ತಾಳ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಚಿತ್ರದುರ್ಗ ಜಿಲ್ಲೆಯ ಉಳಿದ ತಾಲ್ಲೂಕುಗಳಂತೆ [[ತಾಳ್ಯ]] ವೂ ಒಂದು ಚಿಕ್ಕ ಪ್ರದೇಶ. ಇದು ಎಲ್ಲರ ಗಮನಸೆಳೆಯುತ್ತಿರುವುದು, ಅಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ. ಮಳೆಯೇ ಬರದ ಬಂಜರು ಪ್ರದೇಶ ತಾಳ್ಯ. ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ. [[ತಾಳ್ಯದ ಆಂಜನೇಯಸ್ವಾಮಿ ]], ಎಂಬ ಶೀರ್ಶಿಕೆಯಡಿಯಲ್ಲಿ ಆಂಜನೇಯ ಸ್ವಾಮಿ ತೇರಿನ ಬಗ್ಗೆ, ಓದಿ ತಿಳಿಯಿರಿ.
 
ತಾಳ್ಯ ಹೋಬಳಿಗೆ ಸೇರಿದ ಹೊರಕೆರೆ ದೇವರಪುರ , ಅಲ್ಲಿನ ಲಕ್ಶ್ಮೀರಂಗನಾಥ ಸ್ವಾಮಿ ದೇವಾಲಯದಿಂದ ಪ್ರಸಿದ್ದವಾದುದು . ಇಡೀ ದೇವಾಲಯವನ್ನು ಅಗ್ನಿ ಶಿಲೆಯಿಂದ ಕಟ್ಟಲಾಗಿದೆ .ಅಲ್ಲಿನ ಕಲ್ಯಾಣಿ ಈಗ ಬತ್ತಿದ ಸ್ಥಿತಿಯಲ್ಲಿದ್ದರೂ ಒಂದು ಕಾಲದಲ್ಲಿ ನೀರಿನ ಸೆಲೆಯಿಂದ ತುಂಬಿ ತುಳುಕುತ್ತಿತ್ತು . ನೋಡಲು ಈಗಲೂ ಸುಂದರವಾಗಿದೆ . ಹೊರಕೆರೆ ದೇವರಪುರ ಮತ್ತು ಸುತ್ತಣ ಗ್ರಾಮಗಳು ವೀಳ್ಯದ ಎಲೆಗೆ ತುಂಬಾ ಪ್ರಸಿದ್ದಿ . ಹತ್ತಿರದಲ್ಲಿನ ಉಪ್ಪರಿಗೇನಹಳ್ಳಿಯ ಬಹುತೇಕ ಜನರ ಬದುಕು ಈ ಎಲೆಯ ತೋಟಗಳನ್ನು ಅವಲಂಬಿಸಿದೆ . ಮತ್ತು ಈ ಪ್ರದೇಶದ ಇನ್ನೊಂದು ಮುಖ್ಹ್ಯ ಬೆಳೆ ಬಾಳೆ . ಆದರೆ ನೀರಿನ ಆಶ್ರಯ ಕೆಲವರಿಗೆ ಮಾತ್ರ ಇರುವುದು, ಈ ಪ್ರದೇಶದ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ . ಇಲ್ಲಿನ ನೆಲ ಅತ್ಯಂತ ಫಲವತ್ತಾದುದು . ಹಾಗೆಯೇ ಸದಾ ಬರಗಾಲದ ದವಡೆಗೆ ಸಿಲುಕುವ ಈ ಪ್ರದೇಶಕ್ಕೆ ಶಾಶ್ವತ ನೀರಿನ ಆಸರೆ ದೊರಕಿದರೆ ,ಇಲ್ಲಿನ ಜನರ ಬದುಕು ಹಸನಾಗಬಲ್ಲದು .ತಾಳ್ಯ ಹೋಬಳಿಯ ಇನ್ನೊಂದು ಮುಖ್ಯ ಕ್ಷೇತ್ರ , ಕೊಳಹಾಳು . ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಈ ಮೂರೂ ತಾಲ್ಲೋಕುಗಳ ಗಡಿಗಳು ಸೇರುವ ಪ್ರದೇಶದಲ್ಲಿರುವ ಒಂದು ಸಣ್ಣ ಊರು ಕೊಳಹಾಳು.ಇದು ತಾಳ್ಯ ಹೋಬಳಿಯ ಕಟ್ಟ ಕಡೆಯ ಗ್ರಾಮ ಇಲ್ಲಿ ಹತ್ತೊಂಭತ್ತನೆಯೆ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದರೆನ್ನಲಾದ ಕೆಂಚಾವಧೂತರೆಂಬ ಅವಧೂತರ ಗದ್ದುಗೆ ಇದೆ.ಅವರು ಹಂಪೆಯ ರುದ್ರಮುನಿ ಸ್ವಾಮಿಗಳ ಶಿಷ್ಯರಾಗಿದ್ದರು ಕೇವಲ ಹಳ್ಳಿಯ ಸಾಮಾನ್ಯ ತುರುಗಾಹಿಯಾಗಿದ್ದ ಕೆಂಚಾವಧೂತರು ಸಾಧಕರಾಗಿ ಅನೇಕ ಪವಾಡಗಳನ್ನು ಮಾಡಿದರೆಂಬ ಐತಿಹ್ಯವಿದೆ. ಈಗಲೂ ಸಹ ಅವರ ಗದ್ದುಗೆಯನ್ನು ಜಾಗೃತ ಗದ್ದುಗೆಯೆಂದು ಜನರು ಆರಾಧಿಸುತ್ತಾರೆ. ಪ್ರತಿ ವರ್ಷ ಚೈತ್ರ ಶುದ್ದ ಪೂರ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ .
"https://kn.wikipedia.org/wiki/ತಾಳ್ಯ" ಇಂದ ಪಡೆಯಲ್ಪಟ್ಟಿದೆ