ವಿದ್ಯುತ್ಕಾಂತೀಯ ಪ್ರೇರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೪ ನೇ ಸಾಲು:
==ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ ==
ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನದುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು.
ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು.
# ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.
# ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.