ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 240 interwiki links, now provided by Wikidata on d:q15 (translate me)
ಚು Wikipedia python library
೨ ನೇ ಸಾಲು:
'''ಆಫ್ರಿಕಾ''' - [[ಪ್ರಪಂಚ]]ದ ಏಳು [[ಖಂಡ]]ಗಳಲ್ಲಿ ಒಂದು. ಇದು, ವಿಸ್ತಾರ ಮತ್ತು ಜನಸಂಖ್ಯೆಯ ಆಧಾರವಾಗಿ ಎರಡನೆಯ ಅತಿ ದೊಡ್ಡ ಖಂಡವಾಗಿದೆ.
<br clear=both>
 
== ಪ್ರಾಂತ್ಯಗಳು ಮತ್ತು ರಾಷ್ಟ್ರಗಳು ==
ಈ ಪಟ್ಟಿಯು [[ವಿಶ್ವಸಂಸ್ಥೆ]] ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.
Line ೧೪ ⟶ ೧೩:
{{legend|#ff0000|[[ದಕ್ಷಿಣ ಆಫ್ರಿಕ (ಪ್ರದೇಶ)|ದಕ್ಷಿಣ ಆಫ್ರಿಕ]]}}]]
|-
 
|-
|[[ಚಿತ್ರ:topography_of_africa.jpg|thumb|left|250px|ಆಫ್ರಿಕದ ಸ್ವಾಭಾವಿಕ ಭೂಪಟ]]
Line ೪೧೯ ⟶ ೪೧೭:
| align="right" | 27.8
|}
 
<!--end country info table + refs-->
''''''''''''ಆಫ್ರಿಕಾದ ಇತಿಹಾಸ:
ಆಫ್ರಿಕಾ''''''''''''--[[ಸದಸ್ಯ:Jaykumarhs|Jaykumarhs]] ೦೯:೨೮, ೧೧ ಏಪ್ರಿಲ್ ೨೦೦೯ (UTC)
----
 
ಆಫ್ರಿಕಾ ಖಂಡವು ಪೂವರ್ಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಆಕ್ರಮಿಸಿದ್ದು ವಿಸ್ತೀರ್ಣದಲ್ಲಿ ಯೂರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ.
ಕಳೆದ ಮೂರು-ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ಧಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋಚರ್ುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವತರ್ಿತಗೊಂಡ ಈ ಭೂಭಾಗದಲ್ಲಿ ಪೋಚರ್ುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. 19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪಧರ್ೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವತರ್ಿಸಲಾಯಿತು. 1876 ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, 1900 ರ ಹೊತ್ತಿಗೆ ಹತ್ತನೆ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು.
 
'''ಆಫ್ರಿಕಾ ಭೂಖಂಡ ಹಂಚಿಕೆಗಾಗಿ ಕಾದಾಟ:'''
ಈಜಿಪ್ಟ್ನ ಕೈರೋದಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವರೆಗೆ ಪೂರ್ಣ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಇಂಗ್ಲೆಂಡ್ನ ಆಸೆ ಮೊದಲನೆ ವಿಶ್ವ ಮಹಾಯುದ್ದ ನಂತರವಷ್ಟೆ ಕೈಗೂಡಿತು. ಈಜಿಪ್ಟ್ನ್ನು ಆಕ್ರಮಿಸಿಕೊಳ್ಳುವಾಗಲೇ ಪೂರ್ವ ಸೂಡಾನ್ನೊಳಗೂ ಇಂಗ್ಲೆಂಡ್ ಒಳ ನುಸುಳಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ಘಾನಾ ಮತ್ತು ನೈಜೀರಿಯಾದ ಭೂಭಾಗಗಳ ಮೇಲೆ ಇಂಗ್ಲೆಂಡ್ ಆಕ್ರಮಣಕಾರಿ ಯುದ್ದಗಳನ್ನು ಹೂಡಿತ್ತು. ಫ್ರಾನ್ಸ್ ಕೂಡ ಆಫ್ರಿಕಾದಲ್ಲಿ ಅತಿ ದೊಡ್ಡ ವಸಾಹತು ಸಾಮ್ರಾಜ್ಯವನ್ನೇ ಹೊಂದಿತ್ತು. ಅಲ್ಜೀರಿಯಾದಿಂದ ಆರಂಭಿಸಿ ತುನಿಷಿಯಾ, ಮೊರಾಕೊ ಮತ್ತು ಸೆನೆಗಲ್ಗಳನ್ನು ಫ್ರಾನ್ಸ್ ವಸಾಹತುವನ್ನಾಗಿಸಿತು. ಜರ್ಮನಿಯು ಆಫ್ರಿಕಾದ ಕೆಲವು ಬುಡಕಟ್ಟು ನಾಯಕರುಗಳ ಮೇಲೆ ಅಸಮ್ಮತ ಒಪ್ಪಂದಗಳನ್ನು ಹೇರಿ ಪೂರ್ವ ಆಫ್ರಿಕಾದ ಭಾಗಗಳನ್ನು ಒಳಗೊಂಡಂತೆ ಪಶ್ಚಿಮದ ಟೋಗೋ, ಮತ್ತು ಕೆಮರೂನ್ಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.
Line ೪೩೮ ⟶ ೪೩೩:
ಪ್ರಥಮ ಮಹಾಯುದ್ದ ಪರಿಣಾಮ ಆಫ್ರಿಕಾದ ರಾಜಕೀಯ ಭೂಪಟವನ್ನು ಪುನರ್-ರಚಿಸಲಾಯಿತು. ಈ ಮೊದಲು ಜರ್ಮನಿಯ ತೆಕ್ಕೆಯಲ್ಲಿದ್ದ ವಸಾಹತು ಪ್ರದೇಶಗಳನ್ನು 'ಲೀಗ್ ಆಫ್ ನೇಷನ್' ಮುಖಾಂತರ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂಗಳಿಗೆ ವಹಿಸಿಕೊಡಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟ, ಟೋಗೋ ಮತ್ತು ಕೆಮರೂನ್ಗಳ 'ಲೀಗ್ ಆಫ್ ನೇಷನ್'ನ ಸದಸ್ಯತ್ವವನ್ನು ರದ್ದುಗೊಳಿಸಿ ಅವುಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಹಂಚಲಾಯಿತು.
ಪ್ರಥಮ ವಿಶ್ವ ಯುದ್ದಾನಂತರ ವಿದೇಶಿ ಬಂಡವಾಳವು ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವೇಚ್ಛಾಚಾರದಿಂದ ಹರಿದಾಡಲಾರಂಭಿಸಿತು. ವಸಾಹತುಶಾಹಿ ರಾಷ್ಟ್ರಗಳು ಹಳೆಯ ಬಂಡವಾಳಶಾಹಿ-ಪೂರ್ವ ಸಂಬಂಧಗಳನ್ನೇ ಮುಂದುವರಿಸಲು ಯತ್ನಿಸಿದ್ದವು. ಆ ರಾಷ್ಟ್ರಗಳಲ್ಲಿ ದೇಶೀಯ ಬಂಡವಾಳಶಾಹಿಯು ಬೆಳೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಪಾಳೇಗಾರಿ ಮತ್ತು ಪಾಳೇಗಾರಿ-ಪೂರ್ವ ಶೋಷಣೆಯ ವಿಧಾನಗಳನ್ನು ಅನುಸರಿಸಲಾಯಿತು. ಗಣಿಗಾರಿಕೆ, ಮತ್ತು ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಬೃಹತ್ ಕೈಗಾರಿಕಾ ರಂಗದಲ್ಲಿ ದೇಶೀಯ ಬಂಡವಾಳವು ತಲೆ ಎತ್ತದಂತೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡವು. ಏಕಮುಖ ಕೃಷಿ ಮತ್ತು ಕಚ್ಚಾ ವಸ್ತು ತಯಾರಿಕೆ ಆಧಾರಿತ ಆಥರ್ಿಕತೆಯನ್ನು ವಸಾಹತು ಶಾಹಿ ರಾಷ್ಟ್ರಗಳು ಬಲಗೊಳಿಸಿದವು. ಆಫ್ರಿಕಾದ ಸಮಾಜದಲ್ಲಿ ಆಂತರಿಕವಾಗಿ ಪ್ರಮುಖ ಬದಲಾವಣೆಗಳು ಜರುಗತೊಡಗಿದವು. ಅತಿ ಹೆಚ್ಚು ಹಿಂದುಳಿದ ಆಫ್ರಿಕಾದಲ್ಲಿ ಬಂಡವಾಳಶಾಹಿ-ಪೂರ್ವದ ಸಂಬಂಧಗಳ ಮೇಲೆ ಪ್ರಹಾರಗಳು ಹೆಚ್ಚಾದವು. ಈ ಹಂತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಉದ್ದಿಮೆದಾರ ಮತ್ತು ಕಾಮರ್ಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು.
 
'''ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು:'''
ಎರಡನೇ ಮಹಾಯುದ್ದ ಸಮಯದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಯಾಯಿತು. ಹಲವು ವಿಧದ ಕಚ್ಛಾ ವಸ್ತುಗಳ ಉತ್ಪಾದನೆಯಾಯಿತು. ಖನಿಜ ಸಂಪತ್ತುಗಳ ಶೋಧನೆಯಾಯಿತು. ಆಫ್ರಿಕಾದಿಂದ ಹೆಚ್ಚೆಚ್ಚು ಯುದ್ದ ಸಾಮಗ್ರಿಗಳು ಮತ್ತು ಗಣಿ ಸಂಪತ್ತುಗಳನ್ನು ಸಂಸ್ಕರಿಸಿ ಸಾಗಿಸುತ್ತಿದ್ದರಿಂದ 1940-45ರ ಅವಧಿಯಲ್ಲಿ ಆಫ್ರಿಕಾದ ನಗರಗಳು ಮೂರುಪಟ್ಟು ನಾಲ್ಕುಪಟ್ಟು ಹೆಚ್ಚಾದವು. ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಆಫ್ರಿಕಾದಿಂದ ಸಾಗಣೆ ಮಾಡುವ ಸಲುವಾಗಿ ಜೀವನಕ್ಕಾಗಿ ಕೃಷಿ ಮಾಡುತ್ತಿದ್ದ ಮತ್ತು ಸಣ್ಣ ಕೈಗಾರಿಕೆಗಳಿದ್ದ ಆಫ್ರಿಕಾದ ಆಥರ್ಿಕ ತಳಪಾಯವನ್ನು ಬೃಹತ್ ಮಟ್ಟದ ರಪ್ತು-ಆಧಾರಿತ ಆಥರ್ಿಕತೆಯನ್ನಾಗಿ ಪರಿವತರ್ಿಸಲಾಯಿತು. ಈ ಮಧ್ಯೆ, ಏಷ್ಯಾದಿಂದ ಬರುತ್ತಿದ್ದ ಲಾಭಕ್ಕೆ ಪೆಟ್ಟು ಬಿದ್ದ ನಂತರ ಪ್ರಪಂಚದ ಸುಲಿಗೆಕೋರರ ದೃಷ್ಟಿ ಆಫ್ರಿಕಾ ವಸಾಹತುವಿನತ್ತ ಹೆಚ್ಚೆಚ್ಚು ಹರಿಯಿತು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯನ್ನು ನಾಶಗೊಳಿಸಿ ರೈತಾಪಿಯನ್ನು ಬಲವಂತವಾಗಿ ಕೈಗಾರಿಕಾ ಕಾಮರ್ಿಕರನ್ನಾಗಿಸಲಾಯಿತು. ಹಳ್ಳಿಗರನ್ನು ಗಣಿಗಳು, ರೈಲು-ರಸ್ತೆಗಳು ಮತ್ತು ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡಲು ಯೋಗ್ಯವಿರುವ 'ಕ್ರೂರಪಶು' ಗಳೆಂದು ಪರಿಗಣಿಸಲಾಗುತ್ತಿತ್ತು.
Line ೪೫೭ ⟶ ೪೫೧:
1975ರಲ್ಲಿ ಅಂಗೋಲಾವು ಸ್ವತಂತ್ರ ಗಳಿಸಿತು. ಸ್ವಾತಂತ್ರ್ಯಗೊಂಡ ಬಳಿಕ ಅಂಗೋಲಾದಲ್ಲಿ ಮಾಕ್ಸರ್್ವಾದಿ ಪಕ್ಷವು ಅಧಿಕಾರಕ್ಕೆ ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಜೋನಾಸ್ ಸವಿಂಬಿ ಎಂಬುವನ ನಾಯಕತ್ವದಲ್ಲಿ ಯೂನಿಟಾ ಎಂಬ ಹೆಸರಿನ ಚಳುವಳಿಯು ಆರಂಭಗೊಂಡು ಹೊಸ ಸಕರ್ಾರದ ವಿರುದ್ದ ಗೆರಿಲ್ಲಾ ಯುದ್ದ ನಡೆಸಿತು. ಈ ಚಳುವಳಿಗೆ ಬಿಳಿಯ ಜನಾಂಗದ ನೇತೃತ್ವ ಹೊಂದಿದ್ದ ದಕ್ಷಿಣ ಆಫ್ರಿಕಾ ಸಕರ್ಾರವು ಸೇರಿದಂತೆ ಅಮೇರಿಕಾ ಮತ್ತು ಯೂರೋಪ್ ರಾಷ್ರಗಳು ಬೆಂಬಲ ನೀಡಿದ್ದವು. ಅಂಗೋಲಾದ ಸಕರ್ಾರವನ್ನು ರಕ್ಷಿಸುವ ಸಲುವಾಗಿ ಕ್ಯೂಬಾ ಮತ್ತು ಸೋವಿಯತ್ ರಷ್ಯಾ ನೆರವು ನೀಡಿದವು. ಆದರೂ 1991 ರ ಸಂಧಾನಗಳು ಮತ್ತು 1992ರ ಚುನಾವಣೆಗಳು ಕೂಡ ಈ ನಾಗರೀಕ ಯುದ್ದವನ್ನು ಕೊನೆಗಾಣಿಸುವಲ್ಲಿ ವಿಫಲವಾದವು. 1998-99 ರ ಹೊತ್ತಿಗೆ ಅಂಗೋಲಾದ ಶೇ. 60ರಷ್ಟು ಪ್ರದೇಶದ ಮೇಲೆ ಯೂನಿಟಾ ಸಂಘಟನೆಯು ನಿಯಂತ್ರಣದ ಹೊಂದಿದ್ದು, ಗಂಭೀರವಾದ ಹೋರಾಟಗಳು ನಡೆದು ತೀವ್ರ ಸ್ವರೂಪ ಪಡೆದುಕೊಂಡಿದ್ದವು. ಅಂಗೋಲಾದ ಸೇನೆಯು ಯೂನಿಟಾ ನೆಲೆಗಳ ಮೇಲೆ ಬೃಹತ್ ಪ್ರಮಾಣದ ದಾಳಿ ನಡೆಸಿ ಶತ್ರುಪಡೆಗಳನ್ನು ಬಹುತೇಕ ಧ್ವಂಸಗೊಳಿಸಿತು. ಆದರೂ, 2002ರಲ್ಲಿ ಸವಿಂಬಿಯು ಮರಣಗೊಂಡ ನಂತರವಷ್ಟೆ ನಾಗರೀಕ ಯುದ್ದವು ಅಂತ್ಯಕಂಡಿತು. ಯೂನಿಟಾ ಸಂಘಟನೆಯು ತನ್ನ ಸೇನೆಯನ್ನು ನಾಶ ಮಾಡಿ ತಾನೊಂದು ರಾಜಕೀಯ ಪಕ್ಷವೆಂದು ಘೋಷಿಸಿಕೊಂಡಿತು. ಅಂಗೋಲಾದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ನಿರಂತರ ನಾಗರೀಕ ಯುದ್ದಗಳಿಂದಾಗಿ 15ಲಕ್ಷಕ್ಕೂ ಹೆಚ್ಚು ಮಂದಿ ಮರಣಹೊಂದಿದ್ದಾರೆ.
ದಕ್ಷಿಣ ಆಫ್ರಿಕಾದ ಬಿಳಿಯರ ಸಕರ್ಾರವು ನಮೀಬಿಯಾವನ್ನು ಆಕ್ರಮಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ಸೇನೆಯ ವಿರುದ್ದ ನೈರುತ್ಯ ಪೊಲೀಸ್ ಸಂಘಟನೆಯು ಸ್ಯಾಮ್ ನೂಜೋಮಾರವರ ನಾಯಕತ್ವದಲ್ಲಿ ಅವಿರತ ಹೋರಾಟ ನಡೆಸಿತು. ಇದರ ಫಲವಾಗಿ ಸ್ಯಾಮ್ ನೂಜೋಮಾರವರು 1990ರಲ್ಲಿ ಸ್ವಾತಂತ್ರ್ಯ ಗಳಿಸಿದ ನಮೀಬಿಯಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಮೀಬಿಯಾವು ಅಂಗೋಲಾ ಸಕರ್ಾರದೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಬಂಡುಕೋರ ಯೂನಿಟಾ ಸಂಘಟನೆಯ ವಿರುದ್ದ ಹೋರಾಡಲು ಬೆಂಬಲ ನೀಡಿತು. ಯೂನಿಟಾ ಸೇನೆಯ ಮೇಲೆ ದಾಳಿ ನಡೆಸಲು ನಮೀಬಿಯಾ ತನ್ನ ಭೂನೆಲೆಗಳನ್ನು ಅಂಗೋಲಾ ಸೇನೆಗೆ ನೀಡಿತು. ಅಂಗೋಲಾದ ಯುದ್ದದಿಂದಾಗಿ ಸಾವಿರಾರು ಸಂಖ್ಯೆಯ ನಿರಾಶ್ರಿತರು ನಮೀಬಿಯಾದಲ್ಲಿ ಆಶ್ರಯ ಪಡೆದರು. 2001ರಲ್ಲಿ ಸುಮಾರು 30,000 ಅಂಗೋಲಾ ನಿರಾಶ್ರಿತರು ನಮೀಬಿಯಾದಲ್ಲಿದ್ದರು. ನಮೀಬಿಯಾದಲ್ಲಿ ಶೇ. 20ರಷ್ಟು ಜನತೆ ಶೇ. 75ರಷ್ಟು ಭೂಮಿಯನ್ನು ಹೊಂದಿದ್ದಾರೆ. ಭೂಸುಧಾರಣೆಯು ಅತ್ಯಂತ ಪ್ರಮುಖವಾದ ವಿಷಯವಾಗಿದ್ದು ತೀರಾ ನಿಧಾನಗತಿಯಲ್ಲಿ ಭೂಸುಧಾರಣಾ ಕಾರ್ಯವು ಸಾಗುತ್ತಿದೆ. 2003ರಲ್ಲಿ ಹಿಫಿಕೆಪುನ್ಯೆ ಪೊಹಂಬಾರವರು ನಮೀಬಿಯಾದ ಅಧ್ಯಕ್ಷರಾಗಿ ಚುನಾಯಿತರಾದರು.
 
'''ದಕ್ಷಿಣ ಆಫ್ರಿಕಾ:'''
ವರ್ಣಭೇಧ ನೀತಿಯಿರುವ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ಜನಾಂಗವು ಸಾಮ್ರಾಜ್ಯಶಾಹಿ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೆಂಡ್, ಮತ್ತು ಜರ್ಮನಿಗಳಿಂದ ಬೆಂಬಲ ಪಡೆದಿತ್ತು. ದಕ್ಷಿಣ ಆಫ್ರಿಕಾದ ಸಾಮಾಜಿಕ ಮತ್ತು ಆಥರ್ಿಕ ರಚನೆ ಹೇಗಿತ್ತೆಂದರೆ, ಅದು ವಸಾಹತುವಾಗಿರದಿದ್ದರೂ, ವಿದೇಶಿ ಬಿಳಿಯ ಜನಾಂಗವು ಸಣ್ಣ ಸಂಖ್ಯೆಯಲ್ಲಿದ್ದರೂ, ಬಹುಸಂಖ್ಯಾತ ಜನತೆಯನ್ನು ದಮನ ಮಾಡುತ್ತಿತ್ತು. ಆ ದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡದ್ದು ದೂರದಲ್ಲೆಲ್ಲೂ ಇರುವ ಅನ್ಯರಾಷ್ಟ್ರವಾಗಿರದೆ, ತನ್ನದೇ ಗಡಿಯೊಳಗಿರುವ ಬಿಳಿಯ ಜನಾಂಗವಾಗಿತ್ತು. ದಕ್ಷಿಣ ಆಫ್ರಿಕಾದ ಕಾಮರ್ಿಕರ ಸಂಖ್ಯೆಯು ಹೆಚ್ಚಳಗೊಂಡಂತೆ ಸ್ವಾತಂತ್ರ್ಯಕ್ಕಾಗಿ ಮುಷ್ಕರಗಳನ್ನು ನಡೆಸಲಾಯಿತು. ಇದರೊಂದಿಗೆ ಸ್ಟೀವ್ ಬೈಕೊರವರ ಕಪ್ಪು ಜನಾಂಗದ ಪ್ರಜ್ಞೆಯ ಚಳುವಳಿ ಮತ್ತು ವಿದ್ಯಾಥರ್ಿ ನೇತೃತ್ವದ ಚಳುವಳಿಗಳು ತೀವ್ರಗೊಂಡವು. 1985ರಲ್ಲಿ ದಕ್ಷಿಣ ಆಫ್ರಿಕಾ ಕಾಮರ್ಿಕ ಸಂಘಟನೆಗಳ ಒಕ್ಕೂಟವನ್ನು (ಕೊಸಾಟು) ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಚಳುವಳಿಗೆ ಇನ್ನಿಲ್ಲದಂಥ ಸೆರ್ಯ ನಿಡಿತು. ಈ ಒಕ್ಕೂಟವು ಒಂದು ಮಾದರಿ ಸಂಘಟನೆಯಾಗಿ ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ ಮತ್ತು ಸ್ವಾಜಿಲ್ಯಾಂಡ್ ಗಳಲ್ಲಿನ ಕಾಮರ್ಿಕ ಸಂಘಟನೆಗಳಿಗೆ ನೇರವಾದ ನೆರವು ಮತ್ತು ನಿದರ್ೇಶನಗಳನ್ನು ನೀಡಿತು. ಆದರೂ ದಕ್ಷಿಣ ಆಫ್ರಿಕಾ ಸಕರ್ಾರದ ನಾಯಕನಾಗಿದ್ದ ಪಿ.ಡಬ್ಲ್ಯೂ ಬೋಥಾನು ಇದಕ್ಕೆ ಮಣಿಯದೆ ತುತರ್ು ಪರಿಸ್ಥಿತಿ ಹೇರಿದನು. ಧೃತಿಗೆಡದ ಕಾಮರ್ಿಕರ ನೇತೃತ್ವದಲ್ಲಿ ಜನರು ಬೀದಿಗಳಲ್ಲಿ ಹೆಚ್ಚೆಚ್ಚು ನೆರೆಯಲಾರಂಭಿಸಿದರು, ಕಾಖರ್ಾನೆಗಳು ಮುಷ್ಕರದಿಂದ ಗರಬಡಿದಂತೆ ನಿಂತವು. ವರ್ಣಭೇದ ನೀತಿಯನ್ನು ಹತ್ತಿಕ್ಕುವಂತೆ ಮತ್ತು ಕರಿಯರಿಗೂ ಕೂಡ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ದಕ್ಷಿಣ ಆಫ್ರಿಕಾದ ಜನತೆಯೂ ಸೇರಿದಂತೆ ಪ್ರಪಂಚದ ಎಲ್ಲ ಮೂಲೆಗಳಿಂದ ಒತ್ತಡ ಬರಲಾರಂಭಿಸಿತು. ಹಲವು ದೇಶಗಳು ಆಥರ್ಿಕ ದಿಗ್ಪ್ಬಂಧನ ವಿಧಿಸಿದವು.
Line ೪೬೪ ⟶ ೪೫೭:
ಆಫ್ರಿಕಾದ ಜನತೆಯಲ್ಲಿ ಬೇರೂರಿರುವ ಆಥರ್ಿಕ ಹಿಂದುಳಿಕೆ, ಅಸ್ಥಿರ ರಾಜಕೀಯ, ತಂತ್ರಜ್ಞರ ಕೊರತೆ, ಮತ್ತು ಮಿಲಿಯಗಟ್ಟಲೆ ಜನರ ಪ್ರಜ್ಞೆಯಲ್ಲಿ ಬುಡಕಟ್ಟು ಸಿದ್ದಾಂತದ ಪ್ರಭಾವ - ಈ ದೌರ್ಬಲ್ಯಗಳನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೆಚ್ಚೆಚ್ಚು ಶೋಷಿಸಿಲಾರಂಭಿಸಿದವು. ರಾಷ್ಟ್ರೀಯ ವಿಮೋಚನಾ ಚಳುವಳಿಗಳನ್ನು ವಿಭಜಿಸಲು ಯತ್ನಿಸಿದವು. ಇದಕ್ಕೆ ಉದಾಹರಣೆಯೆಂದರೆ ಪ್ರ್ಯಾಟ್ರಿಸ್ ಲುಮುಂಬಾ ನೇತೃತ್ವದ ಕಾಂಗೋ ಸಕರ್ಾರದ ಪ್ರಗತಿಪರ ನೀತಿಗಳ ವಿರುದ್ದ ವಿದೇಶಿ ಶಕ್ತಿಗಳು ಆಕ್ರಮಣ ಮಾಡಿದ್ದು. ಆಫ್ರಿಕಾ ಒಕ್ಕೂಟದ ರಾಷ್ಟ್ರಗಳ ಸಕರ್ಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಾ ಕೈಗೊಂಬೆ ಸಕರ್ಾರಗಳನ್ನು ಸ್ಥಾಪಿಸಲು ಯತ್ನಿಸಿದವು.
ಆಂಗ್ಲೋ-ಫ್ರೆಂಚ್-ಇಸ್ತ್ರೇಲ್ ದಾಳಿ ವಿರುದ್ದ ಈಜಿಪ್ಟಿನ ಜನತೆಯು ಜಯಗಳಿಸುವಲ್ಲಿ ಸೋವಿಯತ್ ಒಕ್ಕೂಟದ ಬೆಂಬಲವು ನಿಣರ್ಾಯಕವಾಗಿತ್ತು. 1970ರ ಹೊತ್ತಿಗೆ ಸೋವಿಯತ್ ರಷ್ಯಾವು 34 ಆಫ್ರಿಕನ್ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿತ್ತು. ಆಥರ್ಿಕ, ತಾಂತ್ರಿಕ ಮತ್ತು ಇನ್ನಿತರ ನೆರವನ್ನು ಅದು ನೀಡಿತ್ತು. ಅದರ ನೆರವಿಂದಾಗಿ ಆಫ್ರಿಕಾದಲ್ಲಿ ಸ್ವತಂತ್ರಗೊಂಡ ರಾಷ್ಟ್ರಗಳ ಅಧಿಕಾರದಡಿಯಲ್ಲಿ ಪ್ರಥಮ ಬಾರಿಗೆ 125 ಕೈಗಾರಿಕಾ ಘಟಕಗಳು ಸೇರಿದಂತೆ 320 ವಾಣಿಜ್ಯ ಘಟಕಗಳನ್ನು ನಿಮರ್ಿಸಲಾಯಿತು. ಆ ಸಮಯದಲ್ಲಿ 5,000 ಕ್ಕೂ ಮೀರಿ ಆಫ್ರಿಕನ್ ವಿದ್ಯಾಥರ್ಿಗಳು ಸೋವಿಯತ್ ರಷ್ಯಾದಲ್ಲಿ ಅಭ್ಯಸಿಸುತ್ತಿದ್ದರು. 1970ರ ಹೊತ್ತಿಗೆ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳ ಸಂಖ್ಯೆಯು 41 ನ್ನು ಮುಟ್ಟಿತು.
 
'''ಆಫ್ರಿಕಾದ ರಾಜಕೀಯ ಹಾದಿ ಮತ್ತು ಸ್ವಾತಂತ್ರ್ಯಾ ನಂತರದ ಆಫ್ರಿಕಾ:'''
ಆಫ್ರಿಕಾದಲ್ಲಿ ದುಡಿಯುವ ವರ್ಗವು ಸಣ್ಣ ವಿಭಾಗವಾಗಿತ್ತು. ರಾಜಕೀಯ ಅಧಿಕಾರವು ಸಣ್ಣ ಪುಟ್ಟ ಬಂಡವಾಳಿಗರ ಕೈಯಲ್ಲಿತ್ತು. ಆಫ್ರಿಕಾದ ಹಲವು ದೇಶಗಳು ಪ್ರಮುಖವಾಗಿ ಮೂರು ಸೈದ್ದಾಂತಿಕ ರಾಜಕೀಯ ಕವಲು ಹಾದಿಯಲ್ಲಿ ಮುನ್ನಡೆದವು. ಮೊದಲ ಎರಡು ವಿಭಾಗದಲ್ಲಿ ಸಮಾನತೆಯುಳ್ಳ ಸಮಾಜ ನಿಮರ್ಾಣಕ್ಕಾಗಿ ದೂರದೃಷ್ಟಿ ಹೊಂದಿದ್ದ ನಾಯಕರನ್ನು ಕಾಣಬಹುದಾಗಿದೆ. ಈ ನಾಯಕರು ಸಮಾನತೆ ಮತ್ತು ಸ್ವಾವಲಂಬನೆಗೆ ಮಹತ್ವ ನೀಡಿದರು. ತಮ್ಮ ದೇಶದ ಆಥರ್ಿಕತೆಯನ್ನು ವಸಾಹತುಶಾಹಿಯ ಸರಪಳಿಯಿಂದ ಬಂಧಮುಕ್ತಗೊಳಿಸಲು ಆಸ್ಥೆ ವಹಿಸಿದರು.
Line ೪೮೧ ⟶ ೪೭೩:
1978 ಮತ್ತು 1990ರ ನಡುವೆ ಆಫ್ರಿಕಾ ಖಂಡದ ಸರಾಸರಿ ತಲಾ ಆದಾಯವು 854 ಡಾಲರ್ಗಳಿಂದ 565 ಡಾಲರ್ಗಿಳಿಯಿತು. 1981 ಮತ್ತು 1990ರ ನಡುವೆ ಕಡಿಮೆ ಅಭಿವೃದ್ಧಿ ಹೊಂದಿರುವ ಆಫ್ರಿಕಾದ ರಾಷ್ಟ್ರಗಳ ಸಂಖ್ಯೆ 21ರಿಂದ 28ಕ್ಕೇರಿತು. 1978 ಮತ್ತು 1988ರ ನಡುವೆ ಒಟ್ಟಾರೆ ದೇಶೀಯ ಆಂತರಿಕ ಉತ್ಪನ್ನವು(ಜಿಡಿಪಿ) ಶೇ. 3.03ರಿಂದ ಶೇ. 0.7 ಕ್ಕಿಳಿಯಿತು. ಅಕ್ಷರಸ್ಥರ ಸಂಖ್ಯೆಯು 1962ರಲ್ಲಿದ್ದ 142 ಮಿಲಿಯನ್ನಿಂದ 1985 ರಲ್ಲಿ 165 ಮಿಲಿಯನ್ ಆಗಿದೆಯಷ್ಟೆ. ಆಫ್ರಿಕಾದ ಆಯವ್ಯಯ ಕೊರತೆಯು 1978ರಲ್ಲಿ 3.9 ಬಿಲಿಯನ್ ಡಾಲರ್ಗಳಿಂದ 1988ರ ಹೊತ್ತಿಗೆ 20.3 ಬಿಲಿಯನ್ ಮುಟ್ಟಿತ್ತು. ವಿದೇಶಿ ಸಾಲವು 1978ರಲ್ಲಿ 48.3 ಬಿಲಿಯನ್ ಡಾಲರ್ನಿಂದ ಏರಿಕೆ ಕಂಡು 1980ರಲ್ಲಿ 230 ಬಿಲಿಯನ್ ಡಾಲರ್ ಮತ್ತು 1990ರ ಹೊತ್ತಿಗೆ 260 ಬಿಲಿಯನ್ ಡಾಲರ್ ತಲುಪಿತು. 1980ರಲ್ಲಿ ಶೇ. 5.3 ರಷ್ಟಿದ್ದ ನಿರುದ್ಯೋಗ ದರವು 1990ರ ಹೊತ್ತಿಗೆ ಶೇ. 13ರಷ್ಟು ಹೆಚ್ಚಿತು.
ಹೀಗೆ 1970ರ ದಶಕದ ನಂತರ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು, ಹಾಗೂ ವಾಣಿಜ್ಯ ಹಣಕಾಸು ಬ್ಯಾಂಕುಗಳ ಕೂಟವು ವಸಾಹತುಶಾಹಿಯ ಸಿದ್ದಾಂತ ಮತ್ತು ಆಕ್ರಮಣಗಳನ್ನು ನಡೆಸುತ್ತಾ ಬಂದಿತು. ಈ ಕೂಟವನ್ನು ನವ-ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಅಂಗೋಲಾ, ಮೊಜಾಂಬಿಕ್, ಇಥಿಯೋಪಿಯಾ ಮತ್ತು ಇತರೆ ರಾಷ್ಟ್ರಗಳು ತಮ್ಮ ಮೇಲೆ ನೇರವಾಗಿ ಆಕ್ರಮಣ ಮಾಡುತ್ತಿರುವ ನ್ಯಾಟೋ ಶಕ್ತಿಯ ವಿರುದ್ದ ಸೆಣಸಬೇಕಾಯಿತು. ಜೊತೆಗೆ ನವ-ವಸಾಹತುಶಾಹಿಯಿಂದ ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪಡೆಯುತ್ತಿರುವ ಸಶಸ್ತ್ರಧಾರಿ ಬಂಡಾಯಗಾರರನ್ನು ಸಹ ಆ ರಾಷ್ಟ್ರಗಳು ಎದುರಿಸಬೇಕಾಯಿತು.
 
'''ಆಫ್ರಿಕಾದಲ್ಲಿ ಬಡತನ:'''
ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಇತರೆ ಪ್ರದೇಶಗಳಿಗೆ ಆಫ್ರಿಕಾದ ಅಭಿವೃದ್ಧಿ ಸೂಚ್ಯಂಕಗಳನ್ನು ಹೋಲಿಸಿದಲ್ಲಿ ಆಘಾತಕಾರಿ ಅಂಶಗಳು ಹೊರಬೀಳುತ್ತವೆ.
Line ೪೯೧ ⟶ ೪೮೨:
ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬೀಯನ್ 3.7 2.6 - 0.6
ಮೂಲ: ವಿಶ್ವ ಅಭಿವೃದ್ಧಿ ವರದಿ 1990 : ಬಡತನ (ವಾಷಿಂಗ್ಟನ್, 1990)
 
ಕಳೆದ 25 ವರ್ಷಗಳುದ್ದಕ್ಕೂ ಆಫ್ರಿಕಾದ ಅಭಿವೃದ್ಧಿಗಾಗಿ ತಾವು ನಿರಂತರ ನೆರವು ಮತ್ತು ಅನುದಾನ ನೀಡುತ್ತಿರುವೆವೆಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ವಿದೇಶಿ ಹಣಕಾಸು ಸಂಸ್ಥೆಗಳು ಬೊಗಳೆ ಹೊಡೆದರೂ ಆಫ್ರಿಕಾದ ಮುಕ್ಕಾಲು ಪಾಲು ಜನತೆ ಇನ್ನೂ ಬಡತನದ ದವಡೆಯಲ್ಲಿದ್ದಾರೆ. ಉದಾಹರಣೆಗ, ಇಥಿಯೋಪಿಯಾದ ಒಟ್ಟಾರೆ ಜನಸಂಖ್ಯೆಯು 1993ರಲ್ಲಿ 53.2 ಮಿಲಿಯನ್ ಇದ್ದು ಅದರಲ್ಲಿ ಬಡಜನತೆಯ ಸಂಖ್ಯೆ 20 ಮಿಲಿಯನ್ಗೂ ಹೆಚ್ಚಿದ್ದಾರೆ. ಅದಕ್ಕೆ ನಿರಾಶ್ರಿತರು, ಭೂರಹಿತರು ಮತ್ತು ಯುದ್ದದಿಂದ ನಿರಾಶ್ರಿತರಾದವರ ಸಂಖ್ಯೆಯನ್ನು ಸೇರಿಸಿದಲ್ಲಿ ಬಡಜನತೆಯ ಸಂಖ್ಯೆ 52 ಮಿಲಿಯನ್ ಮುಟ್ಟುತ್ತದೆ. ಹೀಗೆ ಇಥಿಯೋಪಿಯಾದಲ್ಲಿ ಶೇ. 97ರಷ್ಟು ಬಡಜನತೆಯಿದ್ದಾರೆ. ಸಿಯಾರ್ ಲಿಯೋನ್ನಲ್ಲಿ ಆದಾಯ ಗಳಿಕೆಯು ಅಸಮಾನವಾಗಿದೆ. 1993ರ ಅಂದಾಜಿನ ಪ್ರಕಾರ ಮೂರನೇ ಎರಡರಷ್ಟು ಜನ ಬಡತನದಲ್ಲಿದ್ದು ಬಹುತೇಕ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ವಯಸ್ಕರ ಅನಕ್ಷರತೆಯು ಶೇ. 79ರಷ್ಟಿದ್ದು ಇದು ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಪ್ರಮಾಣದ್ದು. ಪ್ರಾಥಮಿಕ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದ್ದಾಗಿದೆ. ಈ ನಡುವೆ, ಶ್ರೀಮಂತ ಕೃಷಿ ಪ್ರದೇಶವನ್ನು ಹೊಂದಿದ್ದರೂ ಜನಾಂಗೀಯ ಅಂತಃಕಲಹದಿಂದಾಗಿ ಶೇ. 15ರಿಂದ 20ರಷ್ಟು ಜನತೆ ನಿರಾಶ್ರಿತರಾಗಿದ್ದಾರೆ.
ಉಗಾಂಡಾದಲ್ಲಿ ಶೇ. 93ರಷ್ಟು ಬಡವರಿದ್ದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಡತನವು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿದ್ದು ತೀವ್ರ ಸ್ವರೂಪದಲ್ಲಿದೆ. ಪುರುಷರ ಜೀವಿತಾವಧಿಯು ಇಡೀ ಖಂಡದಲ್ಲೇ ಕಡಿಮೆ ಪ್ರಮಾಣದಲ್ಲಿದೆ. ಇದರೊಂದಿಗೆ ದುರದೃಷ್ಟವಶಾತ್ ಏಡ್ಸ್ ರೋಗವು ಕೂಡ ಕೈಜೋಡಿಸಿ ಸಾವಿನ ಸಂಖ್ಯೆಯನ್ನು ಇಮ್ಮಡಿಗೊಳಿಸಿದೆ. ಘಾನಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನವು ಪಟ್ಟಣ ಪ್ರದೇಶಗಳಿಗಿಂತ 13ಪಟ್ಟು ಹೆಚ್ಚಿನದು. ಕಡಿಮೆ ಉತ್ಪಾದನಾ ಸಮಸ್ಯೆಯು ಇನ್ನೂ ಅರ್ಧ ಶತಮಾನ ಕಾಲ ಹಾಗೆಯೇ ಮುಂದುವರೆಯುತ್ತದೆಂದು ಅಭಿಪ್ರಾಯ ಪಡಲಾಗಿದೆ. ನಮೀಬಿಯಾದಲ್ಲಿ ಆದಾಯ ಹಂಚಿಕೆಯು ತೀವ್ರತರದ ಅಸಮಾನತೆಯಿಂದ ಕೂಡಿದ್ದು ಸಂಪೂರ್ಣ ಬಡತನವು ವ್ಯಾಪಕವಾಗಿ ಹಬ್ಬಿದೆ. ಅಲ್ಲಿನ ಶೇ. 5ರಷ್ಟು ಶ್ರೀಮಂತರು ಜಿಡಿಪಿಯ ಶೇ. 70ರಷ್ಟನ್ನು ನಿಯಂತ್ರಿಸಿದರೆ ಶೇ. 55ರಷ್ಟು ಬಡವರು ಬರೆ ಶೇ. 3ರಷ್ಟು ಹೊಂದಿದ್ದಾರೆ. ಮಹಿಳೆಯು ಗಂಭೀರ ಬಡತನದಿಂದ ಜಂಜರಿತಳಾಗಿದ್ದಾಳೆ.
ವಿಶ್ವಬ್ಯಾಂಕ್ ಬೃಹತ್ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಟಾಂಜೇನಿಯಾದ ಜೀವನ ಗುಣಮಟ್ಟ ದರವು 1969 ಮತ್ತು 1983ರ ನಡುವಿನ ವರ್ಷಗಳಲ್ಲಿ (ಸರಾಸರಿ ವಾಷರ್ಿಕ) ಶೇ. 2.5ರಷ್ಟು ಇಳಿಮುಖಗೊಂಡಿತು. ಇದೇ ಅವಧಿಯಲ್ಲಿ ನಗರ ಪ್ರದೇಶದ ಕೂಲಿದರ ಶೇ. 65 ರಷ್ಟು ಕುಸಿತಕಂಡಿತು. ಸಾಮಾನ್ಯ ಜನರು ಮಾಂಸ, ಡೈರಿ ಉತ್ಪನ್ನ, ತರಕಾರಿಗಳಿಂದ ದೂರಸರಿದು ಕಳಪೆ ಆಹಾರ ಪದಾರ್ಥಗಳೆಡೆಗೆ ಸರಿದರು. ಹೆಚ್ಚು ಜನಸಂಖ್ಯೆ ಹೊಂದಿದ್ದು ಶ್ರೀಮಂತ ರಾಷ್ಟ್ರವೂ ಆಗಿರುವ ನೈಜೀರಿಯಾದಲ್ಲಿ 1980ರಲ್ಲಿ ಆಹಾರ ಬಳಕೆಯು ಶೇ. 7ರಷ್ಟು ಕಡಿಮೆಗೊಂಡು ಅಲ್ಲಿನ ಜೀವನ ಗುಣಮಟ್ಟವು 1950ರ ಪ್ರಮಾಣಕ್ಕಿಂತ ಕೆಳಗಿದ್ದಿತು. 1980ರ ದಶಕದ ಆಥರ್ಿಕ ಬಿಕ್ಕಟ್ಟಿನ ಪರಿಣಾಮವಾಗಿ ಅಲ್ಲಿನ ಪ್ರಗತಿಯು ಕಳೆದ 20 ವರ್ಷಗಳ ಹಿಂದಿನ ಮಟ್ಟ ತಲುಪಿತು. ಜಾಂಬಿಯಾದಲ್ಲಿ ಶೇ. 80ರಷ್ಟು ಗ್ರಾಮೀಣವಾಸಿಗಳು ಬಡತನದಲ್ಲಿದ್ದಾರೆ. ನಿರಂತರವಾಗಿ ಹಳ್ಳಿಗಾಡಿನಿಂದ ನಗರ ಪ್ರದೇಶದೆಡೆಗೆ ಮತ್ತು ವಿದೇಶಕ್ಕೆ ಹಣ ಹರಿದು ಹೋದದ್ದೇ ಬಡತನಕ್ಕೆ ಕಾರಣವಾಗಿತ್ತು. ಇತರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ರಗಳಿಗೆ ಹೋಲಿಸಿದಲ್ಲಿ ದಕ್ಷಿಣ ಆಫ್ರಿಕಾದ ಬಡತನ ಪ್ರಮಾಣವು 1980 ಮತ್ತು 1990 ರ ದಶಕಗಳ ನಡುವೆ ಹೆಚ್ಚಳಗೊಂಡಿತು. ಜನಸಂಖ್ಯೆ ಬೆಳೆಯತೊಡಗಿತು, ನಗರಗಳು ವಿಸ್ತರಣೆಗೊಂಡವು ಮತ್ತು ಆಹಾರ ಧಾನ್ಯಗಳಿಗಾಗಿ ವಿದೇಶದ ಮೇಲಿನ ಅವಲಂಬನೆಯು ಹೆಚ್ಚತೊಡಗಿತು.
1980ರ ದಶಕದಲ್ಲಿ ಆಫ್ರಿಕಾದ ಬಹುತೇಕ ಎಲ್ಲ ಬಡರಾಷ್ಟ್ರಗಳು ಸಾಲ ಮರುಪಾವತಿಸಲಾಗದೆ ದಿವಾಳಿ ಎದ್ದಾಗ ಹಳೆಸಾಲ ತೀರಿಸಲು ಹೊಸ ಸಾಲ ನೀಡಲಾಯಿತು. ತಮ್ಮ ರಾಷ್ಟ್ರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗಿಂತ ಸಾಲ ಮರುಪಾವತಿಗಾಗಿ ಹೆಚ್ಚಿನ ವೆಚ್ಚ ಭರಿಸಿವೆ. ಉದಾಹರಣೆಗೆ, ದೇಶದ ಜಿಡಿಪಿಯಲ್ಲಿ ಸರಾಸರಿ ಆಫ್ರಿಕಾದ ಸಾಲ ಮರುಪಾವತಿ ಶೇಕಡಾ 16ರಷ್ಟಿದ್ದರೆ, ಶಿಕ್ಷಣ, ರಕ್ಷಣೆ ಮತ್ತು ಆರೋಗ್ಯಕ್ಕೆ ಅದಕ್ಕಿಂತಲೂ ಕಡಿಮೆ ಹಣ ಹಂಚಿಕೆಯಾಗುತ್ತಿತ್ತು. ಸಾಲ ಮರುಪಾವತಿಯ ಒತ್ತಡದಿಂದಾಗಿ ಬಲಿಪಶುಗಳಾದವರೆಂದರೆ ಮಕ್ಕಳು, ಅಂಗವಿಕಲರು ಮತ್ತು ಮಹಿಳೆಯರು. ಅಪೌಷ್ಟಿಕತೆ, ಮಾನಸಿಕ ಒತ್ತಡ, ನಿರುದ್ಯೋಗ, ಹಸಿವು ಮತ್ತು ದಾರಿದ್ರ್ಯಗಳಿಂದಾಗಿ ಈ ವರ್ಗದ ಜನತೆಗೆ ತಕ್ಷಣದ ಹೊಡೆತ ಬಿದ್ದಿತು. ಉದಾಹರಣೆಗೆ, ಆಫ್ರಿಕಾದಲ್ಲಿ ಏಡ್ಸ್ ರೋಗವು ವ್ಯಾಪಕ ಪ್ರಮಾಣದಲ್ಲಿ ಹಬ್ಬಲು ವಿಶ್ವ ಬ್ಯಾಂಕಿನ ಆಥರ್ಿಕ ನೀತಿಗಳೇ ಕಾರಣವೆಂದು ಅಮೇರಿಕಾ ರೋಗ ನಿಯಂತ್ರಣ ಸಂಸ್ಥೆಯು ಒಂದೊಮ್ಮೆ ದೂರಿತ್ತು. ಆರೋಗ್ಯ ಕ್ಷೇತ್ರದಲ್ಲಿ ಒಂದೆಡೆ ಸಕರ್ಾರವು ಸಹಾಯಧನವನ್ನು ಕಡಿತಗೊಳಿಸಿ ಮತ್ತೊಂದೆಡೆ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದ್ದರಿಂದ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಬಳಸುವವರ ಸಂಖ್ಯೆ ಕುಸಿದು ಬಿದ್ದಿತು. 'ಮಾನವ ಸಂಪನ್ಮೂಲದ ಸರೋವರ' ವಾಗಬೇಕಿದ್ದ ಆಫ್ರಿಕಾ ಹಿಂಸೆಯಿಂದ ನರಳುತ್ತಿರುವವರ ಕೂಪವಾಯಿತು.
 
'''ಆಫ್ರಿಕಾದಲ್ಲಿ ಜನಾಂಗೀಯ ಘರ್ಷಣೆ:'''
20 ನೇ ಶತಮಾನದಲ್ಲಿ ಆಫ್ರಿಕಾದಲ್ಲಿ ನಡೆದಿರುವ ಜನಾಂಗೀಯ ಕಲಹಗಳು ಆಫ್ರಿಕಾದ ಇತಿಹಾಸದಲ್ಲೇ ಕಂಡಿರದ ಮಾರಣಹೋಮಗಳನ್ನು ಮತ್ತು ಕಗ್ಗೊಲೆಗಳನ್ನು ಉಂಟು ಮಾಡಿವೆ. ವಿಶ್ವದಲ್ಲೇ ಅತಿ ಹೆಚ್ಚು ನಿರಾಶ್ರಿತರನ್ನು ಆಫ್ರಿಕಾ ಹೊಂದಿತ್ತು. 1992ರಲ್ಲಿ ನಿರಾಶ್ರಿತರ ಸಂಖ್ಯೆ 50 ಲಕ್ಷ ಮೀರಿತ್ತು. 23ಲಕ್ಷ ಜನಸಂಖ್ಯೆಯಿರುವ ಲೈಬೀರಿಯಾದಂಥಹ ಚಿಕ್ಕ ದೇಶದಲ್ಲಿ ಬರೇ 4 ವರ್ಷಗಳಲ್ಲಿ ಸುಮಾರು 2.50 ಲಕ್ಷ ಜನರು ಅಂತಃಕಲಹದಿಂದ ಅಸು ನೀಗಿದ್ದಾರೆ. 1993ರಲ್ಲಿ ಘಾನಾದಲ್ಲಿ ನಡೆದ ರಕ್ತಪಾತದಲ್ಲಿ ಬುಡಕಟ್ಟು ಗುಂಪುಗಳ 6000 ಮಂದಿ ಹತ್ಯೆಯಾಗಿದ್ದು 200 ಹಳ್ಳಿಗಳು ನಾಶಗೊಂಡು 15000 ಮಂದಿ ನಿರಾಶ್ರಿತರಾಗಿದ್ದಾರೆ. ಸಿಯಾರ ಲಿಯೋನ್ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ಕಾದಾಟದಿಂದ ಅಂದಾಜು 35,000 ನಿರಾಶ್ರಿತರು ಒಂದೇ ವಾರದಲ್ಲಿ ಪಕ್ಕದ ಜಿನಿಯಾ ಗಡಿಗೆ ನುಸುಳಿದ್ದಾರೆ.
Line ೫೦೪ ⟶ ೪೯೩:
1970ರಲ್ಲಿ ಸೋಮಾಲಿಯಾದಲ್ಲಿ ಮಿಲಿಟರಿ ಆಳ್ವಿಕೆ ಬಂದಿತು. ಹಾಗೆಯೇ ಇಥಿಯೋಪಿಯಾ 1974ರಲ್ಲಿ ಮತ್ತು ಸೂಡಾನ್ 1969ರಲ್ಲಿ ಮಿಲಿಟರಿ ಆಡಳಿತದ ತೆಕ್ಕೆಗೆ ಸರಿದವು. ಇಥಿಯೋಪಿಯಾದಲ್ಲಿ ಮಾಕ್ಸರ್್ವಾದಿ-ಲೆನಿನ್ವಾದಿ ಪಕ್ಷದ ನಾಯಕ ಮೆಂಗಿಸ್ಟು ಹ್ಯೆಲ್ ಮೆರಿಯಮ್ ಆಳ್ವಿಕೆಯನ್ನು ಕಿತ್ತೊಗೆದು ದೇಶ ವಿಭಜನೆ ಮಾಡಲು ಯತ್ನಿಸಲಾಯಿತು. ಅಂತಿಮವಾಗಿ 1991ರಲ್ಲಿ ಮೆಂಗಿಸ್ಟು ಆಳ್ವಿಕೆಯನ್ನು ಕೊನೆಗಾಣಿಸಲಾಯಿತು. ತನ್ನ ವಿವಾದಿತ ಗಡಿಪ್ರದೇಶಗಳನ್ನು ವಾಪಸು ಪಡೆಯಲು ಅದೀಗ ತಾನೆ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಎರಿಟ್ರಿಯಾ ದೇಶದ ಮೇಲೆ ಇಥಿಯೋಪಿಯಾವು 1998-99 ರಲ್ಲಿ ಯುದ್ದ ಮಾಡಿತು. 1999ರ ಹೊತ್ತಿಗೆ, ಕೇಂದ್ರೀಯ ಸೋಮಾಲಿ ಭೂಪ್ರದೇಶದಲ್ಲಿ ವಾಯುವ್ಯ ಭೂಭಾಗವು ಸೋಮಾಲಿಲ್ಯಾಂಡ್ ಆಗಿ ವಿಭಜನೆಗೊಂಡು, ದಕ್ಷಿಣ ಭೂಭಾಗವು ಯುದ್ದಕೋರರ ನಡುವೆ ಹರಿದು ಹಂಚಿಹೋಯಿತು.
ದಕ್ಷಿಣ ಸೂಡಾನ್ನಲ್ಲಿ ಉತ್ತರದ ಇಸ್ಲಾಂಮಿಕ್ ಪಂಗಡ ಮತ್ತು ದಕ್ಷಿಣ ಜನತೆಯ ನಡುವಿನ ದೀಘರ್ಾವಧಿ ಯುದ್ದ ಇನ್ನೂ ನಡೆಯುತ್ತಲೇ ಇದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧಾಮರ್ಿಕ ಅನುಯಾಯಿಗಳ ನಡುವಿನ ಘರ್ಷಣೆಯು ಜನಾಂಗೀಯ ಯುದ್ದಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಸೂಡಾನ್, ಇಥಿಯೋಪಿಯಾ ಮತ್ತು ಸೋಮಾಲಿಯಾಗಳಲ್ಲಿನ ಜನಾಂಗೀಯ ಘರ್ಷಣೆಗಳಿಂದಾಗಿ ಅಲ್ಲಿನ ಜನರೆಲ್ಲ ನಿರಾಶ್ರಿತ ಶಿಬಿರಗಳಲ್ಲೇ ಬಹುತೇಕ ತಮ್ಮೆಲ್ಲ ಜೀವನವನ್ನು ಕಳೆದಿದ್ದಾರೆ. 1994ರಲ್ಲಿ ರುವಾಂಡಾದಲ್ಲಿ ಘೋರವಾದ ಜನಾಂಗೀಯ ಘರ್ಷಣೆ ನಡೆದು ಬಹುಸಂಖ್ಯಾತ ಹುಟು ಜನಾಂಗವು ಅಲ್ಪಸಂಖ್ಯಾತ ಟುಟ್ಸಿ ಜನಾಂಗದ ಮೇಲೆ ಮಿಲಿಟರಿ ಕಗ್ಗೊಲೆ ನಡೆಸಿತು.
 
'''ಆಫ್ರಿಕಾದ ಮಹಾಯುದ್ದಗಳು:'''
ಝೈರೇ ದೇಶ (ಇಂದಿನ ಕಾಂಗೋ)ದ ಮೇಲಿನ ನಿಯಂತ್ರಣಕ್ಕಾಗಿ ವಿವಿಧ ಪಂಗಡಗಳ ನಡುವೆ ಈ ಮಹಾಯುದ್ದಗಳು ಜರುಗಿದವು. ಇದರಲ್ಲಿ ಪ್ರಮುಖವಾಗಿ ನಾಲ್ಕು ಜನಾಂಗಗಳ ಸಶಸ್ತ್ರ ಗುಂಪುಗಳಿವೆ:
Line ೫೧೦ ⟶ ೪೯೮:
ಆಫ್ರಿಕಾದ ಮೊದಲನೇ ಮಹಾಯುದ್ದ:
ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು 1994ರಲ್ಲಿ ನಡೆಸಿದ ರುವಾಂಡಾ ನರಮೇಧದ ಅಂತ್ಯದಲ್ಲಿ ರುವಾಂಡಾ ಸಕರ್ಾರಿ ಸೇನೆಯ ಪ್ರತಿದಾಳಿಗೆ ಹೆದರಿ 20 ಲಕ್ಷ ಹುಟು ಜನತೆಯು ನಿರಾಶ್ರಿತರಾಗಿ ರುವಾಂಡಾವನ್ನು ತ್ಯಜಿಸಿ ಪಕ್ಕದ ಝೈರೇ ಮತ್ತು ಟಾಂಜೇನಿಯಾ ದೇಶಗಳಿಗೆ ಓಡಿಹೋದರು. ಇದರಲ್ಲಿ ನರಮೇಧ ನಡೆಸಿದ ಹುಟು ಜನಾಂಗದ ನಾಯಕರು ಇದ್ದರು. ಝೈರೇಯ ಬುಕಾವು, ಗೋಮ ಮತ್ತು ಉವಿರಾ ಪ್ರದೇಶಗಳಲ್ಲಿ ನೆಲೆಯೂರಿದ್ದ ನಿರಾಶ್ರಿತರ ಶಿಬಿರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಈ ನಾಯಕರು ಯಶಸ್ವಿಯಾದರು. ಇವರಿಗೆ ಬುರುಂಡಿಯ ಟುಟ್ಸಿ ಜನಾಂಗದ ಸಕರ್ಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದ ಹುಟು ಜನತೆಯ ಸಂಘಟನೆ ಮತ್ತು ಝೈರೇಯ ಅಧ್ಯಕ್ಷ ಮೊಬುಟು ಸೆಸೆ ಸೆಕೊ ರವರು ಬೆಂಬಲವಾಗಿ ನಿಂತರು. ನೆರೆಯ ನೈರೋಬಿ, ಕೀನ್ಯಾ, ಅಮೇರಿಕಾ ಮತ್ತು ಯೂರೋಪ್ ರಾಷ್ರಗಳಿಂದ ಸಂಪನ್ಮೂಲ ಮತ್ತು ಶಸ್ತ್ರಾಸé್ರಗಳನ್ನು ಸಂಗ್ರಹಿಸುತ್ತಾ ನಿರಾಶ್ರಿತ ಜನತೆಗೆ ಮಿಲಿಟರಿ ತರಬೇತಿ ನೀಡಿ ಸನ್ನದ್ದಗೊಳಿಸಿದರು. ಅಂತಿಮವಾಗಿ, ಸೆಂಬ್ಲಮೆಂಟ್ ಡೆಮಕ್ರಟಿಕ್ ಪೋರ್ ಲ ರುವಾಂಡಾ (ಆರ್ಡಿಆರ್) ಎಂಬ ಸಂಘಟನೆಯ ನೇತೃತ್ವದಲ್ಲಿ ರುವಾಂಡಾದ ಹುಟು ಮತ್ತು ಬುರುಂಡಿಯ ದಂಗೆಕೋರ ಗುಂಪುಗಳು ರುವಾಂಡಾ ಸಕರ್ಾರದ ವಿರುದ್ದ 1995-1996ರಲ್ಲಿ ಯುದ್ದ ಸಾರಿದವು. ಇದಕ್ಕೆ ಪ್ರತ್ಯುತ್ತರವಾಗಿ, ಪಾಲ್ ಕಗಾಮೆ ನಾಯಕತ್ವದ ರುವಾಂಡಾ ಸಕರ್ಾರಿ ಸೇನೆಯು ಬಂಡಾಯ ಗುಂಪುಗಳ ನಾಯಕ ಕಬಿಲಾ ಸಹಕಾರದಲ್ಲಿ ಪೂರ್ವ ಝೈರೇಯ ಮೇಲೆ ದಾಳಿಯಿಟ್ಟಿತು. ಆರ್ಡಿಆರ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಈ ಪ್ರತಿ ದಾಳಿಯಿಂದ ನಿರಾಶ್ರಿತ ಜನತೆ ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾದರು. 6.0 ಲಕ್ಷ ಜನ ನಿರಾಶ್ರಿತರಾಗಿ ಕಿವುಸ್ ಪ್ರದೇಶಕ್ಕೂ, ಸುಮಾರು 4.0ಲಕ್ಷ ಜನರು ಟಾಂಜೇನಿಯಾಕ್ಕೂ ಓಡಿಹೋದರು. ಸಾವಿರಗಟ್ಟಲೆ ಜನ ಹಸಿವು, ಹಿಂಸೆಗಳಿಂದ ಮರಣ ಹೊಂದಿದರು. ಮೇ, 1997ರಲ್ಲಿ ರಾಜಧಾನಿ ಕಿನ್ಸಾಸಾ ವನ್ನು ಪ್ರವೇಶಿಸಿದಾಕ್ಷಣ ಝೈರೇ ಅಧ್ಯಕ್ಷ ಮೊಬುಟು ಅಲ್ಲಿಂದ ಪರಾರಿಯಾದ. ಯುದ್ದಕ್ಕೆ ಅಂತ್ಯ ಹಾಡಿ ರಿಪಬ್ಲಿಕ್ ಕಾಂಗೋದ ಅಧ್ಯಕ್ಷ ಕಬಿಲಾ ಎಂದು ಘೋಷಿಸಲಾಯಿತು.
 
'''ಆಫ್ರಿಕಾದ ಎರಡನೇ ಮಹಾಯುದ್ದ:'''
ಜಾಂಬಿಯಾ, ಅಂಗೋಲಾ, ಕಾಂಗೋ-ಬೆಜ್ಜವಿಲ್ಲೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಛಡ್, ಸೂಡಾನ್, ಬರುಂಡಿ ಮತ್ತು ಟಾಂಜೇನಿಯಾಗಳಲ್ಲಿ ಚದುರಿಹೋಗಿದ್ದ ಹುಟು ಜನಾಂಗದ ಹೋರಾಟಗಾರರು ಮತ್ತೆ ರುವಾಂಡಾ ವಿಮೋಚನಾ ಮೈತ್ರಿ (ಎಎಲ್ಐಆರ್) ಯನ್ನು ಸಂಘಟಿಸಿ ಅದು 1997ರ ಹೊತ್ತಿಗೆ ಕೆಲಸ ಮಾಡಲಾರಂಭಿಸಿತು. ಕಬಿಲಾ ಸಕರ್ಾರದ ವಿರುದ್ದ ಕತ್ತಿ ಮಸೆಯಲಾರಂಬಿಸಿದರು. ಎರಡನೆ ಕಾಂಗೋ ಮಹಾಯುದ್ದವನ್ನು ಆಫ್ರಿಕಾದ ಮಹಾಯುದ್ದವೆಂದೂ ಕರೆಯಲಾಗುತ್ತದೆ. ಆಫ್ರಿಕಾದ 8 ರಾಷ್ಟ್ರಗಳ ನಡುವೆ ನಡೆದ ಈ ಯುದ್ದವು 1998ರಲ್ಲಿ ಆರಂಭವಾಗಿ 2003ರಲ್ಲಿ ಕೊನೆಗೊಂಡಿತು. ಎರಡನೆ ವಿಶ್ವ ಮಹಾಯದ್ದಾನಂತರದಲ್ಲಿ ನಡೆದ ಅತ್ಯಂತ ಬರ್ಭರ ಯುದ್ದ ಇದಾಗಿದ್ದು ಇದರಲ್ಲಿ 25 ಸಶಸ್ತ್ರ ಗುಂಪುಗಳು ಭಾಗಿಯಾಗಿದ್ದು ಸುಮಾರು 38ಲಕ್ಷ ಜನ ಬಹುತೇಕ ಹಸಿವು ಮತ್ತು ಬಡತನದಿಂದ ಅಸುನೀಗಿದ್ದಾರೆ. ಲಕ್ಷಾಂತರ ಜನರು ಈ ಯುದ್ದದಿಂದಾಗಿ ನಿರಾಶ್ರಿತರಾಗಿದ್ದಾರೆ.
2001ರಲ್ಲಿ ಎಲ್ಲ ಬಂಡುಕೋರ ಗುಂಪುಗಳು ಮತ್ತು ದೇಶಗಳ ನಡುವೆ ಮಾತುಕತೆಗಳ ಮುಖಾಂತರ ಸಮಸ್ಯೆ ಬಗೆಹರಿಸಲು ಯತ್ನಿಸಲಾಯಿತು ಹಾಗೂ ಮಧ್ಯಂತರ ಸಕರ್ಾರ ರಚಿಸಿ ಲಾರೆಂಟ್ ಕಬಿಲಾ ರನ್ನು ರಿಪಬ್ಲಿಕ್ ಕಾಂಗೋದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅಂಗೋಲಾ, ಜಿಂಬಾಬ್ವೆ, ಛಡ್, ಸೂಡಾನ್ ಮತ್ತು ಲಿಬ್ಯಾಗಳು ಕಬಿಲಾ ಬೆಂಬಲಕ್ಕೆ ನಿಂತವು. ಆದರೆ, 2002ರಲ್ಲಿ ಅವರನ್ನು ಹತ್ಯೆ ಮಾಡಿದ್ದರಿಂದ ಅವರ ಮಗ ಜೋಸೆಫ್ ಕಬಿಲಾರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಮಧ್ಯಂತರ ಸಕರ್ಾರದ ಅವಧಿ ಮುಗಿದ ನಂತರ 2006ರಲ್ಲಿ ಸಾಮಾನ್ಯ ಚುನಾವಣೆ ನಡೆದು ಕಬಿಲಾ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು.
 
ಜಾಗತೀಕರಣ ಯುಗದಲ್ಲಿ ಆಫ್ರಿಕಾ:
ನ್ಶೆಜೀರಿಯಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲೇ ಹನ್ನೊಂದನೆ ಸ್ಥಾನದಲ್ಲಿದೆ. ನ್ಶೆಜೀರಿಯಾ ಸಕರ್ಾರದ ಶೇ. 80 ರಷ್ಟು ಆದಾಯವು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತವಾಗಿದ್ದು ಯೂರೋಪ್ ಮತ್ತು ಅಮೇರಿಕಾಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುತ್ತವೆ. ಅಂಗೋಲಾವು ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಫ್ರಿಕಾದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅದರ ಶೇ. 90ರಷ್ಟು ಆದಾಯವು ಪೆಟ್ರೋಲಿಯಂ ರಪ್ತಿನಿಂದ ಬರುತ್ತಿದೆ. ಚೀನಾ ಈ ದೇಶದ ಪ್ರಮುಖ ಆಮದುದಾರ ರಾಷ್ಟ್ರವೆನಿಸಿದೆ. ಸೂಡಾನ್ ದೇಶವೂ ಕೂಡ ತನ್ನ ಬಹುಪಾಲು ಆದಾಯವನ್ನು ಪೆಟ್ರೋಲಿಯಂ ರಫ್ತಿನಿಂದಾಗಿ ಗಳಿಸುತ್ತಿದೆ.
Line ೫೨೫ ⟶ ೫೧೧:
ಪ್ರತಿಭಾ ಪಲಾಯನ:
ಪ್ರತಿ ವರ್ಷ ಸುಮಾರು 70,000 ಪರಿಣಿತ ಕೆಲಸಗಾರರು ಆಫ್ರಿಕಾದಿಂದ ಅಭಿವೃದ್ಧಿ ಹೊಂದಿದ ರಾಷ್ರಗಳಿಗೆ ವಲಸೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಾಂಬಿಯಾವು ತನ್ನ 1400 ಡಾಕ್ಟರುಗಳಲ್ಲಿ ಸುಮಾರು 400 ಮಂದಿಯನ್ನು ಪ್ರತಿಭಾ ಪಲಾಯನದಿಂದಾಗಿ ಕಳೆದುಕೊಂಡಿದೆ.
 
'''ಆಕರ ಗ್ರಂಥ:'''
1. ಆಫ್ರಿಕಾ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ : ಎ ಫ್ಯೂಚರಿಸ್ಟಿಕ್ ಎಕ್ಸರ್ಸ್ಶೆಜ್
Line ೫೩೩ ⟶ ೫೧೮:
೫. ನ್ಯೂ ಥಿಯರೀಸ್ ಆಫ್ ರೆವಲ್ಯೂಷನ್, ಜಾಕ್ ವುಡ್ಸ್, 1977, ಇಂಟರ್ ನ್ಯಾಷನಲ್ ಪಬ್ಲಿಷರ್ಸ್, ನ್ಯೂಯಾಕರ್್.
೬ ದಿ ಸೌತ್ ಆಫ್ರಿಕನ್ ವಕರ್ಿಂಗ್ ಕ್ಲಾಸ್: ಪ್ರೊಡಕ್ಷನ್, ರಿಪ್ರೊಡಕ್ಷನ್ ಅಂಡ್ ಪಾಲಿಟಿಕ್ಸ್, ಪ್ಯಾಟ್ರಿಕ್ ಬಾಂಡ್, ಡಾಲರ್ಿನ್ ಮಿಲ್ಲರ್ ಮತ್ತು ಗ್ರೆಗ್ ರಾಯಟರ್ಸ್, ಸೋಷಿಯಲಿಸ್ಟ್ ರಿಜಿಸ್ಟರ್, 2001.
 
== ಮೂಲಗಳು ==
<references />
 
== ಬಾಹ್ಯ ಸಂಪರ್ಕಗಳು ==
* [http://www.columbia.edu/cu/lweb/indiv/africa/cuvl/AfCivIT.html ಆಫ್ರಿಕಾದ ನಾಗರೀಕತೆ]
* [http://africadatabase.org/ ಆಫ್ರಿಕಾದ ಬಗ್ಗೆ]
* [http://www.afrika.no/index/ ಆಫ್ರಿಕಾದ ಎಲ್ಲ ರಾಷ್ಟ್ರಗಳ ಬಗ್ಗೆ]
 
[[ವರ್ಗ:ಭೂಗೋಳ]]
[[ವರ್ಗ:ಖಂಡಗಳು]]
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ