ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೫ ನೇ ಸಾಲು:
==ಇತಿವೃತ್ತ==
*ಆಗಿನ ಕಾಲದಲ್ಲಿ ಖಾಸಗಿ ಪತ್ರಗಳನ್ನು ಒಂದೆಡೆಯಿಂದ ಇನ್ನೊಂದು ಎಡೆಗೆ ಸಾಗಿಸುವ ಜವಾಬ್ದಾರಿ ಸರ್ಕಾರದ್ದಾಗಿರಲಿಲ್ಲ. ಮಧ್ಯಯುಗದಲ್ಲಿಯೂ ಕೂಡ ಸರ್ಕಾರ ಈ ಹೊಣೆ ಹೊತ್ತಿರಲಿಲ್ಲ. ಆ ಕಾಲದಲ್ಲಿ [[ವಿಶ್ವವಿದ್ಯಾನಿಲಯ]]ಗಳೂ ವರ್ತಕಶ್ರೇಣಿಗಳೂ ಈ ಕೆಲಸ ನಿರ್ವಹಿಸುತ್ತಿದ್ದವು. ಕ್ರಮೇಣ ಯುರೋಪಿನ ಸರ್ಕಾರಗಳಿಗೆ ಇದರ ಆವಶ್ಯಕತೆಯ ಅರಿವು ಹೆಚ್ಚಾಯಿತು. ಒಂದು ರಾಷ್ಟ್ರದ ಜನರು ಇನ್ನೊಂದು ರಾಷ್ಟ್ರದವರೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರವನ್ನು ಪರಾಮರ್ಶಿಸಿ ದೇಶದ ಹಿತಕ್ಕೆ ವಿರೋಧವಾಗಿರದಂತೆ ಅದನ್ನು ನಿಯಂತ್ರಿಸುವುದು ಅಗತ್ಯವಾಯಿತು.
*ಅಲ್ಲದೆ ಖಾಸಗಿಯವರ ಪತ್ರಗಳನ್ನು ಸಾಗಿಸುವ ವ್ಯವಸ್ಥೆಯಿಂದ ಹೆಚ್ಚು ವರಮಾನವನ್ನು ದೊರಕಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೆಂಬುದು ಹೆಚ್ಚು ಹೆಚ್ಚಾಗಿ ಮನವರಿಕೆಯಾಯಿತು. 17ನೆಯ ಶತಮಾನದಲ್ಲಿ ಇಂಗ್ಲೆಂಡಿನ ಅಂಚೆ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿ ಬೆಳೆಯಿತು. [[ಥಾಮಸ್ ವಿದರಿಂಗ್ಸ್]] ಎಂಬುವನು ಇಂಗ್ಲೆಂಡಿನಲ್ಲಿ ಅಂಚೆ ವ್ಯವಸ್ಥೆಯನ್ನು ಬಹಳವಾಗಿ ಸುಧಾರಿಸಿದ. ಹೊರನಾಡಿನಲ್ಲೂ ಒಳನಾಡಿನಲ್ಲೂ ಅಂಚೆ ಸಿಬ್ಬಂದಿಯನ್ನು ನಿಯಮಿಸಿದನೀಮಿಸಿದ; ಅಂಚೆ ಮನೆಗಳನ್ನು ಸ್ಥಾಪಿಸಿದ; ಪತ್ರಗಳನ್ನು ಸಾಗಿಸಬೇಕಾದ ದೂರಕ್ಕೆ ತಕ್ಕಂತೆ ಶುಲ್ಕ ವಿಧಿಸಿದ; ದಿನಕ್ಕೆ ನೂರಿಪ್ಪತ್ತು ಮೈಲಿಗಳಂತೆ ಹಗಲೂ ರಾತ್ರಿಯೂ ಇವು ಸಾಗುವಂತೆ ಏರ್ಪಡಿಸಿದ.
*ಅಂಚೆ ವ್ಯವಸ್ಥೆಯಿಂದ ಸರ್ಕಾರಕ್ಕೆ ವರಮಾನವನ್ನು ದೊರಕಿಸಿಕೊಳ್ಳುವ ಸಾಧ್ಯತೆಯೂ 17ನೆಯ ಶತಮಾನದಲ್ಲಿ ಖಚಿತವಾಯಿತು. ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಹಕ್ಕನ್ನು ಖಾಸಗಿಯವರಿಗೆ ಗುತ್ತಿಗೆಗೆ ಕೊಡುವ ಪದ್ಧತಿ ಏರ್ಪಟ್ಟಿತು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ ಇಷ್ಟೆಂದು ವರಮಾನ ದೊರಕುತ್ತಿತ್ತು. ಆದರೆ ಕ್ರಮೇಣ ಸರ್ಕಾರ ಖಾಸಗಿಯವರಲ್ಲಿದ್ದ ಈ ಹಕ್ಕನ್ನು ಪರಿಹಾರಕೊಟ್ಟು ಕೊಂಡುಕೊಂಡಿತು. ಅಂತೂ 19ನೆಯ ಶತಮಾನದ ನಡುಗಾಲದವರೆಗೂ ಕೆಲವರಿಗೆ ಈ ಹಕ್ಕು ಇತ್ತು.
 
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ