಸ್ಪೆರಾಂಟೊ ( ಅಥವಾ ಎಸ್ಪರ್ಯಾಂಟೊ:) ಯುರೋಪಿನ ಅನೇಕ ಭಾಷೆಗಳ ಆಧಾರದ ಮೇಲೆ ನಿರ್ಮಿತವಾದ ಒಂದು ಅಂತಾರಾಷ್ಟ್ರೀಯ ಭಾಷೆ. ಪ್ರಪಂಚಕ್ಕೆಲ್ಲ ಒಂದು ಭಾಷೆಯಿದ್ದರೆ ಒಳ್ಳೆಯದು, ಅದರಿಂದ ಮಹತ್ತ್ವದ ಪ್ರಯೋಜನಗಳಾಗುತ್ತವೆ ಎಂಬ ಉದ್ದೇಶದಿಂದ ಕಲ್ಪಿತವಾದ ಭಾಷೆಗಳಲ್ಲಿ ಇದೂ ಒಂದು. ಬೇರೆ ಬೇರೆ ಭಾಷೆಗಳಿಂದ ತೆಗೆದುಕೊಂಡ ಅಂಶಗಳು ಇದರಲ್ಲಿ ತುಂಬ ಇವೆ. ಮೂಲ ಪದಗಳು ಹೆಚ್ಚಾಗಿಲ್ಲದಿದ್ದರೂ ಪ್ರತ್ಯಯಗಳ ನೆರವಿನಿಂದ ಹೇರಳವಾಗಿ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಿಕೊಳ್ಳಬಹುದು. ಈ ಭಾಷೆಯಲ್ಲಿ ಕೃತಕವಾದ ಅಂಶಗಳೂ ಇಲ್ಲದಿಲ್ಲ. ಇಂಡೋ-ಯುರೋಪಿಯನ್ ಭಾಷೆಗಳನ್ನೇ ಸಂಪುರ್ಣವಾಗಿ ಅವಲಂಬಿಸಿರುವ ಇದರಲ್ಲಿ ಅರ್ಧಕ್ಕೂ ಹೆಚ್ಚು ಲ್ಯಾಟಿನ್ ಅಂಶಗಳಿವೆ. ಮಿಕ್ಕ ಅಂಶಗಳಲ್ಲಿ ಹೆಚ್ಚು ಪಾಲು ಜಮಾರ್ಯ್‌ನಿಕ್ ಮೂಲದವು.
 
ಎಸ್ಪರ್ಯಾಂಟೊ ಭಾಷೆಗೆ ವ್ಯಾಕರಣವಿದ್ದು ಅದರಲ್ಲಿ ಅಪವಾದಗಳಿಲ್ಲದ ಹದಿನಾರು ನಿಯಮಗಳಿವೆ. ಎಲ್ಲ ನಾಮಪದಗಳೂ-0ಯಿಂದ ಅಂತ್ಯಗೊಳ್ಳುತ್ತವೆ. ಬಹುವಚನ ವಾದರೆ-ಎ ಆಗುತ್ತದೆ; ಗುಣವಾಚಕಗಳೆಲ್ಲ- ಂ ದಿಂದ ಕೊನೆಯಾಗುತ್ತದೆ; ಅವುಗಳ ಬಹುವಚನ-ಂಎ; ಹೀಗೆ ಭಾಷೆಯ ರಚನೆ ಸರಳವಾಗಿದೆ. ಈ ಭಾಷೆಗೆ ರೋಮನ್ ಲಿಪಿಯನ್ನೇ ಬಳಸಲಾಗಿದೆ. ಆದರೆ ಅದು ಧನ್ಯಾತ್ಮಕವಾಗಿದೆ. ಅದರ ಫಲವಾಗಿ ಬಳಕೆಯಲ್ಲಿರುವ ರೋಮನ್ ಲಿಪಿಯಲ್ಲಿ ಕೆಲವು ಸಣ್ಣಪುಟ್ಟ ಮಾರ್ಪಾಡುಗಳಾಗಿವೆ. ಎಸ್ಪರ್ಯಾಂಟೊ ಭಾಷೆಯನ್ನು ನಿರ್ಮಿಸಿದವ ರಷ್ಯದ ಒಬ್ಬ ವೈದ್ಯ ಲಾಜರಸ್ ಲುಸ್ವಿಗ್ ಜಮೆನ್ ಹಾಫ್ (1859-1917). ಈತ ಯುರೋಪಿನ ಪ್ರಮುಖ ಭಾಷೆಗಳೆಲ್ಲವನ್ನೂ ಬಲ್ಲವನಾಗಿದ್ದ. 1887ರಲ್ಲಿ ಅಂತಾರಾಷ್ಟ್ರೀಯ ಭಾಷೆ ಎಂಬ ಪುಸ್ತಿಕೆಯನ್ನು ಡಾ. ಎಸ್ಟರಾಂಟೊ ಎಂಬ ಗುಪ್ತ ನಾಮದಲ್ಲಿ ಪ್ರಕಟಿಸಿದ. ಎಸ್ಪರ್ಯಾಂಟೊ ಎಂದರೆ ಆಶಾವಾದಿ ಎಂದು ಅರ್ಥ. ಒಂದು ಜಗತ್ತಿಗೆ ಒಂದು ಭಾಷೆ ಇರಬೇಕು ಎಂಬುದು ಜಮೆನ್ ಹಾಫ್ನ ಹಂಬಲವಾಗಿತ್ತು ಆತ ಅದನ್ನು ಈಡೇರಿಸುವ ಕನಸು ಕಂಡ. ಈ ಉದ್ದೇಶದಿಂದ ತಾನು ನಿರ್ಮಿಸಿದ ಭಾಷೆಗೆ, ತಾನು ಬಳಸಿಕೊಂಡಿದ್ದ ಹೆಸರನ್ನೆ ಇಟ್ಟ.
೩೮ ನೇ ಸಾಲು:
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಸ್ಪರ್ಯಾಂಟೊ|ಎಸ್ಪರ್ಯಾಂಟೊ}}
 
 
[[ವರ್ಗ:ಭಾಷೆಗಳು]]
"https://kn.wikipedia.org/wiki/ಎಸ್ಪೆರಾಂಟೊ" ಇಂದ ಪಡೆಯಲ್ಪಟ್ಟಿದೆ