ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಅ.ನಾ.ಪ್ರಹ್ಲಾದ ರಾವ್‌'''ರವರು, ಕನ್ನಡದ[[ಕನ್ನಡ]]ದ [[ಪದಬಂಧ]] ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೪೦,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದುವರೆವಿಗೂ ಇವರು ರಚಿಸಿರುವ ಪದಬಂಧಗಳಿಗಾಗಿ ಹನ್ನೆರಡು ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪದಬಂಧ ರಚನೆಯಲ್ಲಿ ಭಾರತದಲ್ಲೇ ಇವರು ಅಗ್ರಗಣ್ಯರು ಎಂದು ಹೇಳಲಾಗಿದೆ.
 
==ಜೀವನ==
ಅ.ನಾ.ಪ್ರಹ್ಲಾದರಾವ್ [[ಕೋಲಾರ]] ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜುಲೈ ೨೪, ೧೯೫೩ರಂದು ಜನಿಸಿದರು. ತಂದೆ ಎ.ಆರ್.ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ., ಬೆಂಗಳೂರು, ಕೋಲಾರದಲ್ಲಿ ವ್ಯಾಸಂಗ ಮುಗಿಸಿ, ವಿಜ್ಞಾನ ಪದವೀಧರರಾದರು. ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತದಲ್ಲಿ[[ಸಮಾಜಶಾಸ್ತ್ರ]]ದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ೧೯೭೫ರಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.
 
==ವೃತ್ತಿಜೀವನ==
 
ಕೋಲಾರದಿದ ಪ್ರಕಟಗೊಳ್ಳುವ [[ಕೋಲಾರಪತ್ರಿಕೆ]] ದೈನಿಕದಲ್ಲಿ ಪತ್ರಕರ್ತರಾಗಿ (೧೯೭೫) ವೃತ್ತಿ ಆರಂಭಿಸಿದರು. ಕೋಲಾರದಿಂದ ಪ್ರಕಟಗೊಳ್ಳುತ್ತಿರುವ [[ಹೊನ್ನುಡಿ]] ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ (1979) ಮೂರು ವರ್ಷ ಕಾಲ ಆ ಪತ್ರಿಕೆಯನ್ನು ಮುನ್ನೆಡೆಸಿದರು. ಜಿಲ್ಲಾ ಮಟ್ಟದಲ್ಲಿ ಪ್ರಕಟಗೊಳ್ಳುವ ದೈನಿಕಗಳಲ್ಲಿ ಪ್ರತಿ ನಿತ್ಯ ಸಂಪಾದಕೀಯ ಲೇಖನ ಬರೆದ ಹೆಗ್ಗಳಿಕೆಗೆ `ಹೊನ್ನುಡಿ` ಪಾತ್ರವಾಯಿತು.
೧೯೮೩ರಲ್ಲಿ ವಾರ್ತಾ ಇಲಾಖೆ ಸೇರ್ಪಡೆಗೊಂಡು, ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಕಾರ್ಯನಿರ್ವಹಿಸಿದರು. ೧೯೮೮ರಿಂದ ೧೯೯೦ರವರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಹಾಯಕ ಸಂಪರ್ಕ ಅಧಿಕಾರಿಯಾಗಿ, ೧೯೯೦ರಲ್ಲಿ [[ಹಾಸನ]] ಜಿಲ್ಲಾ ವಾರ್ತಾ ಮತ್ತು ಪ್ರಚಾರ ಕಛೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ೧೯೯೨ರಿ0ದ ೧೯೯೬ರವರೆಗೆ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡಿ ಅನುಭವಹೊಂದಿದರು. ೧೯೯೬ರಿಂದ ೨೦೦೦ರವರೆವಿಗೂ ಮಂಡ್ಯ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ೨೦೦೦ರಿ0ದ ೨೦೦೩ರವರೆವಿಗೂ [[ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಪಾಲಿಕೆ]]ಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ೨೦೦೩ರಿಂದ ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಸುದ್ದಿ ಶಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ೨೦೦೪ರ ನವೆಂಬರ್ನಿಂದನವೆಂಬರ್‍ನಿಂದ ೨೦೧೧ರ ಆಗಸ್ಟ್ ತಿಂಗಳವರೆಗೆ ಸುಮಾರು ಏಳು ವರ್ಷಗಳ ಕಾಲ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
==ಸಾಧನೆ==
===ಪದಬಂಧ ಹಾಗೂ ಲೇಖನಗಳು===
 
೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗೊಳ್ಳುವ ನಿತ್ಯ ಪದಬಂಧಗಳಲ್ಲಿ ಬಹುಪಾಲು ಪ್ರಹ್ಲಾದ್ ಅವರದೆ. ದಿನ ಪತ್ರಿಕೆಗಳ ಪುರವಣಿಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಮಾನ್ಯ ಬಂಧಗಳೊಂದಿಗೆ, [[ಸಿನಿಮಾ]], [[ಸಾಹಿತ್ಯ]], ಅಪರಾಧ, [[ವಿಜ್ಞಾನ]], ಪುರಾಣ, ತಿಂಡಿ-ತಿನಿಸು, ಕ್ರೀಡೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪದಬಂಧಗಳನ್ನು ಇವರು ರಚಿಸಿದ್ದಾರೆ. ಇದುವರೆವಿಗೂ 8 ಸಾವಿರ ಸಿನಿಮಾ ಪದಬಂಧಗಳು ಸೇರಿದಂತೆ 40 ಸಾವಿರಕ್ಕೂ ಮಿಗಿಲು ಪದಬಂಧಗಳು ಇವರಿಂದ ರಚಿತಗೊಂಡಿವೆ. ಇದಕ್ಕಾಗಿ ಪ್ರಹ್ಲಾದ್ ಅವರು ಸುಮಾರು 12 ಲಕ್ಷ ಸುಳುಹುಗಳನ್ನು ಬರೆದಿದ್ದಾರೆ. ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, [[ಪ್ರಜಾವಾಣಿ]], [[ವಿಜಯ ಕರ್ನಾಟಕ]], [[ಕನ್ನಡ ಪ್ರಭ]], [[ಸಂಯುಕ್ತ ಕರ್ನಾಟಕ]], [[ಮಂಗಳ]], [[ಬಾಲಮಂಗಳ]], ಪ್ರಿಯಾಂಕ, ಚಿತ್ರ, [[ತರಂಗ]], ಈ ಸಂಜೆ, ಅರಗಿಣಿ, ಪ್ರಿಯಾಂಕ, ಚಿತ್ರ, ಕಂದಾಯವಾತೆ೯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರತಿನಿತ್ಯ `ವಿಜಯಕರ್ನಾಟಕ`, `ಕನ್ನಡಪ್ರಭ`, `ಸಂಯುಕ್ತಕರ್ನಾಟಕ` ಪತ್ರಿಕೆಗಳಲ್ಲಿ ಇವರು ನಿತ್ಯ ಪದಬಂಧ ರಚಿಸಿದ್ದಾರೆ. ಪ್ರತಿ ನಿತ್ಯ ಪದಬಂಧ ಪ್ರಕಟಿಸಲಾರಂಭಿಸಿದ ಹೆಗ್ಗಳಿಕೆ ವೈ.ಎನ್.ಕೆ ಸಾರಥ್ಯದ `ಕನ್ನಡಪ್ರಭ` ಪತ್ರಿಕೆಯದಾದರೆ, ಈ ಪತ್ರಿಕೆಗಾಗಿ ಮೊದಲು ಪದಬಂಧ ಬರಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್. `ಪ್ರಜಾವಾಣಿ` ಸಿನಿಮಾರಂಜನೆ ಪುರವಣಿಯಲ್ಲಿ ಸುಮಾರು 15 ವರ್ಷಗಳ ಕಾಲ ಪ್ರತಿ ಶುಕ್ರವಾರ ಇವರ ಸಿನಿಮಾ ಪದಬಂಧ ಪ್ರಕಟಗೊಂಡಿದೆ. `ಮಂಗಳ` ವಾರ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಪ್ರತಿವಾರ ಪದಬಂಧ ಹಾಗೂ ಪದಾನ್ವೇಷಣೆ ಕ್ವಿಜ್ ಪ್ರಕಟವಾಗುತ್ತಿವೆ. `ಬಾಲಮಂಗಳ` ಪಾಕ್ಷಿಕ ಪತ್ರಿಕೆಯಲ್ಲಿ ಕನ್ನಡ ಸುಳಿವುಗಳ ಮೂಲಕ ಇಂಗ್ಲಿಷ್ ಪದಗಳನ್ನು ತುಂಬಿಸುವ ವಿಶಿಷ್ಟ ಪದಬಂಧ ಹಾಗೂ ಸಾಮಾನ್ ಜ್ಞಾನ ಕ್ವಿಜ್ ಪ್ರಕಟಗೊಂಡಿದೆ. `ಪ್ರಿಯಾಂಕ` ಮಾಸ ಪತ್ರಿಕೆಗಾಗಿ ಸುಮಾರು 12 ವರ್ಷಗಳಿಂದ ಪದಬಂಧ ಸಿದ್ಧಪಡಿಸಿಕೊಡುತ್ತಿದ್ದಾರೆ. ರವಿ ಬೆಳಗೆರೆ ಸಂಪಾದಕತ್ವದಲ್ಲಿ ಪುನರಾರಂಭಗೊಂಡ `ಕರ್ಮವೀರ` ವಾರಪತ್ರಿಕೆಗಾಗಿ ಮೊದಲ ಸಂಚಿಕೆಯಿಂದ ಪದಸಂಪದ ಬರೆದುಕೊಟ್ಟ ಖ್ಯಾತಿಯೂ ಪ್ರಹ್ಲಾದ್ ಅವರದೆ. `ಕರ್ಮವೀರ` ಸಾಪ್ತಾಹಿಕಕ್ಕಾಗಿ ಚರ್ವಿತಚರ್ವಣ ಹಾಗೂ ಒಳಗುಟ್ಟು ಹೆಸರಿನ ವಿಶೇಷ ಫಜಲ್ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸುತ್ತಿರುವ `ಕಂದಾಯ ವಾರ್ತೆ` ಮಾಸ ಪತ್ರಿಕೆಗಾಗಿ ಕಂದಾಯ ಇಲಾಖೆಗೆ ಪ್ರಸ್ತುತವೆನಿಸುವ ಪದಬಂಧ ರಚಿಸುತ್ತಿದ್ದಾರೆ. ಚಲನಚಿತ್ರ ಮಾಸಿಕ `ಚಿತ್ರ` ಪತ್ರಿಕೆಗಾಗಿ ಪದಬಂಧ ಹಾಗೂ ಸಿನಿಮಾ ಕ್ವಿಜ್ ಬರೆದುಕೊಡುತ್ತಿದ್ದಾರೆ. `ಈಸಂಜೆ` ಪತ್ರಿಕೆಗಾಗಿ ಪ್ರತಿವಾರ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಏಕಮೇವ ಸಿನಿಮಾ ಸಾಪ್ತಾಹಿಕ `ಅರಗಿಣಿ` ಮೊದಲ ಸಂಚಿಕೆಯಿಂದ ಇವರ ಗಿಣಿಬಂಧ ಪ್ರಕಟಿಸುತ್ತಾ ಬಂದಿದೆ.
೧೯ ನೇ ಸಾಲು:
`ಸಿಲ್ಲಿಲಲ್ಲಿ` ಹಾಗೂ `ಪಾಪಪಾಂಡು` ಧಾರಾವಾಹಿಗಳನ್ನು ಆಧರಿಸಿದ ಪದಬಂಧ ಪ್ರತಿ ಭಾನುವಾರ `ವಿಜಯಕರ್ನಾಟಕ` ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. `ಜನವಾಹಿನಿ` ದಿನ ಪತ್ರಿಕೆ ಪ್ರತಿ ಭಾನುವಾರ ಇವರ ಪದವಾಹಿನಿ ಪ್ರಕಟಿಸಿದೆ. ಸಂಯುಕ್ತಕರ್ನಾಟಕ ಪ್ರತಿ ಭಾನುವಾರ ಇವರ ಪೋಣಿಸುಪದವ ಬಂಧವನ್ನು 15 ವರ್ಷಗಳ ಕಾಲ ಪ್ರಕಟಿಸಿದೆ. `ಮಂಗಳ` ವಾರಪತ್ರಿಕೆಗಾಗಿ ಒಂದು ವರ್ಷ ಕಾಲ ಕನ್ನಡದ ಖ್ಯಾತ ಬರಹಗಾರರ ಕಾದಂಬರಿಗಳನ್ನು ಆಧರಿಸಿ ಸಾಹಿತ್ಯ ಪದಬಂಧ ರಚಿಸಿದ್ದಾರೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಜನಪ್ರಿಯ ವಿಜ್ಞಾನ ಪತ್ರಿಕೆ `ವಿಜ್ಞಾನಸಂಗಾತಿ`ಗಾಗಿ ಮೂರು ವರ್ಷ ಕಾಲ ವಿಜ್ಞಾನ ಪದಬಂಧ ಹಾಗೂ ವಿಜ್ಞಾನಕ್ಕೆ ಸಬಂಧಿಸಿದಂತೆ ಕ್ವಿಜ್ ಸಿದ್ಧಪಡಿಸಿಕೊಟ್ಟಿದ್ದಾರೆ. ಸಕಾಂರದ ಪ್ರಕಟಣೆಗಳಾದ `ಜನಪದ`, `ಯುವಕರ್ನಾಟಕ`, `ಮಾರ್ಚ್ಆಫ್ ಕರ್ನಾಟಕ` ಪತ್ರಿಕೆಗಳಿಗೂ ಇವರು ಪದಬಂಧ ರಚಿಸಿದ್ದಾರೆ. `ಸಂಚು`, `ಪಲೀಸ್ಫೈಲ್`, `ಪೊಲೀಸ್ ನ್ಯೂಸ್` ಪತ್ರಿಕೆಗಳಿಗಾಗಿ ಅಪರಾಧ ಪದಬಂಧಗಳನ್ನು ರಚಿಸಿದ್ದಾರೆ. `ಹೋಟೆಲ್ಪತ್ರಿಕೆ`ಗಾಗಿ ತಿಂಡಿ ತಿನಿಸು ಪದಬಂಧ ಇವರಿಂದ ಸಿದ್ದಗೊಂಡಿದೆ. ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದ `ಉದಯರಾಗ` ಹಾಗೂ ನವದೆಹಲಿಯಿಂದ ಪ್ರಕಟಗೊಳ್ಳುತ್ತಿರುವ `ದೆಹಲಿ ವಾರ್ತೆ` ದಿನ ಪತ್ರಿಕೆಗಳಿಗಾಗಿ ನಿತ್ಯ ಪದಬಂಧ ರಚಿಸಿದ್ದಾರೆ. ಮದರಾಸಿನಿಂದ ಪ್ರಕಟಗೊಳ್ಳುತ್ತಿದ್ದ ಚಂದಮಾಮ ಅವರ ಜನಪ್ರಿಯ ಮಾಸಿಕಗಳಾದ `ವಿಜಯಚಿತ್ರ` ಹಾಗು `ವನಿತಾ` ಪತ್ರಿಕೆಗಳಿಗಾಗಿ ಹಲವಾರು ವರ್ಷ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಮೊದಲ ಕನ್ನಡ ಸುದ್ದಿಜಾಲ `ಕರ್ನಾಟಕ ನ್ಯೂಸ್ ನೆಟ್`ಗಾಗಿ ಇವರು ಸಿದ್ದಪಡಿಸಿಕೊಡುತ್ತಿದ್ದ ಪದಬಂಧ ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಭಿಮಾನಿ ಪ್ರಕಾಶನ ಹೊರ ತರುತ್ತಿದ್ದ `ಅಭಿಮಾನಿ`, `ಅಭಿಮಾನ` ದಿನ ಪತ್ರಿಕೆ, `ತಾಯಿ`, `ಕ್ರೀಡಾಭಿಮಾನಿ` ಪತ್ರಿಕೆಗಳಿಗೆ ಹಲವು ವರ್ಷ ಕಾಲ ಪದಬಂಧಗಳನ್ನು ಬರೆದುಕೊಟ್ಟಿದ್ದಾರೆ. ಕನ್ನಡದ ಮೊದಲ ಪದಬಂಧಗಳಿಗೇ ಮೀಸಲಾಗಿ ಹೊರ ಬಂದ `ಶೃತಿ` ಪತ್ರಿಕೆಗಾಗಿ ಹಲವು ತಿಂಗಳು ಪ್ರತಿ ಬಾರಿಗೆ 50ರ0ತೆ ಪದಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಪತ್ರಿಕೆಗಳಾದ `ರಂಗವಲ್ಲಿ`, `ಸ್ಟಾರ್`, `ಸಿನಿಮಾ ಮಕರಂದ` ಪತ್ರಿಕೆಗಳಿಗಾಗಿ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಪ್ರಯೋಗಗೊಂಡ ಹಲವು ಪತ್ರಿಕೆಗಳ ಮೊದಲ ಸಂಚಿಕೆಗಳಲ್ಲ್ಲೇ ಇವರ ಪದಬಂಧ ಅಂಕಣ ಇತ್ತೆಂಬುದು ಗಮನಾರ್ಹ.
ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. `ಅರಗಿಣಿ` ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರ ತಂದಿರುವ ಬೃಹತ್ ಕೃತಿ ಬೆಂಗಳೂರುದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ `ನಂದೂಸ್ಪೀಕ್ಸ್` ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, [[ರೂಪತಾರ]], [[ಸುಧಾ]], ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ `ಜಾನಪದಜಂಗಮ`ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ `ಕನ್ನಡ ಚಲನಚಿತ್ರ: ದಲಿತ ಸಂವೇದನೆ` ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್ನಲ್ಲಿಗೆಜೆಟಿಯರ್‍ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ `ಅಮ್ಮ ಪಂಡರಿಬಾಯಿ` ಹಾಗೂ `ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲ್ಲೇಖಿಸಲಾಗಿದೆ. ಕವಿ [[ಕೆ.ಎಸ್.ನಿಸಾರ್ ಅಹಮದ್]] ಅವರ ಅಭಿನಂದನಗ್ರಂಥ `ನಿಸಾರ್ ನಿಮಗಿದೋ ನಮನ` ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೆ.ಎಸ್.ಗುಂಡಪ್ಪನವರ ಸ್ಮರಣಸಂಚಿಕೆ ಸೇರಿದಂತೆ ಹಲವಾರು ಸ್ಮರಣಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
 
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ). ಆನ್‍ಲೈನ್ ಮೂಲಕ `ಇಂಡಿಕ್ರಾಸ್` ಜಾಲದಲ್ಲಿ ಪ್ರತಿನಿತ್ಯ ಅ.ನಾ.ಪ್ರಹ್ಲಾದರಾವ್ ಅವರ ಪದಬಂದಗಳು ಪ್ರಕಟಗೊಳ್ಳುತ್ತಿದ್ದು, ವಿಶ್ವದಾದ್ಯಂತ ಕನ್ನಡಿಗರು ನಿತ್ಯ ಪದಬಂಧ ತುಂಬಿಸುವಲ್ಲಿ ಸಹಕಾರಿಯಾಗಿದೆ.
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ