ಬಿ.ಕೆ.ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ '''ಬಿ.ಕೆ.ಸುಮಿತ್ರಾ''' ಒಬ್ಬರು.[[ಸಂಗೀತ|ಸಂಗೀತದ]] ಎಲ್ಲ ಪ್ರಕಾರಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.
==ಜನನ ಹಾಗೂ ಬಾಲ್ಯ==
ಬಿ.ಕೆ.ಸುಮಿತ್ರಾ ಹುಟ್ಟಿದ್ದು [[ಜುಲೈ ೧]],[[೧೯೪೬]] ರಂದು [[ಚಿಕ್ಕಮಗಳೂರು]] ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ. ತಂದೆ ಪಟೇಲ್ ಕೃಷ್ಣಯ್ಯ, ತಾಯಿ ಗಂಗಮ್ಮ. ಓದಿದ್ದು ಬಿಎಸ್‌ಸಿ,ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಕಾಲೇಜಿನಲ್ಲಿ ಓದುತ್ತಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಗೀತೆಗಳನ್ನು ಕೇಳಿ ಸಂಗೀತಾಭ್ಯಾಸ ಶುರು.[[ಜಾನಪದಗೀತೆಜನಪದಗೀತೆ]],[[ಭಕ್ತಿಗೀತೆ]],[[ಭಾವಗೀತೆ]] ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.ಮುಂದಿನ ದಿನಗಳಲ್ಲಿ [[ಕುವೆಂಪು]],[[ದ.ರಾ.ಬೇಂದ್ರೆ]],[[ಜಿ.ಎಸ್.ಶಿವರುದ್ರಪ್ಪ]]...ಮೊದಲಾದ ಕವಿಗಳ ಕವಿತೆಗಳನ್ನು ಆಕಾಶವಾಣಿ,ದೂರದರ್ಶನ,ಧ್ವನಿಸುರುಳಿ,ಸಿ.ಡಿ.ಗಳಿಗಾಗಿ ಹಾಡಿದರು.ದೇಶ-ವಿದೇಶಗಳಲ್ಲಿ ಅನೇಕ ಕನ್ನಡಕೂಟಗಳಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
 
==ಚಿತ್ರರಂಗಕ್ಕೆ ಪಾದಾರ್ಪಣೆ==
[[ಜಿ.ಕೆ.ವೆಂಕಟೇಶ್‌]] ರವರ ಸಂಗೀತ ನಿರ್ದೇಶನದ [[ಕವಲೆರಡು ಕುಲವೊಂದು]] ಚಿತ್ರದಿಂದ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಹೆಚ್.ಎಂ.ವಿ.,ಸಿ.ಬಿ.ಎಸ್.,ಸಂಗೀತ.,ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ ಹಾಡಿದ್ದಾರೆ.ಉದುಪಿಯ ಕೃಷ್ಣ,ಧರ್ಮಸ್ಥಳದ ಮಂಜುನಾಥ,ಎಡೆಯೂರು ಸಿದ್ಧಲಿಂಗೇಶ್ವರ..ಮುಂತಾದ ಭಕ್ತಿಗೀತೆಗಳನ್ನು ಹಾಡಿದ್ದಾರೆ.ಪತಿ ಸುಧಾಕರ್.ಮಗಳು ಸೌಮ್ಯ ಖ್ಯಾತ ಬಾಲಿವುಡ್ ಗಾಯಕಿ.ಮಗ [[ಸುನೀಲ್‌ರಾವ್]] ಕನ್ನಡದ ಉದಯೋನ್ಮುಖ ಚಿತ್ರನಟ.
"https://kn.wikipedia.org/wiki/ಬಿ.ಕೆ.ಸುಮಿತ್ರಾ" ಇಂದ ಪಡೆಯಲ್ಪಟ್ಟಿದೆ