ಆದ್ಯ ರಾಮಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ
ಚು Wikipedia python library
೧ ನೇ ಸಾಲು:
'''ಆದ್ಯ ರಾಮಾಚಾರ್ಯ'''ರ ಐತಿಹಾಸಿಕ ಕಾದಂಬರಿಗಳು ವಾಸ್ತವಿಕತೆಗೆ ಸ್ವಲ್ಪವೂ ಅಪಚಾರವಾಗದಂತೆ ಬರೆಯಲ್ಪಟ್ಟಿವೆ. ಅದೇ ಸಮಯದಲ್ಲಿ ವರ್ಣನೆಯು ಕತೆಯಲ್ಲಿ ಆಸಕ್ತಿ ಹುಟ್ಟಿಸುವಂತಿರುತ್ತದೆ. '''ದಾಸಸಾಹಿತ್ಯ ಸಂಶೋಧನೆ'''ಗೂ ಸಹ ಆದ್ಯರು ವಿಶೇಷ ಸೇವೆ ಸಲ್ಲಿಸಿದ್ದಾರೆ.
 
==ಬಾಲ್ಯ ಹಾಗು ಶಿಕ್ಷಣ ==
 
ಆದ್ಯ ರಾಮಾಚಾರ್ಯರ ಮೂಲಪುರುಷರಾದ ಶೇಷಾದ್ರಿ ಇವರು [[ತಮಿಳುನಾಡು| ತಮಿಳುನಾಡಿನ]] '''ಕುಂಭಕೋಣ'''ದವರು. ಇವರು [[ಬಿಜಾಪುರ| ವಿಜಾಪುರ]] ಜಿಲ್ಲೆಯ '''ಹಿರೇಮಣ್ಣೂರಿ'''ನಲ್ಲಿ ನೆಲೆಸಿದರು.
ಇವರ ವಿದ್ವತ್ತಿಗೆ ಮೆಚ್ಚಿ ಪೇಶವೆ ದೊರೆಗಳು ಇವರಿಗೆ ಅಗರಖೇಡ, ಭುಂಯಾರ,ಪಡಗಾನೂರ, ಬಳ್ಳೊಳ್ಳಿ ಹಾಗು ಮಣ್ಣೂರು ಗ್ರಾಮಗಳ ಜಹಗೀರಿಯನ್ನು ಕೊಟ್ಟರು. ರಾಮಾಚಾರ್ಯರು [[೧೯೨೬]]
[[ನವೆಂಬರ್| ನವೆಂಬರ]]ದಲ್ಲಿ, [[ಬಿಜಾಪುರ| ವಿಜಾಪುರ]] ಜಿಲ್ಲೆಯ '''ಇಂಡಿ''' ತಾಲೂಕಿನಲ್ಲಿ, ತಾಯಿಯ ತವರೂರಾದ '''ಲಚ್ಚಾಣ'''ದಲ್ಲಿ ನರಕ ಚತುರ್ದಶಿಯಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಲಚ್ಚಾಣ ಹಾಗು ಭುಂಯಾರದಲ್ಲಿ ನಡೆಯಿತು. ಮಾಧ್ಯಮಿಕ ಶಿಕ್ಷಣವು [[ಬಿಜಾಪುರ| ವಿಜಾಪುರ]]ದ '''ದರಬಾರ ಹಾಯ್‍ಸ್ಕೂಲಿ'''ನಲ್ಲಿ ಆಯಿತು. ಮ್ಯಾಟ್ರಿಕ್ ಪರೀಕ್ಷೆಗೆ ಕೂಡುವ ಮೊದಲೆ ರಾಮಾಚಾರ್ಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಶಾಲೆಯನ್ನು ಬಿಟ್ಟರು. ಆ ಬಳಿಕ ಸತ್ಯಜ್ಞಾನ ಸ್ವಾಮೀಜಿಯವರ ಒತ್ತಾಸೆಯಿಂದ ಈಗ [[ಮಹಾರಾಷ್ಟ್ರ]] ರಾಜ್ಯದಲ್ಲಿರುವ '''ಸೊಲ್ಲಾಪುರ'''ದಲ್ಲಿ [[ಸಂಸ್ಕೃತ]] ಅಭ್ಯಾಸ ಮಾಡಿದರು.
 
 
==ಉದ್ಯೋಗ==
ಸೊಲ್ಲಾಪುರದಿಂದ ವಿಜಾಪುರಕ್ಕೆ ಮರಳಿದ ರಾಮಾಚಾರ್ಯರು ವಚನ ಪಿತಾಮಹ [[ಫ.ಗು.ಹಳಕಟ್ಟಿ]]ಯವರ ಮುದ್ರಣಾಲಯದಲ್ಲಿ ಕೆಲಕಾಲ ಕೆಲಸ ಮಾಡಿದರು. ಆ ಸಮಯದಲ್ಲಿ ಇವರ ತಂದೆ ಸೇತುರಾಮಾಚಾರ್ಯರಿಗೆ [[ಮೈಸೂರು]] ಅರಮನೆಯಲ್ಲಿ [[ಭಾಗವತ]] ಪುರಾಣ ಪ್ರವಚನ ಮಾಡಲು ಆಹ್ವಾನ ದೊರೆತಿದ್ದರಿಂದ ರಾಮಾಚಾರ್ಯರೂ ಸಹ ತಂದೆಯೊಡನೆ [[ಮೈಸೂರು|ಮೈಸೂರಿಗೆ]] ತೆರಳಿ ಅಲ್ಲಿ '''ಉಷಾ ಸಾಹಿತ್ಯಮಾಲೆ'''ಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆನಂತರ [[ಬೆಂಗಳೂರು| ಬೆಂಗಳೂರಿನಲ್ಲಿ]] '''[[ಕನ್ನಡ]] ಸಾಹಿತ್ಯ ಪರಿಷತ್ತಿ'''ನಲ್ಲಿ ಕೆಲಸ ಮಾಡತೊಡಗಿದರು.
 
ಆದ್ಯ ರಾಮಾಚಾರ್ಯರು [[೧೯೯೦]]ರ ಸುಮಾರಿನಲ್ಲಿ “'''ವರದರಾಜ ಪ್ರಕಾಶನ'''” ವನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
 
ಆದ್ಯ ರಾಮಾಚಾರ್ಯರು [[೧೯೯೦]]ರ ಸುಮಾರಿನಲ್ಲಿ “'''ವರದರಾಜ ಪ್ರಕಾಶನ'''” ವನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
 
 
 
==ಕೃತಿಗಳು==
 
===ಐತಿಹಾಸಿಕ===
* ಹನುಮಧ್ವಜ ಹಾರಿತು
Line ೩೪ ⟶ ೨೭:
* ಪ್ರಸನ್ನ ವೆಂಕಟ
* ರಾಜಯೋಗಿ
 
===ಪೌರಾಣಿಕ===
* ರಾಧೇಯ
 
===ಪತ್ತೇದಾರಿ===
* ಉಮಾಪತಿ
 
===ಕ್ಷೇತ್ರಪರಿಚಯ===
* ತಿರುಪತಿ ಶ್ರೀಕ್ಷೇತ್ರ
* ತಿರುಪತಿ ಶ್ರೀಕ್ಷೇತ್ರ (ಆಂಗ್ಲ)
* ಶ್ರೀಕೃಷ್ಣ ದ್ವಾರಕಾ
 
===ಇತರ===
* ರಚನಾ (ವ್ಯಕ್ತಿ ಪರಿಚಯ)
* ಕರ್ನಾಟಕ ವಿದ್ಯಾವೈಭವ (ಮಾಜಿ ಶಿಕ್ಷಣ ಸಚಿವರಾದ ಶ್ರೀ ಜಿ.ಬಿ.ಶಂಕರರಾಯರ ಅಭಿನಂದನಾ ಗ್ರಂಥ)
 
 
==ಸಾಮಾಜಿಕ ಕಾರ್ಯ==
ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿ ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರಾಮಾಚಾರ್ಯರು ರಾಷ್ಟ್ರೀಯ ವಿವೇಚನಾ ಆಂದೋಲನ ಹಾಗು ಕರ್ನಾಟಕ ಏಕೀಕರಣ ಹೋರಾಟದಲ್ಲಿಯೂ ಪಾಲ್ಗೊಂಡರು.
 
[[ತಿರುಪತಿ]]ಯಲ್ಲಿಯ ದಾಸಸಾಹಿತ್ಯ ಹಾಗು [[ಸಂಸ್ಕೃತ]] ಗ್ರಂಥಗಳಿಗೆ ಅನುದಾನವೀಯುವ ಸಮಿತಿಯಲ್ಲಿ ಸದಸ್ಯರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ಮಾಧ್ವ ಮಹಾಮಂಡಲ, [[ಬೆಂಗಳೂರು]] ವಿದ್ಯಾಪೀಠದ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
 
[[ಬೆಂಗಳೂರು| ಬೆಂಗಳೂರಿನ]] ದೊಡ್ಡ ಬಸವಣ್ಣ ದೇವಸ್ಥಾನ , ಕಾರಂಜಿ ಅಂಜನೇಯ ಸ್ವಾಮಿ ದೇವಸ್ಥಾನ, , ಮಲ್ಲೇಶ್ವರದ ಆಂಜನೇಯ ಸ್ವಾಮಿ ದೇವಸ್ಥಾನ ಹಾಗು ರಾಘವೇಂದ್ರ ಮಠದ ಸಂಚಾಲಕರಾಗಿ
ಸೇವೆಗೈದಿದ್ದಾರೆ. [[ಹಂಪಿ]]ಯಲ್ಲಿಯ ಯಂತ್ರೋದ್ಧಾರ ದೇವಾಲಯದ ಜೀರ್ಣೋದ್ಧಾರ ಸೇವಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
 
[[ತಿರುಮಲೆ]]ಯ [[ಕರ್ನಾಟಕ]] ಕ್ಷೇತ್ರದ ಸದಸ್ಯರಾಗಿ, ದೇವಸ್ಥಾನ ಪ್ರಾಚೀನ ಗ್ರಂಥಗಳ ಮುದ್ರಣ ಅನುದಾನ ಸಮಿತಿ ಸದಸ್ಯರಾಗಿ ಮಹತ್ವದ ಕೊಡುಗೆ ನೀಡಿದ್ದಾರೆ.
 
ದಿ.ಕೌಜಲಗಿ ಹಣಮಂತರಾಯರ ಶತಮಾನೋತ್ಸವ ಸಮಿತಿ ಹಾಗು ಮಂಗಳವೇಡೆ ಶ್ರೀನಿವಾಸರಾಯರ ಶತಮಾನೋತ್ಸವ ಸಮಿತಿ ಸಹಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ದಿ.ಮೊಹರೆ ಹಣಮಂತರಾಯರ ಹಾಗು ಲೋಕಮಾನ್ಯ [[ತಿಲಕ]]ರ ಶತಮಾನೋತ್ಸವ ಸಮಿತಿಯಲ್ಲಿಯೂ ಸಹ ಭಾಗವಹಿಸಿದ್ದಾರೆ.
 
[[ ಮೈಸೂರು| ಮೈಸೂರಿನ]] ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಆಗಮ ಪರೀಕ್ಷಾ ವಿಭಾಗದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
 
ಇದಲ್ಲದೆ ಅಖಿಲ ಕರ್ನಾಟಕ ಗಡಿನಾಡು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಸದಾಶಿವನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸಹಕಾರ್ಯದರ್ಶಿಯಾಗಿ, [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಸದಸ್ಯರಾಗಿ
ಅನುಪಮ ಸೇವೆ ಸಲ್ಲಿಸಿದ್ದಾರೆ.
 
 
==ಮಾನ ಸನ್ಮಾನ==
 
* ಆದ್ಯ ರಾಮಾಚಾರ್ಯರಿಗೆ [[ಕರ್ನಾಟಕ]] ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
* ತಂಜಾವೂರಿನ ಇತಿಹಾಸ ಬರೆದಿದ್ದಕ್ಕೆ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನದಿಂದ ಬಂಗಾರದ ಪದಕ ದೊರೆತಿದೆ.
* ಕರ್ನಾಟಕ ರಾಜ್ಯ ಸಾಮಾಜಿಕ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘದಿಂದ ಸನ್ಮಾನಿಸಲಾಗಿದೆ.
* ಪೇಜಾವರ ವಿಶ್ವೇಶ್ವರ ತೀರ್ಥರಿಂದ, ಪುತ್ತಿಗೆ ಮಠಾಧೀಶರಿಂದ, ಉತ್ತರಾದಿ ಮಠಾಧೀಶರಿಂದ ಹಾಗು [[ಮುಂಬಯಿ]]ಯ ಶ್ರೀ ಸತ್ಯಜ್ಞಾನ ವಿದ್ಯಾಪೀಠದಿಂದ ಗೌರವಿಸಲ್ಪಟ್ಟಿದ್ದಾರೆ.
* ಬೆಂಗಳೂರಿನ ಜ್ಞಾನಜ್ಯೋತಿ ಕಲಾಮಂದಿರದಿಂದ ಸನ್ಮಾನಿತರಾಗಿದ್ದಾರೆ.
* ಆಖಿಲ ಕರ್ನಾಟಕ ಲೇಖಕರಿಂದ ಪಾಂಡವಪುರ ಪ್ರಶಸ್ತಿ ದೊರೆತಿದೆ.
 
 
 
 
 
 
"https://kn.wikipedia.org/wiki/ಆದ್ಯ_ರಾಮಾಚಾರ್ಯ" ಇಂದ ಪಡೆಯಲ್ಪಟ್ಟಿದೆ