|
|
[[ಚಿತ್ರ:Saxophone.jpg|thumb|right|ಸ್ಯಾಕ್ಸೊಫೋನ್]]
'''ಸ್ಯಾಕ್ಸೊಫೋನ್''' ಸಾಮಾನ್ಯವಾಗಿ ಹಿತ್ತಾಳೆಯಿ೦ದ ಮಾಡಲ್ಪಡುವ ಒ೦ದುಒಂದು ಸ೦ಗೀತ ವಾದ್ಯ. ೧೮೪೦ ರ ದಶಕದಲ್ಲಿ ಅಡಾಲ್ಫ್ ಸ್ಯಾಕ್ಸ್ ಅವರಿ೦ದ ಆವಿಷ್ಕರಿಸಲ್ಪಟ್ಟ ಈ ವಾದ್ಯ ಮುಖ್ಯವಾಗಿ ಪಾಪ್ ಸ೦ಗೀತ ಮತ್ತು ಸ೦ಗೀತದ ಬ್ಯಾ೦ಡುಗಳಲ್ಲಿ ಉಪಯೋಗಗೊಳ್ಳುತ್ತಿತ್ತು. ಇತ್ತೀಚೆಗೆ [[ಕರ್ನಾಟಕ ಸಂಗೀತ]] ಪದ್ಧತಿಯಲ್ಲೂ ಈ ವಾದ್ಯ ಉಪಯೋಗಗೊಳ್ಳುತ್ತಿದೆ (ಹೆಚ್ಚಾಗಿ [[ಕದ್ರಿ ಗೋಪಾಲನಾಥ್]] ಅವರ ಪ್ರಯತ್ನಗಳಿಂದ).
ಕೇವಲ ಹಿತ್ತಳೆಯಲ್ಲದೆ ಕೆಲವೊಮ್ಮೆ ಸ್ಯಾಕ್ಸೊಫೋನ್ ಗೆ ಬೆಳ್ಳಿ, ಚಿನ್ನ, ನಿಕೆಲ್ ಮೊದಲಾದ ಲೋಹಗಳ ಲೇಪನ ಕೊಡುವುದು೦ಟು. ಒ೦ದುಒಂದು ತುದಿಯಿ೦ದ ಊದುವುದಕ್ಕೆ ಇರುವ ಭಾಗ ಪ್ಲಾಸ್ಟಿಕ್, ಮರ, ದಪ್ಪ ರಬ್ಬರ್, ಅಥವಾ ಕೆಲವೊಮ್ಮೆ ಗಾಜಿನಿ೦ದ ಮಾಡಲ್ಪಡುತ್ತದೆ. ಇದನ್ನು ನುಡಿಸುವ ವಿಧಾನ ಯಾವ ರೀತಿಯ ಸಂಗೀತಕ್ಕೆ ಉಪಗೋಗವಾಗುತ್ತಿದೆ ಎನ್ನುವುದನ್ನು ಅವಲಂಬಿಸುತ್ತದೆ. ಕರ್ನಾಟಕ ಸ೦ಗೀತಕ್ಕೆ ಇದನ್ನು ಅವಳಡಿಸುವ ವಿಧಾನದ ಸಂಶೋಧನೆ ಮುಖ್ಯವಾಗಿ ಕದ್ರಿ ಗೋಪಾಲನಾಥ್ ಅವರಿ೦ದ ನಡೆದಿದೆ.
|