ಅಶ್ವತ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
ಅಶ್ವತ್ಥ ಅವರು ಹುಟ್ಟಿದ್ದು [[ಮೈಸೂರು|ಮೈಸೂರಿನಲ್ಲಿ]]. ತಂದೆ ಸೋಮಯ್ಯ ಮತ್ತು ತಾಯಿ ಲಕ್ಷ್ಮಮ್ಮ. ಎಂಜಿನಿಯರಿಂಗ್ ಪದವೀಧರರಾದ ಅಶ್ವತ್ಥ ಅವರು ಕೆಲಕಾಲ [[ಲೋಕೋಪಯೋಗಿ]] ಇಲಾಖೆಯಲ್ಲಿ ಗುತ್ತಿಗೆ ಕೆಲಸ ನಿರ್ವಹಿಸಿದರು. [[ಸಿಮ್ಲಾ|ಸಿಮ್ಲಾದಲ್ಲಿ]] ಮಿಲಿಟರಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. [[ಮಹಾತ್ಮ ಗಾಂಧಿ|ಗಾಂಧಿಯವರಿಂದ]] ಪ್ರಭಾವಿತರಾಗಿ ಸ್ವಾತಂತ್ಯ ಚಳುವಳಿಯಲ್ಲಿ ಪಾಲುಗೊಂಡು, ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ನಂತರ [[ಮದನ ಮೋಹನ ಮಾಳವೀಯ]] ಆವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ಬಂದ ಆಹ್ವಾನವನ್ನು ಸ್ವೀಕರಿಸಿದರು. ಎಂಟು ವರ್ಷ ಸೇವಾವಧಿ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡರು.
 
ಪ್ರಚಾರಗಳಿಗೆ ಮಣಿಯದ ಕಾದಂಬರಿಕಾರ, [[ಕೂದುವಳ್ಳಿ ಅಶ್ವತ್ಥನಾರಾಯಣ ರಾವ್]] ಅವರು, ೧೮೯ ಕಥೆಗಳನ್ನು ಬರೆದು ಪ್ರಕಟಿಸಿದ ಕಾದಂಬರಿಕಾರರು. ಆದರೆ ಸ್ವಲ್ಪವೂ ಪ್ರಚಾರದ ಬಗ್ಗೆ ಆಸಕ್ತಿಯಿಲ್ಲ. ತಮ್ಮ ಪಾಡಿಗೆ ತಾವು ಬದುಕುವ ಪ್ರವೃತ್ತಿ ಅವರದು. ಈಗ ಡಾ. ಹೆಚ್. ಎಸ್. ಸುಜಾತ ರವರು, ಅವರ ಸಮಗ್ರ ಕಥೆಗಳನ್ನು ೩ ಸಂಪುಟಗಳಲ್ಲಿ ಸಂಗ್ರಹಿಸಿದ್ದಾರೆ. ಡಾ. ಸುಜಾತರವರಿಗೆ ನೀಡಿದ ಪ್ರಪ್ರಥಮ ಮತ್ತು ಅಂತಿಮ ಸಂದರ್ಶನವಾಗಿತ್ತು. ೧೯೯೪ ರ ಏಪ್ರಿಲ್ ತಿಂಗಳ, ತುಷಾರ ಪತ್ರಿಕೆಯಲ್ಲಿ, ಅದು ಪ್ರಕಟವಾಯಿತು. ಇದೀಗ ಸುಜಾತಾ ರವರು, ಬರೆದು ಪ್ರಕಟಿಸಿದ, " [[ ಅಶ್ವತ್ಥರ ಬದುಕು-ಒಂದು ನೋಟ]] " ಪ್ರಕಟವಾಗಿದೆ.
==ಹುಟ್ಟೂರು, ಬಾಲ್ಯ ಹಾಗೂ, ಜೀವನ :==
[[ಕೂದುವಳ್ಳಿ]], ಚಿಕ್ಕಮಗಳೂರು ಜಿಲ್ಲೆಯ, ಪುಟ್ಟ ಗ್ರಾಮ. ಇದು ಅಶ್ವತ್ಥರ ಊರು. ಜನನ, ಚಾಮರಾಜ ನಗರದಲ್ಲಿ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ದೊಡ್ಡಮ್ಮನವರ ಆಶ್ರಯದಲ್ಲಿ, ತರೀಕೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. ೧೯೩೪ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ. ಇ. (ಸಿವಿಲ್) ಇಂಜಿನಿಯರಿಂಗ್ ಪದವಿಪಡೆದರು. ಮಾಸ್ತಿವೆಂಕಟೇಶ ಅಯ್ಯಂಗಾರರ, 'ಜೀವನ' ಮಾಸಪತ್ರಿಕೆಯಲ್ಲಿ ಅಶ್ವತ್ಥರ ಕತೆಗಳು ಪ್ರಕಟವಾದವು. (೧೯೩೫-೩೮ ರವರೆಗೆ ) ಕೆ. ವಿ ಆಚಾರ್ಯ ಅಂಡ್ ಕಂ. ಯಲ್ಲಿ ಕೆಲಸ. ೧೯೩೯-೧೯೪೨ ರವರೆಗೆ, ಚಿಕ್ಕಮಗಳೂರ್ ಲೋಕೋಪಯೋಗಿ ಇಲಾಖೆ, ಕಡೂರ್ ಶಾಖೆಯಲ್ಲಿ ಕೆಲಸಮಾಡಿದರು. ೧೯೪೨ ರಲ್ಲಿ ಗಾಂಧೀಜಿಯವರು, ಬ್ರಿಟಿಷರ ವಿರುದ್ಧ, ಬೊಂಬಾಯಿನಲ್ಲಿ " ಕ್ವಿಟ್ ಇಂಡಿಯ " ಚಳುವಳಿಯನ್ನು ಪ್ರಾರಂಭಿಸಿದರು. ಗಾಂಧಿವಾದಿಯಾಗಿದ್ದ, ಅಶ್ವತ್ಥರು, ಆಗ ತಮ್ಮ ಆ ಸರ್ಕಾರಿ ನೌಕರಿಗೆ ರಾಜೀನಾಮೆ ಸಲ್ಲಿಸಿದರು. ೧೯೪೨-೪೫ ರವರೆಗೆ ಬೊಂಬಾಯಿನ ಃಇನ್ದುಸ್ತನ್ ಚೊನ್ಸ್ತ್ರುಚ್ತಿಒನ್ ಚೊ; ಯಲ್ಲಿ ಉದ್ಯೋಗಮಾಡಿದರು. ೧೯೪೫ ರಲ್ಲಿ "ಬನಾರಸ್ ಹಿಂದೂ ವಿಶ್ವವಿದ್ಯಾಲಯ" ದಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ಕಥೆಬರೆಯುವುದರಲ್ಲಿ ಅತ್ಯಂತ ಆಸಕ್ತರಾದ ಅಶ್ವತ್ಥರು, ೧೯೬೩ ರಲ್ಲಿ, ಪ್ರಾಧ್ಯಾಪಕವೃತ್ತಿಗೆ ರಾಜೀನಾಮೆ ನೀಡಿ, ನಂಜನಗೂಡಿಗೆ ಬಂದು ವಾಸಮಾಡಿದರು. ೧೯೬೫ ರಿಂದ ಮೈಸೂರಿನಲ್ಲಿ ಸ್ವಂತಮನೆ ಕಟ್ಟಿಸಿದರು. ಗಾಂಧಿವಾದಿಯಾದ ಅಶ್ವತ್ಥರು, ಅಲ್ಲಿ ಶಿಸ್ತು, ಸಂಯಮದ ಸರಳಜೀವನವನ್ನು ನಡೆಸುತ್ತಿದ್ದರು. ೧೬, ಜನವರಿ, ೧೯೯೪ ರಲ್ಲಿ ನಿಧನರಾದರು. ಅಶ್ವತ್ಥ-ಲಲಿತ ದಂಪತಿಗಳಿಗೆ ನರಸಿಂಹಮೂರ್ತಿ ಎಂಬ ಮಗನಿದ್ದಾರೆ. ಅವರು, ಭೂವಿಜ್ಞಾನಿಯಾಗಿ ಈಗ ನಾಗ್ ಪುರ್ ನಲ್ಲಿದ್ದಾರೆ. ಅವರಿಗೆ ಒಬ್ಬ ಮಗ, ಡಾ. ಮನೋಜ್.
ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿದೊರೆತರೂ ಅದನ್ನು ಸ್ವೀಕರಿಸಲಿಲ್ಲ. 'ಅಜ್ಞಾತನ ನಂಜುಂಡಾಯಣ,' ಕಾದಂಬರಿ ಅವರ ಅತ್ಮಕಥೆಯ ಎಳೆಗಳಿವೆ. ಅವರದಾಂಪತ್ಯಜೀವನಕ್ಕೆ ಸಂಬಂಧಿಸಿದ, [[ತಪ್ಪೊಪ್ಪಿಗೆಯ ಹೇಳಿಕೆ]] ಗಳಿವೆ. ಅಶ್ವತ್ಥರಿಗೆ ಮೂಢನಂಬಿಗಳಲ್ಲಿ ವಿಶ್ವಾಸವಿಲ್ಲ.
ಅವರ ಬದುಕು ಗವಿಯಲ್ಲಿದ್ದಂತೆ, ಯಾರಕಣ್ಣಿಗೂ, ಬೀಳದೆ ತಮ್ಮಪಾಡಿಗೆ ಇದ್ದುಕೊಂಡು, ತಮ್ಮ ಕಥಾಸಂಕಲನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೀಗೆ ನಿಘೂಢತೆಯಿಂದ ತಮ್ಮ ಜೀವನ ನಿರ್ವಹಣೆಯನ್ನು ಮಾಡಿದ ಅಶ್ವತ್ತರ ಜೀವನದ ಒಳಪುಟಗಳನ್ನು ಸುಜಾತಾರವರು ಅನಾವರಣಗೊಳಿಸಿದ್ದಾರೆ. ಇನ್ನೂ ಅವರ ಕಥೆಗಳ ಸ್ಥೂಲಪರಿಚಯ ಮಾಡಿಲ್ಲ.
==ಲಲಿತಾ-ಅಶ್ವತ್ಥರವರ ಟ್ರಸ್ಟ್ :==
ಮರಣಾನಂತರದ ಉಯಿಲಿನ ಪ್ರಕಾರ, ಲಲಿತಾ ಅಶ್ವತ್ಥ ಟ್ರಸ್ಟ್ ಫಂಡ್ ಸ್ಥಾಪನೆಯಾಗಿದೆ. ಅದರ ಬಡ್ಡಿಯ ಹಣ, ಕನ್ನಡ ಸಾಹಿತ್ಯಪರಿಷತ್ ಹಾಗೂ ಮೈಸೂರಿನ "[[ರಾಮಕೃಷ್ಣಾಶ್ರಮ ವಸತಿ ಶಾಲೆ]]" ಗೆ ಸಂದಾಯವಾಗುತ್ತಿದೆ.
 
 
 
 
 
 
-ಮುರುಳೀಧರ ಉಪಾಧ್ಯ ಹಿರಿಯಡಕ.
 
 
[[ವರ್ಗ : ಚುಟುಕು]]
 
==ಕೃತಿಗಳು==
"https://kn.wikipedia.org/wiki/ಅಶ್ವತ್ಥ" ಇಂದ ಪಡೆಯಲ್ಪಟ್ಟಿದೆ