ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಹವಾಮಾನ}}
[[File:FoggDam-NT.jpg|alt=Black storm clouds under which a grey sheet of rain is falling on grasslands.|thumb|right|upright=1.4|A rain shaft at the base of a [[thunderstorm]]]]
[[File:Rain-on-Thassos.jpg|thumb|upright=1.4|Torrential rain in [[Greece]].]]
ವಾತಾವರಣದಲ್ಲಿರುವ [[ನೀರಾವಿ]]ಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು [[ಭೂಮಿ]]ಯ ಮೇಲೆ ಬೀಳುವ ಪ್ರಕ್ರಿಯೆಯೇ '''ಮಳೆ'''. ಮೋಡಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು ವಿರ್ಗಾ ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ [[ಮರುಭೂಮಿ]]ಯ ಪ್ರದೇಶಗಳಲ್ಲಿ ಘಟಿಸುತ್ತದೆ.
 
 
== ಮಳೆಯ ಉತ್ಪತ್ತಿ ==
Line ೮ ⟶ ೯:
 
== ಮಳೆಯ ಬಗೆಗಳು ==
 
ಮಳೆ ಬೀಳಲು ನೆರವಾದ ಕಾರಣ ಮತ್ತು ವಾತಾವರಣದ ಸ್ಥಿತಿಗಳ ಆಧಾರದ ಮೇಲೆ ಮಳೆಯನ್ನು ಈ ಮೂರು ಬಗೆಯವಾಗಿ ವಿಂಗಡಿಸಬಹುದು.
* ಓರೋಗ್ರಾಫಿಕ್ ಮಳೆ
೧೫ ನೇ ಸಾಲು:
 
=== ಓರೋಗ್ರಾಫಿಕ್ ಮಳೆ ===
 
 
ರಿಲೀಫ್ ಮಳೆಯೆಂದೂ ಸಹ ಕರೆಸಿಕೊಳ್ಳುವ ಈ ಬಗೆಯ ಮಳೆಯು ಹೆಚ್ಚಿನ ಪ್ರಮಾಣದ ತೇವಾಂಶವುಳ್ಳ ಮಾರುತಗಳು ಘಟ್ಟಗಳ ಸಾಲಿನಂತಹ ಪ್ರಾಕೃತಿಕ ಅಡೆತಡೆಯನ್ನು ಎದುರಿಸಿದಾಗ ಉಂಟಾಗುತ್ತದೆ. ಹೀಗೆ ತಡೆಯುಂಟಾದಾಗ ಮಾರುತಗಳು ಇನ್ನೂ ಎತ್ತರಕ್ಕೆ ಚಲಿಸುತ್ತವೆ. ಎತ್ತರ ಹೆಚ್ಚಿದಂತೆಲ್ಲಾ [[ಗಾಳಿಯ ಒತ್ತಡ]] ಕಡಿಮೆಯಾಗುತ್ತಾ ಹೋಗುತ್ತದೆ ಮತ್ತದರ ಪರಿಣಾಮವಾಗಿ ಉಷ್ಣತೆಯು ಕುಸಿಯತೊಡಗುವುದು. ಉಷ್ಣತೆಯು ಕಡಿಮೆಯಾದಾಗ ತೇವಾಂಶದಲ್ಲಿ ಹೆಚ್ಚಳವುಂಟಾಗಿ ಸೂಕ್ಷ್ಮಗಾತ್ರದ ನೀರಹನಿಗಳುಳ್ಳ [[ಮೋಡ]]ಗಳ ಉತ್ಪತ್ತಿಯಾಗುವುದು. ಆದರೆ ತೇವಾಂಶ ಮತ್ತೂ ಹೆಚ್ಚತೊಡಗಿದಾಗ ಮೋಡಗಳಲ್ಲಿನ ನೀರಿನಂಶವು ಹನಿಗೂಡತೊಡಗುತ್ತದೆ. ಇಂತಹ ಹನಿಗಳು ಭಾರದ ಕಾರಣದಿಂದಾಗಿ ಮೋಡಗಳಿಂದ ಕೆಳಬಿದ್ದು ಮಳೆಯ ರೂಪದಲ್ಲಿ ನೆಲವನ್ನು ಸೇರುತ್ತವೆ.
ಪರ್ವತದ ಹೊರಮುಖದಿಂದ ಮೇಲೆ ಸಾಗಿ ಮುಂದುವರಿದ ಮಳೆಯ ಮಾರುತವು ಪರ್ವತಸಾಲಿನ ಹಿಂಭಾಗ ತಲುಪಿ ಕೆಳಗಿಳಿಯತೊಡಗುವುದು. ಹೀಗೆ ಇಳಿಯುವ ಕಾರಣದಿಂದಾಗಿ ಗಾಳಿಗಳಲ್ಲಿ ತೇವಾಂಶ ಕಡಿಮೆಯಿರುವುದು. ಅಲ್ಲದೆ ಪರ್ವತದ ಮುಂಭಾಗದ ಪ್ರದೇಶದಲ್ಲಿ ತನ್ನಲ್ಲಿದ್ದ ಹೆಚ್ಚಿನ ತೇವಾಂಶವನ್ನು ಮಳೆಯ ರೂಪದಲ್ಲಿ ಮಾರುತವು ಹೊರಹಾಕಿರುತ್ತದೆ. ಆದ್ದರಿಂದಲೇ ಪರ್ವತದ ಹಿಂಭಾಗದ ಪ್ರದೇಶವು ಇಂತಹ ಮಾರುತಗಳಿಂದ ಅತ್ಯಲ್ಪ ಪ್ರಮಾಣದ ಮಳೆಯನ್ನು ಮಾತ್ರ ಪಡೆಯುವುದು. ಇಂತಹ ಪ್ರದೇಶವನ್ನು [[ಪರ್ವತದ ಮಳೆಯ ನೆರಳಿನ ಪ್ರದೇಶ]] ಎಂದು ಕರೆಯಲಾಗುತ್ತದೆ. [[ಹಿಂದೂ ಮಹಾಸಾಗರ]]ದ ಮಳೆಯ ಮಾರುತಗಳು ಓರೋಗ್ರಾಫಿಕ್ ಮಳೆಗೊಂದು ಒಳ್ಳೆಯ ಉದಾಹರಣೆ. [[ಭಾರತ]]ದಲ್ಲಿ ಬೀಳುವ ಒಟ್ಟು ಮಳೆಯ ೮೦% ಪ್ರಮಾಣ ಈ ರೀತಿಯದೆಂದು ಹೇಳಲಾಗುತ್ತದೆ.
Line ೨೪ ⟶ ೨೨:
 
=== ಚಂಡಮಾರುತದ ಮಳೆ ===
 
ಈ ಬಗೆಯ ಮಳೆಯು [[ಚಂಡಮಾರುತ]]ದ ಚಟುವಟಿಕೆಯಿಂದ ಉಂಟಾಗುತ್ತದೆ. ಇದು ಚಂಡಮಾರುತದ ಹೊರ ಅಂಚಿನ ಪ್ರದೇಶದಲ್ಲಿ ವ್ಯಾಪಕವಾಗಿ (ಕೆಲವೊಮ್ಮೆ ಅತಿ ಭಾರಿಯಾಗಿ) ಸಂಭವಿಸುವುದು. ವಿಭಿನ್ನ ಉಷ್ಣತೆ, ಸಾಂದ್ರತೆ ಮತ್ತು ತೇವಾಂಶವನ್ನು ಹೊಂದಿರುವ ಎರಡು ಬೃಹತ್ [[ವಾಯುಸಮೂಹ]](ಏರ್ ಮಾಸ್)ಗಳನ್ನು ಒಂದನ್ನೊಂದು ಸಂಧಿಸಿದಾಗ ಚಂಡಮಾರುತವು ಉಂಟಾಗುತ್ತದೆ. ಉಷ್ಣವಲಯದ ತೇವಭರಿತ ಬಿಸಿ ಮಾರುತವು [[ಧ್ರುವಪ್ರದೇಶ]]ದ ತಂಪು ಮಾರುತವನ್ನು ಸಂಧಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ಈ ಸಂಧಿಸ್ಥಾನವು ಒಂದು ಬೆಚ್ಚಗಿನ ಮುಖ ಮತ್ತು ಒಂದು ತಂಪಾದ ಮುಖಗಳನ್ನು ಹೊಂದಿರುತ್ತದೆ. ಬೆಚ್ಚಗಿನ ಭಾಗದ ಬಿಸಿ ಹಗುರ ಗಾಳಿಯು ಭಾರವಾದ ತಂಪುಗಾಳಿಗಿಂತ ಮೇಲಕ್ಕೇರುವುದು. ಬಿಸಿಗಾಳಿ ಮೇಲೇರಿದಂತೆಲ್ಲಾ ತಂಪಾಗತೊಡಗಿ ಅದರೊಳಗಿನ ತೇವಾಂಶವು ಒತ್ತಾಗತೊಡಗಿ ಮೋಡಗಳ ನಿರ್ಮಾಣವಾಗುವುದು. ಈ ರೀತಿಯ ಮೋಡವು ಆಲ್ಟೋಸ್ಟ್ರೇಟಸ್ ಮೋಡವೆಂಬ ಹೆಸರು ಪಡೆದಿದೆ. ಇಂತಹ ಮೋಡಗಳಿಂದ ಮಳೆಯು ಬಿಟ್ಟೂಬಿಡದೆ ಹಲವು ಗಂಟೆಗಳಿಂದ ಹಲವು ದಿನಗಳವರೆಗೆ ಬೀಳುತ್ತದೆ.
ಸಂಧಿಸ್ಥಾನದ ತಂಪುಮುಖದಲ್ಲಿ ತಂಪುಗಾಳಿಯು ಬಿಸಿಗಾಳಿಯನ್ನು ತೀವ್ರಗತಿಯಲ್ಲಿ ಮೇಲಕ್ಕೆ ದಬ್ಬಿ ಸಾಂದ್ರ ಮಳೆಮೋಡಗಳ ನಿರ್ಮಾಣದಲ್ಲಿ ಸಹಕರಿಸುವುದು. ಈ ರೀತಿಯ ಮೋಡವು ಕ್ಯುಮುಲೋನಿಂಬಸ್ ಮೋಡವೆಂದು ಕರೆಯಿಸಿಕೊಳ್ಳುವುದು. ಈ ಮೋಡಗಳಿಂದ ಬೀಳುವ ಮಳೆಯು ಸಾಮಾನ್ಯವಾಗಿ ಭಾರೀ ಮಳೆಯಾಗಿದ್ದು ಸಣ್ಣ ಅವಧಿಯದಾಗಿರುವುದು.
Line ೩೦ ⟶ ೨೭:
== ಮಳೆಯಲ್ಲಿ ಮಾನವನ ಪ್ರಭಾವ ==
[[ಚಿತ್ರ:Rain in Kolkata.jpg‎|thumb|right|250px|ಭಾರತದ [[ಕೋಲ್ಕಾಟಾ]] ನಗರದ ರಸ್ತೆಯೊಂದರ ಮೇಲೆ ಬೀಳುತ್ತಿರುವ ಮಳೆ]]
 
ಮಾನವನಿರ್ಮಿತ [[ಯಂತ್ರ]]ಗಳು ಮತ್ತು ಇತರ ಪ್ರದೂಷಣ ಸಾಧನಗಳಿಂದ ಸೂಕ್ಷ್ಮ ಗಾತ್ರದ ವಸ್ತುಕಣಗಳು ಮೋಡದ ಉತ್ಪತ್ತಿಯಲ್ಲಿ ಪಾತ್ರ ವಹಿಸುವುವು. ಒಂದು ವಿಶಿಷ್ಟ ಸಂಗತಿಯೆಂದರೆ ವಾಹನಗಳ ದಟ್ಟಣೆಯಿಂದಾಗಿ ವಾರದ ಮೊದಲ ಭಾಗದಲ್ಲಿ ಮೋಡಗಳ ರಚನೆಯುಂಟಾಗಿ ವಾರಾಂತ್ಯದಲ್ಲಿ ಅವು ಮಳೆ ಸುರಿಸುವ ಸಂಭವ ಹೆಚ್ಚಾಗಿರುತ್ತದೆ. ಇದಕ್ಕೊಂದು ಉದಾಹರಣೆಯೆಂದರೆ [[ಯು.ಎಸ್.ಎ]] ನ ಅತಿ ನಿಬಿಡ ಜನವಸತಿ ಮತ್ತು ವಾಹನದಟ್ಟಣೆಯುಳ್ಳ ಪೂರ್ವ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಳುವ ಮಳೆಯ ಪ್ರಮಾಣವು ಗಣನೀಯವಾಗಿ ಹೆಚ್ಚು. ನೆಲದ ಮೇಲೆ ಹಸಿರು ಹೆಚ್ಚಿದ್ದಷ್ಟೂ ಮೋಡಗಳ ಉತ್ಪತ್ತಿ ಹೆಚ್ಚಿ ತನ್ಮೂಲಕ ಮಳೆಯ ಪ್ರಮಾಣವೂ ಅಧಿಕವಾಗಿರುತ್ತದೆ. ಆದರೆ ಮಾನವನು ಅವಿರತವಾಗಿ ನಡೆಸಿಕೊಂಡು ಬಂದಿರುವ ಅರಣ್ಯನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯತೊಡಗಿದೆ.
 
== ಮಳೆಯ ವರ್ಗೀಕರಣ ==
ಪ್ರತಿ ಗಂಟೆಗೆ ಬೀಳುವ ಪ್ರಮಾಣಕ್ಕೆ ಅನುಗುಣವಾಗಿ ಮಳೆಯನ್ನು ಕೆಳಕಂಡಂತೆ ವರ್ಗೀಕರಿಸಬಹುದು.
 
* ತುಂತುರು ಮಳೆ - ಗಂಟೆಗೆ ೦.೨೫ ಮಿಲಿಮೀಟರಿಗಿಂತ ಕಡಿಮೆ ಪ್ರಮಾಣ.
* ಹಗುರ ಮಳೆ - ಗಂಟೆಗೆ ೦.೨೫ ಮಿಲಿಮೀಟರಿನಿಂದ ೧.೦ ಮಿಲಿಮೀಟರ್ ವರಗೆ.
Line ೪೫ ⟶ ೪೦:
== ಮಳೆಯ ಲಕ್ಷಣಗಳು ==
[[ಚಿತ್ರ:Raindrops.jpg|150px|thumb|right|ಮಳೆಯ ಇನ್ನೊಂದು ನೋಟ]]
 
ಸಾಮಾನ್ಯವಾಗಿ ಮಳೆಯ ಸಣ್ಣ ಹನಿಗಳು ಪೂರ್ಣ ಗೋಲಾಕಾರದಲ್ಲಿರುತ್ತವೆ. ದೊಡ್ಡ ಹನಿಗಳು ಬುಡದಲ್ಲಿ ಮಟ್ಟಸವಾಗಿರುತ್ತವೆ. ಅತಿ ದೊಡ್ಡ ಹನಿಗಳು [[ಪ್ಯಾರಾಚೂಟ್]] ಆಕಾರದಲ್ಲಿರುವುವು. ಮಳೆಯ ಹನಿಗಳ ಗಾತ್ರವು ಸಾಮಾನ್ಯವಾಗಿ ೧ ರಿಂದ ೨ ಮಿಲಿಮೀಟರ್ ಗಳಷ್ಟು. ೫ ಮಿ.ಮೀ. ಗಿಂತ ದೊಡ್ಡ ಹನಿಗಳು ಅಸ್ಥಿರಗೊಂಡು ಒಡೆದು ಸಣ್ಣಸಣ್ಣ ಹನಿಗಳಾಗಿ ಮಾರ್ಪಡುತ್ತವೆ. ಈವರೆಗೆ ದಾಖಲಾಗಿರುವಂತೆ ೨೦೦೪ರಲ್ಲಿ [[ಬ್ರೆಜಿಲ್]] ಮತ್ತು ಮಾರ್ಷಲ್ ದ್ವೀಪಗಳಲ್ಲಿ ೧೦ ಮಿ.ಮೀ. ಗಾತ್ರದ ಭಾರೀ ಮಳೆಹನಿಗಳು ಬಿದ್ದುವು. ಆದರೆ ಇಂತಹ ವಿದ್ಯಮಾನ ಬಲು ಅಪರೂಪ.
 
Line ೬೬ ⟶ ೬೦:
 
== ವಿಶ್ವದಲ್ಲಿ ಮಳೆಯ ಪ್ರಮಾಣ ==
 
ಯೂರೋಪಿನಲ್ಲಿ [[ಯು.ಕೆ.]] ದೇಶವು ಹೆಚ್ಚಾಗಿ ಮಳೆಯನ್ನು ಕಾಣುತ್ತದೆ. ಇಲ್ಲಿ ವರ್ಷದಲ್ಲಿ ಮಳೆ ಬೀಳುವ ದಿನಗಳು ಸಹ ಅಧಿಕ. [[ಗಲ್ಫ್ ಸ್ಟ್ರೀಮ್ ಸಾಗರಪ್ರವಾಹ]]ವನ್ನು ಅನುಸರಿಸಿ ಬರುವ [[ನೈಋತ್ಯ ವಾಣಿಜ್ಯ ಮಾರುತ]]ಗಳು ಇದಕ್ಕೆ ಕಾರಣ. ಇಲ್ಲಿನ ಕರಾವಳಿಯಲ್ಲಿ ವಾರ್ಷಿಕ ೪೦ ಅಂಗುಲದಿಂದ ೧೦೦ ಅಂಗುಲದವರೆಗೆ ಮಳೆ ಬೀಳುತ್ತದೆ. ಆದರೆ [[ಬೆಲ್ಜಿಯಮ್]] ನ ಬರ್ಗೆನ್ ನಗರವು ಯುರೋಪಿನಲ್ಲಿ ಅತ್ಯಧಿಕ ಸರಾಸರಿ ವಾರ್ಷಿಕ ಮಳೆ ( ೮೮ ಅಂಗುಲ) ಬೀಳುವ ಪ್ರದೇಶವಾಗಿದೆ.
 
"https://kn.wikipedia.org/wiki/ಮಳೆ" ಇಂದ ಪಡೆಯಲ್ಪಟ್ಟಿದೆ