ಆಯ್ದಕ್ಕಿ ಲಕ್ಕಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು created new article of ಆಯ್ದಕ್ಕಿ ಲಕ್ಕಮ್ಮ
೧ ನೇ ಸಾಲು:
{{Infobox vachanakaara
{{ICCU}}
| name = ಆಯ್ದಕ್ಕಿ ಲಕ್ಕಮ್ಮ
==== ಆಯ್ದಕ್ಕಿ ಲಕ್ಕಮ್ಮನ ಪರಿಚಯ ====
| birth_date = ೧೧೬೦
ಶಿವಶರಣರ ವಚನ ಕ್ರಾಂತಿಯ ಸಂದರ್ಭದಲ್ಲಿ ಅನೇಕ ಶಿವಶರಣೆಯರು ವೈಚಾರಿಕವಾಗಿ ಕ್ರಿಯಾಶೀಲರಾದುದು ಕನ್ನಡ ವಚನ ಸಾಹಿತ್ಯದ ವಿಶೇಷ. ಶತ-ಶತಮಾನಗಳಿಂದ ಮೌನ ದಿಂದ ಮೂಕರಾಗಿದ್ದ ಸ್ತ್ರೀಯರು ಇದೀಗ ತತ್ವ ಹಿನ್ನೆಲೆಯಿಂದ ವಚನ ರಚನೆಗೆ ತೊಡಗಿದರು. ಇಂಥ ಶರಣೆಯರಲ್ಲ್ಲಿ ಆಯ್ದ್ದಕ್ಕಿ ಲಕ್ಕಮ ಪ್ರಮುಖಳು. 'ಮಾರಯ್ಯಪ್ರಿಯ ಅಮರೇಶ್ವರ ಲಿಂಗ' ಈಕೆಯ ವಚನಗಳ ಅಂಕಿತ. ಪತಿ-ಪತ್ನಿಯರೊಂದಾದ ಭಕ್ತಿ ಶಿವಂಗೆ ಹಿತವಪ್ಪುದು ಎನ್ನುವ ಆದರ್ಶ ಪಾಲಿಸಿದ ದಂಪತಿಗಳಿವರು. ನೆಲದಲ್ಲಿ ಬಿದ್ದಿರುವ ಕಾಳುಗಳನ್ನು ಆಯ್ದ್ದು ತರುವ ಕಾಯಕವನ್ನು ಇವರು ಗೌರವ-ಶ್ರದ್ದೆಯಿಂದ ಅನುಸರಿದರು. ಇವರು ಬರೆದಿರುವ ಅಷ್ಟು ವಚನಗಳಲ್ಲಿ, ಬೆಳಕಿಗೆ ಕಾಣುವುದು ಅಥವಾ ಬಂದದ್ದು ೨೫ ವಚನಗಳು. ಅದರಲ್ಲಿ ಅವರ ಅಂಕಿತವಾದ ಮಾರಯ್ಯ ಪ್ರಿಯ ಅಮರೇಶ್ವರಲಿಂಗವು ಸಹಿಯಾಗಿದೆ. ಶೂನ್ಯ ಸಂಪಾದನೆಯಲ್ಲಿ ಇವರು ಅಂದರೆ ಪತಿ-ಪತ್ನಿಯರಿಬ್ಬರೂ ಸೇರಿ ಹೊಂದಿರುವ ಭಾವನೆ ಯು ಎರಡು ಮುಖವನ್ನು ಹೊಂದಿದೆ. ಅದುವೇ ''ಕಾಯಕ'' ಮತ್ತು ''ದಾಸೋಹ'' ಇವು ವಚನಗಳಲ್ಲಿ ವ್ಯಕ್ತಪಡಿಸಲಾಗುತ್ತದೆ. ಕಾಯಕ ತತ್ವದಿಂದ ರೂಪಿತವಾದ ಸಂಪಾದನೆ, ದೃಢವಿಲ್ಲ ದ ಭಕ್ತ್ತಿಯ ನಿಷ್ತ್ರಯೋಜಕತೆ, ಶಿವಸೇವೆ ಯಲ್ಲಿ ತಲ್ಲೀನರಾದವರಿಗೆ ಬಡತನವಿಲ್ಲ ಶರಣರ ಭಕ್ತಿ ಶ್ರೇಷ್ಠ ಎಂಬ ನಿಲುವನ್ನು ಅವರ ವಚನಗಳಲ್ಲಿ ಕಾಣುತ್ತವೆ.
| ankita = ಮಾರಯ್ಯಪ್ರಿಯ ಅಮರೇಶ್ವರಲಿಂಗ
 
| spouse = ಆಯ್ದಕ್ಕಿ ಮಾರಯ್ಯ
==ಜೀವನ ಶೈಲಿ==
| known_for =
ವೇದ ಪೂರ್ವಕಾಲದಲ್ಲಿ ಸ್ತ್ರೀ ಸಮಾಜದಲ್ಲಿ ಗೌರವ ಸ್ಥಾನವನ್ನು ಪಡೆದುಕೊಂಡಿದ್ದಳು ಮತ್ತು ಸಮಗ್ರ ಹೊಣೆಗಾರಿಕೆಯೆ ಸಮರ್ಥವಾಗಿ ನಿರ್ವಹಿಸಿಕೊಂಡಿದ್ದಳು. ಆ ವೇದಪೂರ್ವಕಾಲ ದಲ್ಲಿ ಮಾತೃ ಪ್ರಧಾನ ಸಮಾಜವು ಅಸ್ತಿತ್ವದಲ್ಲಿತ್ತು. ಆದರೆ ಕಾಲ ಅನುಸಾರದ ಪ್ರಭಾವದಿಂದ ಪಿತೃಪ್ರಧಾನ ಸಮಾಜವು ಅಸ್ತಿತ್ವದಲ್ಲಿ ಬಂದು ಹಿಂದೂ ಧರ್ಮದಲ್ಲಿ ವಿವಾಹದ ಶಾಸ್ತ್ರಗಳ ಸುತ್ತ ಹೆಣೆದುಕೊಂಡಿರುವ ಸಂಪ್ರದಾಯಗಳು ಆಕೆಯ ಸಾಮಾಜಿಕ' ಆರ್ಥಿಕ' ಆಧ್ಯಾತ್ಮಿಕ' ನೈತಿಕ ಸಾಂಸ್ಕ್ರತಿಕ ಅವಕಾಶಗಳನ್ನೆಲ್ಲಾ ಕಿತ್ತುಕೊಂಡು ಅವಹೇಳನ ಮಾಡಿ ಸಮಾಜದಲ್ಲಿ ಧ್ವನಿಯಿಲ್ಲ ದಂತೆ ಉಸುರುಗಟ್ಟುವ ವಾತಾವರಣವನ್ನು ನಿರ್ಮಿಸಿತು.
}}
ಆಯ್ದ್ದಕ್ಕಿ ದಂಪತಿಗಳ ಹೆಸರು ಒಟ್ಟಿಗೆ ಬರುತ್ತವೆ. ಆಯ್ದ್ದಕ್ಕಿ ಕಾಯಕದ ಮಾರಯ್ಯ ಮತ್ತು ಲಕ್ಕಮ್ಮ. ಇವರು ೧೧೬೦ ಕಾಲಕ್ಕೆ ಸೇರಿದ್ದಾರೆ ಎಂದು ಊಹಿಸಲಾಗಿದೆ. ಆಯ್ದ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ವಚನಕಾರರಾಗಿದ್ದು ಅವರ ವಚನಗಳು ಉಪಲಬ್ದ್ದವಾಗಿವೆ. ಇವರು ಕಾಯಕದ ನಿಷ್ಟೆಗೆ ಇನ್ನೂಂದು ಹೆಸರು. ಇವರ ಜೀವನವು ವಚನಗಳಲ್ಲಿ ಬಹಳಷ್ಟು ಅಭಿವ್ಯಕ್ತ್ತಿಯನ್ನು ಪಡೆದಿದೆ. ಕಾಯಕ ಮತ್ತು ದಾಸೋಹ ತತ್ವವನ್ನು ಈ ದಂಪತಿಗಳು ತಮ್ಮ ಜೀವನ ಊದ್ದಕ್ಕೂ ಅಳವಡಿಸಿಕೊಂಡಿದ್ದರು.
[[ವರ್ಗ:ವಚನಕಾರರು]]
ಆಯ್ದ್ದಕ್ಕಿ ಲಕ್ಕಮ್ಮನ ಪತಿ ಆಯ್ದ್ದಕ್ಕಿ ಮಾರಯ್ಯ ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕು ಅಮರರೇಶ್ವರ ಗ್ರಾಮಕ್ಕೆ ಸೇರಿದವರು. ಲಕ್ಕಮ್ಮ ಎನ್ನುವ ರೂಪ ನಿಷ್ಟತ್ತಿಯು ಲಕ್ಶ್ಮೀ ಯಿಂದ ಲಕುಮಿ ಲಕ್ಕಮ್ಮನಾಗಿ ಮುಂದೆ ಪ್ರಚಲಿತವಾಗಿರಬೇಕು. ಲಕ್ಕಮ್ಮನ ಹುಟ್ಟೂರು ತಂದೆ ತಾಯಿ ಅಥವಾ ಇನ್ನೂ ಯಾವ ವಿವರಗಳು ಬೆಳಕಿಗೆ ಬಂದಿಲ್ಲ. ಮಾರಯ್ಯ ಅಮರೇಶ್ವರ ಲಿಂಗ ಗ್ರಾಮಕ್ಕೆ ಸೇರಿದವರಾಗಿದ್ದ ಕಾರಣಕ್ಕಾಗಿ ಅವರ ಅಮರೇಶ್ವರಲಿಂಗ ಅಂಕಿತದಲ್ಲಿ ಸುಮಾರು ೧೫ ವಚನಗಳು ಕಂಡು ಬಂದಿದೆ. ಲಕ್ಕಮ್ಮ "ಮಾರಯ್ಯಪ್ರಿಯ ಅಮರೇಶ್ವರಲಿಂಗ" ಅಂಕಿತದಲ್ಲಿ ೨೫ ವಚನಗಳು ಕಾಣಿಸುತ್ತವೆ. ವಚನಕಾರರ ನಡುವೆ ಮಾರಯ್ಯನವರ ಖ್ಯಾತಿ ಎಷ್ಟೆಂದರೆ ಬನವಾಸಿಯ ಶಿಲಾಮಂಟಪದ ಗಗ್ಗರ ಕಲ್ಲಿನಲ್ಲಿ ಶರಣರ ವಿಗ್ರಹಗಳು ಆಯ್ದಕ್ಕಿ ಮಾರಯ್ಯನವರ ವಿಗ್ರಹವು ಇದೆ. ಹಾಗೆಯೂ ಲಕ್ಕಮ್ಮನ ಹೆಸರು ಈ ಮತ್ತಿನವರೆಗೂ ಅಮರೇಶ್ವರ ಸುತ್ತಮುತ್ತ ಇಡುವುದು ವಾಡಿಕೆಯಾಗಿದೆ. ಆ ಊರಿನಲ್ಲಿ ಲಕ್ಕಮ್ಮನ ಹೆಸರಿಗೆ ಒಂದು ಚಿಕ್ಕ ದೇವಸ್ಥಾನ ಮಾತ್ರ ಕಂಡು ಬರುತ್ತದೆ.
ಮಾರಯ್ಯ ಮತ್ತು ಲಕ್ಕಮ್ಮರ ಕಾಯಕ ನಿಷ್ಟೆಗೆ ಸಂಬಂಧಿಸಿದಂತೆ ನಡೆದ ಒಂದು ಘಟನೆ ಕಲ್ಯಾಣದ್ದಲ್ಲಿ ಬಸವಣ್ಣನವರ ಜೆತೆಗೆ ನಡೆದ್ದಿತು. ಮಾರಯ್ಯನವರು ಕಲ್ಯಾಣದ ಬೀದಿಯಲ್ಲಿ ಅಕ್ಕಿಯನ್ನು ಆರಿಸುವ ಕಾಯಕವನ್ನು ಹೊಂದಿದ್ದರು. ಇವರ ಶ್ರಮವನ್ನು ನೋಡಲಾಗದ ಬಸವಣ್ಣನವರ ಮನ ಹುಡುಗಿ ಮಾರಯ್ಯನವರು ಅಕ್ಕಿ ಆರಿಸುವ ಬೀದಿಯಲ್ಲಿ ಹೆಚ್ಚಿನ ಅಕ್ಕಿ ಯನ್ನು ಚೆಲ್ಲಿಸಿದರು. ಬಸವಣ್ಣನವರ ಈ ಕಾರ್ಯವನ್ನು ತಿಳಿಯದ ಮಾರಯ್ಯನವರು ದಿನಾಲು ತರುವಂತೆ ಬೊಗಸೆ ಅಕ್ಕಿಯನ್ನು ತರದೆ ಸುರಿದ ಅಕ್ಕಿಯನ್ನು ಹೆಚ್ಚಿನ ಅಕ್ಕಿಯನ್ನು ಕಟ್ಟಿ ಕೊಂಡು ಬಂದರಂತೆ. ಕಾಯಕ ವಿರುದ್ದವಾದ ಆಸೆಗೆ ಮೂಲವಾದ ಪತಿ ಮಾರಯ್ಯನ ವರ್ತನೆಯನ್ನು ಲಕ್ಕಮ್ಮ ಖಂಡಿಸಿ ತಂದ ಅಕ್ಕಿಯನ್ನು ಅಲ್ಲಿಯೇ ಸುರಿದು ಬರುವಂತೆ ಹೆಳುತ್ತಾಳೆ.
 
== ವಚನಗಳು ==
<poem>
ಆಸೆಯೆಂಬುದು ಅರಸೆಂಗಲ್ಲದೆ
ಶಿವಭಕ್ತ್ತರಿಗುಂಟೆ ಅಯ್ಯ
ರೊಷವೆಂಬುದು ಯಮಧೂತರಿಗಲ್ಲದೆ
ಅಚಾತರಿಗುಂಟೆ ಅಯ್ಯ
ಈ ಸಕ್ಕಿಯಾಸೆ ನಿಮಗೇಕೆ ? ಈಶ್ವರನೊಪ್ಪ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕೆ ದೂರ ಮಾರಯ್ಯ
</poem>
ಈ ಮೇಲಿನ ವಚನದಲ್ಲಿ ಗಂಡನಿಗೂ ಒಂದು ಹೆಜ್ಜೆ ಮುಂದೆ ಹೋಗಿ ಲಕ್ಕಮ್ಮ ತೋರುವ ಕಾಯಕ, ನಿಷ್ಟೆ, ಕಾಯಕದಲ್ಲಿ ನಿರಪೇಕ್ಷೆ ಉನ್ನತವಾದುದು. ಇದನ್ನು ಇನ್ನೊಂದು ರೀತಿಯಲ್ಲಿ ಪ್ರಸ್ತಾಪಿಸಬಹುದು. ಮಹಾಮನೆಯ ಉಗ್ರಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯ ಮೂಟೆಗಳನ್ನು ಸಾಗಿಸುವಾಗ ಸೋರಿ ತಿಪ್ಪೆಯಲ್ಲಿ ರಸ್ತೆಯಲ್ಲಿ ಕಸಕಡ್ಡಿಯ ಜೊತೆ ಅಕ್ಕಿ ಸೋರಿರಬೇಕು. ಅದನ್ನು ಆರಿಸಿ ಬೇರ್ಪಡಿಸುವ ವೃತ್ತಿಯನ್ನು ಹೊಂದಿರಬೇಕು. ಮಾರಯ್ಯನು ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆರಿಸುತ್ತಿದ್ದನೆಂದರೆ ಅದು ಕಾಯಕ ಆಗುವುದ್ದಿಲ್ಲ. ಅಕ್ಕಿ ಅಲ್ಲಿ ಬಿದ್ದಿರುತ್ತಿತ್ತು ಎಂದರೆ ಅದು ಪ್ರಸಾದ ಸಂಸ್ಕ್ರತಿಯಾಗುವುದಿಲ್ಲ ಎಂಬ ಅವರ ಮಾತು ವಿಚಾರ ಯೋಗ್ಯವೆನಿಸುತ್ತದೆ. ಮಾರಯ್ಯನು ಬಸವಣ್ಣನ ಮಹಾಮನೆಯಲ್ಲಿ ಬಹುಶಃ ಉಗ್ರಾಣದಲ್ಲಿ ಯಾವು ದೋ ಕಾಯಕದಲ್ಲಿರಬೇಕು. ಅದಕ್ಕೆ ಅವನಿಗೆ ಸಿಗುತ್ತಿದ್ದ ಆಯ ಎಂದರೆ ಸಂಪಾದನೆಯು ಬೊಗಸೆ ಅಕ್ಕಿ ಆಗಿರಬೇಕು. ಆ ದಿನ ಮಾರಯ್ಯ ಹೆಚ್ಚಿನ ಅಕ್ಕಿಯನ್ನು ತಂದಿರುವುದನ್ನು ಲಕ್ಕಮ್ಮ ಪ್ರಶ್ನಿಸಿರಬೇಕು. ಒಟ್ಟಿನಲ್ಲಿ ಪ್ರಸಾದದ ದೃಷ್ಟಿಯಿಂದ ನೋಡಿದಾಗ ಅಕ್ಕಿಯು ತಿಪ್ಪೆಯಲ್ಲಿ ದಾರಿಯಲ್ಲಿ ಬೀಳಲು ಸಾಧ್ಯವಿಲ್ಲ. ಶರಣರು ಊಟದ ನಂತರ ಕೈ ತೊಳೆದು ನೀರನ್ನು ಕುಡಿಯು ವರು ಹಾಗಿದ್ದಾಗ ಮಹಾಮನೆಯ ಮುಂದೆ ಅಕ್ಕಿ ಚಲ್ಲುವುದೇ ಅಥವಾ ತಿಪ್ಪೆಯ ಮೇಲೆ ಬಿದ್ದಿರುವ ಅಕ್ಕಿಯನ್ನು ಆರಿಸುವುದು ಕಾಯಕವೇ? ಕಾಯಕಕ್ಕೆ ಹೆಚ್ಚು ಒತ್ತುಕೊಟ್ಟಿರುವರು ಆಯ್ದ್ದಕ್ಕಿ ದಂಪತಿಗಳು ಲಕ್ಕಮ್ಮ ನಂತಹ ಸಾಮಾನ್ಯ ಸಮಾಜಕ್ಕೆ ಅತ್ಯಂತ ಮಾರ್ಗದರ್ಶನ ನೀಡುತ್ತದೆ. ಸತ್ಯಶುದ್ದ ಕಾಯಕಕ್ಕೆ ನೀಡಿರುವ ಮಹತ್ವವಿದೆ.
<poem>
ಒಮ್ಮ ನವಮೀರಿ ಇಮ್ಮನದಲ್ಲಿ ತಂದಿರಿ
ಇದು ನಿಮ್ಮ ಮನವೋ ಬಸವಣ್ಣನ
ಅನುಮಾನದ ಚಿತ್ತವೋ
ಈ ಮಾತು ಮಾರಯ್ಯ ಪ್ರಿಯ ಅಮರೇಶ್ವರ
ಲಿಂಗಕ್ಕೆ ಸಲ್ಲುವ ಬೋನ
ಅಲ್ಲಿಯೇ ಸುರಿದು ಬನ್ನಿ ಮಾರಯ್ಯ
</poem>
ಒಮ್ಮೆ ಪತಿ ಮಾರಯ್ಯ ಕಾಯಕವನ್ನು ಮರೆತು ಅನುಭಾವಗೋಷ್ಟಿಯಲ್ಲಿ ಮೈಮರೆತು ಕುಳಿತಿರುವುದನ್ನು ಕಂಡ ಆಯ್ದಕ್ಕಿ ಲಕ್ಕಮ್ಮ ಕಾಯಕ ನಿಂತಿತು ಹೋಗಯ್ಯ ಎಂದು ಹೇಳಿ ಸಮಯ ಪ್ರಜ್ಞೆಯನ್ನು ಅರಿವು ಮಾಡಿಸುವಳು. ಆಸೆ ರೋಷಗಳನ್ನು ತೊರೆಯುವುದು, ಜೊತೆಗೆ ಅದ್ವ್ಯೈತ ತತ್ವವನ್ನು ಪ್ರತಿಪಾದಿಸುವುದು ಆಕೆಯ ಸರಳ ವಿಚಾರ ಶರಣರ ಬದುಕಿಗೆ ಸಹಜವಾಗಿದೆ. ಈ ವಿಚಾರವನ್ನು ಒಬ್ಬ ಮಹಿಳೆ ಪ್ರತಿಪಾದಿಸುತ್ತಿದ್ದಾಳೆ ಎಂಬ ಮಾತು ಬಹಳ ಮಹತ್ವವಾದದ್ದು. ಆಯ್ದಕ್ಕಿ ಲಕ್ಕಮ್ಮನಿಗೆ ದಾಂಪತ್ಯ ಬದುಕಿನ ಆಸೆ ಆಮಿಷಗಳು ಇಲ್ಲ ಇದ್ದುದ ರಲ್ಲಿಯೇ ಶಿವನು ಕೊಟ್ಟಿದ್ದರಲ್ಲಿಯೇ ತೃಪ್ತಿ ಪಡುವಂತಹ ಸರಳತೆಯಿದೆ ಎಂಬ ಸತ್ಯ ಸಂಗತಿ ಇದರಿಂದ ತಿಳಿಯುತ್ತದೆ. ಈ ಕಾಲದಲ್ಲಿ ಶ್ರೀಮಂತಿಕೆ ಬಡತನಗಳ ಏರಿಳಿತಗಳು ಜೀವನದಲ್ಲಿ ಸಾಮಾನ್ಯ ಎಂದರೆ ಬಡತನದಲ್ಲಿಯೇ ಶ್ರೀಮಂತಿಕೆಯನ್ನು ಕಾಣುತ್ತಾಳೆ ಲಕ್ಕಮ್ಮ.
<poem>
ಲಿಂಗಕ್ಕೆ ಬಡತನವಲ್ಲದೆ ಅಂಗಕ್ಕೆ ಬಡತನವುಂಟೆ
ಬೆಟ್ಟ್ಟ್ಟ ಬಲ್ಲತ್ತೆಂದಡೆ ಉಳಿಯ ಮೊನೆಯಲ್ಲಿ
ಬಡತನವಿದ್ದಡೆ ಒಡೆಯದೆ
ಘನ ಶಿವಭಕ್ತರಿಗೆ ಬಡತನವಿಲ್ಲ ಸತ್ಯ್ಯರಿಗೆ ದುಷ್ಕರ್ಮವಿಲ್ಲ
ಆರ ಹಂಗಿಲ್ಲ ಮಾರಯ್ಯ ಎಂದು-
</poem>
ತಾವೂ ಉಂಡು, ಮೊದಲು ದಾಸೋಹವನ್ನು ಮಾಡುವ ಲಕ್ಕಮ್ಮನ ಶ್ರೀಮಂತಿಕೆಯನ್ನು ತೋರಿಸುತ್ತದೆ. ಮುಂದೆ ಆಸೆಯಿಂದ ಕಾಯಕಕ್ಕಿಳಿದ ಗಂಡನನ್ನು ಈ ಸರಿಯಾದ ದಾರಿಗೆ ಎಳೆತಂದ ಆಕೆಯ ಎದೆಗಾರಿಕೆ ಹಾಗೂ ಶಿವಲೋಕದ ಸ್ವರ್ಗದ ಭ್ರಮೆಯನ್ನು ಹೊಂದಿದ್ದ ಪತಿಗೆ ಮಾಡುವ ಕಾಯಕದಲ್ಲೇ ಕೈಲಾಸ, ಸ್ವರ್ಗವಿದೆ ಎಂದು ತೋರಿಸಿದಳು. ಅದೇ ಅಮರೇಶ್ವರ ಲಿಂಗದ ನಿವಾಸವೆಂದು ಹೇಳುತ್ತಾಳೆ. ತಾನು ಇದನ್ನು ಮಾಡಿದ, ಪರರಿಗೆ ನೀಡಿದೆನೆಂಬ ಭ್ರಾಂತಿಗೆ ಭ್ರಮೆಗೆ ಒಳಗಾಗಿ ಇದ್ದಿಹೆನೆಂಬ ಕಾಯಕದ ಅರುಕೆ ಹಿಂಗಿತ್ತೆ,ನಾ ಮಾಡಿದೆನೆಂಬ ತವಕ, ಆತಂಕ ಹಿಂಗಿತ್ತೆ ಉಭಯದ ಕೈಕೂಲಿ ಹಿಂಗಿ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ಆಲಸಿಕೆಯಾಯಿತು ಎಂದು ತಿಳಿಸುತ್ತಾ ವೈಚಾರಿಕತೆ, ಅಂತರಂಗದ ಪರಿಶೀಲನೆ ಆರ್ಥಿಕ ಸಮಾನತೆ ಹಾಗೂ ಸ್ವತಂತ್ರ ಮನೋಭಾವಗಳನ್ನು ಲಕ್ಕಮ್ಮನ ವಚನಗಳಲ್ಲಿ ಗುರುತಿಸಬಹುದು.
ಒಮ್ಮೆ ಬಸವಣ್ಣನವರ ಮಹಾಮನೆಯ ಅನುಭವ ಗೋಷ್ಠಿಯಲ್ಲಿ ಶರಣರು ಓಲಾಡುತ್ತಿರುವ ಸಂದರ್ಭದಲ್ಲಿ ಲಕ್ಕಮ್ಮ ತನ್ನ ಪತಿಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮಾರ್ಯರಿಗೆ ಅಮರೇಶ್ವರ ಲಿಂಗದ ಮನೆಗೆ ಬರುವಂತೆ ಭಿನ್ನಹ ಮಾಡುವಳು.
<poem>
ಬಸವಣ್ಣ ಚನ್ನಬಸವಣ್ಣ ಪ್ರಭುದೇವ ನಿತ್ಯನೇಮ,
ನಿತ್ಯಕೃತ್ಯ ಸಕಲ ಸಮೂಹ ನಿತ್ಯ ನೇಮದ
ಜಂಗಮ ಭಕ್ತರು
ಗಣಂಗಳು ಮುಂತಾದ ಸಮೂಹ ಸಂಪದಕ್ಕೆ
ನೇವೇದ್ಯಕ್ಕೆ ವೇಳೆ ಎಂದು ಹೇಳಿ ಬಾ-
</poem>
ಎಂದು ಗಂಡನಿಗೆ ಹೇಳಲು, ಮಾರಯ್ಯನು ಶಿವ ಶಿವ ನಾನೆತ್ತ ನಿತ್ಯನೇಮ ವೃತ ಶೀಲ ಸಂಪನ್ನಗಳಿಗೆ ಅವರವರ ನೇಮಗಳ ಸಲಹುವರೆಮಗಳಿವೆ? ನಾವು ನಿರ್ಧನಿಕರು ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು ಮುಂತಾದ ಅಸಂಖ್ಯಾತ ಮಹಾಗಣಂಗಳಿಗೆ ತೃಪ್ತಿ ಪಡಿಸಲು ನಮಗೆ ಶಕ್ಯವೇ? ಎಂದು ಭಯಗೊಂಡಾಗ, ಲಕ್ಕಮ್ಮ ಶಿವಭಕ್ತರಿಗೆ ಶಿವ ಕರುಣೆ ಇರುವುದರಿಂದ ಶುದ್ಧ ಮನಸ್ಸಿನಿಂದ ಕಾಯಕ ಮಾಡುವಾಗ ಲಕ್ಷ್ಮೀಯು ತಾನಾಗಿ ಬರುವಳು.
<poem>
ಆವಾರಿಯೆಂದು ಮಾಡುವಲ್ಲಿ ಆವರಿವರೆಂದು
ಪ್ರಮಾಣಿಸಲುಂಟೆ ?
ಸಮಯಕ್ಕೆ ಹೋಗಿ ಸಮಯವನರಿರೆಂದು ಭವಗೆಡಲುಂಟೆ?
ಭವಜ್ನನಾದಡೆ ಭಾವನರುದಲ್ಲಿ ಶುಚಿಯಾಗಿರಬಲ್ಲದೆ .
</poem>
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವನ್ನು ಹೊಂದುವ ಭಾವ ಎಂದು ಅರಿವು ಮೂಡಿಸಲು ಮಾರಯ್ಯನು ಬಸವಾದಿ ಶ್ರೀಮದಲ್ಲಮಪ್ರಭು ಮುಂತಾದ ಅಸಂಖ್ಯಾತ ಶರಣರನ್ನೊಳ ಗೊಂಡು ಸತ್ಯವೆಂಬ ಪಟ್ಟಿಯಲ್ಲಿ ಶುದ್ಧ ಚಿತ್ತವೆನ್ನುವ ವಿಭೂತಿಯನ್ನು ಬೈಚಿಟ್ಟ ಸಕಲ ಸಂಪದ ಪ್ರಮಥರು ಅಮರೇಶ್ವರ ಲಿಂಗದ ಆಶ್ರಯದಲ್ಲಿ ಪ್ರಸಾದವನ್ನು ತೆಗೆದು ಕೊಳ್ಳುವಂತೆ ಭಿನ್ನ ವಿಸಿಕೊಂಡಾಗ ಬಸವಣ್ಣನವರು -
<poem>
ಅಲ್ಲಾ ಎನಲುಬಾರದು ಅಹುದೆನಲುಬಾರದು
ಕೂಡಲ ಸಂಗನ ಶರಣರ ಸಂಗಕರಗಸದ
ಭಾಯ ಧಾರೆಯಂತೆ ಅರಿಬಿರಿದಯ್ಯ -
</poem>
ಎಂದು ಅಸಂಖ್ಯಾತ ಶರಣರೊಡನೆ ಆಯ್ದಕ್ಕಿ ದಂಪತಿಗಳ ಮನೆಯನ್ನು ಪ್ರವೇಶಿಸಲು...
<poem> ಆಕಾಶವ ಮೀರುವ ತರುಗಿರಿಗಳುಂಟೇ?
ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ ಅದೆಮಾಟ
ಕೂಡಲ ಸಂಗಮ ದೇವರ ಕೂಡುವಕೂಟ-
</poem>
ಎಂದು ಹಾರೈಸುತ್ತ ಪಾದಾರ್ಚನೆ ಮಾಡಿದ ಶಿವಶರಣರಿಗೆಲ್ಲಾ ಲಕ್ಕಮ್ಮನು ಷೋಡಶೋಪಚಾರವನ್ನು ಮಾಡಿ ಶರಣರ ಮನದ ನೇಮಗಳಂತೆ ಷಡ್ರುಚಿಯನ್ನು ಮಾಡಲು ಎಲ್ಲಾ ಗಣಂಗಳು ತೃಪ್ತಿ ಪಡಲು ಪ್ರಭುದೇವರು ಆಶ್ಚರ್ಯದಿಂದ....
<poem>
ಆಕಾರನೇಮಕ್ಕೆ ಸಂದಿತ್ತು ಇಚ್ಛಾ ಭೋಜನಕ್ಕೆ
ಕೃತ್ಯವಾಯಿತು
ಮನ ಘನದೊಡನ ಕಂಡೆಯಾ ಸಂಗನ ಬಸವಣ್ಣಾ -
</poem>
ಎಂದು ಹೇಳಲು ಬಸವಣ್ಣನು ಲಕ್ಕಮ್ಮ ಮತ್ತು ಮಾರಯ್ಯನವರ ಹೃದಯ ಸಂಪತ್ತನ್ನು ಕಂಡು ನಮ್ಮ ಶರಣರು ಬಡವರಲ್ಲ .
<poem>
ಮನೆ ನೋಡಾ ಬಡವರು ಮನ ನೋಡಾ ಸಂಪನ್ನರು
ಧನ ನೋಡಾ ಬಡವರು ಘನಮನ ಸಂಪನ್ನರು
ಕೂಡಲ ಸಂಗನ ಶರಣರು ಕರುಳಿಲ್ಲದ ಕಲಿಗಳು
ಆರಿಗೆ ಉಪಮನಬಹುದು
</poem>
ಉಪಮಾತೀತರಾದ ಈ ಶರಣದಂಪತಿಗಳು ಬಡತನದಲ್ಲಿ ಶ್ರೀಮಂತಿಕೆಯನ್ನು ಕಂಡವರು ಎನ್ನುತ್ತ ಅಲ್ಲಮ ಪ್ರಭುದೇವರು ತೃಪ್ತಿಯಿಂದ...
<poem>
ಉಭಯ ದೃಷ್ಟಿ ಹೀನನ ದೃಷ್ಟಿಯಲ್ಲಿ ಕಾಂಬಂತೆ
ದಂಪತಿ ಏಕಭಾವವಾಗಿ ನಿಂದಲ್ಲಿ
ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು ಸಂಗನೆ ಬಸವಣ್ಣ -
</poem>
ಎಂದು ಬೀಳ್ಕೊಡುವನು.
<poem>
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ
ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ ಭಕ್ತಿ-
</poem>
ಇಲ್ಲಿ ಲಕ್ಕಮ್ಮನವರು ತೋರುಗಾಣಿಕೆಯ ಭಕ್ತಿಯು ಫಲವಿಲ್ಲದೆ ಹೋಗುವ ಬಗ್ಗೆ ತಿಳಿಸುವಳು. ತೋರುಗಾಣಿಕೆಯಿಂದ ಮಾಡುವ ಭಕ್ತಿಯೂ ಸಂಪತ್ತಿನ ಕೇಡು, ಮಾತನಾಡು ವುದೊಂದು ಹಾಗೂ ನಡೆದುಕೊಳ್ಳುವುದೊಂದು ರೀತಿ, ಬುದ್ಧಿಗೆ ಹಾನಿ ಎಂದರೆ ಯಾರು ಈ ರೀತಿಯಲ್ಲಿ ನಡೆದುಕೊಳ್ಳುವನೋ ಅವನು ಶಿವನ್ನನು ಅರ್ಥ ಮಾಡಿಕೊಳ್ಳಲಾರನು .
ಯಾವುದನ್ನೇ ಕೊಡದೆ ತ್ಯಾಗಿ ಎಂದು ಕರೆಸಿಕೊಳ್ಳುವವನನ್ನು ಲಕ್ಕಮ್ಮಳು ಮುಡಿಯಿಲ್ಲದ ಶೃಂಗಾರದ ಹಾಗೆ ಎಂದು ಹೋಲಿಸಿ ಹೇಳಿದ್ದಾಳೆ. ಚಂಚಲ ಮನಸ್ಸಿನ ಭಕ್ತಿಯನ್ನು - ಕೆಳಭಾಗದಲ್ಲಿ ತೂತು ಆದ ಮಡಿಕೆಯಲ್ಲಿ ಒಳ್ಳೆಯ ನೀರು ಅಥವಾ ತೀರ್ಥವು ಹೇಗೆ ಸೋರಿಹೋಗುವುದೋ, ಅದೇ ತರದಲ್ಲಿ ಮನಸ್ಸು ಎಂದು ಹೇಳುವಳು. ಇಂಥ ಭಕ್ತಿಯೂ ಶಿವನನ್ನು ಮುಟ್ಟಲಾರದು ಎಂದು ತಿಳಿಸುವಳು.
<poem>
ಮನ ಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ದದಲ್ಲಿ ಕಾಯಕವ ಮಾಡುವಲ್ಲಿ
ಸದ್ಬಕ್ತಂಗೆ ಎತ್ತ ನೋಡಿದಡತ್ತ ಲಕ್ಶ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕ.ರ
</poem>
ಪರಿಶುದ್ಧಮನಸ್ಸಿನಿಂದ ಸಂಪತ್ತಿನ ಬಡತನವಲ್ಲದೆ, ಶುದ್ಧಮನಸ್ಸಿನಿಂದ ಕೆಲಸವನ್ನು ಮಾಡುತ್ತಾ, ಎಲ್ಲಿ ನೋಡಿದರಲ್ಲಿ ಲಕ್ಶ್ಮಿಯೂ ತಾನಾಗೆ ಒಳ್ಳೆಯ ಭಕ್ತನಿಗೆ ಒಲಿಯುವಳು ಎಂದು ಲಕ್ಕಮ್ಮ ಹೇಳುತ್ತಾಳೆ.
 
=='''ಹಿನ್ನುಡಿ'''==
ಆಯ್ದಕ್ಕಿ ಲಕ್ಕಮ್ಮ ಮಾರ್ಗದರ್ಶಿಯಾದರು. ಇವರ ವಚನಗಳಲ್ಲಿ ಶಿವಶರಣರು ರೂಪಿಸಿದ ಕಾಯಕ ಮತ್ತು ದಾಸೋಹ ತತ್ವಗಳನ್ನು ತನ್ನ ಬದುಕಿನ ಮೌಲ್ಯವನ್ನಾಗಿ ಸ್ವೀಕರಿಸಿದ್ದನ್ನು ಕಾಣುತ್ತೇವೆ. ಸಮತಾಭಾವ, ಆತ್ಮವಿಶ್ವಾಸ, ನಿರಾಪೇಷ, ನಿಷ್ಕಾಮ ಭಕ್ತಿಯು ಪ್ರಧಾನವಾಗಿ ಕಂಡು ಬರುತ್ತದೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ನಿರೂಪಿಸಿದ ಶರಣ ದಂಪತಿಗಳು ಬದುಕಿನಲ್ಲಿ ಯಶಸ್ವಿಯನ್ನು ಪಡೆದು ಕೊನೆಗೆ ಕರ್ಪೂರದ ಉರಿಯಲ್ಲಿ ಬೆರೆತರು.
ಮಾರಯ್ಯನ ಕಾಯಕ ನಿಷ್ಠೆಯನ್ನು ಬದಲಿಸಿದ ಸತಿ ಶಿರೋಮಣಿ ಲಕ್ಕಮ್ಮನೆಂಬುದು ನಮಗಿಲ್ಲಿ ವೇದ್ಯವಾಗುತ್ತದೆ ಎಂಥಹ ಕಾಯಕ ನಿಷ್ಠೆ, ಅದೆಂಥಹ ಪತಿಭಕ್ತಿ ಕಾಯಕಕ್ಕೇನಾದರು ಹೋಲಿಕೆ ಕೊಡಬಯಸಿದರೆ ಅಗ್ರಸ್ಥಾನದಲ್ಲಿ ಕಂಗೊಳಿಪ ಲಕ್ಕಮ್ಮನನ್ನು ಮೊದಲಿಗೆ ಸೂಚಿಸ ಬಯಸುತ್ತಾರೆ. ಪತಿ ಮಾರಯ್ಯನಿಗೆ ನಿಜ ಕೈಲಾಸ ಮಾರ್ಗ ತೋರಿದ ಸತಿ ಶಿರೋಮಣಿ ಯೇ ಲಕ್ಕಮ್ಮ.
 
==ಉಲ್ಲೇಖ==
೧. ಅಪೂರ್ವ ಮಹಿಳಾ ರತ್ನಗಳು - ಶ್ರೀಮತಿ ವಾಣಿಶ್ರೀ ಎಸ್.ಪಾಟೀಲ್, ಪ್ರಕಾಶಕರು: ಮೆIIಪಿ.ಸಿ. ಶಾಬಾದಿಮಠ ಬುಕ್ ಡಿಪೋ ಮತ್ತು ಪಬ್ಲಿಷರ್ಸ್ ಗದಗ.
 
[[ವರ್ಗ:ವಚನಸಾಹಿತ್ಯ]]
[[ವರ್ಗ:ಲಿಂಗಾಯತ]]
"https://kn.wikipedia.org/wiki/ಆಯ್ದಕ್ಕಿ_ಲಕ್ಕಮ್ಮ" ಇಂದ ಪಡೆಯಲ್ಪಟ್ಟಿದೆ