ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
 
=='''ಕೈಗಾರಿಕಾ ನೀತಿ'''==
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನೀತಿಯನ್ನು '[[ಕೈಗಾರಿಕಕೈಗಾರಿಕಾ ನೀತಿ]]'(Industrial policy) ಎಂದು ಕರೆಯಲಾಗುತ್ತದೆ.<ref>Graham, Otis L. (1994). Losing Time: The Industrial Policy Debate. Cambridge, MA: Harvard University Press. ISBN 978-0-674-53935-8.</ref> ಕೈಗಾರಿಕಾ ಪ್ರಗತಿಯ ಬಗೆಗೆ ಸರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತ ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರವು ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು, ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆಧಾರದ ಮೇಲೆ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು ಮೊದಲಾದ ಅಂಶಗಳು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು. ಹಣ ಸಂಬಂಧಿ ನೀತಿ, ಕೋಶೀಯ ನೀತಿ, ಕಾರ್ಮಿಕ ನೀತಿ, ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಮುಂತಾದ ವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
==='''ಕೈಗಾರಿಕಾ ನೀತಿಯ ಅವಶ್ಯಕತೆ'''===
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆ ತುಂಬ ಮುಖ್ಯವಾದದ್ದು.<ref>http://www.livemint.com/Opinion/DQe9KahMvaUXejuR5tekOO/India8217s-new-industrial-policy.html</ref>
೪೩ ನೇ ಸಾಲು:
*ವಿಕಾಸಶೀಲ ಆರ್ಥಿಕತೆಯಲ್ಲಿ ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳಿಗೆ ಪ್ರೋತ್ಸಾಹ ನೀಡಲು, ಬೃಹತ್ ಉದ್ಯಮಗಳು ಹತ್ತಿಕ್ಕದಂತೆ ಕಾಪಾಡಲು ಮತ್ತು ಈ ಉದ್ಯಮಗಳಿಗೆ ನೆರವು ನೀಡಲು ಸರ್ಕಾರವು ಕೈಗಾರಿಕಾ ನೀತಿಯ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
[[ಚಿತ್ರ:ఇటుకల తయారి. 'సదుఁ' వద్ద తీసిన (5).JPG|thumbnail|right|ಇಟ್ಟಿಗೆಯನ್ನು ತಯಾರು ಮಾಡುವ ಸಣ್ಣ ಕೈಗಾರಿಕೆ]]
 
=='''ಕೈಗಾರಿಕಾ ಹಣಕಾಸು'''==
ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ. ಸಣ್ಣ ಪ್ರಮಾಣದ, ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು, ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ, ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ