ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತಿದ್ದುಪಡಿ ಮಾಡಿದ್ದು, ಚಿತ್ರಗಳನ್ನು ಸೇರಿಸಿದ್ದು
೨೦ ನೇ ಸಾಲು:
=='''ಪ್ರಮುಖ ಕೈಗಾರಿಕೆಗಳು'''==
 
==='''ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ'''===
[[ಚಿತ್ರ:TATA STEEL011.jpg|thumbnail|right|ಟಾಟಾ ಉಕ್ಕಿನ ಕಾರ್ಖಾನೆ]]
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದೊಂದು ಮೂಲ ಹಾಗೂ ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಸುವುದಕ್ಕೆ ಮತ್ತು ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ.
ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೆದಿತ್ತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್‍ನಲ್ಲಿ ಮತ್ತು ೧೮೭೪ ರಲ್ಲಿ ಬಿಹಾರದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದ್ದಿದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ.
 
==='''ಹತ್ತಿ ಬಟ್ಟೆಯ ಕೈಗಾರಿಕೆ'''===
[[ಚಿತ್ರ:Girl workers in a booming Bombay textile mill 8b09843v.jpg|thumbnail|left|ಮುಂಬಯಿ ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು]]
ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆಯಾಗಿ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ ಮುಂಬಯಿಯಲ್ಲಿಯೇ ಕೇಂದ್ರಿಕೃತವಾಗಿತ್ತು. ನಂತರ ಉತ್ತರಪ್ರದೇಶ, ಗುಜರಾತ್, ಬಂಗಾಲ, ಮಹರಾಷ್ಟ್ರ, ತಮಿಳುನಾಡು, ಹರ್ಯಾಣಾ, ಕರ್ನಾಟಕ ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರವಾಗಿದೆ.
 
==='''ಸಕ್ಕರೆ ಕೈಗಾರಿಕೆಗಳು'''===
[[ಚಿತ್ರ:Sugar plant dsc09052.jpg|thumbnail|right|ಸಕ್ಕರೆ ಕಾರ್ಖಾನೆ]]
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆಯಾಗಿದೆ. ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ ಕಬ್ಬು ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ