ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
೧ ನೇ ಸಾಲು:
{{Infobox award
| name = ಅಕ್ಯಾಡೆಮಿ ಪ್ರಶಸ್ತಿ
| current_awards = 87th Academy Awards
| image =
| alt =
| caption =
| description = ಸಿನೆಮಾ ಕ್ಷೇತ್ರದಲ್ಲಿನ ಉತ್ಕೃಷ್ಟತೆಗೆ
| presenter = [[ಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್]]
| country = ಅಮೇರಿಕ ಸಂಯುಕ್ತ ಸಂಸ್ಥಾನ
| year = ಮೇ 16, 1929
| website = {{URL|oscars.org}}
}}
 
'''ಆಸ್ಕರ್ ಪ್ರಶಸ್ತಿ'''(ಅಕ್ಯಾಡೆಮಿ ಪ್ರಶಸ್ತಿ) [[ಅಮೆರಿಕ]] ದೇಶದಲ್ಲಿ ಸಿನಿಮಾ ರಂಗದಲ್ಲಿ ನೀಡಲಾಗುವ ಪ್ರಶಸ್ತಿಯೊಂದರ ಹೆಸರು. ಈ ಪ್ರಶಸ್ತಿ ವಿಶ್ವ ಪ್ರಸಿದ್ಧ. ಸಾಮಾನ್ಯವಾಗಿ ಆಂಗ್ಲ ಭಾಷೆಯ ಚಿತ್ರಗಳಿಗೆ ನೀಡಲು ನಡೆಸಲಾಗುವ ಈ ಪ್ರಶಸ್ತಿ ಸಮಾರೋಹದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ'ಕ್ಕೂ ಒಂದು ಪ್ರಶಸ್ತಿ ಇದೆ.
ಈ ಪುರಸ್ಕಾರವನ್ನು ಸಿನಿಮಾರಂಗದ ಅತ್ಯುತ್ತಮ [[ನಿರ್ದೇಶಕ]]ರು, ನಟನಟಿಯರು, [[ಲೇಖಕ]]ರಿಗೆ `ಅಮೆರಿಕನ್ ಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್’ (AMPAS) ಸಂಸ್ಥೆಯು ನೀಡುತ್ತದೆ. `ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ. ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.
 
ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ [[ದೂರದರ್ಶನ]]ದಲ್ಲಿ ನೇರಪ್ರಸಾರ ಮಾಡಲಾಗುವುದು. ಇದು ತುಂಬಾ ಪ್ರಾಚೀನವಾದುದು. ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) [[ಗ್ರ್ಯಾಮಿ ಪುರಸ್ಕಾರ]], ‘ಟೆಲಿವಿಷನ್’ಗೆ [[ಎಮ್ಮಿ ಪುರಸ್ಕಾರ]] ಮತ್ತು (ರಂಗಕ್ಷೇತ್ರಕ್ಕೆ) [[ಟೋನಿ ಪುರಸ್ಕಾರ]].
 
AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲ. ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡಿ, ಕಾರ್ಮಿಕ ಕಲಹಗಳನ್ನು ನಿವಾರಿಸಲು ನೆರವು ನೀಡುತ್ತದೆ.
 
ಮೊದಲನೆಯ `ಅಕ್ಯಾಡೆಮಿ ಪುರಸ್ಕಾರ’ ಸಮಾರಂಭವು 1929ರ ಮೇ 16ರಂದು ಹಾಲಿವುಡ್‍ನ `ಹೊಟೆಲ್ ರೂಸ್ವೆಲ್ಟ್’ನಲ್ಲಿ 270 ಜನ ಪ್ರೇಕ್ಷಕರ ಎದುರು ನಡೆಯಿತು. 84ನೇ ಆಸ್ಕರ್ ಪುರಸ್ಕಾರ ಸಮಾರಂಭವು (2011ರ ಚಲನಚಿತ್ರಗಳಿಗೆ ಸಂಬಂಧಿಸಿದ್ದು) 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ನಡೆಯಿತು. ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುವರು. ಇವರು AMPASನ ಆಡಳಿತ ಮಂಡಳಿಯ ಸದಸ್ಯರು. ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರಗಳಂದು ರಾತ್ರಿ 8.30 ಗಂಟೆಗೆ ನಡೆಯುತ್ತದೆ.
 
2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದಾರೆ. [[ಇಂಗ್ಲಿಷ್]] ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಈ ಪುರಸ್ಕಾರಕ್ಕೆ ಪರಿಶೀಲಿಸಿರುವುದು ಕಡಿಮೆ. ಇದುವರೆಗೆ ಕೇವಲ ಇತರ ಎಂಟು ಭಾಷೆಯ ಚಿತ್ರಗಳಿಗೆ (ಫ್ರೆಂಚ್, ಸ್ವೀಡಿಷ್, ಇಟ್ಯಾಲಿಯನ್, ಸ್ಪ್ಯಾನಿಷ್, ಚೀನೀ, ಜಪಾನಿ ಮೊದಲಾದವು) ನೀಡಲಾಗಿದೆ. [[ರಿಚರ್ಡ್ ಅಟೆನ್‍ಬರೊ]] ನಿರ್ಮಾಪಕತ್ವದ `[[ಗಾಂಧಿ]]’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `[[ಸ್ಲಮ್‍ ಡಾಗ್ ಮಿಲಿಯನೇರ್]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.
ಜಗದ್ವಿಖ್ಯಾತಿ, ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ.
 
<br clear=both>
 
==ಬಾಹ್ಯ ಸಂಪರ್ಕಗಳು==
* {{Official website|1=http://www.oscars.org/}}
Line ೩೨ ⟶ ೨೫:
* {{dmoz|Arts/Movies/Awards/Academy_Awards|Academy Awards}}.
* [http://www.time.com/time/archive/collections/0,21428,c_oscars,00.shtml "Oscar Greats"] at ''[[Time (magazine)|Time]]'' magazine.
 
 
[[ವರ್ಗ:ಚಿತ್ರರಂಗ]]
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ