ಗಿಲ್ಗಮೆಷ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Gilgamesh,_8th_century.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...
೧ ನೇ ಸಾಲು:
[[File:Gilgamesh, 8th century.jpg|thumb|ಗಿಲ್ಗಮೆಷ್: ಪ್ರ.ಶ.ಪೂ.೮ನೇ ಶತಮಾನದ ಒಂದು ಶಿಲ್ಪ]]
 
'''ಗಿಲ್ಗಮೆಷ್''' ಸುಮೇರಿಯನ್ನರ ಅತಿಪ್ರಾಚೀನ ಸಂಪ್ರದಾಯಕ್ಕೆ ಸೇರಿದ, ಮೆಸಪೊಟೇಮಿಯದ ಪೌರಾಣಿಕ ಜನಪದ ಮಹಾಕಾವ್ಯವೊಂದರ ನಾಯಕ. ಈ ಮಹಾಕಾವ್ಯ ಅಕ್ಕೇಡಿಯನ್ ಭಾಷೆಯಲ್ಲಿಯೇ ಒಂದು ಬಹು ಮುಖ್ಯವಾದ ಸಾಹಿತ್ಯ ಕೃತಿ ಮತ್ತು ಇದರ ನಾಯಕ ಗಿಲ್ಗಮೆಷ್ ಸುಮೇರಿಯನ್ ನಾಯಕರಲ್ಲೆಲ್ಲ ಅಗ್ರಗಣ್ಯ. ಈ ಕಥೆ ಪ್ರ.ಶ.ಪು. 3000 ವರ್ಷಗಳ ಹಿಂದೆ ದಕ್ಷಿಣ ಮೆಸಪೊಟೇಮಿಯದಲ್ಲಿದ್ದ ನಾಗರಿಕತೆಯ ಸ್ವರೂಪವನ್ನು ತಿಳಿಸುತ್ತದೆ. ಗಿಲ್ಗಮೆಷ್ ವಿಷಯದಲ್ಲಿ ಹುಟ್ಟಿಕೊಂಡಿರುವಷ್ಟು ಕಥೆಗಳು ಇತರರ ವಿಷಯದಲ್ಲಿಲ್ಲ. ಅಲ್ಲದೆ ಇವನು ತನ್ನ ಸ್ನೇಹಿತ ಎಂಕಿಡುವಿನೊಂದಿಗೆ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಂಕಿಡು|ಎಂಕಿಡು]] ಸೇರಿ ತೋರಿಸಿದ ಸಾಹಸ ಬೇರೆಯವರಲ್ಲಿ ಕಂಡುಬರದು. ಸುಮೇರಿಯದಲ್ಲಿನ ಈತನ ಕಥೆಯ ಮೂಲವನ್ನು ಪ್ರ.ಶ.ಪು. 1500ಕ್ಕಿಂತ ಹಿಂದಕ್ಕೆ ಒಯ್ಯಬಹುದು. ನಿನೆವದಲ್ಲಿ ಅಸ್ಸೀರಿಯದ ದೊರೆ ಅಷೂರ್ಬನಿಪಾಲನ (ಪ್ರ.ಶ.ಪು. 669-630?) ಗ್ರಂಥ ಭಂಡಾರದಲ್ಲಿ ಈ ಕಥೆಯ ಅಪೂರ್ಣಪಾಠ (ಕೇವಲ 12 ಫಲಕಗಳು ಮಾತ್ರ) ದೊರೆತಿವೆ. ಹಿಟೈಟ್ ಮತ್ತು ಹುರಿಯನ್ ಭಾಷೆಗಳಲ್ಲಿ ಏಷ್ಯ ಮೈನರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತವಿದ್ದ ಈ ಕಥೆ ಗ್ರೀಕರ ಒಡಿಸ್ಸಿಯ ಮೇಲೆ ಪ್ರಭಾವ ಬೀರಿರಬಹುದು. ಹೋಮರನಿಗಿಂತ 1500 ವರ್ಷಗಳಷ್ಟು ಹಿಂದೆಯೇ ಇದ್ದ ಅತ್ಯಂತ ಪ್ರಾಚೀನ ಮಹಾಕಾವ್ಯ ಈ ಗಿಲ್ಗಮೆಷ್ ಇತಿಹಾಸ.
 
"https://kn.wikipedia.org/wiki/ಗಿಲ್ಗಮೆಷ್" ಇಂದ ಪಡೆಯಲ್ಪಟ್ಟಿದೆ