ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಮುಂದುವರಿಸಲಾಗುತ್ತಿದೆ.
೧ ನೇ ಸಾಲು:
'''ತಸ್ಲೀಮಾ ನಸ್ರೀನ್''' ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ, ಅವರ ದೇಶದಲ್ಲಿ ಮರಣದಂಡನೆಗೆಗಡೀಪಾರಿಗೆ ಗುರಿಯಾದರು. ಇದರಿಂದ ಆತಂಕಗೊಂಡ ಈ ಲೇಖಕಿ ಬಾಂಗ್ಲಾದೇಶವನ್ನು ಬಿಟ್ಟು ಬಂದು ಭಾರತದ ಆಶ್ರಯದಲ್ಲಿದ್ದಾರೆ.
 
=="ಲಜ್ಜಾ" ಕೃತಿಯೊಳಗೆ==
*"ಲಜ್ಜಾ" ಕೇವಲ ಒಂದು ಕಾದಂಬರಿಯಾಗಿರದೆ ಅದು ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಮಾಜೋದಾರ್ಮಿಕಸಮಾಜೋಧಾರ್ಮಿಕ ಆಯಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಬಾಬ್ರಿಮಸೀದಿಯನ್ನು ಕೆಡವಿದ ಪ್ರಕರಣವು ನೆರೆಯ ಬಾಂಗ್ಲಾದೇಶದಲ್ಲಿ ಎಷ್ಟೊಂದು ಹಿಂಸಾಚಾರಕ್ಕೆ ಕಾರಣವಾಯಿತೆಂಬುದನ್ನು ಪ್ರತ್ಯಕ್ಷದರ್ಶಿಯಾದ ಲೇಖಕಿ ಅದನ್ನು ನಿಖರನಿಖರವಾದ ಅಂಕಿಅಂಶಗಳಅಂಕಿ-ಅಂಶಗಳ ಮೂಲಕ ಹೇಳುತ್ತಾ ಸಾಗುತ್ತಾರೆ.
*ಬಾಂಗ್ಲಾದೇಶದಲ್ಲಿರುವ ಎರಡುವರೆ ಕೋಟಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಮಾರಣಹೋಮ, ಮನೆಗಳ ಲೂಟಿ, ಬೀದಿ ಮಧ್ಯೆಯೇ, ಹಾಡುಹಗಲೇ ನಡೆದ ಪೈಶಾಚಿಕ ಕೃತ್ಯಗಳು, ಸಾಮೂಹಿಕ ಅತ್ಯಾಚಾರಗಳು, ಇದೆಲ್ಲವನ್ನು ಕಂಡರೂ ಜಾಣಮೌನ, ಜಾಣಕುರುಡು ಪ್ರದರ್ಶಿಸುವ ಸರ್ಕಾರದ ರೀತಿ ನೀತಿಗಳು, ಅಮಾಯಕ ಹಿಂದುಗಳನ್ನು ಬೀದಿ ನಾಯಿಗಿಂತ ಕಡೆಯಾಗಿಸಿ ಚಿತ್ರಹಿಂಸೆ ನೀಡಿದ ಹೇರಳ ದಾಖಲೆಗಳು ಈ ಕೃತಿಯಲ್ಲಿವೆ.
 
==ತಲೆದಂಡದಂತಹ ಕ್ರೂರ ಶಿಕ್ಷೆಗೆ ಗುರಿಯಾದುದು==
*ತಸ್ಲೀಮಾ ನಸ್ರೀನ್ ಮಾನವೀಯತೆಯಿಂದ, ಅಮಾಯಕ ಹಿಂದುಗಳ ಮೇಲೆ ನಡೆದ ಹಿಂಸಾಚಾರದಿಂದ ಆರ್ದ್ರಗೊಂಡು ತಮ್ಮ ಕೃತಿಯ ಮೂಲಕ ಸಾತ್ವ್ತಿಕವಾಗಿ ಪ್ರತಿಭಟಿಸುತ್ತಾರೆ. ಅವರು ಮತಧರ್ಮದ, ಮೂಲಭೂತವಾದಿಗಳ ಅಪಾಯಕಾರಿ ಪ್ರವೃತ್ತಿಯನ್ನು ವಸ್ತುವಾಗಿಸಿದ ಈ ಕೃತಿ ಯಿಂದಾಗಿ ಮುಸ್ಲಿಂ ಸಂಘಟನೆಗಳ ನೇರ ವಕ್ರದೃಷ್ಟಿಯನ್ನು ಎದುರಿಸ ಬೇಕಾಯಿತು.
* ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದುಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ತಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಗೆ ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಕೊಲ್ಲಲು ಷಡ್ಯಂತ್ರಗಳನ್ನು ರೂಪಿಸುತ್ತಿವೆ.
 
 
 
[[ವರ್ಗ :ಉರ್ದು ಲೇಖಕರು]]
[[ವರ್ಗ : ಮಹಿಳಾ ಲೇಖಕರು]]
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ