ಸದಸ್ಯ:Ranjitha s gowda/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
1974ನೇ ಇಸವಿಯಲ್ಲಿ ಹಾಕಿಂಗ್ ರಾಯಲ್ ಸೊಸೈಟಿಯ ಕಿರಿಯ ಸಂಶೋಧಕರಾಗಿ ಆಯ್ಕೆಯಾದರು, 1982ನೇ ಇಸವಿಯಲ್ಲಿ ಆರ್ಡರ್ ಆಫ್ ದಿ ಬ್ರಿಟೀಷ್ ಎಂಪೈರ್ ಸಂಸ್ಥೆಯ ಕಮ್ಯಾಂಡರ್ ಹುದ್ದೆಯನ್ನು ಸ್ಥಾಪಿಸಿ ಅವರಿಗೆ ನೀಡಲಾಯಿತು, ಹಾಗೂ 1989ನೇ ಇಸವಿಯಲ್ಲಿ ಕಂಪ್ಯಾನಿಯನ್ ಆಫ್ ಹಾನರ್ ಕೂಡ ಆಗಿದ್ದರು. ಹಾಕಿಂಗ್ ದಿ ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್ ನ ಪ್ರಾಯೋಜಕ ಮಂಡಳಿಯ ಸದಸ್ಯರೂ ಆಗಿದ್ದಾರೆ.
ALSನಿಂದ ಉಂಟಾದ ಪಾರ್ಶ್ವವಾಯು ಹೆಚ್ಚಾಗುತ್ತಿದ್ದರೂ ಹಾಕಿಂಗ್ ತಮ್ಮ ಸಾಧನೆಗಳನ್ನು ಮುಂದುವರೆಸಿದರು. 1974ನೇ ಇಸವಿಯ ಹೊತ್ತಿಗೆ, ಅವರು ಊಟ ಮಾಡಲೂ ಅಥವಾ ಹಾಸಿಗೆಯಿಂದ ಮೇಲೇಳಲೂ ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿದರು. ಅವರ ಮಾತುಗಳು ಅಸ್ಪಷ್ಟವಾಗಿ, ಚೆನ್ನಾಗಿ ಬಲ್ಲವರು ಮಾತ್ರ ಅವರ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದರು. 1985ನೇ ಇಸವಿಯಲ್ಲಿ, ಅವರು ನ್ಯುಮೋನಿಯಾಗೆ ತುತ್ತಾಗಿ ಶ್ವಾಸನಾಳ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮಾತನಾಡಲು ಸಹ ಅಶಕ್ತರಾದರು. ಹಾಕಿಂಗ್ರಿಗೆ ಕೇಂಬ್ರಿಡ್ಜ್ ವಿಜ್ಞಾನಿಯೊಬ್ಬರು, ಅವರ ದೇಹದ ಕೊಂಚ ಮಟ್ಟಿಗಿನ ಚಲನೆಗಳಿಂದ ಗಣಕದಲ್ಲಿ ಬರೆಯಲು ಸಾಧ್ಯವಾಗುವಂತಹ ಸಾಧನವೊಂದನ್ನು ಅಭಿವೃದ್ಧಿಪಡಿಸಿದರು, ಹಾಗೂ ಅದಕ್ಕೆ ಅವರು ಗಣಕದಲ್ಲಿ ಬರೆದುದನ್ನು ಓದಲು ಅನುವಾಗುವ ಧ್ವನಿ ಸಂಯೋಗ ವ್ಯವಸ್ಥೆಯನ್ನು ಅಳವಡಿಸಿದರು.
ಅನಾರೋಗ್ಯ
ಹಾಕಿಂಗ್ 2006ನೇ ಇಸವಿಯ ಮೇ 5ನೇ ತಾರೀಖಿನಂದು, ಖಗೋಳವಿಜ್ಞಾನದ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲು ಹಾಗೂ ಪ್ಯಾರಿಸ್ನಲ್ಲಿ ಪ್ರಯೋಗಗಳನ್ನು ನಡೆಸುವುದು ಮತ್ತು ಅವರ ಗಾಡ್ ಕ್ರಿಯೇಟೆಡ್ ದಿ ಇಂಟೀಜರ್ಸ್ ಎಂಬ ಕೃತಿಯನ್ನು ಫ್ರೆಂಚ್ ಭಾಷೆಯಲ್ಲಿ ಹೊರತರುವ ಉದ್ಧೇಶದಿಂದ ಬಿಬ್ಲಿಯೊಥೆಕ್ವೆ ನ್ಯಾಷಿನಲೆ ಡಿ ಫ್ರಾನ್ಸ್ನಲ್ಲಿ ಮಾಧ್ಯಮಗಳ ಸಭೆ ನಡೆಸಿದರು.
ಸ್ಟೀಫನ್ ಹಾಕಿಂಗ್ರು ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ನ (ಅಥವಾ ALS) ವಿಧವಾದ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆ ಹೊಂದಿದರು. ಅವರು ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧಕ್ಕೆ ತುತ್ತಾಗಿದ್ದಾರೆ ಎಂದು ಹಲವಾರು ನರಸ್ನಾಯುಕ ತಜ್ಞರು ನಂಬಿದ್ದರು. ಹಾಕಿಂಗ್ರಿಗೆ ತಗುಲಿದ ಈ ಅನಾರೋಗ್ಯವನ್ನು ALSನ ಒಂದು ವಿಧವೆಂದು ಪರಿಗಣಿಸಿದ್ದು, ಅವರಿಗೆ ತಗುಲಿರುವ ಈ ALS ನಮೂದಿಸಲಾಗಿರುವ ನಿದರ್ಶನಗಳಲ್ಲಿಯೇ ಅತಿವಿಶಿಷ್ಟವಾಗಿದೆ. ರೋಗತಪಾಸಣೆ ನಡೆಸಿ ALS ತಗುಲಿರುವುದು ಖಚಿತವಾದ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ಬದುಕಿ ಉಳಿಯುವುದೇ ಅಪರೂಪವಾಗಿದೆ; ಈ ರೀತಿ ಸುದೀರ್ಘ ಕಾಲ ಬದುಕಿದ ಕಾಲಾವಧಿಗಳೆಂದರೆ 32 ಹಾಗೂ 39 ವರ್ಷಗಳು ಹಾಗೂ ಈ ರೀತಿಯ ಸನ್ನಿವೇಶಗಳನ್ನು ಅದೃಷ್ಟವೆಂದೇ ಹೇಳಬಹುದು ಯಾಕೆಂದರೆ ಈ ರೋಗದ ನಂತರದ ಹಂತಗಳ ಚಿಕಿತ್ಸೆಯಲ್ಲಿ ಸರಿಯಾದ ಪ್ರಗತಿ ಕಂಡುಬಂದಿಲ್ಲ.[೨೬]
ಅವರು ಚಿಕ್ಕ ವಯಸ್ಸಿನವರಾಗಿದ್ದಾಗ, ಕುದುರೆ ಸವಾರಿ ಮಾಡುವುದನ್ನು ಹಾಗೂ ಇತರೆ ಮಕ್ಕಳ ಜೊತೆ ಆಟ ಆಡುವುದನ್ನು ಇಷ್ಟಪಡುತ್ತಿದ್ದರು. ಆಕ್ಸ್ಫರ್ಡ್ನಲ್ಲಿ, ಹುಟ್ಟುಹಾಕುವ ಪಂದ್ಯದ ದೋಣಿನಾಯಕನಾಗಿದ್ದರು, ಈ ಚಟುವಟಿಕೆಯು, ಅವರೇ ಹೇಳಿದಂತೆ, ವಿಶ್ವವಿದ್ಯಾಲಯದಲ್ಲಿ ಅವರನ್ನು ಅತಿಯಾಗಿ ಕಾಡುತ್ತಿದ್ದ ಬೇಸರವನ್ನು ದೂರಮಾಡಲು ಸಹಾಯ ಮಾಡಿತು. ಕೇಂಬ್ರಿಡ್ಜ್ನಲ್ಲಿ ಸೇರಿದ ಸಮಯದಲ್ಲಿ ಮೊದಲ ಬಾರಿಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿತು; ಅವರು ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ಸಮತೋಲನವನ್ನು ಕಳೆದುಕೊಂಡು ಜಾರಿಬಿದ್ದಿದ್ದರ ಪರಿಣಾಮವಾಗಿ ತಲೆಗೆ ಪೆಟ್ಟು ಮಾಡಿಕೊಂಡರು. ತನ್ನ ಅಪ್ರತಿಮ ಬುದ್ಧಿಶಕ್ತಿಯನ್ನು ಕಳೆದುಕೊಳ್ಳಬೇಕಾಯಿತೇ ಎಂದು ಆತಂಕಗೊಂಡ ಅವರು, ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ತಿಳಿಯಲು ಮೆನ್ಸಾ ಪರೀಕ್ಷೆಗೆ ಮುಂದಾದರು.[೨೭] ಹಾಕಿಂಗ್ರಿಗೆ 21ವರ್ಷವಿದ್ದಾಗ ಅವರ ಮೊದಲನೇ ಮದುವೆಗಿಂತ ಕೆಲ ಸಮಯದ ಮುಂಚೆಯಷ್ಟೇ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿರುವುದು ರೋಗತಪಾಸಣೆಯಿಂದ ತಿಳಿದುಬಂತು, ಅವರು ಎರಡು ಅಥವಾ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲವೆಂದು ವೈದ್ಯರು ತಿಳಿಸಿದರು. ಕಾಲಕ್ರಮೇಣ ಹಾಕಿಂಗ್ ತೋಳುಗಳು, ಕಾಲುಗಳು, ಹಾಗೂ ಧ್ವನಿಯನ್ನು ಕಳೆದುಕೊಂಡು 2009ನೇ ಇಸವಿಯ ಸುಮಾರಿಗೆ ಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾದರು.
"https://kn.wikipedia.org/wiki/ಸದಸ್ಯ:Ranjitha_s_gowda/sandbox" ಇಂದ ಪಡೆಯಲ್ಪಟ್ಟಿದೆ