ಟಿ.ಜಿ.ಲಿಂಗಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
 
==ಸುಮಧುರ ಗೀತೆಗಳು==
ಟಿ. ಜಿ. ಲಿಂಗಪ್ಪನವರ ಸಂಗೀತ ನಿರ್ದೇಶನದ ಹಾಡುಗಳು ಒಂದಕ್ಕಿಂತ ಒಂದು ಎಂಬಂತೆ ಜನಪ್ರಿಯವಾಗಿವೆ. ಸ್ಕೂಲ್ ಮಾಸ್ಟರ್ ಚಿತ್ರ ‘ಸ್ವಾಮಿ ದೇವನೆ ಲೋಕಪಾಲನೆ’ ಗೀತೆಯಂತೂ ಬಹುತೇಕ ಶಾಲೆಗಳಲ್ಲಿ ಪ್ರಾರ್ಥನೆಯಾಗಿ ನಿರಂತರವಾಗಿ ಹಾಡಲ್ಪಡುತ್ತಿತ್ತು.ಇದಲ್ಲದೇ ಇದೇ ಚಿತ್ರದ 'ರಾಧಾಮಾಧವ ವಿನೋದ ಹಾಸವು", 'ಭಾಮೆಯ ನೋಡಲು ತಾ ಬಂದ' ‘ಕಿತೂರು ಚೆನ್ನಮ್ಮ’ ಚಿತ್ರದಲ್ಲಿನ ಅಕ್ಕನ ವಚನವಾದ ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’ ಗೀತೆಗೆ ಕರಗದ ಮನವೇ ಇಲ್ಲ. ಬಭ್ರುವಾಹನದ ‘ಆರಾಧಿಸುವೆ ಮದನಾರಿ’, ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’; ಶ್ರೀಕೃಷ್ಣದೇವರಾಯದ ಬಹುಜನ್ಮದ ಪೂಜಾಫಲ, ಶ್ರೀ ಚಾಮುಂಡೇಶ್ವರಿ, ತಿರುಪತಿ ಗಿರಿವಾಸ; ಗಾಳಿಗೋಪುರದ ‘ಯಾರಿಗೆ ಯಾರುಂಟು’; ಚಕ್ರತೀರ್ಥದ ‘ಹಗಲು ಹರಿಯಿತು’, ‘ನಿನ್ನ ರೂಪ ಕಣ್ಣಲಿ’; ದೇವರ ಕಣ್ಣು ಚಿತ್ರದ ‘ನಿನ್ನ ನೀನು ಮರೆತರೇನು ಸುಖವಿದೆ’, ಮೊದಲ ತೇದಿಯ ‘ಒಂದರಿಂದ ಇಪ್ಪತ್ತೊಂದರವರೆಗೆ’, ರತ್ನಗಿರಿ ರಹಸ್ಯದ,'ಅಮರ ಮಧುರ ಪ್ರೇಮ', ‘ಅನುರಾಗದ ಅಮರಾವತಿ’, ಸತಿ ಶಕ್ತಿಯ ‘ಪವಡಿಸು ಪಾಲಾಕ್ಷ’, ಶ್ರುತಿ ಸೇರಿದಾಗ ಚಿತ್ರದ ‘ಬೊಂಬೆಯಾಟವಯ್ಯಾ’, ಭಕ್ತ ಸಿರಿಯಾಳದ ‘ಶಿವ ಶಿವ ಎಂದರೆ ಭಯವಿಲ್ಲ’, ಯಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ ಚಿತ್ರದ ‘ಶ್ರೀಕರ ಶುಭಕರ ಶಿವಶಂಕರ’ ಹೀಗೆ ಅಸಂಖ್ಯಾತ ಸುಶ್ರಾವ್ಯ ಹಾಡುಗಳು ಒಂದಾದ ಮೇಲೊಂದು ಮನಃಪಟಲದಲ್ಲಿ ಮುದವಾಗಿ ಸಂಚಲನಗೊಳ್ಳುತ್ತವೆ. ಇದಲ್ಲದೆ ಟಿ. ಜಿ. ಲಿಂಗಪ್ಪನವರ ನಿರ್ದೇಶನದಲ್ಲಿ ಅನೇಕ ಸುಂದರ ಭಕ್ತಿಗೀತಗಳೂ ಹರಿದು ಬಂದಿದ್ದು ಕೇಳುಗರ ಮನಗಳನ್ನು ನಿರಂತರವಾಗಿ ತಣಿಸಿವೆ.
 
==ಸಂಗೀತದ ಸಮರ್ಥ ಬಳಕೆ==
"https://kn.wikipedia.org/wiki/ಟಿ.ಜಿ.ಲಿಂಗಪ್ಪ" ಇಂದ ಪಡೆಯಲ್ಪಟ್ಟಿದೆ