"ವಿಶ್ವ ಹಾಸ್ಪಿಸ್ ಆರೈಕೆ ಮತ್ತು ಉಪಶಮನ ಆರೈಕೆ ದಿನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: == ವಿಶ್ವ ಮರಣಶಯ್ಯೆ ಆರೈಕೆ (ಹಾಸ್ಪೈಸ್ ಕೇರ್) ಮತ್ತು ಉಪಶಮನ ಆರೈಕೆ (ಪ್ಯಾಲಿಯೇ...)
 
==ಮರಣಶಯ್ಯೆಯ ಆರೈಕೆ (ಹಾಸ್ಪಿಸ್ ಕೇರ್) ಎಂದರೆ ಏನು? ==
ಹಲವು ರೋಗಗಳಿಂದ ಬಳಲುತ್ತಿರುವ ರೋಗಿಗಳು, ಆಸ್ಪತ್ರೆಯಂಥಹ ದಿವ್ಯಪರಿಸರದಲ್ಲಿದ್ದುಕೊಂಡು ತಮ್ಮ ಜೀವನದ ಅಂತಿಮ ದಿನಗಳಲ್ಲಿ ಮತ್ತಷ್ಟು ಘನತೆಯಿಂದ, ಆರಾಮದಾಯಕವಾಗಿ ಬದುಕು ಮುಗಿಸುವ ಒಂದು ಪರ್ಯಾಯ ವ್ಯವಸ್ಥೆಯನ್ನು ಒದಗಿಸುವುದನ್ನೇ ಮರಣಶಯ್ಯೆಯ ಆರೈಕೆ ಎನ್ನಲಾಗಿದೆ.
 
ಉಪಶಾಮಕ ಔಷಧಿಯು ತನ್ನ ನೋವವನ್ನು ನಿಭಾಯಿಸುವಲ್ಲಿ ರೋಗಿಗೆ ಸಹಾಯಕವಾದರೆ, ಮರಣಶಯ್ಯೆಯ ಆರೈಕೆ ಮತ್ತು ರೋಗ ಉಪಶಮನ ಆರೈಕೆಯಿಂದಾಗಿ ರೋಗಿಗೆ ಮತ್ತು ಆತನ ಕುಟುಂಬಕ್ಕೆ ಸೂಕ್ತ ನೆಮ್ಮದಿ ಮತ್ತು ವಿಶೇಷ ರಕ್ಷಣೆಗಳನ್ನು ಒದಗಿಸುತ್ತದೆ.
ಮರಣಶಯ್ಯೆಯ ಆರೈಕೆ ಎಂದರೆ ರೋಗವನ್ನು ಗುಣಪಡಿಸುವ ಪ್ರಯತ್ನವಲ್ಲ ಅಥವಾ ಮರಣವನ್ನು ಆದಷ್ಟುಬೇಗ ಆಹ್ವಾನಿಸುವ ಪ್ರಯತ್ನವಲ್ಲ. ಬದಲಾಗಿ, ಜೀವನದ ಕೊನೆಯ ಹಂತದಲ್ಲಿರುವ ರೋಗಿಗೆ ಅತ್ಯಂತ ಸೂಕ್ತವಾದ, ಹಿತವಾದ ಆರೈಕೆಯನ್ನು ನೀಡುವುದಾಗಿದೆ.
ಜೀವನದ ಅಂತ್ಯದಲ್ಲಿರುವ ಜನರಿಗೆ ಈ ಮರಣಶಯ್ಯೆ ಆರೈಕೆಯನ್ನು ನೀಡಲಾಗುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ಅನಾರೋಗ್ಯಕ್ಕೆ ಒಳಗಾಗಿ ಅಂತಿಮಘಟ್ಟದಲ್ಲಿರುವ ರೋಗಿಗೆ ಮತ್ತಷ್ಟು ಆರಾಮವನ್ನು ಉಂಟುಮಾಡುವಲ್ಲಿ ಆರೋಗ್ಯ ವೃತ್ತಿಪರರ ತಂಡವು ಪರಿಶ್ರಮಿಸುತ್ತದೆ. ಮರಣಶಯ್ಯೆ ಆರೈಕೆಯು ರೋಗಿಯ ಕುಟುಂಬಕ್ಕೆ ಆಪ್ತಸಲಹೆ ನೀಡುತ್ತದೆ ಮತ್ತು ಬಳಲಿಕೆಯಿಂದ ಬಿಡುಗಡೆ ಪಡೆಯಲು ಪ್ರತ್ಯಕ್ಷವಾಗಿ ನೆರವು ನೀಡುತ್ತದೆ.
 
==ಉಪಶಮನ ಆರೈಕೆಯನ್ನು ಯಾರಿಗೆ ನೀಡಬಹುದು? ==
ಉಪಶಮನ ಆರೈಕೆಯನ್ನು ರೋಗಿಯು ಆಸ್ಪತ್ರೆಗೆ ದಾಖಲಾಗಿ ರೋಗ ಪತ್ತೆಯಾದ ದಿನದಿಂದ ಮೊದಲುಗೊಂಡು ರೋಗಿಯ ಸಾವಿನ ನಂತರವೂ ಸಹ ರೋಗಿಯ ಕುಟುಂಬಕ್ಕೆ ಎದುರಾಗಬಹುದಾದ ವಿಯೋಗಾವಸ್ಥೆಯಿಂದ ಹೊರಬರುವಂತೆ ಆಧ್ಯಾತ್ಮಿಕವಾಗಿ, ಮಾನಸಿಕವಾಗಿ ದೃಢಗೊಳಿಸಿ ಅವರು ಸಾಮಾನ್ಯ ಜೀವನ ನಡೆಸುವಂತೆ ಅಣಿಗೊಳಿಸುವ ಉದ್ದೇಶದಿಂದ ನೀಡಲಾಗುವುದು.
ರೋಗಪತ್ತೆಯಾದ ದುಸ್ಥಿತಿಯನ್ನು ರೋಗಿಗೆ ಸೂಕ್ತರೀತಿಯಲ್ಲಿ ತಿಳಿಯಪಡಿಸುವುದು; ಪ್ರಸ್ತುತ ಎದುರಾಗಿರುವ ಮತ್ತು ಮುಂಬರಬಹುದಾದ ಸಂಕಷ್ಟ ಸಂದರ್ಭಗಳನ್ನು ಸಮಚಿತ್ತದಿಂದ ಎದುರಿಸುವಂತೆ ಮನಸ್ಥೈರ್ಯವನ್ನು ತುಂಬುವುದು; ಮುಂಬರುವ ಚಿಕಿತ್ಸಾ ದಿನಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ರೋಗಿಗೆ ಮತ್ತು ಅವರ ಕುಟುಂಬದವರಿಗೆ ಆಪ್ತಸಲಹೆಗಳನ್ನು ನೀಡುವುದು; ಇವೆಲ್ಲವುಗಳ ಮೂಲಕ ರೋಗಿಯನ್ನು ಸಿದ್ಧಗೊಳಿಸುವುದೇ ಉಪಶಮನ ಆರೈಕೆಯ ಉದ್ದೇಶ.
ಚಿಕಿತ್ಸಾ ದಿನಗಳಲ್ಲಿ ರೋಗಿಗೆ ಹಲವಾರು ರೀತಿಯ ನೆರವು ಅಗತ್ಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಸೂಕ್ತ ನಿಧಾರ, ಅಗತ್ಯವಿರುವ ಆರ್ಥಿಕ ನೆರವು, ಚಿಕಿತ್ಸೆಯ ಅಡ್ಡಪರಿಣಾಮದಿಂದ ಚಿಕಿತ್ಸೆಯನ್ನು ಮೊಟಕುಗೊಳಿಸುವುದು, ರೋಗ ಮರುಕಳಿಸುವ ಸಂದರ್ಭದಲ್ಲಿ ರೋಗಿಗೆ ಆಗುವ ನಿರಾಸೆ ಇಂತಹ ಸಮಯಗಳಲ್ಲಿ ರೋಗಿಗೆ ಸಲಹೆ, ನೆರವು ಅತ್ಯಗತ್ಯವಾಗಿರುತ್ತದೆ.
"https://kn.wikipedia.org/wiki/ವಿಶೇಷ:MobileDiff/611181" ಇಂದ ಪಡೆಯಲ್ಪಟ್ಟಿದೆ