ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೮ ನೇ ಸಾಲು:
== ಭೂಗೋಳ ಮತ್ತು ಹವಾಮಾನ ==
ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ‌ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.
 
 
ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್‌ನಿಂದ ಜೂನ್‌ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ.
 
 
ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್‌, ನವೆಂಬರ್, ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ.
 
 
ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ.
 
 
ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು.
 
 
 
== ವಿಭಾಗಗಳು ==
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ