"ಬುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಲೇಖನವನ್ನು ಮುಂದುವರಿಸಲಾಗುತ್ತಿದೆ.
(ಲೇಖನವನ್ನು ಮುಂದುವರಿಸಲಾಗುತ್ತಿದೆ.)
(ಲೇಖನವನ್ನು ಮುಂದುವರಿಸಲಾಗುತ್ತಿದೆ.)
*ಅಂತೆಯೇ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳನ್ನು ಪಡೆದರು. ಆದರೆ ಶುದ್ಧೋಧನನ ಸಚಿವನಾದ ದಂಡಪಾಣಿಯ (ಯಶೋಧರೆಯ ತಂದೆ ಮಹಾಮಾನನೆಂದು, ಸುಪ್ರಬುದ್ಧನೆಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.) ಮಗಳು ಅಥವಾ ಯಶೋಮತಿ ಎಂಬುವವಳು ಅತೀ ಸುಂದರೆಳೂ, ಸುಸಂಸ್ಕೃತಳೂ ಆಗಿದ್ದು ಕಟ್ಟಕಡೆಯಲ್ಲಿ ಬಂದಳು.
*ಆಕೆಯ ಗಾಂಭಿರ್ಯ, ಘನತೆಗಳು ಸಿದ್ಧಾರ್ಥನನ್ನು ಮಂತ್ರಮುಗ್ಧಗೊಳಿಸಿದವು. ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದುವು. ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋದನು. ಆದರವಳು ನಿಮ್ಮ ವಾತ್ಸಲ್ಯಮಯನೋಟವೇ ನನಗೊಂದು ಆಭರಣ, ಅದೇ ಸಾಕೆಂದು ಮುಂದೆ ಸಾಗಿದಳು. ಸಿದ್ಧಾರ್ಥನಿಗೆ ಯಶೋಧರೆಯಲ್ಲಿ ಮಮಕಾರ ಉಂಟಾಗಿದೆಯೆಂಬ ಗೂಢಚಾರ ವರದಿಯನ್ನಾಧರಿಸಿ, ಯಶೋಧರೆಯನ್ನು ವರಿಸಲು ಸಮ್ಮತಿಸಿದನು.
*ಯಶೋಧರೆಯೊಂದಿಗೆ ಗೌತಮಾ ಮತ್ತು ಮನೋವುರಾ ಎಂಬಿಬ್ಬರು ಯುವತಿಯರನ್ನು ತಂದು ಸಿದ್ಧಾರ್ಥನಿಗೆ ವಿವಾಹ ಮಾಡಿಸುತ್ತಾರೆ.( (ಲಲಿತ ವಿಸ್ತಾರ ಎಂಬ ಕೃತಿಯಲ್ಲಿ ಸಿದ್ಧಾರ್ಥನ ಪತ್ನಿಯರ ಹೆಸರು ಮೃಗಜಾ, ಯಶೋಧರೆ ಮತ್ತು ಉತ್ಪಲಾವರ್ಣಾ ಎಂದೂ, ಚೈನಾ ಗ್ರಂಥಗಳಲ್ಲಿ
ಯಶೋಧರೆ, ಗೋಪ ಮತ್ತು ಉತ್ಪಲಾವರ್ಣಾ ಎಂದು ಹೇಳಿದೆ.
 
==ಪುತ್ರೋತ್ಸವ==
ಸಿದ್ಧಾರ್ಥನಿಗೆ ಅವನ ರಾಣಿಯರ ಸಂಗದಿಂದ ಅವನ ಜ್ಞಾನದ ಮಟ್ಟದಲ್ಲಿ ಹೊಸಹೊಸ ಅನುಭವಗಳನ್ನು ತಂದುಕೊಡುತ್ತಿದ್ದವು. ಪತ್ನೀಯರ ಮನನೋಯದಂತೆ ವರ್ತಿಸುತ್ತಿದ್ದನು. ಹೀಗಿರುವಾಗ ಯಶೋಧರೆ ಗಂಡು ಮಗುವಿನ ತಾಯಿಯಾದಳು. ಪುತ್ರನಿಗೆ ಸಿದ್ಧಾರ್ಥನೇ 'ರಾಹುಲ'ನೆಂದು ನಾಮಕರಣ ಮಾಡಿದನು. ರಾಜ ಶುದ್ಧೋಧನ ಪುತ್ರೋತ್ಸವ ಸಮಾರಂಭವನ್ನು ಅತ್ಯಂತ ವೈಭವದೊಡನೆ ನೆರವೇರಿಸಿದನು. ಬಡಬಗ್ಗರಿಗೆ ಅಪಾರ ದಾನ ಧರ್ಮ ಮಾಡಿದನು.
 
==ವೈರಾಗ್ಯ==
೫,೬೦೧

edits

"https://kn.wikipedia.org/wiki/ವಿಶೇಷ:MobileDiff/585333" ಇಂದ ಪಡೆಯಲ್ಪಟ್ಟಿದೆ