ಬ್ರಾಡಿಅರಿಥ್ಮಿಯಾಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{ಚುಟುಕು}}
ಬ್ರಾಡಿಅರಿಥ್ಮಿಯಾಸಿಸ್ ಅಥವಾ ಹೃದಯದ ಬಡಿತ ನಿಧಾನವಾಗುವುದು ಎಂಬುದು ಹಿರಿಯ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ.ವಯಸ್ಸಿನ ಕಾರಣದಿಂದಾಗಿ ಕಂಡಕ್ಷನ್ ಸಿಸ್ಟಂ ಅಂದರೆ ಹೃದಯದ ವಾಹಕ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಯಿಂದಾಗಿ ಹೃದಯ ಬಡಿತದ ದರವು (ಬ್ರಾಡಿಕಾರ್ಡಿಯಾ) ನಿಧಾನಗೊಳ್ಳುತ್ತದೆ ಅಥವಾ ಇಲೆಕ್ಟ್ರಿಕಲ್ ಕಂಡಕ್ಷನ್ ನಲ್ಲಿನ ಅಡಚಣೆಯಿಂದಾಗಿ, ಹೃದಯದ ಮೇಲಿನ ಕವಾಟದಲ್ಲಿ ಉತ್ಪತ್ತಿಯಾಗುವ ಪ್ರೇರಣೆಯು ಹೃದಯದ ಕೆಳಗಿನ ಎರಡು ಕವಾಟಗಳನ್ನು ತಲುಪಲು ವಿಫಲವಾಗುತ್ತದೆ(ಎ ವಿ ಬ್ಲಾಕ್). ಈ ಪರಿಸ್ಥಿತಿ ಇರುವ ವ್ಯಕ್ತಿಗಳು ಆಗಾಗ ಕೆಲವು ಸೆಕೆಂಡುಗಳ ವರೆಗೆ ಪ್ರಜ್ನೆ ತಪ್ಪಿ, ಮತ್ತೆ ಚೇತರಿಸಿಕೊಳ್ಳುತ್ತಾರೆ. ಇಂತಹ ಜನರಿಗೆ ತಲೆಸುತ್ತುವುದು, ಒಮ್ಮಿಂದೊಮ್ಮೆಗೆ ದೃಷ್ಟಿ ಮಂಜಾಗುವುದು ಮತ್ತು ನಡೆಯುವಾಗ ಆಯಾಸವಾಗುವುದು ಇತ್ಯಾದಿ ಆಗುತ್ತದೆ.ಹೃದಯದ ಅಸ್ವಸ್ಥತೆಯ ಈ ಲಕ್ಷಣಗಳು ಕೆಲೆವೊಮ್ಮೆ ಮಾತ್ರ ಭಾದಿಸುವುದರಿಂದ, ಬಾಹ್ಯ ರೋಗ ಲಕ್ಷಣಗಳೂ ಕೆಲೆವೊಮ್ಮೆ ಮಾತ್ರ ಕಾಣಿಸಿಕೊಂಡು ಮರೆಯಾಗುತ್ತವೆ. ಆದರೆ ಈ ರೀತಿಯ ಒಂದು ಪರಿಸ್ಥಿತಿಯನ್ನು ಪತ್ತೆ ಮಾಡದಿದ್ದರೆ, ಅಥವಾ ಚಿಕಿತ್ಸೆ ನೀಡದೆ ಹೋದರೆ ಜೀವಕ್ಕೆ ತೊಂದರೆಯಾಗಬಹುದು. ಇದರ ಕಾರಣದಿಂದಾಗಿ ರೋಗಿಯು ಆಗಾಗ ಬೀಳುವುದು , ಮೂಳೆ ಮುರಿತ ಅಥವಾ ತಲೆಗೆ ಪೆಟ್ಟಾಗುವುದು, ಇತರ ಅಪಾಯಗಳಾಗುವ ಸಾಧ್ಯತೆಗಳಿವೆ. ಶಾಶ್ವತ ಪೇಸ್ ಮೇಕರ್ ಅನ್ನು ಉಪಯೋಗಿಸಿದರೆ ಬ್ರಾಡಿಅರಿಥ್ಮಿಯಾಸಿಸ್ ಅಂದರೆ ಹೃದಯದ ನಿಧಾನ ಬಡಿತಕ್ಕೆ ಸುಲಭ ಚಿಕಿತ್ಸೆ ಸಾಧ್ಯವಿದೆ.ಸ್ಥಳೀಯ ಅರಿವಳಿಕೆಯನ್ನು ನೀಡಿ ಎಡ ಅಥವಾ ಬಲಭಾಗದ ಕತ್ತಿನ ಮೂಳೆಯ ಸ್ವಲ್ಪವೇ ಕೆಳಗೆ ಚರ್ಮದ ಅಡಿಯಲ್ಲಿ ಶಾಶ್ವತ ಪೇಸ್ ಮೇಕರ್ ಅಳವಡಿಸುತ್ತಾರೆ. ಇದು ನಿಮಿಷಕ್ಕೆ ೬೦-೭೦ರ ದರದಲ್ಲಿ ಇಲೆಕ್ಟ್ರಿಕಲ್ ಪ್ರೇರಣೆಯ ಬ್ಯಾಕ್ ಅಪ್ ಅನ್ನು ನೀಡಿ, ಅವಶ್ಯಕ ಪ್ರಮಾಣದ ಸ್ನಾಯು ಸಂಕುಚನೆ ಮತ್ತು ಪ್ರೇರಣೆಯನ್ನು ಒದಗಿಸುತ್ತದೆ.