ಉತ್ಪಾದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಸೇರಿಸಿದ್ದು
ಚಿತ್ರ ಸೇರಿಸಿದ್ದು,ಬಾಹ್ಯ ಸಂಪರ್ಕ ಸೇರಿಸಿದ್ದು
೩ ನೇ ಸಾಲು:
==೧. ಉತ್ಪಾದನೆ==
 
ವಿಶಾಲವಾದ ಅರ್ಥದಲ್ಲಿ 'ಉತ್ಪಾದನೆ' ಎಂದರೆ [[ಮಾನವ]]ನ ಬಯಕೆಗಳನ್ನು ತೃಪ್ತಿಪಡಿಸುವುದರ ಸಲುವಾಗಿ ಕೈಗೊಳ್ಳುವ ಚಟುವಟಿಕೆಗಳೆಂದು ಅರ್ಥ. ಆದರೆ [[ಅರ್ಥಶಾಸ್ತ್ರ]]ದಲ್ಲಿ ಅದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಇದರನುಗುಣವಾಗಿ ಹೇಳುವುದಾದರೆ ವಸ್ತುವಿನಲ್ಲಿ [[ತುಷ್ಟಿಗುಣ]] ಸೇರಿಸುವುದಕ್ಕೆ ಉತ್ಪಾದನೆ ಎಂದು ಕರೆಯುತ್ತಾರೆ. ಅಥವಾ [[ಬಳಕೆ]]ಯ [[ಭಾಷೆ]]ಯಲ್ಲಿ ವಸ್ತುಗಳನ್ನು ತಯಾರಿಸುವುದಕ್ಕೆ 'ಉತ್ಪಾದನೆ' ಎಂದು ಕರೆಯುತ್ತಾರೆ<ref>Kotler, P., Armstrong, G., Brown, L., and Adam, S. (2006) Marketing, 7th Ed. Pearson Education Australia/Prentice Hall.</ref>. ಆದರೆ ಇದು ಸರಿಯಲ್ಲ. ಏಕೆಂದರೆ ಮಾನವನು ಯಾವ ವಸ್ತುಗಳನ್ನು ಸೃಷ್ಟಿಸಲಾರನು. ಎಲ್ಲ ವಸ್ತುಗಳನ್ನು [[ಪ್ರಕೃತಿ]]ಯೇ ಒದಗಿಸುತ್ತದೆ. ಪ್ರಕೃತಿಯು ಒದಗಿಸಿದ ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸಿ ಅವು ಮಾನವನ ಬಯಕೆಗಳನ್ನು ತೃಪ್ತಿಪಡಿಸುವಂತೆ ಮಾಡುವ ಕ್ರಿಯೆಯೇ '''ಉತ್ಪಾದನೆ'''. ವಸ್ತುಗಳ ಉಪಯುಕ್ತತೆಯನ್ನು ಹೆಚ್ಚಿಸುವುದೆಂದರೆ ಅವುಗಳ ಗುಣಮಟ್ಟವನ್ನು ಹೆಚ್ಚಿಸುವುದು. ಆದುದರಿಂದ ವಸ್ತುಗಳ ತುಷ್ಟಿಗುಣವನ್ನು ಹೆಚ್ಚಿಸಿ, ಅವುಗಳ ಪ್ರಯೋಜನವನ್ನು ಮತ್ತು ಮೌಲ್ಯವನ್ನು, ಇನ್ನೂ ಹೆಚ್ಚಾಗುವಂತೆ ಮಾಡುವುದೇ ಉತ್ಪಾದನೆಯಾಗಿದೆ. ವಸ್ತುಗಳಲ್ಲಿರುವ ತುಷ್ಟಿಗುಣವನ್ನು ಉಪಯೋಗಿಸುವುದು ಅನುಭೋಗವಾದರೆ, ವಸ್ತುಗಳಿಗೆ ತುಷ್ಟಿಗುಣ ಸೇರಿಸುವುದು ಉತ್ಪಾದನೆಯಾಗಿದೆ. ಆದರೆ ಕೇವಲ ತುಷ್ಟಿಗುಣ ಸೃಷ್ಟಿಯೇ ಉತ್ಪಾದನೆಯಾಗಲು ಸಾಧ್ಯವಿಲ್ಲ. ತುಷ್ಟಿಗುಣದ ಜೊತೆಗೆ ಮೌಲ್ಯವೂ ಹೆಚ್ಚಾಗಬೇಕು. ಆದುದರಿಂದ ಉತ್ಪಾದನೆಯೆಂದರೆ ವಸ್ತುಗಳ ಸೃಷ್ಟಿಯೆಂದು ತಿಳಿದುಕೊಳ್ಳಬಾರದು. ಏಕೆಂದರೆ ಮಾನವನು ವಸ್ತುಗಳನ್ನು ಸೃಷ್ಟಿಸಲಾರನು. ಎಲ್ಲಾ ವಸ್ತುಗಳೂ ನಿಸರ್ಗದತ್ತವಾಗಿದೆ. ನಿಸರ್ಗದಲ್ಲಿ ಸಿಗುವ ಪ್ರಯೋಜನವಿಲ್ಲದ ಅಥವಾ ಕಡಿಮೆ ಪ್ರಯೋಜನವುಳ್ಳ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ ಅವುಗಳ ಉಪಯುಕ್ತತೆಯನ್ನು ಮೌಲ್ಯವನ್ನೂ ಹೆಚ್ಚಿಸುವುದೇ ಉತ್ಪಾದನೆಯಾಗಿದೆ. ಉದಾಹರಣೆಗೆ, [[ಅರಣ್ಯ]]ದಲ್ಲಿ ಅನೇಕ [[ಮರ]]ಗಳಿವೆ ಅವು [[ನಿಸರ್ಗ]]ದತ್ತವಾಗಿವೆ ಅಲ್ಲದೇ ಅಲ್ಲಿ ಅವು [[ನಿರುಪಯುಕ್ತ]]ವಾಗಿವೆ. ಆದರೆ ಅವುಗಳನ್ನು ಕಡಿದು, ದಿಮ್ಮಿಗಳನ್ನು [[ಕಾರ್ಖಾನೆ]]ಗೆ ತಂದು ಕುರ್ಚಿ, [[ಮೇಜು]]ಗಳನ್ನು ತಯಾರಿಸಿದರೆ ಅವುಗಳ ಉಪಯುಕ್ತತೆ ಮತ್ತು ಮೌಲ್ಯ ಎರಡೂ ಹೆಚ್ಚಾಗುತ್ತವೆ. ಅದೇ ಪ್ರಕಾರ [[ಗಣಿ]]ಯಲ್ಲಿರುವ [[ಕಲ್ಲಿದ್ದಲು]] ಸಹಾ ನಿಸರ್ಗದತ್ತವಾಗಿದ್ದು, ನಿರುಪಯುಕ್ತವಾಗಿದೆ. ಅಲ್ಲಿಂದ ಅದನ್ನು ಹೊರ ತೆಗೆದು ಕಾರ್ಖಾನೆಗಳಿಗೆ ಸಾಗಿಸಿದರೆ, ಅದರ ಉಪಯುಕ್ತತೆ ಮತ್ತು ಮೌಲ್ಯಗಳೆರಡೂ ಹೆಚ್ಚಾಗುತ್ತದೆ. ಈ ಪ್ರಕಾರ ಮಾನವನು ತನ್ನ ಬಯಕೆಗಳ ತೃಪ್ತಿಗಾಗಿ ವಸ್ತುಗಳಿಗೆ ತುಷ್ಟಿಗುಣ ಸೇರಿಸಿ, ಅದರ ಮೌಲ್ಯವನ್ನು ಹಾಗೂ ಉಪಯುಕ್ತತೆಯನ್ನು ಹೆಚ್ಚಿಸುವುದಕ್ಕೆ [[ಅರ್ಥಶಾಸ್ತ್ರ]]ದಲ್ಲಿ 'ಉತ್ಪಾದನೆ' ಎಂದು ಕರೆಯುತ್ತಾರೆ.
[[ಚಿತ್ರ:Glue couting.JPG|thumbnail|left|ಗ್ಲೂ ಕಾರ್ಖಾನೆ]]
 
==೨. ಉತ್ಪಾದನೆಯ ರೂಪಗಳು(Forms of Production)==
Line ೨೬ ⟶ ೨೭:
 
===೩. ಉತ್ಪಾದನಾಂಗಗಳು(Factors of Production)===
 
[[ಚಿತ್ರ:Plastic granulats as raw material - Granulats plastiques comme matière première (3266692163).jpg|thumbnail|right|ಕಚ್ಚಾ ಪ್ಲಾಸ್ಟಿಕ್]]
ಉತ್ಪಾದನಾ ಕ್ರಿಯೆಯಲ್ಲಿ ಭಾಗವಹಿಸುವ ಅಂಗಗಳಿಗೆ ಉತ್ಪಾದನಾಂಗಗಳೆಂದು ಕರೆಯುತ್ತಾರೆ. ಅವುಗಳನ್ನು ಉತ್ಪಾದನೆಯ ಘಟಕಗಳೆಂದೂ ಸಹಾ ಕರೆಯಬಹುದು. ಯಾವುದೇ ವಸ್ತುವಿನ ಉತ್ಪಾದನೆಗೆ ನಾಲ್ಕು ಅಂಶಗಳ ಅವಶ್ಯಕತೆಯಿದೆ. ಅವು ಯಾವುದೆಂದರೆ
Line ೪೧ ⟶ ೪೪:
 
==ಇವುಗಳನ್ನು ನೋಡಿ==
 
*[[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ]]
 
*[[ಭದ್ರಾವತಿ ಕಾಗದದ ಕಾರ್ಖಾನೆ]]
 
*[[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]]
 
*[[ವಿಶ್ವ ವ್ಯಾಪಾರ ಸಂಸ್ಥೆ (ಪುನರ್ನಿರ್ದೇಶನ ವಿಶ್ವ ವ್ಯಾಪಾರ ಸಂಘಟನೆ) ]]
 
==ಉಲ್ಲೇಖ==
"https://kn.wikipedia.org/wiki/ಉತ್ಪಾದನೆ" ಇಂದ ಪಡೆಯಲ್ಪಟ್ಟಿದೆ