ಆಯುರ್ವೇದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
'''ಆಯುರ್ವೇದ''' ([[ಸಂಸ್ಕೃತ]]: आयुर्वेद ಆಯು—ಆಯಸ್ಸು; ವೇದ—ಜ್ಞಾನ) ೨೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ [[ಔಷಧ]] ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಸರ್ವ ರೋಗಗಳಿಗೂ ಔಷಧಿಗಳಿವೆ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ [[ಪ್ರಾಚೀನ ಭಾರತ]]ದಿಂದ ಬೆಳೆದು ಬಂದದ್ದು. ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯೂ ಉಂಟು. ಚರಕ ಸಂಹಿತ, ಶುಶ್ರುತ ಸಂಹಿತ ಇವೇ ಮೊದಲಾದ ಪ್ರಾಚೀನ ಗ್ರಂಥಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದದಲ್ಲಿ ಔಷಧ - ಭೂಮಿಯಲ್ಲಿ ದೊರಕುವ ಸಸ್ಯಗಳು. ಸಾಮಾನ್ಯವಾಗಿ ಹಲವು ಔಷದ ಸಸ್ಯಗಳ ಮಿಶ್ರಣದಿಂದ ತಯಾರಿಸಿದ ಔಷಧವನ್ನು ರೋಗಗಳ ನಿವಾರಣೆ ಹಾಗೂ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ.
 
== ಆಯುರ್ವೇದದ ಐದು ಮಹಾಭೂತಗಳು (ಅಂಶಗಳು): ==
* [[ಆಕಾಶ]]
Line ೭ ⟶ ೬:
* [[ಅಪ ಅಥವಾ ಜಲ]]
* [[ಪೃಥ್ವಿ]]
 
== ಆಯುರ್ವೇದದ ಪ್ರಾಚೀನತೆ, ಹಾಗೂ ಆಯುರ್ವೇದಾಚಾರ್ಯರಿಂದ, ಅದರ ಸ್ಥೂಲಪರಿಚಯ : ==
'[[ಚರಕ ಸಂಹಿತೆ]]’, ಸೂತ್ರಸ್ಥಾನದ ಪ್ರಥಮಾಧ್ಯಾಯದಲ್ಲಿ ಚರಕಾಚಾರ್ಯರು, '[[ಧರ್ಮಾರ್ಥ ಕಾಮಮೋಕ್ಷಾಮಾರೋಗ್ಯಂ ಮೂಲಮುತ್ತಮಮ್]]”, ಅಂದರೆ, ಚತುರ್ವಿಧ ಪುರುಷಾರ್ಥ ಸಾಧನಗಳಾದ ಧರ್ಮ, ಕಾಮ, ಆರ್ಥ ಮೋಕ್ಷಗಳೆಲ್ಲಕ್ಕೂ ಆರೋಗ್ಯವೇ ಮೂಲಕಾರಣವೆಂದು ಹೇಳಿದ್ದಾರೆ. ಇದನ್ನೇ ಶೃತಿಯಲ್ಲಿ ’[[ಶರೀರ ಮಾಧ್ಯಂ ಖಲುಧರ್ಮಸಾಧನಮ್]] ,' ಎಂದರೆ, ಸಕಲ ವಿಧವಾದ ಧರ್ಮ ಸಾಧನೆಗಳಿಗೂ ಶರೀರವೇ ಮುಖ್ಯವೆಂದು ಹೇಳಿದ್ದಾರೆ. ಆರೋಗ್ಯಯುಕ್ತವಾದ ಶರೀರವೆಂದರೆ, ತನು-ಮನಗಳೆರಡರಲ್ಲೂ ಸ್ವಾಸ್ಥ್ಯವಿರುವ ಸಮತೋಲನ ಶರೀರವೆಂಬ ಅರ್ಥ. ವಿಷಮತೆಯೇ ರೋಗವೆಂದೆಂದರ್ಥ. ಪುರುಷಾರ್ಥಸಾಧನೆಗೆ, ಸಧೃಡ, ಸಬಲ ಶರೀರದಿಂದ ಮಾತ್ರ ಸಾಧ್ಯ. ಶರೀರವನ್ನು ರೋಗಗಳು ಬಾಧಿಸುತ್ತವೆ. [[ವಾತ]], [[ಪಿತ್ತ,]] [[ಕಫ]], ಗಳೆಂಬ ವಿಷಮತೆ. ಅ ಸಾಮ್ಯತೆಗೆ ಆರೋಗ್ಯ ವೆಂದೂ ಹೇಳುತ್ತಾರ ಇದು, ರೋಗದ ಪರಿಹಾರಾರ್ಥವಾಗಿ, '[[ವಿಚಿತ್ರೋಹಿ ಮಣಿಮಂತ್ರೌಷಧೀನಾಂ ಪ್ರಭಾವಃ]],' ಎನ್ನುವಂತೆ, ರೋಗ ಪರಿಹಾರಾರ್ಥವಾಗಿಯೇ ಮಣಿ, ಮಂತ್ರ, ಔಷಧಿಗಳು ಮತ್ತು ಯೋಗವೂ ಕೂಡ ಹುಟ್ಟಿಕೊಂಡಿದೆ.' ಎನ್ನುತ್ತಾನೆ, ಶ್ರೀ ಹರ್ಷ. ಇಂತಹ ರೋಗ ಚಿಕಿತ್ಸಾಕ್ರಮಕ್ಕೆ ಪ್ರಾಚೀನರು, " ಆಯುರ್ವೇದ," ವೆಂದು ಕರೆದರು. ಇಲ್ಲಿ ’ಆಯ” ಎಂದರೆ, ’ವಯಸ್ಸ”, ಈ ಆಯುಸ್ಸಿನ ಸಂಬಂಧವಾಗಿ ಅಥವಾ ಜೀವಿತದ ಸಂಬಂಧವಾಗಿ ತಿಳಿಯುವುದು ; ಆಚರಿಸುವುದು ಮತ್ತು ರಕ್ಷಿಸಿಕೊಳ್ಳುವುದು ಎಂಬೆಲ್ಲ ಅರ್ಥವನ್ನು 'ವೇದ' ಎಂಬ ಶಬ್ದವು ಸೂಚಿಸುತ್ತದೆ.ಎಂದು ಕಾಶ್ಯಪ ಸಂಹಿತೆಯಲ್ಲಿ ಹೇಳಿದೆ. ಚರಕ ಸಂಹಿತೆಯು ಇದನ್ನು, 'ಆಯುರ್ಹಿತಾಹಿತಂ ವ್ಯಾಧೇರ್ನಿದಾನಂ ಶಮನಂ ತಥಾ. ವಿದ್ಯತೇ ಮಿತ್ರ ವಿದ್ವದ್ಭಿಃ ಸಆಯುರ್ವೇದ ಉಚ್ಯತೇ, ಎಂದರೆ, ಆಯುಸ್ಸಿನ ಹಿತಾ-ಹಿತಗಳನ್ನು ಶರೀರದಲ್ಲುಂಟಾಗುವ ರೋಗಗಳಿಗೆ ಕಾರಣ ಮತ್ತು ಅದರ ಪರಿಹಾರವನ್ನು ಸೂಚಿಸುವ ಶಾಸ್ತ್ರವೇ, ”[[ಆಯುರ್ವೇದ]]’. ಇದನ್ನು ಸುಶ್ರುತಾಚಾರ್ಯರು,
 
’ಆಯುರ್ವೇದಸ್ಯ ಪ್ರಯೋಜನಂ ವ್ಯಾಮ್ಯುಷ ಸೃಷ್ಟಾನಾಂ
 
ವ್ಯಾಧಿ ಪರಿಮೋಕ್ಷಃ ಸ್ವಸ್ಥಸ್ಯ ರಕ್ಷಣಂಚ’.
 
 
ಎಂದರೆ, ರೋಗಿಗಳ ರೋಗ ಪರಿಹಾರವೂ ಮತ್ತು ಆರೋಗ್ಯವಂತರ, ದೇಹಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಕೂಡ ಆಯುರ್ವೇದ ಶಾಸ್ತ್ರದ ಉಪಯೋಗ, ಎಂಬುದಾಗಿ ಹೇಳಿದ್ದಾರೆ. ಈ ಶಾಸ್ತ್ರದ ಉಪಯೋಗವನ್ನು ಪಶು-ಪಕ್ಷಿಗಳೂ ಉಪಯೋಗಿಸಬಹುದು. ಉದಾ : ೧. ಗಜವೈದ್ಯ ಶಾಸ್ತ್ರ, ೨. ಅಶ್ವವೈದ್ಯ ಶಾಸ್ತ್ರ, ೩. ವೃಕ್ಷವೈದ್ಯಶಾಸ್ತ್ರ, ಮೊದಲಾದಪಶುರೋಗ ಚಿಕಿತ್ಸೆಗೆ, ಸಂಬಂಧಪಟ್ಟ ಮತ್ತು ತರು-ಲತಾದಿಗಳಿಗೂ, ಹಕ್ಕಿ-ಪಕ್ಷಿಗಳಿಗೂ ಸ್ಸಂಬಂದ್ಖ ಪಟ್ಟಶಾಸ್ತ್ರಗಳುಂಟು. ಮಾನವ ಇತಿಹಾಸದಷ್ಟೇ ಪ್ರಾಚೀನ, ಹಲವು ಶಾಸ್ತ್ರಾಧಾರಗಳೂ ಇವೆ.
 
 
" ಋಗ್ಯಜುಸ್ಸಾಮಾಥರ್ವಾಖ್ಯಾನ್ ದೃಷ್ವಾ ವೇದಾನ್ ಪ್ರಜಾಪತಿಃ :
ವಿಚಿಂತ್ಯ ತೇಷಾಮರ್ಥಂ ಚೈವಾಯುರ್ವೇದಂ ಚಕಾರಸಃ "
 
 
 
ಬ್ರಹ್ಮದೇವನು, 'ಋಗ್ವೇದ', 'ಯಜುರ್ವೇದ', 'ಸಾಮವೇದ', ಮತ್ತು 'ಅಥರ್ವಣವೇದ,' ಈ ೪ ವೇದಗಳ ಅರ್ಥಗಳನ್ನೂ ಪರಿಶೀಲಿಸಿ, 'ಆಯುರ್ವೇದ,' ವನ್ನೂ ನಿರ್ಮಿಸಿದನು, ಎಂದು ಹೇಳಿದೆ. ಬ್ರಹ್ಮ 'ವೈವರ್ತಕಪುರಾಣ,' ದಲ್ಲಿ, ಮುಂದೆ ಬ್ರಹ್ಮದೇವನು '[[ಆಯುರ್ವೇದ]]' ವನ್ನು ದಕ್ಷಪ್ರಜಾಪತಿಗೆ ಉಪದೇಶಿಸಿದರೆ, ಅವನು ಅದನ್ನು ಅಶ್ವಿನೀದೇವತೆಗಳಿಗೂ, ಅವರು, ಇಂದ್ರನಿಗೂ ಉಪದೇಶಿಸಿದರು. ಇಂದ್ರನಿಂದ 'ಭಾರದ್ವಾಜ'ರು, ಅವರಿಂದ 'ಕೃಷ್ಣಾತ್ರೇಯ'ರೂ, 'ಅಗ್ನಿವೇಷ', 'ಭೇಲ', 'ಜಾತೂ ಕರ್ಣ', 'ಪರಾಶರ', 'ಹಾರೀತ', 'ಕ್ಷಾರಪಾಣಿ' ಎಂಬ ೬ ಮಂದಿ ಋಷಿಗಳಿಗೂ ಉಪದೇಶಿಸಲ್ಪಟ್ಟಿತೆಂದೂ ಹೇಳಲಾಗಿದೆ. ಅಲ್ಲಿಂದ ಈ ಆರು ಜನ ತಮ್ಮ ತಮ್ಮ ವಿದ್ಯಾಪ್ರೌಢಿಮೆಯಿಂದ ೬ ಬೇರೆ ಬೇರೆ, ವೈದ್ಯಶಾಸ್ತ್ರಗಳನ್ನು ರಚಿಸಿದರೆಂದು, '[[ಚರಕಸಂಹಿತೆ]],' ಯಲ್ಲಿ ಹೇಳಿದರೆ, 'ಕಾಶ್ಯಪಸಂಹಿತೆ,' ಯಲ್ಲಿ ದೇವೇಂದ್ರನೇ -'ಕಾಶ್ಯಪ', 'ವಸಿಷ್ಠ', 'ಅತ್ರಿ', 'ಭೃಗು' ಎಂಬ ಮಹರ್ಷಿಗಳಿಗೆ, ಆಯುರ್ವೇದವನ್ನು ಉಪದೇಶಮಾಡಿದನೆಂದೂ ಮತ್ತು ಇವರು ತಮ್ಮ ತಮ್ಮ ಶಿಷ್ಯರಿಗೂ ಮಕ್ಕಳಿಗೂ ಉಪದೇಶಮಾಡಿದರೆಂದೂ, ತಿಳಿಸಲಾಗಿದೆ. ಮೇಲಿನ ಶಾಸ್ತ್ರಾಧಾರಗಳಿಗೆ, ಭಿನ್ನವಾದ ಇನ್ನೊಂದು ಐತಿಹ್ಯವು, '[[ಸುಶ್ರುತಸಂಹಿತೆ]],' ಯಲ್ಲುಂಟು. ಇಲ್ಲಿ, 'ಅಥರ್ವಣವೇದದ ಉಪಾಂಗವಾದ, ಆಯುರ್ವೇದವನ್ನು ಬ್ರಹ್ಮನಿಂದ ಪ್ರಜಾಪತಿಯೂ, ಅವನಿಂದ ಅಶ್ವಿನಿದೇವತೆಗಳೂ ಅವರಿಂದ ಇಂದ್ರನೂ ಉಪದೇಶಹೊಂದಿದರೆನ್ನುವವರೆಗೆ, ಮೇಲಿನ ಐತಿಹ್ಯಗಳೊಡನೆ ಸಾಮ್ಯತೆ ಇದ್ದರೂ, ಅನಂತರದ 'ಧನ್ವಂತ್ರಿ' ಯ ಅವತಾರವೆಂದೇ ಪ್ರಖ್ಯಾತನಾದ ಕಾಶಿರಾಜ, 'ದಿವೋದಾಸ' ನಿಂದ ವಿಶ್ವಾಮಿತ್ರನ ಮಗನಾದ 'ಸುಶ್ರುತ ಮಹರ್ಷಿ' ಯು ಅಭ್ಯಸಿಸಿದನೆಂದೂ, ಅಲ್ಲದೆ ಈ ಸುಶ್ರುತನೇ '[[ಸುಶ್ರುತ ಸಂಹಿತೆ]],' ಎಂಬೊಂದು ಮಹದ್ಗ್ರಂಥವನ್ನು ಬರೆದನೆಂದೂ ತಿಳಿಸಲಾಗಿದೆ. ಆಯುರ್ವೇದದ ಪ್ರಾಚೀನತೆ, ಇವೆಲ್ಲದರಿಂದ ಖಚಿತವಾಗುತ್ತದೆ. ಇನ್ನೂ ಎಷ್ಟೊ ಗ್ರಂಥಗಳು ಕಾಣೆಯಾಗಿವೆ.
 
== 'ಆಯುರ್ವೇದಾಚಾರ್ಯರುಗಳು,' ಬರೆದಿಟ್ಟಿರುವ ಉಪಯುಕ್ತ ಸಂಹಿತೆಗಳು, ನಮ್ಮ ಆರೋಗ್ಯವರ್ಧನೆಗೆ ಸಹಾಯಕವಾಗಿವೆ : ==
'ಆಯುರ್ವೇದಾಚಾರ್ಯರು,' ಗಳು,' ಬರೆದಿಟ್ಟಿರುವ 'ಚರಕ ಸಂಹಿತೆ', 'ಸುಶ್ರುತಸಂಹಿತೆ', 'ಅಷ್ಟಾಂಗಹೃದಯ', 'ಮಾಧವ ನಿದಾನ', 'ಶಾಂಗಧರ ಸಂಹಿತೆ', 'ಭಾವಪ್ರಕಾಶ', 'ಬಸವರಾಜೀಯ', ಮೊದಲಾದ ಗ್ರಂಥಗಳು, ನಮಗೆ ಆಯುರ್ವೇದದ ಬಹುಮೂಲ್ಯ ವಿವರಣೆಗಳನ್ನು ಕೊಟ್ಟಿವೆ.
 
== '[[ಸ್ವಸ್ಥ ವೃತ್ತ]]', [[(ಸದ್ವೃತ್ತ)]], '[[ದಿನಚರ್ಯೆ]]', ಮತ್ತು, '[[ಋತುಚರ್ಯೆ]]', ಬಹುಮೂಲ್ಯ ಅನುಸರಣೆಗಳು : ==
ಆರೋಗ್ಯದ ಮೂಲಸೂತ್ರಗಳು ಮೂರು. ೧. ಸ್ವಸ್ಥ ವೃತ್ತ, (ಸದ್ವೃತ್ತ) ೨. ದಿನಚರ್ಯೆ, ಮತ್ತು ೩. ಋತುಚರ್ಯೆ. ಇದರ ಅನುಸರಣೆಯು ನಮ್ಮನ್ನು, ರೋಗರುಜಿನಗಳಿಲ್ಲದೆ ಆರೋಗ್ಯವಂತರಾಗಿ ಬಾಳಲು ಸಹಾಯಮಾಡುತ್ತದೆ. ದಿನನಿತ್ಯದ ಜೀವನಕ್ರಮವನ್ನು ನಾವು ನಿಯಂತ್ರಿಸಿಕೊಳ್ಳಬೇಕು. ಋತುಚರ್ಯೆ ಎಂದರೆ, ಋತುಮಾನಕ್ಕೆ ತಕ್ಕಂತೆ ದಿನಚರ್ಯೆಯನ್ನು ಹೊಂದಿಸಿಕೊಳ್ಳುವುದು. ಸದ್ವೃತವೆಂದರೆ, ಪ್ರಪಂಚ ಹಾಗೂ ಪಾರಮಾರ್ಥಗಳೆರಡರ ಸಾಧನೆಗೂ ಆರೋಗ್ಯರಕ್ಷಣೆಗೂ ಮಾನವನು ಆಚರಣೆಯಲ್ಲಿಟ್ಟುಕೊಳ್ಳಬೇಕಾದ ನೀತಿ-ನಿಯಮಗಳು. ವರ್ಷಗಳನ್ನು ಆಯಿನಗಳಾಗಿ, ನಂತರ ಋತುಗಳನ್ನಾಗಿ, ಮಾಸಗಳನ್ನಾಗಿ, ಪಕ್ಷಗಳನ್ನಾಗಿ, ವಾರಗಳನ್ನಾಗಿ, ದಿನಗಳನ್ನಾಗಿ, ವಿಭಾಗಮಾಡಿದ್ದಾರೆ. ಒಂದೊಂದು ಆಯಿನ, ೩ ಋತುಗಳು. ಉತ್ತರಾಯಣದಲ್ಲಿ, '[[ಶಿಶಿರ]], '[[ವಸಂತ]]' ಮತ್ತು '[[ಗ್ರೀಷ್ಮ]]', ದಕ್ಷಿಣಾಯಣದಲ್ಲಿ, '[[ವರ್ಷ]]', '[[ಶರದ್]]', ಮತ್ತು '[[ಹೇಮಂತ]]'. ಈ ಋತುಗಳ ಗುಣಗಳನ್ನು ನಿರ್ಧರಿಸಿದ್ದಾರೆ.
 
== ಉತ್ತರಾಯಣವನ್ನು 'ಅದಾನ ಕಾಲ,': ==
ಮಾಘ, ಫಾಲ್ಗುಣ-ಶಿಶಿರಋತು, ಚೈತ್ರ ವೈಶಾಖ ವಸಂತ, ಜೇಷ್ಟ ಆಶಾಢ, ಗ್ರೀಷ್ಮ, ಉತ್ತರಾಯಣಕಾಲವನ್ನು 'ಅದಾನ ಕಾಲ', ಎನ್ನುತ್ತಾರೆ. ಇಲ್ಲಿ ಶಕ್ತಿ, ಬಲ, ವೀರ್ಯಗಳ ಕ್ಷೀಣತೆ, ಕಾಣಿಸುತ್ತದೆ.
== ದಕ್ಷಿಣಾಯಣ ಕಾಲವನ್ನು 'ವಿಸರ್ಗ ಕಾಲ,': ==
ದಕ್ಷಿಣಾಯಣ ಕಾಲವನ್ನು 'ವಿಸರ್ಗ ಕಾಲ'. ಇಲ್ಲಿ ಬಲ, ವೀರ್ಯ, ಶಕ್ತಿಗಳ ಸಂಚಯದ ಕಾಲ, ಅರ್ಥಾತ್ ವೃದ್ಧಿಯಕಾಲ. ಶ್ರಾವಣ ಭಾದ್ರಪದ, ವರ್ಷಋತು, ಆಶ್ವಿಜ ಕಾರ್ತಿಕಗಳ ಶರದ್ ಋತು ಮತ್ತು ಮಾರ್ಗಶಿರ, ಪುಷ್ಯ, ಹೇಮಂತ, ಋತುಗಳು ದಕ್ಷಿಣಾಯಣದಲ್ಲಿ ಬರುತ್ತವೆ ವ್ಯವಹಾರಗಳನ್ನು ಹೊಂದಿಸಿಕೊಂಡರೆ, ಅನಾರೋಗ್ಯವುಂಟಾಗುವುದಿಲ್ಲ. ಸಾಧಕನ ದಿನಚರಿ, ಅಥವಾ ಅಹಾರನಿಯಮಗಳಲ್ಲದೆ, ಯೋಗಾಭ್ಯಾಸವನ್ನೂ ಮಾಡಬೇಕು. ಸೂರ್ಯನಮಸ್ಕಾರ, ಪ್ರಾಣಾಯಾಮ, ದೇಹಸ್ವಾಸ್ಥ್ಯಕ್ಕಾಗಿ ಯೋಗಾಸನ. ಅಂಗಮರ್ದನ, ಏಕೆಂದರೆ, ಆರೋಗ್ಯ ಅಂಗಡಿಯಲ್ಲಿ ವಿಕ್ರಯಕ್ಕಿಟ್ಟ ವಸ್ತುವಲ್ಲ. ಅದನ್ನು ದೀರ್ಘಸಾಧನೆ, ಕಠಿಣ ನಿಯಮಗಳ ಪಾಲನೆಯಿಂದ ಮಾತ್ರ ಪಡೆಯಬಹುದು. 'ಸಮತ್ವಂ ಯೋಗಮುಚ್ಛತೇ' ಅಂದರೆ, ಸಮತ್ವದಿಂದ ಮಾತ್ರ (ವಾತ, ಪಿತ್ತ, ಕಫ) ಆರೋಗ್ಯವೆಂದು ತಿಳಿದವರ ಅಂಬೋಣ. ಇಲ್ಲಿ ವಾತ, ಪಿತ್ತ, ಕಫದ ಸಮಾನತೆಯೆನ್ನುವಾಗ-ಅಗ್ನಿಯ ಸಮಾನತೆ, ಧಾತುಗಳ ಸಮಾನತೆ, ಮಲದಸಮಾನತೆ, ಮತ್ತು ಇಂದ್ರಿಯ, ಮನಸ್ಸು, ಬುದ್ಧಿಗಳ ಸಮಾನತೆಗಳನ್ನೂ ಹೇಳಲಾಗಿದೆ, ಎಂದೇ ಅರ್ಥೈಸಿಕೊಳ್ಳಬೇಕು
 
== ವನಸ್ಪತಿಗಳು, 'ನಿಸರ್ಗವು,' ಮಾನವನಿಗೆ ಕೊಟ್ಟ ಅಮೂಲ್ಯ ಕೊಡುಗೆ : ==
ಮಾನವನ ದುಖಃವನ್ನು ಪರಿಹರಿಸಲು, ’ವನೌಷಧಿಗಳು,’ ಉಪಲಭ್ದವಿವೆ. ಇವುಗಳಲ್ಲಿ, ೧. ವನಸ್ಪತಿ, ೨. ವೃಕ್ಷ, ೩. ವೀರುಧ, ೪. ಲತೆ (ಬಳ್ಳಿ) ಮತ್ತು ಔಷಧಿಗಳೆಂಬ ನಾಲ್ಕು ಭೇದಗಳುಂಟು. ನಾವು ಸೇವಿಸುವ ಆಹಾರದಲ್ಲಿ ಕೊರತೆಯಾದಾಗ, ಪೋಷಣ ಕಾರ್ಯವನ್ನು ವನಸ್ಪತಿಗಳು ಮಾಡುತ್ತವೆ. ಮಾನವನ ಮತ್ತು ವನಸ್ಪತಿಗಳ ಮೂಲತತ್ವಗಳು ಒಂದೇ ಅಗಿರುತ್ತವೆ. ಇದನ್ನೇ '[[ವಾಗ್ಬಟರು]]', " ಮಾನವನ ಶರೀರದಲ್ಲಿ ಉಂಟಾಗುವ ರೋಗವು, ಸ್ಥಾನಭೇದದಿಂದ ಬೇರೆಬೇರೆಯಾಗಿ ಕಂಡರೂ, ಆ ಎಲ್ಲಾ ರೋಗಗಳ ಮೂಲಸ್ವರೂಪವು, ಒಂದೇ ರೀತಿಯದಾಗಿರುತ್ತವೆ. ಆದ್ದರಿಂದ ಅವುಗಳ ಚಿಕಿತ್ಸೆಯೂ ಕೂಡ ಮೂಲಸ್ವರೂಪವನ್ನೇ, ಹೊಂದಿರುತ್ತದೆ ". ಎಂದಿದ್ದಾರೆ.
 
[[ವರ್ಗ:ಆಯುರ್ವೇದ]]
[[ವರ್ಗ:ಪರ್ಯಾಯ ವೈದ್ಯಕೀಯ ಪದ್ದತಿಗಳು]]
 
[[ml:ആയുര്‍വേദം]]
"https://kn.wikipedia.org/wiki/ಆಯುರ್ವೇದ" ಇಂದ ಪಡೆಯಲ್ಪಟ್ಟಿದೆ