ಯೇಸು ಕ್ರಿಸ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಲೇಖನವನ್ನು ಪರಿಷ್ಕರಿಸಲಾಗಿದೆ.
೪೫ ನೇ ಸಾಲು:
*ಯೇಸುವಿನ ಜೀವನ ವೃತ್ತಾಂತ ಕಂಡುಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ [[ಬೈಬಲ್‌]]ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. [[ಹಳೇ ಒಡಂಬಡಿಕೆ]]ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು.
* ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ [[ಶಿಲುಬೆ]]ಗೆ ಏರಿಸಲ್ಪಡುತ್ತಾರೆ. ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ ([[ನ್ಯೂ ಟೆಸ್ಟಮೆಂಟ್]]) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ.
 
==ಯೇಸುವಿನ ಹೋರಾಟ==
*ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ.
*ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.
*ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.
 
[[File:Brooklyn Museum - Jesus Found in the Temple (Jesus retrouvé dans le temple) - James Tissot - overall.jpg|thumb|upright|12-year-old Jesus [[Finding in the Temple|found in the temple]] depicted by James Tissot]]
"https://kn.wikipedia.org/wiki/ಯೇಸು_ಕ್ರಿಸ್ತ" ಇಂದ ಪಡೆಯಲ್ಪಟ್ಟಿದೆ