ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
|website =
}}
[[File:M. Balamuralikrishna 02.jpg|thumb|M. Balamuralikrishna during Rajarani Music Festival at Bhubaneswar on 19 January 2013]]
 
[[File:Balamuralikrishna in Kuwait.jpg|thumb|Balamuralikrishna during a concert in Kuwait on 29 March 2006, accompanied by Mavelikkara Sathees Chandran (violin), Perunna G. Harikumar (mridangom), Manjoor Unnikrishnan (ghatam)]]
[[File:Vlcsnap-2014-04-17-11h58m18s123.png|thumb|Mangalampalli Balamurali Krishna and Ravi Joshi, during a concert in San Francisco, California, April 2014]]
[[ಚಿತ್ರ:Dr. B1.jpg|thumb|right|350px|'ಡಾ. ಬಾಲಮುರಳಿ ಕೃಷ್ಣ']]
'''ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ''',<ref>[http://www.culturalindia.net/indian-music/classical-singers/balamurli-krishnan.html Dr. Balamuralikrishna]</ref> ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ,ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರ ಕೊಡುಗೆ ೪೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿಗಳುಕಛೇರಿ ಗಳು-೧೮,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.
==ಬಾಲ್ಯ; ಸಂಗೀತದಲ್ಲಿ ಸಾಧನೆಮಾಡಿದ್ದ, ತಂದೆತಾಯಿಗಳ ಜೊತೆ ಒಡನಾಟ==
[[ಚಿತ್ರ:Dr.BM3.jpg|thumb|right|350px|'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ']]
*'[[ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ]]', ರವರು ಜನಿಸಿದ್ದು, ೬, [[ಜುಲೈ]], ೧೯೩೦ ರಲ್ಲಿ. "ಸಂಕರ ಗುಪ್ತನ್," ಎಂಬ ಗ್ರಾಮದಲ್ಲಿ. ಇದು [[ಆಂಧ್ರ ಪ್ರದೇಶ]]ದ ಪೂರ್ವ ಗೋದಾವರಿ ಜಿಲ್ಲೆಯ, 'ರೋಜುಲು,' ತಾಲ್ಲೂಕಿನಲ್ಲಿದೆ. ತಂದೆ-ತಾಯಿಯರು, ಅವರಿಗೆ ಪ್ರೀತಿಯಿಂದ ಇಟ್ಟ ಹೆಸರು, '[[ಮುರಳಿ ಕೃಷ್ಣ]]'. ಆದರೆ, ಆ ಊರಿನ ಪ್ರಸಿದ್ಧ '[[ಹರಿಕಥಾ ವಿದ್ವಾನ್ ಶ್ರೀ. ಸತ್ಯನಾರಾಯಣರು]]', ಅವನ ಹೆಸರಿನ ಮೊದಲಿಗೆ '[[ಬಾಲ]]' ಎಂಬ ಪದವನ್ನು ಸೇರಿಸಿದರು.
* ಮನೆಯಲ್ಲಿ ಸಂಗೀತಮಯ ವಾತಾವರಣ. ತಂದೆ, '[[ಪಟ್ಟಾಭಿರಾಮಯ್ಯ]]', ಕೊಳಲು, ವೀಣೆ ಪಿಟೀಲು ವಾದಕ. ತಾಯಿ, '[[ಸೂರ್ಯಕಾಂತಮ್ಮ]]' ನವರು, ಶ್ರೇಷ್ಠ ವೀಣಾವಾದಕಿ. ತಮ್ಮ ೧೫ ನೆಯ ವಯಸ್ಸಿನಲ್ಲಿಯೇ, ಬಾಲಮುರಳಿಯವರ ತಾಯಿಯವರು ಮೃತಪಟ್ಟರು. ಬಾಲಮುರಳಿಯವರ ಸೋದರತ್ತೆಯವರು ಅವರನ್ನು [[ವಿಜಯವಾಡ]]ಕ್ಕೆ ಕರೆದುಕೊಂಡು ಹೋಗಿ, ತಮ್ಮ ಮನೆಯಲ್ಲಿ ಸಾಕಿ-ಸಲಹಿದರು.
*ಬಾಲ್ಯದಿಂದ ತಂದೆಯೇ ಅವರಿಗೆ ಗುರುಗಳು. ತಂದೆಯವರ ಸಂಗೀತಾಸಕ್ತಿ, ಹಾಗೂ ಅದರ ಪ್ರಭಾವ ಸಹಜವಾಗಿ ಮಗನಮೇಲೂ ಆಗಿತ್ತು. ಸಂಗೀತಾಭಿರುಚಿಯ ಉತ್ತುಂಗದಲ್ಲಿದ್ದ ಮಗನನ್ನು ಅವರು '[[ಸುಸರ್ಲ ದಕ್ಷಿಣಾಮೂರ್ತಿ]]' ಗಳ ಬಳಿ ಶಿಕ್ಷಣ ಕೊಡಿಸಲು ಕರೆದುಕೊಂಡು ಹೋದರು. ಕೆಲವೇ ವರ್ಷಗಳಲ್ಲಿ ಅವರು ೭೨ ಬಗೆಯ ರಾಗಗಳನ್ನು ಹೆಣೆದರು. ೧೯೬೦ ರಲ್ಲೇ, [[ವಿಜಯವಾಡ ]]ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ '[[ಭಕ್ತಿರಂಜಿನಿ]],' ಎಂಬ 'ಗೀತಮಾಲೆ'ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.
[[ಚಿತ್ರ:Dr.BM2.jpg|thumb|right|350px|'ಸರ್ವಶ್ರೀ ಆಲ್ಬಮ್']]
 
==ಸಂಗೀತದಲ್ಲಿ ಪ್ರಯೋಗಶೀಲತೆ, ಅವರ ಪ್ರಮುಖ-ಹವ್ಯಾಸಗಳಲ್ಲೊಂದು==
*ಸಂಗೀತ ವಿದ್ವಾನ್, ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ, [[ಕರ್ನಾಟಕ ಸಂಗೀತ ]]ಶೈಲಿಯ ಮೇರುಗಾಯಕ. ರಾಗ, ತಾಳ, ಗಾನ, ಪಲ್ಲವಿಯ ಹೊಸ ಪ್ರಯೋಗಗಳ ಹರಿಕಾರ. [[ಭಾರತ]]ದೇಶ ಕಂಡ [[ಮಹಾನ್ ವಾಗ್ಗೇಯಕಾರ]]. ಬಾಲಮುರಳಿಯವರು, ದೇಶ-ವಿದೇಶಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನು ನೀಡಿದ್ದಾರೆ. [[ತೆಲುಗು]], [[ಕನ್ನಡ]], [[ತಮಿಳು]], [[ಮಲೆಯಾಳಂ]] ಚಲನ-ಚಿತ್ರಗಳಲ್ಲಿ ಹಾಡಿ, ಕಂಠದಾನ ಮಾಡಿದ್ದಾರೆ.
*ಕನ್ನಡ ಚಿತ್ರಗಳಾದ, [[ಸಂಧ್ಯಾರಾಗ]], [[ಹಂಸಗೀತೆ]], [[ಸುಬ್ಬಾಶಾಸ್ತ್ರಿ]], [[ಗಾನಯೋಗಿ ರಾಮಣ್ಣ]], [[ಶ್ರೀ ಪುರಂದರದಾಸರು]], ಅಮ್ಮ, [[ಚಿನ್ನಾರಿ ಮುತ್ತಣ್ಣ]], [[ಮುತ್ತಿನಹಾರ]] -ಹೀಗೆ ಹಲವಾರು ಹಾಡುಗಳು, ಕೀರ್ತನೆಗಳು, ದೇವರನಾಮಗಳನ್ನು ಹಾಡಿದ್ದಾರೆ. ಅವರು ೧೯೩೮ ರಲ್ಲಿ ನಡೆದ, "[[ಸದ್ಗುರು ಆರಾಧನಾ ಮಹೋತ್ಸವ]]," ದಲ್ಲಿ ತಮ್ಮ ಚೊಚ್ಚಲ ಸಂಗೀತ ಕಛೇರಿ ಕೊಟ್ಟರು. ಆಗ ಅವರಿಗೆ ಕೇವಲ ೮ ವರ್ಷ ವಯಸ್ಸು.
 
==ಬಾಲಮುರಳಿಕೃಷ್ಣರವರ, ಹವ್ಯಾಸಗಳು==
*ಹಾಡುಗಾರಿಕೆಯಲ್ಲದೆ, [[ಪಿಟೀಲು]] ನುಡಿಸುವ ಖಯಾಲಿದೆ. [[ಖಂಜಿರ]], [[ಮೃದಂಗ]], [[ಕೊಳಲು]] ಬಾರಿಸುವುದು ಇಷ್ಟ. ವಿಜಯವಾಡ ದಲ್ಲಿ, Government Music College ನ, ಪ್ರಥಮ ಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. , ವಿಜಯವಾಡ , [[ಹೈದರಾಬಾದು]] ಮತ್ತು ಮದರಾಸು [[ಆಕಾಶವಾಣಿ ]]ಕೇಂದ್ರಗಳಲ್ಲಿ ಸಂಗೀತ ನಿರ್ಮಾಪಕರಾಗಿಸೇವೆ ಸಲ್ಲಿಸಿದ್ದಾರೆ.
* ಅಭಿನಯ ಅವರಿಗೆ ಹೆಚ್ಚಾಗಿ ಗೊತ್ತಿಲ್ಲದಿರಬಹುದು, ಆದರೆ ಅವರೊಬ್ಬ ವಾಗ್ಗೇಯಕಾರರು, ಕವಿ, ಹೊಸತನ್ನೇ ಅರಸುತ್ತಾ ಸಂಶೋಧನೆಮಾಡುವ ಆಸೆ. '[[ಸ್ವಿಟ್ ಝರ್ ಲ್ಯಾಂಡ್]]' ನಲ್ಲಿ, '[[Academy of Performing arts & Research]]', ಸಂಸ್ಥೆ ಸ್ಥಾಪಿಸಿದ್ದಾರೆ. ಕಲೆ ಸಂಸ್ಕೃತಿಯ ಅಬಿವೃದ್ಧಿಗಾಗಿ ಮದರಾಸಿನಲ್ಲಿ "MBK" ಟ್ರಸ್ಟ್ ನ, ನೃತ್ಯ ಮತ್ತು ಸಂಗೀತಶಾಲೆ "ವಿಪಂಚಿ" ಆರಂಭಿಸಿದರು. 'ಸಂಧ್ಯಾ ಕೆಂದಿನ ಸಿಂಧೂರಂ,' [[ಮಲೆಯಾಳಂ]] ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
==ಸಂಗೀತದ ಜೊತೆಜೊತೆಗೆ, ಪ್ರಿಯವಾದದ್ದು :==
ಅವರು "[[ಸಾಪಾಟು ಪ್ರಿಯರು]]' (ಭೋಜನ ಪ್ರಿಯರು). ಅನ್ನ, ರಸಂ ಊಟ, ಹೆಚ್ಚು ಪ್ರಿಯ. ಕರಿದ ಬಜ್ಜಿ, ಐಸ್ಕ್ರೀಂ, ನಿಧಾನವಾಗಿ ಗಂಟೆ ಕಾಲ, ಆರಾಮವಾಗಿ ಊಟಮಾಡುವುದು ಬಹಳ ಇಷ್ಟ.
 
==ಇಷ್ಟವಾದ ಮನರಂಜನೆ==
ಟಿ. ವಿ. ಯಲ್ಲಿ ಆಕ್ಷನ್ ಚಲನ ಚಿತ್ರಗಳ ವೀಕ್ಷಣೆ, ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.
 
==ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು.==
ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ-ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, [[ನಾಲ್ಕು]] ಹಾಗೂ [[ಮೂರು]] ಸ್ವರಗಳ ರಾಗಗಳನ್ನು ಬಾಲಮುರಳಿಬಾಲ ಮುರಳಿ ಅವರು ಕಲ್ಪಿಸಿದ್ದಾರೆ.
 
==ಬಾಲಮುರಳಿ ಅವರ [[ಹೊಸರಾಗ ಸಂಯೋಜನೆ]] ಗಳಲ್ಲಿ ಕೆಲವು ಇಲ್ಲಿವೆ==
[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಂಕಾರಿ]], [[ಜನ ಸಮ್ಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲವಂಗಿ]], [[ಸುಸಮ]].
 
==ಸಂಗೀತದಲ್ಲಿ ಹೊಸಕೃತಿ ರಚನೆಗಳು==
ಸಂಗೀತಕ್ಕೆ ಹೊಸತನದ ಮೆರುಗು, ಚಿಕಿತ್ಸೆ, ನೀಡುತ್ತ ರಾಗಗಳ ನಿರಂತರ ಸಂಶೋಧನೆ ನಡೆಸಿದ್ದಾರೆ. '[[ವರ್ಣಂ ತಿಲ್ಲಾನ]]' ಕುರಿತ ’[[ಸೂರ್ಯಕಾಂತಿ]]' (೪ ಭಾಷೆಗಳಲ್ಲಿ ), (೬ ಭಾಷೆಗಳಲ್ಲಿ) ಎಂಬ, [[ಸಂಶೋಧನಾತ್ಮಕ ಪುಸ್ತಕಗಳು]], ಹೊರಬಂದಿವೆ.
 
=='ಬೆಂಗಳೂರಿನ ಗಾಯನ ಸಮಾಜದಲ್ಲಿ'==
'ಬೆಂಗಳೂರಿನ ಗಾಯನಸಮಾಜ'ದಲ್ಲಿ, 'ಭಕ್ತಿಭಾರತಿ ಪ್ರತಿಷ್ಠಾನ' ಏರ್ಪಡಿಸಿದ್ದ, '[[ಪುರಂದರದಾಸೋತ್ಸವ ಭಕ್ತಿ ಮೇಳ]]'ದಲ್ಲಿ ಸಂಗೀತ ಕಛೇರಿನೀಡಿದರು. ಭಾರತವಲ್ಲದೆ, ಅಮೆರಿಕ, ಕೆನಡ, ಇಟಲಿ, ಫ್ರಾನ್ಸ್, ರಷ್ಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಪುರ ಮುಂತಾದ ದೇಶಗಳಲ್ಲಿ ಸುಮಾರು ೨೦,೦೦೦ ಸಂಗೀತ ಕಛೇರಿಗಳನ್ನು ನೀಡಿ, ತಮ್ಮ ಕ್ಷೇತ್ರವನ್ನು ವಿಶ್ವವ್ಯಾಪಿಯಾಗಿಸಿಕೊಂಡಿದ್ದಾರೆ. 'ನೂರಾರು ಕ್ಯಾಸೆಟ್ ಆಲ್ಬಂ'ಗಳು ಹೊರಬಂದಿವೆ. ಇವರು ಸಂಯೋಜಿಸಿದ ಮಹದೇವಸುತಂ, [[ಶ್ರೀ ಸಕಲ ಗಣಾದಿಪ]], [[ಗಂಗಂ ಗಣಪತಿ]], ಕೃತಿಗಳು ಅತ್ಯಂತ ಯಶಸ್ಸನ್ನು ಕಂಡಿವೆ.
 
==ಪ್ರಶಸ್ತಿಗಳು :==
* ಗೌರವ ಪಿ. ಎಚ್. ಡಿ ; ಡಿ. ಎಸ್. ಸಿ ; ಡಿ. ಲಿಟ್, [[ಆಂಧ್ರ ಪ್ರದೇಶ]], ವಿಶ್ವವಿದ್ಯಾಲಯದಿಂದ.
Line ೪೮ ⟶ ೬೨:
* "[[ಮಧ್ವಾಚಾರ್ಯ]]," ಚಿತ್ರಕ್ಕೆ 'ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ' ಸೇರಿವೆ.
* [[ತಿರುಪತಿ]] ತಿರುಮಲದೇವಸ್ಥಾನ, [[ಶೃಂಗೇರಿ]] ಪೀಠ, ಮತ್ತು [[ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನ]]ದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾಗಿದ್ದಾರೆ.
 
==ಉಲ್ಲೇಖಗಳು==
<References />
"https://kn.wikipedia.org/wiki/ಎಂ._ಬಾಲಮುರಳಿ_ಕೃಷ್ಣ" ಇಂದ ಪಡೆಯಲ್ಪಟ್ಟಿದೆ