ಸ್ವಾಮ್ಯಪ್ರಮಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:US_Patent_cover.jpg|right|thumb|260x260px|[[ಅಮೇರಿಕ_ಸಂಯುಕ್ತ_ಸಂಸ್ಥಾನ|ಸಂಸಂ]]ನ ಸ್ವಾಮ್ಯಪ್ರಮಾಣ]]
 
'''ಸ್ವಾಮ್ಯಪ್ರಮಾಣ''' ಎಂದರೆ ಅವಿಷ್ಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಾವು ವಿವರವಾಗಿ ಬಹಿರಂಗ ಪಡಿಸಿದ ಅವಿಷ್ಕಾರಕ್ಕೆ ಫಲವಾಗಿ ಪಡೆಯುವ ಒಂದು ರೀತಿಯ ಪ್ರತ್ಯೇಕ ಹಕ್ಕು. ಯಾವುದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನ ಅಥವಾ ವಿಧಾನವನ್ನು ಅವಿಷ್ಕಾರ ಎಂದು ಪರಿಗಣಿಸಬಹುದು. ಸ್ವಾಮ್ಯಪ್ರಮಾಣವು ಒಂದು ಪ್ರಕಾರದ [[ಬೌದ್ಧಿಕ ಆಸ್ತಿ]]. ಒಂದು ಸಾರ್ವಭೌಮ ರಾಷ್ಟ್ರವು (ಉದಾ : [[ಭಾರತ]], [[ಕೆನಡ]]) ಸ್ವಾಮ್ಯಪ್ರಮಾಣವನ್ನು ಒಂದು ನಿಗದಿತ ಕಾಲಾವಧಿಗೆ ನೀಡುತ್ತದೆ. ಅದು ದೊರೆಯಲ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿದಾರರು ಮುಂದಿಡಬೇಕಾದ ವಿಷಯಗಳು, ಸ್ವಾಮ್ಯಪ್ರಮಾಣದ ಹಕ್ಕಿನ ಮಿತಿ ಮೊದಲಾದವುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯ ಮೇಲೆ ಅವಲಂಬಿಸಿರುತ್ತವೆ. [[ವಿಶ್ವ ವ್ಯಾಪಾರ ಸಂಸ್ಥೆ]]ಯಲ್ಲಿನ (ವಿ.ವ್ಯಾ.ಸಂ) ಒಪ್ಪಂದದ ಪ್ರಕಾರ ಎಲ್ಲಾ ಸ್ವಾಮ್ಯಪ್ರಮಾಣಗಳೂ ವಿ.ವ್ಯಾ.ಸಂನ ಸದಸ್ಯ ರಾಷ್ಟ್ರಗಳಲ್ಲಿ ಲಭ್ಯವಿರಬೇಕು<ref>Article 27.1. of the TRIPs Agreement.</ref>.
 
==ಅರ್ಹತೆ==
ಸಾಧಾರಣವಾಗಿ ಸ್ವಾಮ್ಯಪ್ರಮಾಣ ಪಡೆಯುವ ಅವಿಷ್ಕಾರಕ್ಕೆ ಈ ಕೆಳಗಿನ ಗುಣಗಳಿರಬೇಕು.
 
'''ನವೀನತೆ''' : ಜನರಿಗೆ ಮೊದಲೇ ತಿಳಿದಿರುವ ವಿಷಯವಾಗಿರಬಾರದು. <br>
'''ಉಪಯುಕ್ತತೆ''' : ಯಾವುದಾದರೊಂದು ಬೇಡಿಕೆಯನ್ನು ಈಡೇರಿಸುವಂಥದ್ದಾಗಿರಬೇಕು. <br>
'''ಅಸಾಮಾನ್ಯತೆ''' : ಉತ್ಪನ್ನದ ರಚನೆ ಮತ್ತು ನಿರ್ಮಾಣದಲ್ಲಿ ಸಾಧಾರಣವಾಗಿ ಬೆಳೆದು ಬರುವ ವಿಧಾನವಾಗಿರಬಾರದು. ಉದಾ: ಹೊಸತಾಗಿ ರಚಿಸಿದ ಒಂದು ಯಂತ್ರದ ದಕ್ಶತೆ ಹೆಚ್ಚಿಸಲು ಕೀಲೆಣ್ಣೆಯ ಬಳಕೆಗೆ ಸ್ವಾಮ್ಯಪ್ರಮಾಣ ಕೊಡಲು ಸಾಧ್ಯವಿಲ್ಲ. ಇದು ಒಬ್ಬ ಜನಸಾಮಾನ್ಯನಿಗೆ ತಲೆದೋರುವ ವಿಷಯ. <br>
 
== References ==
"https://kn.wikipedia.org/wiki/ಸ್ವಾಮ್ಯಪ್ರಮಾಣ" ಇಂದ ಪಡೆಯಲ್ಪಟ್ಟಿದೆ