ಗುರು (ಗ್ರಹ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚಿತ್ರ PIA04866_modest.jpgರ ಬದಲು ಚಿತ್ರ Portrait_of_Jupiter_from_Cassini.jpg ಹಾಕಲಾಗಿದೆ.
೧೦೯ ನೇ ಸಾಲು:
=== ಗೆಲಿಲಿಯೋ ಯಾತ್ರೆ ===
ಡಿಸೆಂಬರ್ ೭, ೧೯೯೫ರಂದು ಗುರುವಿನ ಸುತ್ತ ಪರಿಭ್ರಮಣೆಯನ್ನು ಶುರುಮಾಡಿದ ''[[:en:Galileo spacecraft|ಗೆಲಿಲಿಯೋ ಗಗನನೌಕೆ]]''ಯು ಗುರುವನ್ನು ಪರಿಭ್ರಮಿಸಿದ ಏಕಮಾತ್ರ ನೌಕೆ. ಗುರುವನ್ನು ಏಳು ವರ್ಷಗಳ ಕಾಲ ಪರಿಭ್ರಮಿಸಿದ ಈ ನೌಕೆಯು [[:en:Amalthea (moon)|ಅಮಾಲ್ಥಿಯ]] ಮತ್ತು ಗುರುವಿನ ಇತರೆ ಪ್ರಮುಖ ಉಪಗ್ರಹಗಳೆಲ್ಲವನ್ನೂ ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ಮಾಡಿತು. [[:en:Comet Shoemaker-Levy 9|ಷೂಮೇಕರ್-ಲೆವಿ ೯]] ಧೂಮಕೇತುವು ಗುರುಗ್ರಹವನ್ನು ಅಪ್ಪಳಿಸಿದ ಘಟನೆಯನ್ನು ಈ ಗಗನನೌಕೆಯು ತನ್ನ ಅದ್ವಿತೀಯವಾದ ವೀಕ್ಷಣಾಸ್ಥಾನದಿಂದ ದಾಖಲಿಸಿಕೊಂಡಿತು. ''ಗೆಲಿಲಿಯೋ'' ಯಾನದಿಂದ ಜೋವಿಯನ್ ವ್ಯವಸ್ಥೆಯ ಬಗ್ಗೆ ವ್ಯಾಪಕವಾಗಿ ಹೊಸ ಮಾಹಿತಿಗಳು ಹೊರಬಂದವು. ಆದರೆ, ರೇಡಿಯೋ ತರಂಗಗಳನ್ನು ಪ್ರಸಾರ ಮಾಡುವ ಅದರ ತರಂಗಾಕರ್ಷಕ ತಂತಿಯ (antenna) ನಿಯೋಜನೆಯು ವಿಫಲವಾದ ಕಾರಣ, ತನ್ನ ಪೂರ್ವೋದ್ದೇಶಿತ ಸಾಮರ್ಥ್ಯಕ್ಕೆ ಅನುಗುಣವಾಗಿ ''ಗೆಲಿಲಿಯೋ'' ಕಾರ್ಯ ನಿರ್ವಹಿಸಲಿಲ್ಲ.<ref name="galileo">[http://www೨.jpl.nasa.gov/galileo/ Galileo: Journey to Jupiter]</ref>
[[ಚಿತ್ರ:PIA04866_modestPortrait of Jupiter from Cassini.jpg|thumb|right|[[:en:Cassini-Huygens|ಕ್ಯಾಸಿನಿ]] ಬಾಹ್ಯಾಕಾಶ ಶೋಧಕಕ್ಕೆ ಕಾಣಿಸಿದಂತೆ ಗುರುಗ್ರಹ. ಇದುವರೆಗೆ ಕಲೆಹಾಕಿದ ಗುರುಗ್ರಹದ ಅತ್ಯಂತ ವಿವರವಾದ ವರ್ಣಚಿತ್ರ.]]
 
ಜುಲೈ ೧೯೯೫ರಲ್ಲಿ ಈ ಗಗನನೌಕೆಯಿಂದ ವಾಯುಮಂಡಲದ ಶೋಧಕವೊಂದನ್ನು ಕೆಳಗಿಳಿಸಲಾಯಿತು. ಈ ಶೋಧಕವು ಡಿಸೆಂಬರ್ ೭, ೧೯೯೫ರಂದು ಗ್ರಹದ ವಾಯುಮಂಡಲವನ್ನು ಹೊಕ್ಕಿತು. ಇಳಿಕೊಡೆಯ (parachute) ಸಹಾಯದಿಂದ ವಾಯುಮಂಡಲದೊಳಗೆ ೧೫೦&nbsp;ಕಿ.ಮೀ. ಇಳಿದ ಶೋಧಕವು ೫೭.೬ ನಿಮಿಷಗಳವರೆಗೆ ಮಾಹಿತಿಯನ್ನು ಸಂಗ್ರಹಿಸಿತು. ತದನಂತರ, ತೀವ್ರವಾದ ವಾಯು ಒತ್ತಡದ ಕಾರಣ ಶೋಧಕವು ನಜ್ಜುಗುಜ್ಜಾಗಿ ಹೋಯಿತು. ಇದರ ಸ್ವಲ್ಪವೇ ಕಾಲದ ನಂತರ ಶೋಧಕವು ಬಹುಶಃ ಕರಗಿ ಸುಟ್ಟುಹೋಗಿರುತ್ತಿತ್ತು. ''ಗೆಲಿಲಿಯೋ'' ಪರಿಭ್ರಮಕವು ಇದೇ ರೀತಿಯ, ಆದರೆ ಇನ್ನೂ ತ್ವರಿತವಾದ ಮರಣಕ್ಕೀಡಾಯಿತು. [[:en:Europa (moon)|ಯೂರೋಪ]]ದ ಮೇಲೆ ಅಪ್ಪಳಿಸಿ ಆ ಉಪಗ್ರಹವನ್ನು ಮಲಿನಗೊಳಿಸುವ ಸಾಧ್ಯತೆಯನ್ನು ತಪ್ಪಿಸಲೋಸುಗ, ಸೆಪ್ಟೆಂಬರ್ ೨೧, ೨೦೦೩ರಂದು ಪರಿಭ್ರಮಕವನ್ನು ಉದ್ದೇಶಪೂರ್ವಕವಾಗಿ ಗುರುವಿನತ್ತ ೫೦&nbsp;ಕಿ.ಮೀ./ಪ್ರತಿ ಕ್ಷಣಕ್ಕಿಂತ ಹೆಚ್ಚು ವೇಗದಲ್ಲಿ ಹಾರಿಸಲಾಯಿತು.<ref name="galileo" />
"https://kn.wikipedia.org/wiki/ಗುರು_(ಗ್ರಹ)" ಇಂದ ಪಡೆಯಲ್ಪಟ್ಟಿದೆ