"ಅಂಗುತ್ತರ ನಿಕಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿಕೀಕರಣ
ಚು (VASANTH S.N. ಅಂಗುತ್ತರನಿಕಾಯ ಪುಟವನ್ನು ಅಂಗುತ್ತರ ನಿಕಾಯ ಕ್ಕೆ ಸರಿಸಿದ್ದಾರೆ: ಕಾಗುಣಿತ ಸರಿಪಡಿಸುವಿಕೆ)
(ವಿಕೀಕರಣ)
==ಅಂಗುತ್ತರನಿಕಾಯ==
[[ಬೌದ್ಧ ಧರ್ಮ|ಬೌದ್ಧರ]] ಪಾಳಿ ತ್ರಿಪಿಟಕಗಳಲ್ಲಿ ಎರಡನೆಯದಾದ ಸುತ್ತಪಿಟಕದಲ್ಲಿ ಸೇರಿರುವ ಐದು ನಿಕಾಯಗಳಲ್ಲಿ ನಾಲ್ಕನೆಯದು. ಅಂಗುತ್ತರವೆಂದರೆ ಇನ್ನೊಂದು ಅಂಗವೆಂದರ್ಥ[[ಅಂಗ]]ವೆಂದರ್ಥ. ಈ ನಿಕಾಯದಲ್ಲಿರುವ 2,308 ಸುತ್ತಗಳನ್ನು ಹನ್ನೊಂದು ನಿಪಾತಗಳಲ್ಲಿ ಅಡಕ ಮಾಡಿದ್ದಾರೆ. ಒಂದೇ ಒಂದಿರುವ ವಸ್ತುಗಳನ್ನು ಕುರಿತು ಮೊದಲನೆಯ ನಿಪಾತದಲ್ಲಿ, ಎರಡಿರುವ ವಸ್ತುಗಳನ್ನು ಕುರಿತು ಎರಡನೆಯ ನಿಪಾತದಲ್ಲಿ, ಹತ್ತಿರುವ ವಸ್ತುಗಳನ್ನು ಕುರಿತು ಹತ್ತನೆಯ ನಿಪಾತದಲ್ಲಿ- ಹೀಗೆ ಬೌದ್ಧ ಸಂಪ್ರದಾಯದ ವಿವರಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಒಂದೊಂದು ನಿಪಾತದಲ್ಲೂ ಹಿಂದಿನ ನಿಪಾತದಲ್ಲಿ ಹೇಳಿದುದಕ್ಕಿಂತ ಒಂದು ಹೆಚ್ಚಾಗಿ ಹೇಳುವುದರಿಂದ ಇದಕ್ಕೆ ಅಂಗುತ್ತರವೆನ್ನುತ್ತಾರೆ. [[ಸಂಸ್ಕೃತ]] ತ್ರಿಪಿಟಕದಲ್ಲಿ ಇದನ್ನು ಏಕೋತ್ತರಾಗಮ ಎಂದು ವ್ಯವಹರಿಸುತ್ತಾರೆ. ಒಂದೊಂದು ನಿಪಾತವನ್ನೂ ವಗ್ಗಗಳಲ್ಲಿ ಮತ್ತೆ ಅಡಕ ಮಾಡಿದ್ದಾರೆ. ತತ್ತ್ವಗಳನ್ನು ಸಂಖ್ಯಾನ ಮಾಡುವ ಪದ್ಧತಿ ಈ ನಿಕಾಯದಲ್ಲಿ ಆರಂಭವಾಗಿ ಅಭಿದಮ್ಮಪಿಟಕದಲ್ಲಿ ಬೆಳೆಯಿತು. ಸಂಗ್ರಹರೂಪವಾದ ನಿರೂಪಣೆ ಅಂಗುತ್ತರನಿಕಾಯದ ವೈಶಿಷ್ಟ್ಯ, [[ಗೌತಮಬುದ್ಧ]] ಲೋಕೋತ್ತರನಾದ, ದೇವಾಂಶಸಂಭೂತನಾದ ಗುರುವೆಂಬ ಭಾವನೆ ಬಲಿತಿದ್ದ ಕಾಲದಲ್ಲಿ ಈ ನಿಕಾಯದ ಸ್ವರೂಪ ನಿರ್ಧಾರವಾಯಿತು. ತ್ರಿಪಿಟಕದ ಹೆಚ್ಚಿನ ವಿವರಗಳಿಗೆ [[(ನೋಡಿ- ಪಾಳಿ ಸಾಹಿತ್ಯ ಅಭಿಧಮ್ಮ ಪಿಟಕ)]]
==ಬಾಹ್ಯ ಸಂಪರ್ಕಗಳು==
 
*[http://www.metta.lk/tipitaka/2Sutta-Pitaka/4Anguttara-Nikaya/index.html Anguttara Nikaya in Pali, English and Sinhala (metta.lk)]
*[http://www.accesstoinsight.org/tipitaka/an/index.html English Translations of the Anguttara Nikaya (accesstoinsight.org]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗುತ್ತರನಿಕಾಯ|ಅಂಗುತ್ತರನಿಕಾಯ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೧೭,೪೩೫

edits

"https://kn.wikipedia.org/wiki/ವಿಶೇಷ:MobileDiff/589325" ಇಂದ ಪಡೆಯಲ್ಪಟ್ಟಿದೆ