ಅವಂತೀ ದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೪ ನೇ ಸಾಲು:
ಅವಂತೀ ಈಗಿನ ಮಾಳವ, ನಿಮಾರ್ ಮತ್ತು [[ಮಧ್ಯಪ್ರದೇಶ]]ದ ನೆರೆಯಲ್ಲಿರುವ ಪ್ರದೇಶಗಳನ್ನೊಳಗೊಂಡಿತ್ತು. ರಾಜಧಾನಿಯಾದ [[ಉಜ್ಜಯಿನಿ]]ಯನ್ನು ಅಚ್ಯುತಗಾಮಿಯೆಂಬ ರಾಜ ಕಟ್ಟಿದ. ಅದು [[ಬೌದ್ಧಧರ್ಮ]]ದ ಕೇಂದ್ರಗಳಲ್ಲೊಂದಾಗಿದ್ದು ಮಹಾತಸೇನ, ಸೋನ, ಅಭಯಕುಮಾರ ಮುಂತಾದ ಬೌದ್ಧಧರ್ಮದ ಅನುಯಾಯಿಗಳ ತವರೂರಾಗಿತ್ತು.
==ಪ್ರದ್ಯೋತನ ಆಳ್ವಿಕೆಯಲ್ಲಿ==
ಅವಂತಿ 6ನೆಯ ಶತಮಾನದ ಆದಿಯಲ್ಲಿ ಭರತನ ವಂಶಕ್ಕೆ ಸೇರಿದ ಏಳು ಮಂದಿ ಸಮಕಾಲೀನ ರಾಜರಲ್ಲಿ ಒಬ್ಬನಾದ ವಿಸಾಭುವಿನ ಆಡಳಿತಕ್ಕೆ ಒಳಪಟ್ಟಿತು. ತರುವಾಯ ವುಲಿಕನೆಂಬುವನು ಸ್ವಾಮಿಯನ್ನು ಕೊಂದು ಮಗನಾದ ಚಂಡ ಪ್ರದ್ಯೋತ ಮಹಾಸೇನನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದ. ಆತ [[ಗೌತಮ ಬುದ್ಧ]]ನ ಸಮಕಾಲೀನನಾಗಿದ್ದು, ಬಹು ಬಲಾಢ್ಯ ರಾಜನಾಗಿದ್ದ. ಅವನ ಕಾಲದಲ್ಲಿ ಅವಂತಿ ನೆರೆಹೊರೆಯ ರಾಜ್ಯಗಳಾದ ವತ್ಸ, ಮಗಧ ಮತ್ತು ಕೋಸಲಗಳೊಂದಿಗೆ ವೈರಭಾವದಿಂದಿತ್ತು. ವತ್ಸರಾಜನಾದ ಉದಯನ ತನ್ನ ಕಡುವೈರಿಯಾಗಿದ್ದರೂ ಪ್ರದ್ಯೋತ ಅವನ ಮೇಲೆ ದಂಡೆತ್ತಿ ಹೋಗದೆ ಉಪಾಯದಿಂದ ಅವನನ್ನು ಸೆರೆಹಿಡಿದ. ತರುವಾಯ ಅವನಿಂದ ಆನೆಗಳನ್ನು ಪಳಗಿಸುವ ವಿದ್ಯೆಯನ್ನು ಕಲಿಯಲು ತನ್ನ ಮಗಳಾದ ವಾಸವದತ್ತೆಯನ್ನು ನಿಯಮಿಸಿದ. ಆದರೆ ಕೆಲದಿನಗಳ ತರುವಾಯ ಅವರಿಬ್ಬರೂ ಪ್ರೇಮಿಗಳಾಗಿ ತಪ್ಪಿಸಿಕೊಂಡು ಓಡಿಹೋಗಿ ವಿವಾಹವಾದರು. ಈ ಕಥೆ ಬಹು ಪ್ರಸಿದ್ಧವಾಗಿದ್ದು ಬೃಹತ್ಕಥೆಯಲ್ಲಿ ಕಂಡುಬರುತ್ತದೆಯಲ್ಲದೆ, [[ಭಾಸ]]ಕವಿ ಈ ವಿಷಯವನ್ನಾಧರಿಸಿ ಎರಡು ಸೊಗಸಾದ ನಾಟಕಗಳನ್ನು ಬರೆದಿದ್ದಾನೆ. ಮಗಧರಾಜನಾದ ಅಜಾತಶತ್ರು ಸಹ ಪ್ರದ್ಯೋತ ತನ್ನ ರಾಜ್ಯದ ಮೇಲೆ ದಂಡೆತ್ತಿ ಬರಬಹುದೆಂದು ಶಂಕಿಸಿ ರಾಜಧಾನಿಯಾದ ರಾಜಗೃಹದ ಕೋಟೆಯನ್ನು ಬಲಪಡಿಸಿದ. ಪುರಾಣಗಳ[[ಪುರಾಣ]]ಗಳ ಪ್ರಕಾರ ಪ್ರದ್ಯೋತ ತನ್ನ ನೆರೆಹೊರೆಯ ರಾಜರನ್ನು ಅಂಕಿತದಲ್ಲಿಟ್ಟುಕೊಂಡಿದ್ದ. ಆದರೆ ಅವನು ಕ್ರೂರಿಯೂ ರಾಜನೀತಿಬಾಹಿರನೂ ಆಗಿದ್ದ.
 
ಪ್ರದ್ಯೋತ ಸು. 23೨೩ ವರ್ಷಗಳ ಕಾಲ ರಾಜ್ಯವಾಳಿದ. ಅವನ ತರುವಾಯ ಪಾಲಕ, [[ವಿಸಾಖಯುಪ]], [[ಆರ್ಯಕ]] ಮತ್ತು ನದಿವರ್ಧನರು ಅನುಕ್ರಮವಾಗಿ 24೨೪, 50೫೦, 21೨೧ ಮತ್ತು 20೨೦ ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಕೊನೆಯ ರಾಜ ಶಿಶುನಾಗನಿಂದ[[ಶಿಶುನಾಗ]]ನಿಂದ ಸೋಲಿಸಲ್ಪಟ್ಟು ಅವಂತಿ ಮಗಧರಾಜ್ಯದಲ್ಲಿ ಲೀನವಾಯಿತು.
 
 
"https://kn.wikipedia.org/wiki/ಅವಂತೀ_ದೇಶ" ಇಂದ ಪಡೆಯಲ್ಪಟ್ಟಿದೆ