ಅಮೇರಿಗೊ ವೆಸ್ಪುಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 65 interwiki links, now provided by Wikidata on d:q47674 (translate me)
ಚು Wikipedia python library
 
೧ ನೇ ಸಾಲು:
[[ಚಿತ್ರ:Amerigo Vespucci01.jpg|thumb|180px|[[ಇಟಲಿ]]ಯ [[ಫ್ಲಾರೆನ್ಸ್]] ನಗರದಲ್ಲಿರುವ ವೆಸ್ಪುಚಿಯ ಪ್ರತಿಮೆ]]
'''ಅಮೇರಿಗೊ ವೆಸ್ಪುಚಿ''' ([[ಮಾರ್ಚ್ ೯]], [[೧೪೫೧]] - [[ಫೆಬ್ರುವರಿ ೨೨]], [[೧೫೧೨]]) [[ಇಟಲಿ]] ದೇಶದ ವ್ಯಾಪಾರಿ, ಶೋಧಕ, ಮತ್ತು [[ನಕ್ಷಾಕಾರ]]ನಾಗಿದ್ದನು. [[೧೪೯೯]] ಮತ್ತು [[೧೫೦೨]]ರಲ್ಲಿ [[ದಕ್ಷಿಣ ಅಮೇರಿಕ]] ಖಂಡದ ಪೂರ್ವ ಕರಾವಳಿಯಲ್ಲಿ ನಡೆಸಲಾದ ಎರಡು ನೌಕಾಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಈ ಎರಡನೇ ಯಾನದಲ್ಲಿ ದಕ್ಷಿಣ ಅಮೇರಿಕ ಈ ಹಿಂದೆ ಯೂರೋಪಿಯನ್ನರು ನಂಬಿದ್ದಕ್ಕಿಂತ ಹೆಚ್ಚು ದಕ್ಷಿಣಕ್ಕೆ ಚಾಚಿದೆಯೆಂಬುದನ್ನು ತೋರಿಸಿಕೊಟ್ಟವನು. ಯೂರೋಪಿಯನ್ ನಾವಿಕರು [[ಅಟ್ಲಾಂಟಿಕ್ ಮಹಾಸಾಗರ]]ವನ್ನು ದಾಟಿ [[ಏಷ್ಯಾ]]ಕ್ಕೆ ಮುಟ್ಟುತ್ತಿದ್ದರೆಂದು ನಂಬುತ್ತಿದ್ದ ಕಾಲದಲ್ಲಿ ಅದೊಂದು ಹೊಸ [[ಖಂಡ]]ದ ಭಾಗವೆಂದು ಸಾಧಿಸಿದವನು.
 
[[೧೫೦೨]] ಮತ್ತು [[೧೫೦೪]]ರ ನಡುವೆ ರಚಿಸಲಾದ ಎರಡು ಕೃತಿಗಳ ಪ್ರಭಾವದಿಂದ ವೆಸ್ಪುಚಿಯ ನೌಕಾಯಾನಗಳು ಸರ್ವವಿದಿತವಾದವು<ref name=formisano>Formisano, Luciano (Ed.) (1992). ''Letters from a New World: Amerigo Vespucci's Discovery of America''. New York: Marsilio. ISBN 0-941419-62-2. Pp. xix-xxvi.</ref> [[೧೫೦೭]] ರಲ್ಲಿ ಮಾರ್ಟಿನ್ ವಾಲ್ಡ್‌ಸೀಮುಲ್ಲರ್ ಪ್ರಪಂಚದ ಭೂಪಟವನ್ನು ತಯಾರಿಸಿದಾಗ ಅದರ ಒಂದು ಖಂಡವನ್ನು ವೆಸ್ಪುಚಿಯ ಮೊದಲನೇ ಹೆಸರನ್ನು ಆಧರಿಸಿ "ಅಮೇರಿಕಾ" ಎಂದು ನಾಮಕರಣ ಮಾಡಿದನು.
 
== ಜೀವನ ==
ವೆಸ್ಪುಚಿಯ ಜನನ [[ಇಟಲಿ]] ದೇಶದ [[ಫ್ಲಾರೆನ್ಸ್]] ನಗರದಲ್ಲಿ ಗೌರವಾನ್ವಿತ ಕುಟುಂಬದಲ್ಲಾಯಿತು. ತಂದೆ ನೋಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮರಣ [[ಸ್ಪೇನ್]] ದೇಶದ [[ಸೆವಿಲ್]] ನಗರದಲ್ಲಿ.
 
== ಉಲ್ಲೇಖಗಳು ==
<div class="references-small">
<references />
</div>
 
[[ವರ್ಗ:ನಾವಿಕರು]]
"https://kn.wikipedia.org/wiki/ಅಮೇರಿಗೊ_ವೆಸ್ಪುಚಿ" ಇಂದ ಪಡೆಯಲ್ಪಟ್ಟಿದೆ