ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
No edit summary
೩೧ ನೇ ಸಾಲು:
*ಬ್ರಿಟನ್ನೇ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಲ್ಲೂ ಈ ಕಾಲದಲ್ಲಿ ಅಂಚೆಯ ವ್ಯವಸ್ಥೆ ಬಹಳ ಸಮರ್ಪಕವಾಗಿ ಬೆಳೆದಿದೆ. ಬ್ರಿಟಿಷರ ಅಧೀನದಲ್ಲಿದ್ದ [[ಅಮೆರಿಕ ಸಂಯುಕ್ತ ಸಂಸ್ಥಾನ]]ಗಳಲ್ಲಿ 1639ರಲ್ಲಿ ಮೊಟ್ಟ ಮೊದಲನೆಯ ಅಂಚೆ ಕಚೇರಿಯ ಸ್ಥಾಪನೆಯಾಯಿತು. ಆ ವಸಾಹತಿನ ಒಳಭಾಗದಲ್ಲಿ ಒಂದು ಎಡೆಯಿಂದ ಇನ್ನೊಂದು ಎಡೆಗೆ ಅಂಚೆ ಪತ್ರವನ್ನು ಸಾಗಿಸುವ ಹಕ್ಕನ್ನು 1692ರಲ್ಲಿ ಥಾಮಸ್ ನೀಲ್ ಎಂಬುವನು ಪಡೆದ. 1707ರಲ್ಲಿ ಸರ್ಕಾರ ಈ ಹಕ್ಕನ್ನು ಕೊಂಡುಕೊಂಡಿತು. [[ಬೆಂಜಮಿನ್ ಫ್ರಾಂಕ್ಲಿನ್]] 1752ರಲ್ಲಿ ಅಂಚೆಯಮಹಾಪಾಲ (ಪೋಸ್ಟ್ ಮಾಸ್ಟರ್ ಜನರಲ್) ಆದ. *ಅಂಚೆಯ ವರಮಾನ ಹೆಚ್ಚಿತು. ಇಂಗ್ಲೆಂಡಿಗೂ [[ನ್ಯೂಯಾರ್ಕ್|ನ್ಯೂಯಾರ್ಕಿಗೂ]] ನಡುವೆ ನೇರವಾದ ಲಕೋಟೆ ವ್ಯವಸ್ಥೆ ಏರ್ಪಟ್ಟಿತು. ಇತರ ಕಡೆಗಳಿಗೂ ಇದು ವಿಸ್ತರಿಸಿತು. ಬ್ರಿಟನ್ನಿಗೂ ಈ ವಸಾಹತಿಗೂ ನಡುವಣ ಸಂಬಂಧ ಬಿಗಡಾಯಿಸಿದರ ಫಲವಾಗಿ ಫ್ರಾಂಕ್ಲಿನ್ 1774ರಲ್ಲಿ ವಜಾ ಮಾಡಲ್ಪಟ್ಟ. ಮುಂದೆ ಅನೇಕ ವರ್ಷಗಳ ಕಾಲ ಈ ವ್ಯವಸ್ಥೆಯಲ್ಲೇನೂ ಬದಲಾವಣೆಯಾಗಲಿಲ್ಲ. ಸಂಯುಕ್ತ ಸಂಸ್ಥಾನಗಳು ಸ್ವತಂತ್ರವಾದ ಮೇಲೆ ಈ ವ್ಯವಸ್ಥೆಯಲ್ಲಿ ಹೊಸ ಯುಗದ ಆರಂಭವಾಗಿ ಅಲ್ಲಿಂದ ಮುಂದೆ ಅದು ಶೀಘ್ರಗತಿಯಿಂದ ಬೆಳೆಯಿತು.
*ಕೆನಡ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಭಾರತ - ಮುಂತಾದ ಅಂದಿನ ಬ್ರಿಟಿಷ್ ಚಕ್ರಾಧಿಪತ್ಯದ ಇತರ ದೇಶಗಳಲ್ಲಿಯೂ ಅಂಚೆ ವ್ಯವಸ್ಥೆ ಬೆಳೆಯಿತು. ಬ್ರಿಟನ್ನು ತನ್ನ ಅಧೀನ ರಾಜ್ಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ವ್ಯವಸ್ಥೆ ಒಂದು ಮುಖ್ಯ ಸಾಧನವಾಗಿ ಪರಿಣಮಿಸಿತು. ಫ್ರಾನ್ಸಿನಲ್ಲಿ ಸರ್ಕಾರಿ ಅಂಚೆ ವ್ಯವಸ್ಥೆ 1464ರಷ್ಟು ಹಿಂದೆಯೇ ಸ್ಥಾಪಿತವಾಯಿತು. ಮುಂದೆ 1627ರಲ್ಲಿ ರಿಚಲೂ, 1643ರಲ್ಲಿ ಮಾಜಾ಼ರ ಎಂಬುವರು ಇದನ್ನು ಬಹುಮಟ್ಟಿಗೆ ಸುಧಾರಿಸಿದರು.
*ಅಂಚೆಯ ಸೇವೆ ಸಲ್ಲಿಸುವ ಹಕ್ಕನ್ನು ಗುತ್ತಿಗೆಗೆ ಕೊಡುವ ಪದ್ಧತಿ ಇಂಗ್ಲೆಂಡಿನಲ್ಲಿ 17ನೆಯ ಶತಮಾನದಲ್ಲಿ ಜಾರಿಗೆ ಬಂದು ಸ್ವಲ್ಪ ಕಾಲ ಮಾತ್ರವೇ ಜಾರಿಯಲ್ಲಿತ್ತಾದರೂ ಫ್ರಾನ್ಸಿನಲ್ಲಿ ಇದು ಬಹುಕಾಲ ಮುಂದುವರಿಯಿತು. [[ಫ್ರೆಂಚ್ ಮಹಾಕ್ರಾಂತಿ]]ಯ ಸಮಯದಲ್ಲಿ ಇದು ತೊಡೆದು ಹೋಯಿತು . ಅಂಚೆ ವ್ಯವಸ್ಥೆಯ ಆಡಳಿತ ನಡೆಸಲು ಒಂದು ಸಮಿತಿಯ ರಚನೆಯಾಯಿತು. 1804ರಲ್ಲಿ [[ನೆಪೋಲಿಯನ್ ಬೋನಾಪಾರ್ತ್| ನೆಪೋಲಿಯನ್ನನು]] ಈ ಸಮಿತಿಯನ್ನು ರದ್ದು ಮಾಡಿ, ಮಹಾನಿರ್ದೇಶಕ (ಡೈರೆಕ್ಟರ್ ಜನರಲ್) ನನ್ನು ನಿಯಮಿಸಿದ. ಆಗ ರಚಿಸಿದ ಆಡಳಿತದ ಚೌಕಟ್ಟು ಈಗಲೂ ಸ್ಥೂಲವಾಗಿ ಮುಂದುವರಿಯುತ್ತಿದೆ. ಈಗ ಸಾಮಾನ್ಯವಾಗಿ ಅಂಚೆಗಾಗಿಯೇ ಪ್ರತ್ಯೇಕವಾದ ಮಂತ್ರಿಯಿರುವುದಿಲ್ಲ. ಹಣಕಾಸು, ಲೋಕೋಪಯೋಗಿ ಕಾರ್ಯ, ವಾಣಿಜ್ಯ, ಕೈಗಾರಿಕೆ - ಹೀಗೆ ಬೇರೆ ಯಾವುದಾದರೂ ಸಚಿವಾಲಯದ ಆಡಳಿತಕ್ಕೆ ಈ ಖಾತೆಯನ್ನೂ ಸೇರಿಸಲಾಗುತ್ತಿದೆ.
 
=='''ಅಂತರಾಷ್ಟ್ರೀಯ ಅಂಚೆ ವ್ಯವಸ್ಥೆ'''==
೧೦೨ ನೇ ಸಾಲು:
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
* [http://www.gutenberg.org/etext/27688 ''A Hundred Years by Post''] by J. Wilson Hyde
* Potts, Albert, "''{{US patent|19578|US19,578}} (First U.S. street mailbox patent)''". [[US patent office]]. 1858
* [http://www.grcdi.nl/linkspo.htm GRC Database Information: links to worldwide postal services websites]
* [http://www.postalheritage.org.uk The British Postal Museum & Archive]
* [http://www.remuseum.org.uk/rem_his_special.htm#pcs Royal Engineers Museum] British Army Postal Services History
* James Meek, ''[[London Review of Books]]'', 28 April 2011, [http://www.lrb.co.uk/v33/n09/james-meek/in-the-sorting-office In the Sorting Office], 33(9)
* [http://www.postalmuseum.si.edu/ US National Postal Museum], a part of the [[Smithsonian Institution]]
* [http://www.upu.int Universal Postal Union], a part of the United Nations
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚೆ ಇತಿಹಾಸ|ಅಂಚೆ ಇತಿಹಾಸ}}
 
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ