ತೆನಾಲಿ ರಾಮಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
==ಇತಿಹಾಸ==
ತೆನಾಲಿ ರಾಮಲಿಂಗ ೧೬ನೇ ಶತಮಾನದ ಆದಿಯಲ್ಲಿ ಗಾರ್ಲಪಾಡು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಗಾರ್ಲಪಾಟಿ ರಾಮಯ್ಯ ಹಾಗೂ ಲಕ್ಷ್ಮಾಂಬ ಎಂಬ [[ಬ್ರಾಹ್ಮಣ]] ದಂಪತಿಗಳಿಗೆ ಜನಿಸಿದನು.ಆದರೆ ಈತ ತೆನಾಲಿಯಲ್ಲಿ ಹುಟ್ಟಿದ್ದಾನೆ ಎಂದು ಬಾಹಳ ಜನರು ನಂಬಿದ್ದಾರೆ.ಈತನ ತಂದೆ ತೆನಾಲಿಯಲ್ಲಿದ್ದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.ರಾಮಕೃಷ್ಣ ಚಿಕ್ಕವನಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡನು.ಆನಂತರ ತನ್ನ ತಾಯಿ ಲಕ್ಷ್ಮಾಂಬ ತನ್ನ ತವರೂರಾದ ತೆನಾಲಿಯಲ್ಲಿನ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದಳು.ರಾಮಕೃಷ್ಣನು ತನ್ನ ಮಾವನ ಊರಾದ ತೆನಾಲಿಯಲ್ಲಿಯೇ ಬೆಳೆದಿದ್ದರಿಂದ ಈತ ತೆನಾಲಿ ರಾಮಕೃಷ್ಣ ಎಂದೇ ಬಹು ಪರಿಚಿತನಾದ.ಈತನನ್ನು ತೆನಾಲಿ ರಾಮಲಿಂಗ ಎಂಬ ಶೈವ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು.ಈತ ನಂತರ ವೈಷ್ಣವ ಧರ್ಮಕ್ಕೆ ಪರಿರ್ವತನೆಗೊಂಡನು.
ರಾಮಕೃಷ್ಣನು ತನ್ನ ಬಾಲ್ಯದಲ್ಲಿ ಯಾವುದೇ ವ್ಯವಸ್ಥಿತವಾದ ಶಿಕ್ಷಣವನ್ನು ಪಡೆದಿರಲಿಲ್ಲ.ತಾನು ಬೆಳಗ್ಗಿನಿಂದ ರಾತ್ರಿಯವರೆಗು ತನ್ನ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ.ತಾನು ಹತ್ತು ವರ್ಷ ವಯಸ್ಕನಾದಾಗ ತನಗೆ ವಿದ್ಯಾಭ್ಯಾಸದ ಮಹತ್ವ ಏನೆಂಬುದು ಅರಿವಾಯಿತು.ಆಗ ರಾಮಕೃಷ್ಣನು ಅನೇಕ ಪಂಡಿತರ ಬಳಿಗೆ ಹೋದನು.ಒಂದು ಕಥೆಯ ಪ್ರಕಾರ ವೈಷ್ಣವ ಪಂಡಿತರು ರಾಮಕೃಷ್ಣನನ್ನು ತಮ್ಮ ಅನುಯಾಯಿಯಾಗಿ ಸ್ವೀಕರಿಸಲು ತಿರಸ್ಕರಿಸಿದರು.ಆನಂತರ ತಾನು ಗೊತ್ತುಗುರಿಯಿಲ್ಲದೆ ತಿರುಗುತ್ತಿದ್ದನು.ಒಮ್ಮೆ ಒಬ್ಬ ಸಾಧುವನ್ನು ಭೇಟಿಯಾದಾಗ ಆತ ಕಾಳಿದೇವಿಯನ್ನು ಪೂಜಿಸು ಎಂದನು.ಸಾಧು ಹೇಳಿದಂತೆ ರಾಮಕೃಷ್ಣನು ಮಂತ್ರವನ್ನು ಹನ್ನೊಂದು ಕೋಟಿ ಹನ್ನೊಂದು ಭಾರಿ ಭಕ್ತಿಯಿಂದ ಪಟಿಸಿದನು.ಆಗ ಕಾಳಿದೇವಿಯು ಪ್ರತ್ಯಕ್ಷಳಾದಳು.ಸಾವಿರ ತಲೆಗಳುಳ್ಳ ಕಾಳಿದೇವಿಯನ್ನು ನೋಡಿದ ರಾಮಕೃಷ್ಣನು ಆಕೆಯ ಪಾದಗಳಿಗೆ ನಮಸ್ಕರಿಸಿ ಜೋರಾಗಿ ನಗೆದನು.ಕಾಳಿದೇವಿಯು ತಾನು ನಕ್ಕ ಕಾರಣ ಕೇಳಿದಳು.ಆಗ ರಾಮಕೃಷ್ಣ "ಕ್ಷಮಿಸು ತಾಯಿ,ನಮಗೆ ನೆಗಡಿ ಬಂದಾಗ ಮೂಗನ್ನು ಒರೆಸಲು ಎರಡು ಕೈಗಳು ಸಾಲುವುದಿಲ್ಲ ಸಾವಿರ ತಲೆಗಳುಳ್ಳ ನಿನಗೆ ನೆಗಡಿ ಬಂದರೆ ಎರಡು ಕೈಗಳು ಹೇಗೆ ಸಾಲುತ್ತವೆ"ಎಂದನು. ರಾಮಕೃಷ್ಣನ ಹಾಸ್ಯ ಕೌಶಲ್ಯಗಳನ್ನು ಮೆಚ್ಚಿದ ಕಾಳಿದೇವಿಯು "ನೀನು ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಒಬ್ಬ ಪ್ರಸಿದ್ಧ ಹಾಸ್ಯ ಕವಿ ಆಗುತ್ತೀಯ" ಎಂದು ಆಶಿರ್ವದಿಸಿದಳು.ತದನಂತರ ರಾಮಕೃಷ್ಣನು ಭಗವತ ಮೇಳ ಎಂಬ ಪ್ರಸಿದ್ಧ ತಂಡವನ್ನು ಸೇರಿಕೊಂಡನು.ಒಮ್ಮೆ ಈ ತಂಡವು ತಮ್ಮ ಪ್ರದರ್ಶನ ನೀಡಲು ವಿಜಯನಗರಕ್ಕೆ ಬಂದಿದ್ದರು.ಆಗ ಶ್ರೀಕೃಷ್ಣದೇವರಾಯ ಹಾಗೂ ಅಲ್ಲಿನ ಜನ ರಾಮಕೃಷ್ಣನ ಪ್ರದರ್ಶನವನ್ನು ಕಂಡು ಆಕರ್ಷಿತರಾದರು.ಶ್ರೀಕೃಷ್ಣದೇವರಾಯನು ರಾಮಕೃಷ್ಣನ ಹಾಸ್ಯ ಕೌಶಲ್ಯಗಳನ್ನು ಮೆಚ್ಚಿ ತನ್ನ ಆಸ್ಥಾನದಲ್ಲಿ ರಾಮಕೃಷ್ಣನನ್ನು ಹಾಸ್ಯ ಕವಿಯಾಗಿ ನೇಮಿಸಿ,ಅಷ್ಟದಿಗ್ಗಜರ ಗುಂಪಿನಲ್ಲಿ ಸ್ಥಾನ ನೀಡಿದ.ಈ ರೀತಿಯಾಗಿ ಅಷ್ಟದಿಗ್ಗಜರ ಗುಂಪು ಎಂಟು ವಿದ್ವಾಂಸರಿಂದ ಕೂಡಿ ಸಂಪೂರ್ಣವಾಯಿತು.ಕ್ರಮೇಣ ರಾಮಕೃಷ್ಣನು ಒಬ್ಬ ಪ್ರಸಿದ್ಧ ವಿದೂಷಕ ಎಂಬ ಖ್ಯಾತಿ ಪಡೆದನು.ರಾಮಕೃಷ್ಣನು ತನ್ನ ರಣನೀತಿ ಹಾಗು ಸಮಯಪ್ರಜ್ಞೆಯಿಂದ ಶ್ರೀಕೃಷ್ಣದೇವರಾಯನ ಸಾಮ್ರಾಜ್ಯವನ್ನು ವೈರಿಗಳ ಆಪತ್ತಿನಿಂದ ಅನೇಕ ಬಾರಿ ಕಾಪಾಡಿದನು ಎಂಬ ಮಾಹಿತಿ ದಾಖಲಾತಿಗಳಿಂದ ಲಭ್ಯವಿದೆ.ರಾಮಕೃಷ್ಣನು ವಿಜಯನಗರ ಸಾಮ್ರಾಜ್ಯವನ್ನು ಡೆಹಲಿ ಸುಲ್ತಾನರಿಂದ ಕಾಪಾಡಿದ ಎಂಬುದು ಒಂದು ಪ್ರಸಿದ್ಧ ಕಥೆಯಲ್ಲಿ ವಿವರಿಸಲಾಗಿದೆ.
"https://kn.wikipedia.org/wiki/ತೆನಾಲಿ_ರಾಮಕೃಷ್ಣ" ಇಂದ ಪಡೆಯಲ್ಪಟ್ಟಿದೆ