ಅಂಗರಾಗಗಳು (ಕಾಸ್ಮೆಟಿಕ್ಸ್), ಅಂಗರಾಗವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
==ಅಂಗರಾಗಗಳು, ಅಂಗರಾಗವಿಜ್ಞಾನ==
ಗಮನ ಸೆಳೆವಂತೆ ಮೈಕಾಂತಿಯನ್ನು ಹೆಚ್ಚಿಸುವ ವಸ್ತುಗಳು (ಕಾಸ್ಮೆಟಿಕ್ಸ್). ಇದರ ಆನ್ವಯಿಕ ಮುಖವೇ ಅಂಗರಾಗವಿಜ್ಞಾನ. ಆರೋಗ್ಯ, ಸೌಂದರ್ಯ ಎರಡನ್ನೂ ವರ್ಧಿಸುತ್ತಾದ್ದರಿಂದ ಇದು ದೊಡ್ಡ ಕೈಗಾರಿಕೆಯಾಗಿ ಬೆಳೆದಿದೆ. ಇದರ ಚಾರಿತ್ರಿಕ ಹಾಗೂ ವೈಜ್ಞಾನಿಕ ವಿಚಾರಗಳನ್ನು ಪರಿಶೀಲಿಸುವುದೇ ಅಂಗರಾಗವಿಜ್ಞಾನ್ತ್ರದ ಉದ್ದೇಶ.
 
'''ಚರಿತ್ರೆಯ ಹಿನ್ನೆಲೆ''' : ಅಂಗರಾಗಗಳು ಮೊದಲು ಚೀನಾದಲ್ಲಿ ಹುಟ್ಟಿರಬಹುದು. ಆದರೂ ತೀರ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಅಂಗರಾಗವಸ್ತುಗಳ ಮೂಲ ದಾಖಲೆಗಳಿಗಾಗಿ ಈಜಿಪ್ಟಿನ ಕಡೆ ತಿರುಗಲೇಬೇಕು. ಪ್ರ.ಶ.ಪು. 3೦೦೦ರ ಸುಮಾರಿನಲ್ಲಿ, ಸತ್ತ ದೊರೆಗಳೊಡನೆ ಸುಖಸಂಪತ್ತಿನ ವಸ್ತುಗಳನ್ನೂ ಹೂಳುತ್ತಿದ್ದರು. ಇವುಗಳೊಂದಿಗೆ ಅಲಂಕಾರ ವಸ್ತುಗಳೂ ಮುಲಾಮುಗಳೂ ಇದ್ದುದು ಗೊತ್ತಾಗಿದೆ. ಸುವಾಸನಾವಸ್ತುಗಳೂ ಇದ್ದುವೆಂದು ಅವನ್ನು ತೆಗೆದಾಗ ಕಂಡವರು ಹೇಳುತ್ತಾರೆ. ಈಜಿಪ್ಟಿನ ಇತರ ಸ್ಮಾರಕಗಳು ಗೋರಿಗಳು ಪುರಾತನ ಈಜಿಪ್ಟಿನವರು ಅಂಗರಾಗವಸ್ತುಗಳಲ್ಲಿ ಇಡುತ್ತಿದ್ದ ಆಸಕ್ತಿಯನ್ನು ತೋರುತ್ತವೆ.
 
ಸ್ನಾನದ ತೊಟ್ಟಿಯನ್ನು ಮೊದಲು ಬಳಸಿದವರು ಪುರಾತನ ಈಜಿಪ್ಟಿಗರಿರಬಹುದು. ಆಮೇಲೆ ಗ್ರೀಕರೂ ರೋಮನ್ನರೂ ಇದನ್ನೇ ರೂಢಿಗೆ ತಂದರು. ಮೈತೊಳೆದುಕೊಂಡಮೇಲೆ ಸುವಾಸನೆಯ ಎಣ್ಣೆಗಳು, ಮುಲಾಮುಗಳನ್ನು, ಚರ್ಮ ತಂಪಾಗಿ ನುಣುಪಾಗಿ ಬಣ್ಣವೇರುವಂತೆ ಹಚ್ಚುತ್ತಿದ್ದರು. ಕಚ್ಚಾ ಬಣ್ಣಗಳನ್ನು ಪುಸಿಕೊಂಡು ಈಜಿಪ್ಟಿನ ಹೆಂಗಸರು ಅಲಂಕರಿಸಿಕೊಳ್ಳುತ್ತಿದ್ದರು. ಕ್ಲಿಯೊಪಾತ್ರಳ ಕಾಲದಲ್ಲಿ ಇದು ವಿಪರೀತವಾಗಿತ್ತು. ಈಜಿಪ್ಟಿನ ಗೋರಿಗಳಲ್ಲೂ ಕಂಡುಬಂದಂತೆ, ಕಣ್ಣಿನ ಅಲಂಕಾರಕ್ಕೆ ಹೆಚ್ಚು ಗಮನ ಕೊಡುತ್ತಿದ್ದರು. ಕಣ್ಣಿನ ಕೆಳಗೆ (ಭಿತ್ತಿಚಿತ್ರಗಳಲ್ಲಿರುವಂತೆ) ಹಸುರನ್ನೂ ರೆಪ್ಪೆ, ಎವೆಗಳು, ಹುಬ್ಬುಗಳಿಗೆ ಆಂಟಿಮನಿ ಸಲ್ಫೈಡಿನಿಂದ ಮಾಡಿದ ಕಾಡಿಗೆ ಕಪ್ಪನ್ನೂ ದಂತದ ಕಡ್ಡಿಗಳಿಂದ ಹಚ್ಚುತ್ತಿದ್ದರು. ಬೆರಳಿನ ಉಗುರುಗಳಿಗೂ ಅಂಗೈ ಅಂಗಾಲುಗಳಿಗೂ ಗೋರಂಟಿ ಬಣ್ಣ ಹಚ್ಚುತ್ತಿದ್ದರು. ಅಂದಿನ ಬಾಚಣಿಗೆ, ಲೋಹಗನ್ನಡಿಗಳು ಈಗಲೂ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿವೆ. ಯೆಹೂದ್ಯ ಹೆಂಗಸರು ಅಂಗರಾಗಗಳನ್ನೂ ಬಳಸುತ್ತಿದ್ದರೆಂದು ಬೈಬಲ್ಲಿನಲ್ಲಿ ಹೇಳಿದೆ. ಕುರಾನಿನಲ್ಲೂ ಸುವಾಸನಾದ್ರವ್ಯಗಳ ವಿಚಾರವಿದೆ.
 
ಮೊದಮೊದಲು ರೋಮನ್ನರು ತಾವು ಹೇಗೆ ಕಾಣುತ್ತಿದ್ದೆವೆಂಬ ವಿಚಾರವಾಗಿ ಅಷ್ಟಾಗಿ ಚಿಂತಿಸುತ್ತಿರಲಿಲ್ಲ. ಗ್ರೀಕರೊಂದಿಗೆ ಸೇರಿದಾಗ ಅವರಿಗೂ ಅಲಂಕಾರದಲ್ಲಿ ಆಸಕ್ತಿ ಹುಟ್ಟಿತು. ನೀರೊ ಚಕ್ರವರ್ತಿಯಾಗುವ ಹೊತ್ತಿಗೆ (ಪ್ರ.ಶ. 54) ಅಂಗರಾಗಗಳೂ ಪರಿಮಳಗಳೂ ಹೆಚ್ಚಾಗಿ ಗಮನ ಸೆಳೆದಿದ್ದುವು. ನೀರೊ ಕೂಡ ಬೇಕಾದಷ್ಟು ಲೇಪನಗಳನ್ನು ಹಚ್ಚಿಕೊಳ್ಳುತ್ತಿದ್ದ. ಮಹಾರಾಣಿಯಂತೂ ಕೃತಕ ಅಲಂಕಾರಗಳನ್ನು ಗುಟ್ಟಾಗಿಡುತ್ತಿರಲಿಲ್ಲ. ಚರ್ಮಕ್ಕೆ ಬಿಳಿಬಣ್ಣ ಬರಲು ವೈಟ್ಲೆಡ್, ಸೀಮೆಸುಣ್ಣ; ಕಣ್ಣಿಗೂ ರೆಪ್ಪೆಗೂದಲಿಗೂ ಕಾಡಿಗೆ ಕಪ್ಪು; ಕೆನ್ನೆ, ತುಟಿಗಳಿಗೆ ಕೆಂಪು ಮತ್ತು ಒಂದು ತೆರನ ರೋಮನಾಶಕ; ಮೊಡಮೆಗಳು ದದ್ದುಗಳಿಗೆ ಜವೆಗೋದಿ ಹಿಟ್ಟು, ಬೆಣ್ಣೆ; ಹಲ್ಲನ್ನು ತಿಕ್ಕಿ ಬೆಳಗಿಸಲು ಪ್ಯುಮಿಸ್ ಕಲ್ಲು-ಮುಂತಾದುವು ಬಳಕೆಯಲ್ಲಿದ್ದುವು. ಮಿತಿಮೀರಿದ ಅಲಂಕಾರ ಮಾಡಿಕೊಳ್ಳುತ್ತಿದ್ದ ರೋಮನ್ ಆಸ್ಥಾನದ ಸುಂದರಿಯರು ಗಾಲ್ನಿಂದ ತರಿಸಿದ ಸಾಬೂನಿನಿಂದ ಕೂದಲ ಬಣ್ಣ ತೆಗೆಯುತ್ತಿದ್ದರು. ರೋಮನ್ನರು ತಮ್ಮ ಪರಿಮಳಗಳನ್ನೂ ಅಂಗರಾಗವಸ್ತುಗಳನ್ನೂ ಮನಸೆಳೆವ ಅಲಂಕರಿಸಿದ ಭರಣಿಗಳಲ್ಲಿ ತುಂಬಿಸುತ್ತಿದ್ದರು. ಬಾದಾಮಿ, ಗುಲಾಬಿಯಂಥ ಪರಿಮಳವಿರುವ ಮುಲಾಮುಗಳು, ಹೂವುಗಳು, ಏಲಕ್ಕಿ ಲವಂಗ ಮೊದಲಾದುವು, ಗೋಂದು- ಇವನ್ನು ಆಲಿವ್ ಎಣ್ಣೆ, ಎಳ್ಳೆಣ್ಣೆಗಳಲ್ಲಿ ಕರಗಿಸಿದ್ದ ತೈಲದ ಮುಲಾಮುಗಳು, ಹುಡಿಗಳು-ಹೀಗೆ 3 ಬಗೆಯ ದ್ರವ್ಯಗಳು ಉಪಯೋಗದಲ್ಲಿದ್ದುವು.
 
ಅಂಗರಾಗಗಳ ಬಳಕೆ ಬ್ರಿಟನ್ನಿನಲ್ಲೂ ಎಷ್ಟೋ ಕಾಲದಿಂದ ಇದ್ದರೂ ಪೂರ್ವ ದೇಶಗಳಿಂದ ಬಂದ ಅಲಂಕಾರ ವಸ್ತುಗಳು ಒಂದನೆಯ ಎಲಿಜಬೆತ್ ರಾಣಿಯ ಕಾಲಕ್ಕೆ ಜನಪ್ರಿಯವಾಗಿದ್ದುವು. ಮಲಗುವ ಮನೆಗಳ ಪರಿಕರಗಳಲ್ಲಿ ಪರಿಮಳದ ಪೆಟ್ಟಿಗೆಯೂ ಮುಖ್ಯವಾಗಿತ್ತು. ಎಲಿಜಬೆತ್ತಳ ಕಾಲದಲ್ಲಿ ಮೈಕಾಂತಿಯನ್ನು ಹೆಚ್ಚಿಸಿಕೊಳ್ಳಲು, ಚೆನ್ನಾಗಿ ಬೆವರುವಂತೆ ತುಂಬ ಸುಡುವ ನೀರಿನ ಸ್ನಾನಮಾಡಿ, ಮೊಗ ಕೆಂಪೇರುವಂತೆ ಚೆನ್ನಾಗಿ ಸಾರಾಯಿಯಲ್ಲಿ ತೊಳೆಯುವ ಉಪಾಯವಿತ್ತು. ಇದು ಸಾಧ್ಯವಿಲ್ಲದ ಎಳೆಯರು ಹಾಲಿನಲ್ಲಿ ಮಿಂದು ಏಳುತ್ತಿದ್ದರು. ಆಮೇಲೆ ಕೆಲಕಾಲ ಕೂದಲಿಗೆ ಪುಡಿ ಹಾಕುತ್ತಿದ್ದರು. 18ನೆಯ ಶತಮಾನದ ಹೊತ್ತಿಗೆ ಅಂಗರಾಗಗಳ ಬಳಕೆ ಎಲ್ಲರಲ್ಲೂ ಎಷ್ಟು ಹೆಚ್ಚಿತ್ತೆಂದರೆ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ (1770) ಒಂದು ಕಾಯಿದೆಯನ್ನೇ ತಂದರು. ಅಂಗರಾಗಗಳಿಂದ ಅಲಂಕರಿಸಿಕೊಂಡು ಮನಸೆಳೆದು ಮದುವೆಯಾದರೆ ಅದು ಮದುವೆ ಎನ್ನಿಸುವುದಿಲ್ಲ ಎಂದಿದೆ, ಆ ಕಾಯಿದೆಯಲ್ಲಿ. ಇದೇ ಕಾನೂನನ್ನು ಅಮೆರಿಕದ ಪೆನ್ಸಿಲ್ವೇನಿಯ ಸಂಸ್ಥಾನದಲ್ಲೂ ಜಾರಿಗೆ ತಂದರು. ಬಹುಮಟ್ಟಿಗೆ ಅಮೆರಿಕದ ಕಾಲೋನಿಗಳಲ್ಲೆಲ್ಲ ಹೀಗೆ ಅಂಗರಾಗಗಳನ್ನು ಹೊರಕಾಣುವಂತೆ ಹಚ್ಚುವುದನ್ನು ಯಾರೂ ಒಪ್ಪಲಿಲ್ಲ.
 
ಇಟಲಿ, ಫ್ರಾನ್ಸ್, ಸ್ಪೇನ್ಗಳಲ್ಲೂ ಅಂಗರಾಗಗಳು ಜನಪ್ರಿಯವಾಗಿದ್ದುವು. 13ನೆಯ ಲೂಯಿಯ ರಾಣಿ ಆಸ್ಟ್ರಿಯದ ಸುಂದರಿ ಆ್ಯನ್ ಬಹಳ ಬಳಸುತ್ತಿದ್ದಳು. ವೆನಿಲ್ಲ, ಕೆಕಾವೊ ಕೆನೆಗಳೂ(ಕ್ರೀಮ್ಸ್) ಬಾದಾಮಿಸರಿಯೂ (ಪೇಸ್ಟ) ಸ್ಟೇನಿನಿಂದ ಆಮದಾಗಿ ಬರುತ್ತಿದ್ದುವು. ಆಸ್ಥಾನದ ಹೆಂಗಸರ ಚರ್ಮವನ್ನು ಬಿಳಿಚಿಸಲು ಇವನ್ನೆಲ್ಲ ಹಚ್ಚುತ್ತಿದ್ದರು. ಒಂದನೆಯ ನೆಪೋಲಿಯನ್ ತನ್ನ ಕಾಲದ ಈ ಮೋಜುಗಳಿಗೆ ಒಳಗಾಗಿದ್ದ. ಜೋಸೆಫೀನ್ ಮಹಾರಾಣಿ ಮಾರ್ಟಿನಿಕ್ ಊರಿನಿಂದ ಅಂಗರಾಗಗಳನ್ನು ತರಿಸಿ ಯಾವಾಗಲೂ ಬಳಸುತ್ತಿದ್ದಳು. ಈ ಕಾಲದಲ್ಲೆ ಫ್ರೆಂಚರು ಪರಿಮಳಗಳ, ಅಂಗರಾಗಸಾಧನಗಳ, ಶಾಸ್ತ್ರೀಯ ತಯಾರಿಕೆಯನ್ನು ಪ್ರಾರಂಭಿಸಿದರು.
ಯುರೋಪಿನಲ್ಲಿ ಆದದ್ದೆಲ್ಲ ಅಮೆರಿಕದಲ್ಲೂ ಮಾರ್ದನಿಸಿತು. ಅಮೆರಿಕದ ಕಾಡುಜನರು ಮೈಗೆ ಬಳಿದುಕೊಳ್ಳುತ್ತಿದ್ದ ಬಣ್ಣಗಳು, ಕೊಬ್ಬುಗಳು, ಎಣ್ಣೆಗಳು ಪರಿಚಯವಾಗಿದ್ದರೂ ವಲಸೆ ಬಂದವರಿಗೆ ಇವು ಹಿಡಿಸಲಿಲ್ಲ. ಆಮೇಲೆ ಅಂಗರಾಗ ಬಳಕೆ ಒಂದೊಂದು ಸಂಸ್ಥಾನದಲ್ಲಿ ಒಂದೊಂದು ಬಗೆಯಾಗಿತ್ತು. ಉತ್ತರದವರು ಬಳಸಲೇಕೂಡದೆಂದರೆ ಫ್ರೆಂಚರು ಹೆಚ್ಚಾಗಿದ್ದ ದಕ್ಷಿಣದವರು ಹೇರಳವಾಗಿ ಬಳಸುತ್ತಿದ್ದರು. ವಿಕ್ಟೋರಿಯ ಕಾಲದಲ್ಲಿ, ಅಂಗರಾಗಗಳ ಬಳಕೆ ಅನಾಗರಿಕವೆಂಬ ಭಾವನೆ ಅಮೆರಿಕಕ್ಕೂ ಹರಡಿತ್ತು. ಆದರೆ ಅಂಗರಾಗಗಳನ್ನು ಉತ್ತಮಗೊಳಿಸಿ ತಯಾರಿಸುವುದರಲ್ಲಿ ಫ್ರಾನ್ಸ್ ಮುಂದಾಯಿತು. ಇಂಗ್ಲೆಂಡು ಅಮೆರಿಕಗಳಲ್ಲಿ ಜನಪ್ರಿಯವಾಗುವ ಎಷ್ಟೋ ಮುಂಚಿನಿಂದಲೂ ಫ್ರಾನ್ಸಿನ ಹೆಂಗಸರು ಮೊಗವನ್ನು ತಿದ್ದಿಕಾಂತಿಗೊಳಿಸುವ ಅಂಗರಾಗಗಳನ್ನು ಬಳಸುತ್ತಿದ್ದರು. ಒಂದನೆಯ ಮಹಾಯುದ್ಧ ಮುಗಿಯುವ ತನಕ ಹೀಗೆ ಇತ್ತು. ಬರುಬರುತ್ತ ಇವು ಎಲ್ಲೆಲ್ಲೂ ಜನಪ್ರಿಯವಾದುವು. ಈಗ ಅಂಗರಾಗಗಳ ಜನಪ್ರಿಯ ಬ್ರಾಂಡುಗಳ ಪೈಪೋಟಿಯ ಯುಗವನ್ನೇ ನಾವು ಕಾಣುತ್ತಿದ್ದೇವೆ. ಪ್ಯಾರಿಸ್ನಗರ ಫ್ಯಾಷನ್ ಪ್ರಪಂಚದ ಕೇಂದ್ರಬಿಂದುವಾಗಿದೆ.
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗರಾಗಗಳು (ಕಾಸ್ಮೆಟಿಕ್ಸ್), ಅಂಗರಾಗವಿಜ್ಞಾನ|ಅಂಗರಾಗಗಳು (ಕಾಸ್ಮೆಟಿಕ್ಸ್), ಅಂಗರಾಗವಿಜ್ಞಾನ}}

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]