ಒಡಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫ ನೇ ಸಾಲು:
ಸಾಹಿತ್ಯಭಾಷೆಯಾಗಿ ಒರಿಯ ಎಷ್ಟು ಸಮೃದ್ಧವಾಗಿ ಬೆಳೆದಿದೆಯೆನ್ನುವುದನ್ನು ಸೂಕ್ಷ್ಮವಾಗಿ ತೋರಿಸುವ ಸಲುವಾಗಿ ಮಾತ್ರ ಇಲ್ಲಿ ಸಾಹಿತ್ಯ ಭಾಗವನ್ನು ಸಂಗ್ರಹವಾಗಿ ಕೊಟ್ಟಿದೆ. ವಿವರಗಳಿಗೆ (ನೋಡಿ- [[ಒರಿಯಾ ಸಾಹಿತ್ಯ]]).
 
ಒರಿಯ ಭಾಷೆಯ ಸಾಹಿತ್ಯ ತುಂಬ ಸಮೃದ್ಧವಾಗಿದೆ. ಅದು ಸಾಮಾನ್ಯ ಜನತೆಯ ಸಾಹಿತ್ಯ. ಈ ರಾಜ್ಯದಲ್ಲಿ ನೆಲೆನಿಂತ ಆಂಧ್ರರು, ಮರಾಠರು, ಬಂಗಾಳಿಗಳು, ಮುಸ್ಲಿಮರು, ಆದಿವಾಸಿಗಳು-ಎಲ್ಲರೂ ಇದಕ್ಕೆ ತಮ್ಮ ಕಾಣಿಕೆಗಳನ್ನರ್ಪಿಸಿದ್ದಾರೆ. ಜಗನ್ನಾಥ ದೇವರನ್ನು ವರ್ಣಿಸಿದ ಸಾಲಬೆಗ ಎನ್ನುವ ಮುಸ್ಲಿಂ ಕವಿ, ಮಧ್ಯಕಾಲೀನ ವೈಷ್ಣವ ಸಾಹಿತ್ಯವನ್ನು ಬೆಳೆಸಿದ ಚೈತನ್ಯ ಮಹರ್ಷಿಯ ಶಿಷ್ಯರಾದ ಬಂಗಾಳಿ ವೈಷ್ಣವರು ಜನತೆಯ ನಾಲಗೆಯಲ್ಲಿ ನಲಿದಾಡುವಂಥ ಸಂಗೀತ ರೂಪಕಗಳನ್ನು ರಚಿಸಿದ ಕುರುಡನಾದ ಖೊಂಡಕವಿ-ಇವರೆಲ್ಲ ಈ ಸಾಹಿತ್ಯಕ್ಕೆ ಅಪುರ್ವವಾದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ರಾಧಾನಾಥ ರೇ, ಆನಂದಶಂಕರ ರೇ ಮುಂತಾದ ಪ್ರತಿಭಾವಂತ ಬಂಗಾಳಿ ಕವಿಗಳು ಒರಿಯದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಶತಮಾನಗಳುರುಳಿದಂತೆ, ರಾಜವಂಶಗಳು ಬದಲಾದಾಗ ಧಾರ್ಮಿಕ ವಿಶ್ವಾಸಗಳು ಬದಲಾದಂತೆ, ಸಾಹಿತ್ಯ ಸ್ವರೂಪವೂ ಮಾರ್ಪಾಟಾದುದು ಕಂಡುಬರುತ್ತದೆ. ಮೊದಲು ಜೈನ್, ಆಮೇಲೆ ಬೌದ್ಧ, ತರುವಾಯ ಶೈವ ಮತ್ತು ಶಾಕ್ತಮತಗಳು ಪ್ರಭಾವಶಾಲಿಯಾಗಿದ್ದುವು. ಆಮೇಲೆ ಜನತೆಯ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿ ಅವರ ಮನಸ್ಸಿನಲ್ಲಿ ಬೇರೂರಿನಿಂತ ಧಾರ್ಮಿಕ ಸಂಪ್ರದಾಯವೆಂದರೆ ರಾಮಭಕ್ತಿ ಮತ್ತು ಕೃಷ್ಣಭಕ್ತಿ ಸಂಪ್ರದಾಯ. ಒರಿಯ ಸಾಹಿತ್ಯ ಇದರಿಂದ ತುಂಬ ಸಮೃದ್ಧವಾಗಿದೆ. ಒರಿಯದಲ್ಲಿ ಕಡಿಮೆಯೆಂದರೆ ಮೂವತ್ತು ರಾಮಾಯಣಗಳೂ ನಾಲ್ಕೈದು ಮಹಾಭಾರತಗಳೂ ಇವೆ. ಎಲ್ಲ ಪುರಾಣಗಳೂ ಇವೆ. ಮಧ್ಯಕಾಲದ ಅಲಂಕಾರಶಾಸ್ತ್ರಸಾಹಿತ್ಯವೂ ಸಾಕಷ್ಟು ಸಮೃದ್ದವಾಗಿದೆ. ಪುರಾಣಗ್ರಂಥಗಳು ತಮ್ಮ ಕಥಾಪ್ರೌಢಿಮೆಯಿಂದಲೂ ಅಲಂಕಾರಗ್ರಂಥಗಳು ತಮ್ಮ ಭಾಷೆ, ಭಾವ ಮತ್ತು ಶಬ್ದಾರ್ಥಸೌಂದರ್ಯದಿಂದಲೂ ಜನರ ಮನಸ್ಸನ್ನು ಸೂರೆಗೊಂಡಿವೆ. ಜನತೆಯ ಹೃದಯವನ್ನು ಆಕರ್ಷಿಸುವುದರಲ್ಲಿ ಪ್ರಾಚೀನ ಸಾಹಿತ್ಯದಷ್ಟು ಆಧುನಿಕ ಸಾಹಿತ್ಯ ಸಫಲವಾಗಿಲ್ಲ ಎಂದು ಹೇಳಬಹುದು. ಆದರೂ ಭಾಷೆ ಮತ್ತು ಕಲ್ಪನೆಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಒರಿಯ ಸಾಹಿತ್ಯ ತನ್ನ ಆಧುನಿಕ ಬರೆವಣಿಗೆಗಳಲ್ಲಿ ಪರಿಪಕ್ವತೆಯನ್ನು ಹೊಂದಿದೆ. ಇದರ ಕೆಲವು ಅತ್ಯುತ್ತಮ ಗ್ರಂಥಗಳು ಭಾರತದ ಇತರ ಭಾಷೆಗಳಲ್ಲಿನ ಅತ್ಯುತ್ತಮ ಗ್ರಂಥಗಳ ಸಾಲಿನಲ್ಲಿ ನಿಲ್ಲಬಲ್ಲವಾಗಿವೆ. (ಜಿ.ಬಿ.ಡಿ.)
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒರಿಯ |ಒರಿಯ}}
 
"https://kn.wikipedia.org/wiki/ಒಡಿಯಾ" ಇಂದ ಪಡೆಯಲ್ಪಟ್ಟಿದೆ