ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ತಿದ್ದುಪಡಿ ಮಾಡಿದ್ದು
೨ ನೇ ಸಾಲು:
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ [[ಆರ್ಥಿಕತೆ]]ಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ.<ref>http://www.businessdictionary.com/definition/industry.html</ref> ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, [[ಕೃಷಿ]]ಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಾಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಢಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅನಿವಾರ್ಯ.
 
=='''ಕೈಗಾರಿಕೀಕರಣ ಪ್ರಾಮುಖ್ಯತೆ'''==<ref>http://www.yourarticlelibrary.com/economics/role-of-industrialization-in-the-economic-development-of-india/4664/</ref>
 
ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಆರ್ಥಿಕಾಭಿವೃದ್ಢಿಯಲ್ಲಿ ಕೈಗಾರಿಕೀಕರಣದ ಮಹತ್ವ ತಿಳಿಯುತ್ತದೆ.<ref>http://www.yourarticlelibrary.com/economics/role-of-industrialization-in-the-economic-development-of-india/4664/</ref>
 
# '''ಕೃಷಿಯ ಪ್ರಗತಿಗೆ ಕೊಡುಗೆ''': ಆರ್ಥಿಕತೆಯ ಇತರ ವಲಯಗಳ ಪ್ರಗತಿಗೆ ಕೈಗಾರಿಕಾ ಬೆಳವಣಿಗೆ ಅತ್ಯಂತ ಅವಶ್ಯಕ. ಕೈಗಾರಿಕೆಗಳು ಕೃಷಿಗೆ ಅಗತ್ಯವಿರುವ ಹೂಡುವಳಿಗಳನ್ನು(Inputs) ಒದಗಿಸುತ್ತವೆ. ಆಧುನಿಕ ಬೇಸಾಯ ಪದ್ಧತಿಗೆ ಬೇಕಿರುವ ಯಂತ್ರಗಳು, [[ರಾಸಾಯನಿಕ ಗೊಬ್ಬರಗಳು]], [[ಕೀಟನಾಶಕಗಳು]] ಮೊದಲಾದವು ಕೈಗಾರಿಕೋತ್ಪನ್ನಗಳೇ. ಅಂತೆಯೇ ಕೃಷಿಯ ಉತ್ಪನ್ನಗಳನ್ನು ಬಳಸಿಕೊಳ್ಳಲು ಕೈಗಾರಿಕೆಗಳು ಅನಿವಾರ್ಯ. ಆದುದರಿಂದ ಕೃಷಿ ವಲಯದ ಬೆಳವಣಿಗೆಗೆ ಕೈಗಾರಿಕೆಗಳ ಪಾತ್ರ ಬಹಳ ಮಹತ್ವವಾದ್ದದ್ದು.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ