ವಲ್ಲಭ್‌ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚಿತ್ರಗಳನ್ನು ಸೇರಿಸಲಾಗಿದೆ.
೨೭ ನೇ ಸಾಲು:
|children = [[Maniben Patel]], [[Dahyabhai Patel]]
}}
[[ಚಿತ್ರ:Congressmen.png|thumb|[[Maulana Azad]], Sardar Patel (third from left, in the foreground), and other Congressmen at Wardha]]
 
[[ಚಿತ್ರ:Pic21.jpg|thumb|left|ಪಟೇಲ್ ಬಾರ್ಡೋಲಿಯ ರೈತರೊಂದಿಗೆ]]
[[ಚಿತ್ರ:Sardarpatel.jpg|thumb|ಸರ್ದಾರ್ ವಲ್ಲಭಭಾಯ್ ಪಟೇಲ್]]
[[ಚಿತ್ರ:Hyderabad state 1909.jpg|thumb|left|[[Hyderabad state]] in ೧೯೦೯. Its area stretches over the present Indian states of [[Andhra Pradesh]], [[Karnataka]], [[Maharashtra]].]]
 
'''ಸರ್ದಾರ್ ವಲ್ಲಭಭಾಯ್ ಪಟೇಲ್''' ([[ಅಕ್ಟೋಬರ್ ೩೧]], [[೧೮೭೫]] - [[ಡಿಸೆಂಬರ್ ೧೫]], [[೧೯೫೦]]) '''ಉಕ್ಕಿನ ಮನುಷ್ಯ''' - ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ. ಇವರು ಗಾಂಧೀಜಿಯವರ ಕೆಳಗೆ [[ಕಾ೦ಗ್ರೆಸ್ ಪಕ್ಷ|ಭಾರತೀಯ ರಾಷ್ಟೀಯ ಕಾಂಗ್ರೆಸ್‌ನ]] ಮುಖ್ಯ ನಿರ್ವಾಹಕರು ಇವರೇ ಆಗಿದ್ದರು. ಇವರ ಪ್ರಯತ್ನಗಳಿಂದಲೇ ೧೯೩೭ರ ಮತದಾನದಲ್ಲಿ ಕಾಂಗ್ರೆಸ್ ೧೦೦% ಜಯವನ್ನು ಸಾಧಿಸಿತು.
 
ವಸ್ತುಶಃ ಸರ್ದಾರ್ ಪಟೇಲ್‌ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು,. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಗೆ ಹಿಂದಕ್ಕೆ ಸರಿದು [[ಜವಾಹರಲಾಲ್ ನೆಹರು|ಜವಾಹರ್ ಲಾಲ್ ನೆಹರುರವರಿಗೆ]] ದಾರಿ ಮಾಡಿಕೊಟ್ಟರು.
 
ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ [[೧೯೯೧]] ರಲ್ಲಿ [[ಭಾರತ ರತ್ನ]] ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
 
 
== ಬಾಲ್ಯ ==
 
ವಲ್ಲಭಭಾಯ್ ಝವೇರಭಾಯ್ ಪಟೇಲ್ ಹುಟ್ಟಿದ್ದು [[ಗುಜರಾತ್|ಗುಜರಾತಿನ]] ನಡಿಯಾದ್ ಎಂಬಲ್ಲಿ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ.ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, [[ವಿಠ್ಠಲಭಾಯ್ ಪಟೇಲ್|ವಿಠ್ಠಲಭಾಯಿ]] ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು.
 
Line ೪೯ ⟶ ೫೦:
 
== ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ==
 
 
೧೯೧೮ರಲ್ಲಿ ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ,ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ [[ಸ್ವಾತಂತ್ರ್ಯ ಹೋರಾಟ|ಸ್ವಾತಂತ್ರ್ಯ ಹೋರಾಟದ]] ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ [[ಮಹಾತ್ಮ ಗಾಂಧಿ|ಗಾಂಧಿ]]ಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, [[ಅನ್ನಿ ಬೆಸಂಟ್|ಅನ್ನಿ ಬೆಸಂಟರ]] ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು [[ಮಹಾತ್ಮ ಗಾಂಧಿ|ಗಾಂಧಿ]] ಸೂಚಿಸಿದಾಗ,ಅವರ ಮನಃಪರಿವರ್ತನೆಯಾಯಿತು. ಗಾಂಧಿಯವರ [[ಚಂಪಾರಣ್ಯ|ಚಂಪಾರಣ್ಯದ]] [[ಸತ್ಯಾಗ್ರಹ|ಸತ್ಯಾಗ್ರಹದ]] ನಂತರ ಪಟೇಲರಿಗೆ [[ಭಾರತ|ಭಾರತದ]] ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು. ಪಟೇಲರು [[ಕಾಂಗ್ರೆಸ್]] ಪಕ್ಷ ಸೇರಿದ್ದು ೧೯೧೮ರ ನಂತರ. ಅವರು ಕಾರ್ಯದರ್ಶಿಯಾಗಿದ್ದ [[ಗುಜರಾತ್]] ಸಭಾ [[೧೯೨೦]] ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು ೧೯೪೭ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
 
== ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳು ==
 
ಖೇಡಾ ಹೋರಾಟದೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟರು. [[ಗುಜರಾತ್|ಗುಜರಾತಿನ]] ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. [[ಮಹಾತ್ಮ ಗಾಂಧಿ|ಗಾಂಧಿ]] ಈ ಹೋರಾಟಕ್ಕೆ ಒಪ್ಪಿದ್ದರೂ ಸ್ವತಃ [[ಚಂಪಾರಣ್ಯ|ಚಂಪಾರಣ್ಯದ]] ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಕಾರಣ, ಈ ಹೋರಾಟದ ಮುಖಂಡತ್ವವನ್ನು ವಹಿಸಲು ಅಸಾಧ್ಯವಾಗಿತ್ತು. ಖೇಡಾ ವಿಷಯಕ್ಕಾಗಿ ಪೂರ್ಣಾವಧಿ ಸಮಯವನ್ನು ಮೀಸಲಿಡುವ ಸ್ವಯಂಸೇವಕನಿಗಾಗಿ ಗಾಂಧಿ ಕೇಳಿದಾಗ ಪಟೇಲರು ಕೈಯೆತ್ತಿ , ಎದ್ದು ನಿಂತರು. ಹಿಂದೆ ವಕೀಲರೂ, ಗಾಂಧಿಯವರ ಅನುಯಾಯಿಗಳೂ ಆಗಿದ್ದ ನರಹರಿ ಪಾರೀಖ್ ಮತ್ತು ಮೋಹನಲಾಲ್ ಪಂಡ್ಯರೊಂದಿಗೆ ಪಟೇಲರು ಹಳ್ಳಿಹಳ್ಳಿ ಪ್ರವಾಸ ಕೈಗೊಂಡು, ಗ್ರಾಮಸ್ಥರ ತೊಂದರೆಗಳನ್ನು ಪರಿಶೀಲಿಸಿ, ರಾಜ್ಯವ್ಯಾಪಿ ಆಂದೋಳನದಲ್ಲಿ ಅವರೆಲ್ಲರ ಬೆಂಬಲವನ್ನು ಬೇಡಿದರು. ರಾಜ್ಯದ ಎಲ್ಲೆಡೆಗಳಲ್ಲಿ [[ಹಿಂದೂ]], [[ಮುಸ್ಲಿಂ]] ಎನ್ನದೆ, ಬಹುತೇಕ ಪ್ರತಿಯೊಬ್ಬರೂ ಪಟೇಲರ ಪರಿಶ್ರಮ ಮತ್ತು ನಾಯಕತ್ವವನ್ನು ಒಪ್ಪಿಕೊಂಡರು. ಪಟೇಲರು ಈ ಹೋರಾಟವು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಹಳ್ಳಿಗರು ಒಗ್ಗಟ್ಟನ್ನು ಮುರಿಯಬಾರದೆಂದು ಸಾರಿಹೇಳಿದರು. ಪಟೇಲರ ಈ ಕಾರ್ಯದಲ್ಲಿ ರಾಷ್ಟ್ರೀಯವಾದಿಗಳಾದ [[ಅಬ್ಬಾಸ್ ತ್ಯಾಬ್ಜೀ]] ಮತ್ತು [[ಅಹಮದಾಬಾದ್|ಅಹಮದಾಬಾದಿನ]] [[ಸಾರಾಭಾಯ್]] ಕೈಗೂಡಿಸಿದರು.
 
ಹಳ್ಳಿಗರ [[ಕರನಿರಾಕರಣೆ|ಕರನಿರಾಕರಣೆಯ]] [[ಸತ್ಯಾಗ್ರಹ|ಸತ್ಯಾಗ್ರಹವನ್ನು]] ಮುರಿಯಲು ಸರಕಾರ ಪೋಲಿಸ್ ಪಡೆಗಳನ್ನು ಕಳುಹಿಸಿ, ಜಮೀನು, ಸಾಕುಪ್ರಾಣಿಗಳನ್ನೊಳಗೊಂಡು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ಬಂಧಿತರಾದರೂ ಹಳ್ಳಿಗರ ಕಡೆಯಿಂದ ಹಿಂಸಾತ್ಮಕ ಪ್ರತಿಕ್ರಿಯೆ ಇಲ್ಲವೇಇಲ್ಲವೆನ್ನುವಷ್ಟು ಅಪರೂಪವಾಗಿತ್ತು. ಸತ್ಯಾಗ್ರಹಿಗಳಿಗೆ ರಾಜ್ಯಾದ್ಯಂತ ಜನಸಾಮಾನ್ಯರು, ಆಹಾರ, ಬಟ್ಟೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಿ, ಬೆಂಬಲ ಸೂಚಿಸಿದರು.ತೆರಿಗೆ ಸಲ್ಲಿಸಿದ ,ಸರಕಾರಕ್ಕೆ ಬೆಂಬಲವಿತ್ತ ಹಳ್ಳಿಗಳಿಗೆ [[ಗುಜರಾತ್|ಗುಜರಾತಿನ]] ಜನ ಬಹಿಷ್ಕಾರ ಹಾಕಿದರು. ಈ ಪ್ರತಿಭಟನೆಗೆ [[ಭಾರತ|ಭಾರತದಾದ್ಯಂತ]] ಸಹಾನುಭೂತಿ ವ್ಯಕ್ತವಾದರೂ, ಈ ಪ್ರತಿಭಟನೆ ಸ್ಥಳೀಯ ಸಮಸ್ಯೆಗಾಗಿತ್ತೇ ಹೊರತು, ಭಾರತದ ಸ್ವಾತಂತ್ರ್ಯಕ್ಕಾಗಿ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ೧೯೧೯ರಲ್ಲಿ ಸರಕಾರ ಮಣಿದು, ಕರವನ್ನು ಮುಂದೂಡಿದ್ದಷ್ಟೇ ಅಲ್ಲ, ಅದರ ದರವನ್ನೂ ಕಡಿಮೆ ಮಾಡುವುದರೊಂದಿಗೆ ಈ ಹೋರಾಟ ಮುಕ್ತಾಯ ಕಂಡಿತು.
 
[[ಚಿತ್ರ:Pic21.jpg|thumb|left|ಪಟೇಲ್ ಬಾರ್ಡೋಲಿಯ ರೈತರೊಂದಿಗೆ]]
ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆಯನ್ನು ಪಡೆದು, [[ಭಾರತ|ಭಾರತದಾದ್ಯಂತ]] [[ರಾಜಕೀಯ]] ಧುರೀಣರ ಮೆಚ್ಚುಗೆಯನ್ನು ಗಳಿಸಿದರು.೧೯೧೯ ರಿಂದ ೧೯೨೮ರವರೆಗೆ, ಪಟೇಲರು, ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಙಾನದ ವಿರುದ್ಧ ವ್ಯಾಪಕ [[ಚಳುವಳಿ]] ನಡೆಸಿದರು. ೧೯೨೨ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು. ಇದರಿಂದ ಪಟೇಲರಿಗೆ ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ ಮತ್ತು ಆಡಳಿತರಂಗಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವ ಅವಕಾಶ ದೊರಕಿತು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದಿಗೆ ವಿದ್ಯುತ್ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದರು. ಹಿಂದೂ-ಮುಸ್ಲಿಮ್ ವಿವಾದದಂತಹ ನಾಜೂಕು ವಿಷಯಗಳನ್ನೂ ಕೈಗೆತ್ತಿಕೊಂಡು, ನಗರದ ಬಹುತೇಕ ಜನಸಂಖ್ಯೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡರು.
 
Line ೬೪ ⟶ ೬೨:
 
== ಭಾರತದ ವಿಭಜನೆ ==
 
[[ಮಹಮದ್ ಆಲಿ ಜಿನ್ನಾ|ಜಿನ್ನಾ]]ರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ [[ಮುಸ್ಲಿಮ್]] ಪ್ರತ್ಯೇಕತಾ ಬೇಡಿಕೆಯಿಂದ [[ಭಾರತ|ಭಾರತದ]] ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ [[ಕಾಂಗ್ರೆಸ್]] ನಾಯಕರುಗಳಲ್ಲಿ ಪಟೇಲರು ಒಬ್ಬರಾಗಿದ್ದರು. ಕಾಂಗ್ರೆಸ್ ಮತ್ತು [[ಮುಸ್ಲಿಮ್ ಲೀಗ್]] ಮಧ್ಯೆ ಸಂಧಾನದ ಪ್ರಯತ್ನಗಳನ್ನು ವಿಫಲಗೊಳಿಸಿ, ಜಿನ್ನಾ ತನ್ನ ಹಿಂಬಾಲಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದದ್ದು ಪಟೇಲರನ್ನು ತೀವ್ರ ಸಂತಾಪಕ್ಕೆ ಈಡುಮಾಡಿತು.( ಜಿನ್ನಾ ಕರೆ ಕೊಟ್ಟ [[ಡೈರೆಕ್ಟ್ ಆಕ್ಷನ್ ಡೇ]] ಎಂಬ ಅಂದೋಳನದಲ್ಲಿ ೫೦೦೦ಕ್ಕೂ (?) ಹೆಚ್ಚು ಮಂದಿ ಕೊಲೆಗೀಡಾದರು.:- the death toll is estimated at between 500,000 to 1 million people: ಇಂಗ್ಲಿಷ್ ತಾಣ ನೋಡಿ). ಆದರೂ ಜಿನ್ನಾ ಮುಸ್ಲಿಮರ ಜನಪ್ರಿಯ ನಾಯಕನಾಗಿರುವುದರಿಂದ, ರಾಷ್ಟ್ರೀಯವಾದಿಗಳೊಂದಿಗಿನ ಅವರ ಭಿನ್ನಾಭಿಪ್ರಾಯಗಳು, ಬೃಹತ್ ಹಿಂದೂ ಮುಸ್ಲಿಮ್ ದಂಗೆಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳ ಅರಿವೂ ಅವರಿಗಿತ್ತು. [[ಜವಾಹರಲಾಲ್ ನೆಹರು|ನೆಹರು]] ಮತ್ತಿತರರು ವಿಭಜನೆಯ ಸಾಧ್ಯತೆಯನ್ನು ಒಪ್ಪಿದ ಮೇಲೆ , ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ [[ಮಹಾತ್ಮ ಗಾಂಧಿ|ಗಾಂಧಿ]]ಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಯೆ ಒಪ್ಪಿಸುವ ಕಾರ್ಯವನ್ನು ಪಟೇಲರು ವಹಿಸಿಕೊಂಡರು.
 
Line ೮೨ ⟶ ೭೯:
 
== ಭಾರತದ ರಾಜಕೀಯ ಏಕೀಕರಣ ==
[[ಚಿತ್ರ:Congressmen.png|thumb|[[Maulana Azad]], Sardar Patel (third from left, in the foreground), and other Congressmen at Wardha]]
೫೬೫ ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು [[ಕಾಂಗ್ರೆಸ್]] ಪಕ್ಷದ , [[ಮೌಂಟ್ ಬ್ಯಾಟನ್ನ|ಮೌಂಟ್ ಬ್ಯಾಟನ್ನರ]] ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು [[ಮಹಾತ್ಮ ಗಾಂಧಿ|ಗಾಂಧೀಜಿ]] ಕೂಡಾ ಪಟೇಲರಿಗೆ ಹೇಳಿದ್ದರು. ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೋಡಿದ್ದರು.
 
Line ೯೦ ⟶ ೮೬:
 
ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ [[ಪಾಕಿಸ್ತಾನ|ಪಾಕಿಸ್ತಾನದಿಂದ]] ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ ೮೦ [[ಹಿಂದೂ|ಹಿಂದೂಗಳಾಗಿದ್ದರು]]. ಪಟೇಲರು ಮುತ್ಸದ್ದಿತನದೊಡನೆ, ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ, ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ([[ಆರ್ಜೀ ಹುಕುಮತ್]]) ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು.
[[ಚಿತ್ರ:Hyderabad state 1909.jpg|thumb|left|[[Hyderabad state]] in ೧೯೦೯. Its area stretches over the present Indian states of [[Andhra Pradesh]], [[Karnataka]], [[Maharashtra]].]]
 
ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು. ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ ೯೯.೫ ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ [[ಕರ್ನಾಟಕ]], [[ಮಹಾರಾಷ್ಟ್ರ]] ಮತ್ತು [[ಆಂಧ್ರ ಪ್ರದೇಶ|ಆಂಧ್ರ]]ದ ಭಾಗಗಳನ್ನೊಳಗೊಂಡ [[ಹೈದರಾಬಾದ್]] ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ [[ನಿಜಾಮ]] ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು.ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ, ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.[[ಕಾಸೀಂ ರಜ್ವಿ|ಕಾಸೀಂ ರಜ್ವಿಯಂಬ]] ಮತಾಂಧ ಮತ್ತು ಉಗ್ರವಾದಿಯ ಮುಂದಾಳುತ್ವದಲ್ಲಿ ಸಾವಿರಾರು ಜನ ರಜಾಕಾರರು, ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು. ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. [[ಸ್ವಾಮಿ ರಮಾನಂದತೀರ್ಥ|ಸ್ವಾಮಿ ರಮಾನಂದತೀರ್ಥರ]] ನೇತೃತ್ವದಲ್ಲಿ [[ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ]] ನೆಡೆಯಿತು. [[ಕರ್ನಾಟಕ|ಕರ್ನಾಟಕದ]] ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು, ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.