ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩೮ ನೇ ಸಾಲು:
 
== ಸರ್ಕಾರ ಮತ್ತು ರಾಜಕೀಯ ==
{{Main|Government of Andhra Pradesh|Politics of Andhra Pradesh|List of Chief Ministers of Andhra Pradesh}}
[[ಚಿತ್ರ:800px-Assembly1.jpg|thumb|left|ಹೈದರಾಬಾದ್‌ ನಗರದ ಕೇಂದ್ರಭಾಗದಲ್ಲಿರುವ ಆಂಧ್ರ ಪ್ರದೇಶ ರಾಜ್ಯ ವಿಧಾನಸಭೆ ]]
ಆಂಧ್ರ ಪ್ರದೇಶ [[ವಿಧಾನಸಭಾ|ವಿಧಾನಸಭೆ]]ಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.[[ಭಾರತದ ಸಂಸತ್ತು|ಭಾರತದ ಸಂಸತ್‌‌]]ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ [[ರಾಜ್ಯ ಸಭೆ|ರಾಜ್ಯಸಭೆ]]ಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ [[ಲೋಕಸಭೆ|ಲೋಕಸಭೆಯಲ್ಲಿ]] ೪೨ ಮಂದಿ ಸದಸ್ಯರಿದ್ದಾರೆ. <ref>{{cite web|url=http://www.apassemblylive.com|title=Andhra Pradesh Legislative Assembly}}</ref> <ref>{{cite web|url=http://164.100.24.209/newls/membershomepage.aspx|title=Parliament of India}}</ref>
 
 
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. [[ಕಾಸು ಬ್ರಹ್ಮಾನಂದ ರೆಡ್ಡಿ]] ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು [[N.T.ರಾಮ ರಾವ್‌|ಎನ್‌.ಟಿ.ರಾಮ ‌ರಾವ್‌]]ರವರು ೧೯೮೩ರಲ್ಲಿ ಮುರಿದರು. [[P.V. ಪಿ.ವಿ.ನರಸಿಂಹರಾವ್‌|ಪಿ.ವಿ.ನರಸಿಂಹ ರಾವ್‌]]ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ [[ತಂಗುತೂರಿ ಪ್ರಕಾಶಂ|ತಂಗುತೂರಿ ಪ್ರಕಾಶಮ್]]‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ [[ಕಾಸು ಬ್ರಹ್ಮಾನಂದ ರೆಡ್ಡಿ]], [[ಮರ್ರಿ ಚೆನ್ನಾ ರೆಡ್ಡಿ]], [[ಜಲಗಂ ವೆಂಗಲ್‌ ರೆಡ್ಡಿ|ಜಲಗಂ ವೆಂಗಲ್‌ ರಾವ್‌]], [[ನೆದುರುಮಲ್ಲಿ ಜನಾರ್ಧನ ರೆಡ್ಡಿ]], [[ನಾದೇಂಡ್ಲ ಭಾಸ್ಕರ ರಾವ್‌]], [[ಕೋಟ್ಲ ವಿಜಯಭಾಸ್ಕರ ರೆಡ್ಡಿ|ಕೋಟ್ಲ ವಿಜಯ ಭಾಸ್ಕರ ರೆಡ್ಡಿ]], [[N.T. ರಾಮ ರಾವ್‌|ಎನ್‌.ಟಿ.ರಾಮ ರಾವ್]], [[ನಾರಾ ಚಂದ್ರಬಾಬು ನಾಯ್ಡು]] ಮತ್ತು [[Y.S. ರಾಜಶೇಖರ ರೆಡ್ಡಿ|ವೈ.ಎಸ್‌.ರಾಜಶೇಖರ ರೆಡ್ಡಿ]]ಯವರುಗಳು ಸೇರಿದ್ದಾರೆ.
 
 
[[ಚಿತ್ರ:Highcourt11.jpg|thumb|250px|right|ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ ]]
 
 
೧೯೮೩ರಲ್ಲಿ [[ತೆಲುಗು ದೇಶಂ ಪಕ್ಷ|ತೆಲುಗು ದೇಶಮ್‌ ಪಕ್ಷ]]ವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು [[N.T. ರಾಮ ರಾವ್‌|ಎನ್‌.ಟಿ.ರಾಮ ರಾವ್‌]]ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು.
 
 
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು.
 
 
೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು.
 
 
೨೦೦೮ರಲ್ಲಿ ಚಲನಚಿತ್ರ ತಾರೆ [[ಚಿರಂಜೀವಿ|ಜಿರಂಜೀವಿ]]ಯವರಿಂದ [[ಪ್ರಜಾ ರಾಜ್ಯ ಪಕ್ಷಂ|ಪ್ರಜಾ ರಾಜ್ಯಂ ಪಕ್ಷ]](PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್‌ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್‌ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು.
 
ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.
 
ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.
 
 
 
== ಸಂಸ್ಕೃತಿ ==
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ