ಮದಕರಿ ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು {{commonscat|Madakari Nayaka}}
RAJA_VEERA_MADAKARI_NAYAKA.jpg ಹೆಸರಿನ ಫೈಲು Didymರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾ...
೭ ನೇ ಸಾಲು:
 
'''ಮದಕರಿ ನಾಯಕ''' , [[ಭಾರತ]] ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲಿ ಒಂದಾದ [[ಚಿತ್ರದುರ್ಗ ನಗರ|ಚಿತ್ರದುರ್ಗ]]ದ ಕೊನೆಯ ಆಳರಸನಾಗಿದ್ದ.<ref>https://netfiles.uiuc.edu/blewis/www/chitradurga.htm</ref> [[ಹೈದರಾಲಿ|ಹೈದರ್ ಅಲಿ]]ಯ [[ಮೈಸೂರು|ಮೈಸೂರಿನ]] ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕ ಸೋಲನ್ನಪ್ಪಿ ಚಿತ್ರದುರ್ಗ ಹೈದರ್‌ ಅಲಿಯ ಪಾಲಾಗುತ್ತದೆ. ಅಲ್ಲದೇ ನಾಯಕ ಅಲಿಯ ಪುತ್ರ [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]]ನಿಂದ ಹತನಾಗುತ್ತಾನೆ.
 
[[image:RAJA VEERA MADAKARI NAYAKA.jpg|thumb|right|ಚಿತ್ರದುರ್ಗದ ಮದಕರಿ ನಾಯಕ]]
ಮದಕರಿಯ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಕೋಟೆಯನ್ನು ಹೈದರ್‌ ಅಲಿಯ ಸೇನೆ ಮುತ್ತಿಗೆ ಹಾಕುತ್ತದೆ. ಹೀಗೆ ಹೈದರ್ ಅಲಿ ಚಿತ್ರದುರ್ಗದ ಕೋಟೆಯನ್ನು ಸುತ್ತುವರಿದಾಗ ಅಲ್ಲಿನ ಹೆಂಗಸೊಬ್ಬಳು ಬಂಡೆಗಳ ನಡುವಿನ ಕಿಂಡಿಯ ಮೂಲಕ ಪ್ರವೇಶಿಸಿದ್ದನ್ನು ಗುರುತಿಸಿ, ತನ್ನ ಸೈನಿಕರನ್ನು ಆ ಮಾರ್ಗದ ಮೂಲಕ ಕಳುಹಿಸಿರುತ್ತಾನೆ. ಆ ಕಿಂಡಿಯ ಸಮೀಪ ಕಾವಲು ಕಾಯುತ್ತಿದ್ದ ಕೋಟೆಯ ಸೈನಿಕ ಊಟಮಾಡಲು ಮನೆಗೆ ಹೋಗಿರುತ್ತಾನೆ. ಆಕೆ, ಆ ಕಿಂಡಿಯ ಮೂಲಕ ಬರುತ್ತಿದ್ದ ಸೈನಿಕರನ್ನು ಗಮನಿಸುತ್ತಾಳೆ. ಕೂಡಲೇ ಜಾಗೃತಳಾಗಿ ತನ್ನ ''ಒನಕೆ'' ಯನ್ನು(ಭತ್ತ ಕುಟ್ಟಲು ಬಳಸುವ ಒಕ್ಕುಗೋಲು) ಬಳಸಿ ಅವರನ್ನು ಕೊಲ್ಲುತ್ತಾಳೆ. ಊಟ ಮುಗಿಸಿ ಹಿಂದಿರುಗಿದ ಬಳಿಕ, ಓಬವ್ವನ ರಕ್ತಸಿಕ್ತಗೊಂಡಿದ್ದ ಒನಕೆಯನ್ನು ನೋಡಿ ಆಕೆಯ ಪತಿಗೆ ಆಘಾತವಾಗುತ್ತದೆ. ಜೊತೆಗೆ ಅವಳಿಂದ ಹತರಾದ ನೂರಾರು ಸೈನಿಕರು ಅವಳೆದುರು ಶವವಾಗಿದ್ದನ್ನು ನೋಡುತ್ತಾನೆ. ತಣ್ಣೀರು ದೋಣಿಯ ಪಕ್ಕದಲ್ಲಿರುವ ಈ ಕಿಂಡಿಯು ಈ ಕಥೆಯ ಹೆಗ್ಗುರುತಾಗಿ ಈಗಲೂ ಉಳಿದುಕೊಂಡಿದೆ. ತಣ್ಣೀರು ದೋಣಿಯು ಒಂದು ಸಣ್ಣ ನೀರಿನ ಮೂಲವಾಗಿದ್ದು ವರ್ಷಪೂರ್ತಿ ಇಲ್ಲಿನ ನೀರು ತಂಪಾಗಿರುತ್ತದೆ. ಹೈದರ್ ಅಲಿ ೧೭೯೯ರಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ, ಕೋಟೆಯನ್ನು ತನ್ನ ವಶ ಮಾಡಿಕೊಳ್ಳುತ್ತಾನೆ. ಈ ಸ್ಥಳವು ತನ್ನ ಸುತ್ತಲಿನ ''ಕಲ್ಲಿನ ಕೋಟೆ''ಗೆ ಪ್ರಸಿದ್ಧವಾಗಿದೆ.("ಕಲ್ಲಿನ ಕೋಟೆ ಇರುವ ಸ್ಥಳ") ಹಾಗು ಇದು ''ಏಳು ಸುತ್ತಿನ ಕೋಟೆ'' ಇರುವ ಸ್ಥಳವಾಗಿದೆ, ಇದು ದೊಡ್ಡ ದೊಡ್ಡ ಬಂಡೆಗಳಿಂದ ನಿರ್ಮಿತವಾಗಿದೆ.
 
"https://kn.wikipedia.org/wiki/ಮದಕರಿ_ನಾಯಕ" ಇಂದ ಪಡೆಯಲ್ಪಟ್ಟಿದೆ