ಎಲ್ ಸಾಲ್ವಡಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೧ ನೇ ಸಾಲು:
ಗ್ವಾಟೆಮಾಲವನ್ನು ಗೆದ್ದ ಸ್ಪ್ಯಾನಿಷ್ ವಲಸೆಗಾರರು ಪೆದ್ರೊ ಆಲ್ವಾರಾದೊನ ನೇತೃತ್ವದಲ್ಲಿ 1524ರಲ್ಲಿ ಇಲ್ಲಿಗೆ ಬಂದು ಇದನ್ನು ಗೆದ್ದು ಮರುವರ್ಷ ಇಲ್ಲಿ ವಸಾಹತು ನಿರ್ಮಿಸಿದರು. ಈ ದೇಶ ಸ್ವತಂತ್ರವಾದದ್ದು ಸೆಪ್ಟೆಂಬರ್ 15, 1821ರಲ್ಲಿ. ಆದರೆ ಅದಾದ ಅನಂತರ ಮೆಕ್ಸಿಕೋ ಚಕ್ರವರ್ತಿ ಆಗಸ್ತಿನ್ದ ಈಟೂರ್ವೀದ ಎಲ್ ಸಾಲ್ವಡಾರಿಗೆ ಸೈನ್ಯ ಕಳುಹಿಸಿ ಇದನ್ನು ಗೆದ್ದು ವಶಪಡಿಸಿಕೊಂಡ. ತನ್ನನ್ನು ಒಂದು ಸಾರ್ವಭೌಮ ರಾಜ್ಯವೆಂದು ಪರಿಗಣಿಸಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೇರಿಸಿಕೊಳ್ಳಬೇಕೆಂದು 1822ರಲ್ಲಿ ಇದು ಆ ದೇಶವನ್ನು ಕೇಳಿಕೊಂಡಿತು. ಆದರೆ ಸಂಯುಕ್ತಸಂಸ್ಥಾನ ಕಾಂಗ್ರೆಸ್ ಈ ಮನವಿಯನ್ನು ಒಪ್ಪಲಿಲ್ಲ. 1823ರಲ್ಲಿ ಈಟೂರ್ವೀದನ ಸರ್ಕಾರದ ಪತನವಾದಾಗ ಇದು ಮಧ್ಯ ಅಮೆರಿಕನ್ ರಾಜ್ಯಗಳ ಒಕ್ಕೂಟದಲ್ಲಿ ಸೇರಿತು. ಆಮೇಲೆ ಗ್ವಾಟೆಮಾಲದ ಬೆದರಿಕೆಯಿಂದಾಗಿ ಅಮೆರಿಕನ್ ರಾಜ್ಯಗಳ ಒಕ್ಕೂಟದಿಂದ ಹೊರಬಿದ್ದು ಸ್ವಾತಂತ್ರ್ಯ ಘೋಷಿಸಿಕೊಂಡಿತು (1841). 1800ರಿಂದಲೂ ಈ ದೇಶದಲ್ಲಿ ಆಗಾಗ ಅಧ್ಯಕ್ಷರ ಬದಲಾವಣೆಯೂ ಉದಾರವಾದಿಗಳಿಗೂ ಸಂಪ್ರದಾಯವಾದಿಗಳಿಗೂ ನಡುವೆ ಘರ್ಷಣೆಗಳೂ ನಡೆಯುತ್ತಲೇ ಇವೆ. ಆಂತರಿಕ ಕ್ಷೋಭೆಯಿಂದ ಇದು ಪದೇ ಪದೇ ವಿದೇಶಿ ದಾಳಿಗೆ ಒಳಗಾಯಿತು. 1900ರಿಂದ 1930ರ ಅವಧಿಯಲ್ಲಿ ಶಾಂತ ಪರಿಸ್ಥಿತಿಯಿತ್ತು. ಕಾಫಿ ಉದ್ದಿಮೆ ಬೆಳೆಯಿತು; ದೇಶ ಸಂಪದ್ಭರಿತವಾಯಿತು. 1931ರಲ್ಲಿ ಜನರಲ್ ಮ್ಯಾಕ್ಸಿಮಿಲಿಯಾನೊ ಫರ್ನಾಂಡೆತ್ ಮಾರ್ಟಿನೆತ್ ಅಧಿಕಾರ ಕಸಿದುಕೊಂಡು 1944ರ ವರೆಗೂ ಆಳಿದ. ಈತ ದಬ್ಬಾಳಿಕೆ ನಡೆಸಿದರೂ ಈ ಕಾಲದಲ್ಲಿ ದೇಶ ಸಂಪದ್ಭರಿತವಾಯಿತು. 1944ರಲ್ಲಿ ಮಾರ್ಟಿನೆತನನ್ನು ಅಧಿಕಾರದಿಂದ ಇಳಿಸಲಾಯಿತಾದರೂ ಅನಂತರದ ರಾಜಕೀಯ ಅಸ್ಥಿರವಾಯಿತೆನ್ನಬಹುದು. 1945ರಲ್ಲಿ ಜನರಲ್ ಸಾಲ್ವಡಾರ್ ಕಾಸ್ಟ್ರೊ ಅಧ್ಯಕ್ಷನಾದ. 1948ರಲ್ಲಿ ಇವನ ಅಧಿಕಾರದ ಅವಧಿ ಮುಗಿದಾಗ ಸಂವಿಧಾನವನ್ನೇ ಬದಲಿಸಿ ತಾನೇ ಶಾಶ್ವತವಾಗಿರಬೇಕೆಂದು ಪ್ರಯತ್ನಿಸಿದ. ಆಗ ಇವನನ್ನು ತಳ್ಳಿ ಬಲಿಷ್ಠ ಗುಂಪೊಂದು ಅಧಿಕಾರಕ್ಕೆ ಬಂತು. ಇದರ ಸದಸ್ಯನಾದ ಮೇಜರ್ ಆಸ್ಕಾರ ಒಸೊರಿಯೊನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಲಾಯಿತು. ಈತನೂ ನಿರಂಕುಶನಾದ. 1956ರಲ್ಲಿ ಈತನ ಅನುಯಾಯಿ ಲೆಫ್ಟಿನೆಂಟ್ ಕರ್ನಲ್ ಜೋಸೆ ಮೇರಿಯ ಲೆಮಸನನ್ನು ಅಧ್ಯಕ್ಷನಾಗಿ ಆರಿಸಲಾಯಿತು. ಈತ 1960ರ ವರೆಗೂ ಆಳಿದ. ನಾಗರಿಕ ಮತ್ತು ಸೈನಿಕರ ಸಂಮಿಶ್ರ ಗುಂಪೊಂದು ಈತನನ್ನು ತಳ್ಳಿ ತಾನು ಅಧಿಕಾರಕ್ಕೆ ಬಂತು. ಪ್ರಜಾಸತ್ತಾತ್ಮಕ ಪದ್ಧತಿಯಂತೆ ಚುನಾವಣೆ ನಡೆಸುವುದಾಗಿ ಆಶ್ವಾಸನೆ ನೀಡಿತು. 1961ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಲ್ ಜೂಲಿಯೊ ಅಡಾಲ್ಬರ್ಟೊ ರಿವೆರ ಅಧ್ಯಕ್ಷನಾಗಿ ಆಯ್ಕೆಯಾದ. ರಿವೆರನ ಸರ್ಕಾರವೂ ಸೈನ್ಯಾಧೀನವೇ ಆದರೂ ಈಗ ಹಲವಾರು ರಾಜಕೀಯ ಸುಧಾರಣೆಗಳು ಜಾರಿಗೆ ಬಂದುವು. 1964-66ರಲ್ಲಿ ನಡೆದ ಸ್ಥಳೀಯ ಚುನಾವಣೆಗಳು ಸೈನ್ಯದ ಹಿಡಿತವಿಲ್ಲದೆ ಸ್ವತಂತ್ರ ವಾತಾವರಣದಲ್ಲಿ ನಡೆದುವು. 1967ರ ಕರ್ನಲೆ ಫಿಡೆಲ್ ಸಾಂಚ ಹೆರ್ನಾಂಡ್ಸ್‌ ಅಧ್ಯಕ್ಷನಾಗಿ ಆಯ್ಕೆಯಾದ.
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲ್ ಸಾಲ್ವಡಾರ್ |ಎಲ್ ಸಾಲ್ವಡಾರ್}}
 
 
"https://kn.wikipedia.org/wiki/ಎಲ್_ಸಾಲ್ವಡಾರ್" ಇಂದ ಪಡೆಯಲ್ಪಟ್ಟಿದೆ