"ಅವಂತೀ ದೇಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Wikipedia python library
ಚು (Wikipedia python library)
[[File:Ancient india.png|right|thumb|300px|ಏಳನೆಯ ಶತಮಾನದಲ್ಲಿ ಅವಂತಿದೇಶದ ವಿಸ್ತಾರ]]
 
'''ಅವಂತೀ ದೇಶ'''ಪ್ರ.ಶ.ಪೂ. 6ನೆಯ ಶತಮಾನದಲ್ಲಿ [[ಕೋಸಲ]], [[ವತ್ಸ]] ಮತ್ತು [[ಮಗಧ]]ರಾಜ್ಯಗಳ ಜೊತೆಗೆ ಪಶ್ಚಿಮ ಭಾರತದಲ್ಲಿದ್ದ ಒಂದು ಪ್ರಮುಖ ರಾಜ್ಯ. ಆ ಕಾಲಕ್ಕೆ ಭಾರತದಲ್ಲಿ ಅನೇಕ ಚಿಕ್ಕ ಮತ್ತು ದೊಡ್ಡ ರಾಜ್ಯಗಳೂ ಗಣರಾಜ್ಯಗಳೂ ಇದ್ದು ರಾಜಕೀಯ ದೃಷ್ಟಿಯಿಂದ ಅದು ಅಂದಿನ [[ಗ್ರೀಸ್]] ದೇಶವನ್ನು ಹೋಲುತ್ತಿತ್ತು. ಆ ಕಾಲದ ವಿಷಯಗಳನ್ನು ನಾವು ಜೈನ ಮತ್ತು [[ಬೌದ್ಧ]] ಗ್ರಂಥಗಳಿಂದ ತಿಳಿಯಬಹುದು.
 
==ಅವಂತೀ ದೇಶದ ವಿಸ್ತಾರ==
ಅವಂತೀ ಈಗಿನ ಮಾಳವ, ನಿಮಾರ್ ಮತ್ತು [[ಮಧ್ಯಪ್ರದೇಶ]]ದ ನೆರೆಯಲ್ಲಿರುವ ಪ್ರದೇಶಗಳನ್ನೊಳಗೊಂಡಿತ್ತು. ರಾಜಧಾನಿಯಾದ [[ಉಜ್ಜಯಿನಿ]]ಯನ್ನು ಅಚ್ಯುತಗಾಮಿಯೆಂಬ ರಾಜ ಕಟ್ಟಿದ. ಅದು [[ಬೌದ್ಧಧರ್ಮ]]ದ ಕೇಂದ್ರಗಳಲ್ಲೊಂದಾಗಿದ್ದು ಮಹಾತಸೇನ, ಸೋನ, ಅಭಯ ಕುಮಾರ ಮುಂತಾದ ಬೌದ್ಧಧರ್ಮದ ಅನುಯಾಯಿಗಳ ತವರೂರಾಗಿತ್ತು.
 
==ಪ್ರದ್ಯೋತನ ಆಳ್ವಿಕೆಯಲ್ಲಿ==
*ಅವಂತಿ 6ನೆಯ ಶತಮಾನದ ಆದಿಯಲ್ಲಿ ಭರತನ ವಂಶಕ್ಕೆ ಸೇರಿದ ಏಳು ಮಂದಿ ಸಮಕಾಲೀನ ರಾಜರಲ್ಲಿ ಒಬ್ಬನಾದ ವಿಸಾಭುವಿನ ಆಡಳಿತಕ್ಕೆ ಒಳಪಟ್ಟಿತು. ತರುವಾಯ ವುಲಿಕನೆಂಬುವನು ಸ್ವಾಮಿಯನ್ನು ಕೊಂದು ಮಗನಾದ ಚಂಡ ಪ್ರದ್ಯೋತ ಮಹಾಸೇನನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ. ಆತ [[ಗೌತಮ ಬುದ್ಧ]]ನ ಸಮಕಾಲೀನನಾಗಿದ್ದು, ಬಹು ಬಲಾಢ್ಯ ರಾಜನಾಗಿದ್ದ.
*ಈ ಕಥೆ ಬಹು ಪ್ರಸಿದ್ಧವಾಗಿದ್ದು ಬೃಹತ್ಕಥೆಯಲ್ಲಿ ಕಂಡು ಬರುತ್ತದೆಯಲ್ಲದೆ, [[ಭಾಸ]]ಕವಿ ಈ ವಿಷಯವನ್ನಾಧರಿಸಿ ಎರಡು ಸೊಗಸಾದ ನಾಟಕಗಳನ್ನು ಬರೆದಿದ್ದಾನೆ. ಮಗಧರಾಜನಾದ ಅಜಾತಶತ್ರು ಸಹ ಪ್ರದ್ಯೋತ ತನ್ನ ರಾಜ್ಯದ ಮೇಲೆ ದಂಡೆತ್ತಿ ಬರಬಹುದೆಂದು ಶಂಕಿಸಿ ರಾಜಧಾನಿಯಾದ ರಾಜಗೃಹದ ಕೋಟೆಯನ್ನು ಬಲಪಡಿಸಿದ. [[ಪುರಾಣ]]ಗಳ ಪ್ರಕಾರ ಪ್ರದ್ಯೋತ ತನ್ನ ನೆರೆಹೊರೆಯ ರಾಜರನ್ನು ಅಂಕಿತದಲ್ಲಿಟ್ಟುಕೊಂಡಿದ್ದ. ಆದರೆ ಅವನು ಕ್ರೂರಿಯೂ ರಾಜನೀತಿಬಾಹಿರನೂ ಆಗಿದ್ದ.
*ಪ್ರದ್ಯೋತ ಸು. ೨೩ ವರ್ಷಗಳ ಕಾಲ ರಾಜ್ಯವಾಳಿದ. ಅವನ ತರುವಾಯ ಪಾಲಕ, [[ವಿಸಾಖಯುಪ]], [[ಆರ್ಯಕ]] ಮತ್ತು ನದಿವರ್ಧನರು ಅನುಕ್ರಮವಾಗಿ ೨೪, ೫೦, ೨೧ ಮತ್ತು ೨೦ ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಕೊನೆಯ ರಾಜ [[ಶಿಶುನಾಗ]]ನಿಂದ ಸೋಲಿಸಲ್ಪಟ್ಟು ಅವಂತಿ ಮಗಧರಾಜ್ಯದಲ್ಲಿ ಲೀನವಾಯಿತು.
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಇತಿಹಾಸ]]
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಂತೀ ದೇಶ|ಅವಂತೀ ದೇಶ}}
೫,೧೫೦

edits

"https://kn.wikipedia.org/wiki/ವಿಶೇಷ:MobileDiff/608448" ಇಂದ ಪಡೆಯಲ್ಪಟ್ಟಿದೆ