ಒಡಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
 
== ಲಿಖಿತ ರೂಪಗಳು ==
[[ಕಳಿಂಗ]] ರಾಜನಾದ ಅನಂತವರ್ಮ ವಜ್ರಹಸ್ತದೇವನ ಶಿಲಾಶಾಸನವೇ (1051) ಒರಿಯದಲ್ಲಿ ಈವರೆಗೆ ದೊರೆತ ಅತಿ ಪ್ರಾಚೀನ ಶಾಸನ. ಇದಲ್ಲದೆ ಪ್ರ.ಶ.ಪು. 3ನೆಯ ಶತಮಾನದ ಅಶೋಕನ[[ಅಶೋಕ]]ನ ಮತ್ತು ಪ್ರ.ಶ.ಪು. ಮೊದಲ ಶತಮಾನದ ಖಾರವೇಲನ[[ಖಾರವೇಲ]]ನ ಶಿಲಾಶಾಸನಗಳು ಕೂಡ ಒರಿಸ್ಸದಲ್ಲಿ ಸಿಕ್ಕಿವೆ. ಈ ಶಾಸನಗಳಿಂದ ಆ ಕಾಲದಲ್ಲಿ [[ಪಾಲಿ]] ಭಾಷೆ ಪ್ರಚಾರದಲ್ಲಿದ್ದುದು ಕಂಡುಬರುತ್ತದೆ. ಈ ಶಾಸನಗಳ ಮತ್ತು ನಮಗೆ ದೊರೆತ ಅತಿ ಪ್ರಾಚೀನ ಸಾಹಿತ್ಯಕೃತಿಗಳ ನಡುವಣ ಯುಗದಲ್ಲಿ ಓಢ್ರ ಎನ್ನುವ ಉಪಭಾಷೆಯ ಹೆಸರೂ ಕೇಳಿಬರುತ್ತದೆ. ಪಾಲಿ, ಪ್ರಾಕೃತಗಳ ಪ್ರಭಾವದಿಂದ ಬೆಳೆದುಬಂದ ಈ ಭಾಷೆಯನ್ನು ಬೌದ್ಧರು ಉಪಯೋಗಿಸುತ್ತಿದ್ದರು. ಎರಡನೆಯ ಶತಮಾನದ [[ಭರತನ ನಾಟ್ಯಶಾಸ್ತ್ರದಲ್ಲಿಯೂನಾಟ್ಯಶಾಸ್ತ್ರ]]ದಲ್ಲಿಯೂ 7ನೆಯ ಶತಮಾನದ ಹೂಯೆನ್ತ್ಸಾಂಗನ[[ಹೂಯೆನ್ತ್ಸಾಂಗ]]ನ ಬರೆಹಗಳಲ್ಲಿಯೂ ಇದರ ಉಲ್ಲೇಖವಿದೆ. ಒರಿಯ ರಾಜ್ಯದ ಗಡಿಯೊಳಗೆ ಪ್ರಚಾರದಲ್ಲಿದ್ದ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಲ್ಲಿ ಬರುವ ಒರಿಯ ಶಬ್ದ ಮತ್ತು ನುಡಿಗಟ್ಟುಗಳಿಂದಲೂ ಏಳನೆಯ ಮತ್ತು 9ನೆಯ ಶತಮಾನದ ಶಿಲಾಶಾಸನಗಳಿಂದಲೂ ಒರಿಯ ಭಾಷೆಯ ಚಾರಿತ್ರಿಕ ಪ್ರಗತಿಯನ್ನು ಊಹಿಸಬಹುದು. 13ನೆಯ ಶತಮಾನದ [[ಭುವನೇಶ್ವರ]] ದೇವಸ್ಥಾನದ ಶಾಸನದಿಂದ ಒರಿಯ ಭಾಷೆ ಆ ವೇಳೆಗಾಗಲೆ ಕೆಲವು ಶತಮಾನಗಳಿಂದ ಅಭಿವೃದ್ಧಿಗೊಳ್ಳುತ್ತಿತ್ತೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. 10-12ನೆಯ ಶತಮಾನಗಳ ಮಧ್ಯದಲ್ಲಿ ರಚಿಸಲಾಗಿದೆಯೆಂದು ಊಹಿಸಬಹುದಾದ ಸಾರಳಾದಾಸ ಕವಿಯ ಮಹಾಭಾರತವೇ ಉಪಲಬ್ಧ ಒರಿಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಗ್ರಂಥದ ನಿಜವಾದ ಕಾಲನಿಷ್ಕರ್ಷೆಯ ಬಗ್ಗೆ ವಾದವಿವಾದಗಳಿದ್ದು ಕೆಲವರು ಇದನ್ನು 15ನೆಯ ಶತಮಾನದ ಕೃತಿಯೆಂದು ಊಹಿಸುತ್ತಾರೆ.
 
== ಭಾಷಾ ಪ್ರಭೇದಗಳು ==
"https://kn.wikipedia.org/wiki/ಒಡಿಯಾ" ಇಂದ ಪಡೆಯಲ್ಪಟ್ಟಿದೆ