ವಿಶ್ವ ಆರ್ಥಿಕ ವೇದಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು clean up, replaced: Category: → ವರ್ಗ: (5) using AWB
೧೩ ನೇ ಸಾಲು:
|website = [http://www.weforum.org/ http://www.weforum.org/]}}
 
'''ವಿಶ್ವ ಆರ್ಥಿಕ ವೇದಿಕೆ''' (ವರ್ಲ್ಡ್‌ ಇಕನಾಮಿಕ್‌ ಫೋರಮ್‌-'''WEF''' ) ಎಂಬುದು [[ಜಿನಿವಾ|ಜಿನಿವಾ]]-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, [[ಸ್ವಿಟ್ಜರ್ಲ್ಯಾಂಡ್|ಸ್ವಿಜರ್‌ಲೆಂಡ್‌‌‌]]ನ ದಾವೋಸ್‌‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ; ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.<ref name="Pigman p41-42">ಪಿಗ್‌ಮನ್‌ ಪುಟಗಳು 41-42</ref> [[ಚೀನಿ ಜನರ ಗಣರಾಜ್ಯ|ಚೀನಾ]]ದಲ್ಲಿ "ಹೊಸ ಚಾಂಪಿಯನ್ನರ ವಾರ್ಷಿಕ ಸಭೆ"ಯನ್ನೂ (ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌) WEF ಸಂಘಟಿಸುತ್ತದೆ ಹಾಗೂ ವರ್ಷದಾದ್ಯಂತವೂ ಪ್ರಾದೇಶಿಕ ಸಭೆಗಳ ಒಂದು ಸರಣಿಯನ್ನು ಆಯೋಜಿಸುತ್ತದೆ. 2008ರಲ್ಲಿ ನಡೆದ ಆ ಪ್ರಾದೇಶಿಕ ಸಭೆಗಳಲ್ಲಿ,
ಯುರೋಪ್‌ ಮತ್ತು ಮಧ್ಯ ಏಷ್ಯಾ, ಪೂರ್ವ ಏಷ್ಯಾ, ರಷ್ಯಾ CEO ದುಂಡುಮೇಜಿನ ಪರಿಷತ್ತು, ಆಫ್ರಿಕಾ, ಮಧ್ಯ ಪ್ರಾಚ್ಯ ಇವುಗಳ ಕುರಿತಾದ ಸಭೆಗಳು, ಮತ್ತು ಲ್ಯಾಟಿನ್‌ ಅಮೆರಿಕಾದ ಕುರಿತಾದ ವಿಶ್ವ ಆರ್ಥಿಕ ವೇದಿಕೆ ಇವೆಲ್ಲವೂ ಸೇರಿದ್ದವು. 2008ರಲ್ಲಿ ಇದು ದುಬೈನಲ್ಲಿ "ಸಮಿಟ್‌ ಆನ್‌ ದಿ ಗ್ಲೋಬಲ್‌ ಅಜೆಂಡಾ" ಎಂಬ ಶೃಂಗಸಭೆಯನ್ನು ಪ್ರಾರಂಭಿಸಿತು.
 
೨೬ ನೇ ಸಾಲು:
[[File:Frederik de Klerk with Nelson Mandela - World Economic Forum Annual Meeting Davos 1992.jpg|thumb|1992ರ ಜನವರಿಯಲ್ಲಿ, ದಾವೋಸ್‌ನಲ್ಲಿ ಆಯೋಜಿಸಲ್ಪಟ್ಟಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಫ್ರೆಡೆರಿಕ್‌ ಡಿ ಕ್ಲರ್ಕ್‌ ಮತ್ತು ನೆಲ್ಸನ್‌‌ ಮಂಡೇಲಾ ಪರಸ್ಪರ ಕೈಕುಲುಕುತ್ತಿರುವುದು.]]
[[File:Taro Aso in World Economic Forum Annual Meeting in Davos.jpg|thumb|2009ರ ಜನವರಿಯಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಪಾನೀ ಪ್ರಧಾನಮಂತ್ರಿ ಟಾರೋ ಅಸೋ]][[File:Klaus Schwab WEF 2008.jpg|thumb|ಕ್ಲೌಸ್‌ ಷ್ವಾಬ್‌, ಸಂಸ್ಥಾಪಕ ಮತ್ತು ಕಾರ್ಯಕಾರಿ ಸಭಾಪತಿ, ವಿಶ್ವ ಆರ್ಥಿಕ ವೇದಿಕೆ.]]
ವರ್ಷಗಳು ಉರುಳುತ್ತಾ ಹೋದಂತೆ, ದಾವೋಸ್‌ನ್ನು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದಕ್ಕಾಗಿರುವ ಒಂದು ತಟಸ್ಥ ವೇದಿಕೆಯಾಗಿ ರಾಜಕೀಯ ನಾಯಕರು ಬಳಸಲು ಶುರುಮಾಡಿದರು. [[ಗ್ರೀಸ್|ಗ್ರೀಸ್‌]] ಮತ್ತು [[ಟರ್ಕಿ|ಟರ್ಕಿ]] ದೇಶಗಳು 1988ರಲ್ಲಿ ದಾವೋಸ್‌ ಘೋಷಣೆಗೆ (ದಾವೋಸ್‌ ಡಿಕ್ಲರೇಷನ್‌) ಸಹಿಹಾಕಿದವು; ಯುದ್ಧದ ಅಂಚಿನಿಂದ ಹಿಮ್ಮೆಟ್ಟುವಲ್ಲಿ ಇದು ಅವರಿಗೆ ನೆರವಾಯಿತು. 1992ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ, [[ನೆಲ್ಸನ್ ಮಂಡೇಲಾ|ನೆಲ್ಸನ್‌‌ ಮಂಡೇಲಾ]] ಮತ್ತು ಮುಖ್ಯಸ್ಥ ಮಂಗೊಸುಥು ಬುಥೆಲೆಜಿ ಈ ಇಬ್ಬರನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ F. W. ಡಿ ಕ್ಲರ್ಕ್‌ ಭೇಟಿಯಾದ; ಇದು ದಕ್ಷಿಣ ಆಫ್ರಿಕಾದ ಹೊರಗಿನ ಅವರ ಮೊದಲ ಜಂಟಿ ಕಾಣಿಸುವಿಕೆಯಾಗಿತ್ತು. 1994ರ ವಾರ್ಷಿಕ ಸಭೆಯಲ್ಲಿ, ಇಸ್ರೇಲಿನ ವಿದೇಶಾಂಗ ಸಚಿವ ಷಿಮೋನ್‌ ಪೆರೆಸ್‌ ಮತ್ತು PLO ಸಭಾಪತಿ [[ಯಾಸಿರ್ ಅರಾಫತ್|ಯಾಸರ್‌‌ ಅರಾಫತ್‌‌]] ಇಬ್ಬರೂ ಗಾಜಾ ಮತ್ತು ಜೆರಿಕೊ ಕುರಿತಾದ ಒಂದು ಕರಡು ಒಪ್ಪಂದಕ್ಕೆ ಮುಂದಾದರು.<ref>[http://www.telegraph.co.uk/money/main.jhtml?xml=/money/exclusions/hubpages/davos2008/davoshistory.xml "WEF ಅಂಡ್‌ ದಾವೋಸ್‌: ಎ ಬ್ರೀಫ್‌ ಹಿಸ್ಟರಿ"], ''ಟೆಲಿಗ್ರಾಫ್‌'' , 16 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref> 2008ರಲ್ಲಿ, ಉತ್ಪಾದಕ ಬಂಡವಾಳ ನೀತಿಯ ಕುರಿತಾಗಿ ಬಿಲ್‌ ಗೇಟ್ಸ್‌ ಒಂದು ವಿಷಯ ಮಂಡನಾತ್ಮಕ ಉಪನ್ಯಾಸವನ್ನು ನೀಡಿದ. ಉತ್ಪಾದಕ ಬಂಡವಾಳ ನೀತಿ ಎಂಬುದು ಬಂಡವಾಳ ನೀತಿಯ ಒಂದು ಸ್ವರೂಪವಾಗಿದ್ದು, ಇದು ಲಾಭಗಳನ್ನು ಹುಟ್ಟುಹಾಕುವುದರ ಜೊತೆಗೆ ಪ್ರಪಂಚದಲ್ಲಿ ಕಂಡುಬರುವ ಅನ್ಯಾಯಗಳು ಅಥವಾ ಪಕ್ಷಪಾತಗಳನ್ನೂ ಪರಿಹರಿಸುತ್ತದೆ; ಇದನ್ನು ನೆರವೇರಿಸುವುದಕ್ಕಾಗಿ, ಬಡವರ ಅಗತ್ಯಗಳಿಗೆ ಉತ್ತಮ ರೀತಿಯಲ್ಲಿ ಗಮನ ಹರಿಸಲು ಅದು ಮಾರುಕಟ್ಟೆಯ ಬಲಗಳನ್ನು ಬಳಸಿಕೊಳ್ಳುತ್ತದೆ.<ref>[http://www.ft.com/cms/s/0/824dba1e-cadb-11dc-a960-000077b07658.html?nclick_check=1 "ಗೇಟ್ಸ್‌ ಪುಷಸ್‌ ‘ಕ್ರಿಯೇಟಿವ್‌ ಕ್ಯಾಪಿಟಲಿಸಂ’"], ''ಫೈನಾನ್ಷಿಯಲ್‌ ಟೈಮ್ಸ್‌‌'' , 25 ಜನವರಿ 2008, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref><ref>{{cite web|url=http://www.reuters.com/news/video?videoId=75032&videoChannel=5 |title='&#39;Gates calls for creative capitalism, Reuters (video)'&#39; |publisher=Reuters.com |date=2009-02-09 |accessdate=2010-03-07}}</ref>
 
==ಸಂಘಟನೆ==
೪೬ ನೇ ಸಾಲು:
[[File:World Economic Forum Annual Meeting Davos 2007.jpg|thumb|left|2007ರ ಜನವರಿ 25ರಂದು ಸ್ವಿಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 2007ರ ವಾರ್ಷಿಕ ಸಭೆಯಲ್ಲಿ, 'ರೂಲ್ಸ್‌ ಫಾರ್‌ ಎ ಗ್ಲೋಬಲ್‌ ನೈಬರ್‌ಹುಡ್‌ ಇನ್‌ ಎ ಮಲ್ಟಿಕಲ್ಚರಲ್‌ ವರ್ಲ್ಡ್‌' ಎಂಬ ಶೀರ್ಷಿಕೆಯ ಕಾರ್ಯಕ್ಷೇತ್ರದ ಅಧಿವೇಶನದ ಸಂದರ್ಭದಲ್ಲಿ ಸೆರೆಹಿಡಿಯಲಾದ, ಇರಾನ್‌ ಅಧ್ಯಕ್ಷ ಮೊಹಮ್ಮದ್‌ ಖಟಾಮಿಯ (1997-2005) ಚಿತ್ರ.]]
 
ದಾವೋಸ್‌ನ<ref>[http://news.bbc.co.uk/2/hi/business/7201300.stm "ಎ ಬಿಗಿನರ್ಸ್‌' ಗೈಡ್‌ ಟು ದಾವೋಸ್‌"], BBC ಆನ್‌ಲೈನ್‌‌, 16 ಜನವರಿ 2009, 2009ರ ಜನವರಿ 16ರಂದು ಮರುಸಂಪಾದಿಸಲಾಯಿತು.</ref> ಸ್ವಿಸ್‌ ಆಲ್ಪೈನ್‌‌ ವಿಹಾರಧಾಮದಲ್ಲಿ ಪ್ರತಿ ವರ್ಷದ ಜನವರಿ ತಿಂಗಳ ಅಂತ್ಯದಲ್ಲಿ ಆಯೋಜಿಸಲ್ಪಡುವ, ಆಹ್ವಾನವಿದ್ದವರಿಗೆ-ಮಾತ್ರವೇ ಪ್ರವೇಶವಿರುವ ವಾರ್ಷಿಕ ಸಭೆಯು WEFನ ಪ್ರಧಾನ ಕಾರ್ಯಕ್ರಮವಾಗಿದೆ. ತನ್ನ 1000 ಸದಸ್ಯ ಕಂಪನಿಗಳಿಗೆ ಸೇರಿದ CEOಗಳನ್ನು ಮಾತ್ರವೇ ಅಲ್ಲದೇ, ಆಯ್ದ ರಾಜಕಾರಣಿಗಳನ್ನು, ವಿದ್ವನ್ಮಂಡಲಗಳು, NGOಗಳು, ಧಾರ್ಮಿಕ ನಾಯಕರು ಮತ್ತು ಮಾಧ್ಯಮಗಳಿಗೆ ಸೇರಿದ ಪ್ರತಿನಿಧಿಗಳನ್ನು ಒಟ್ಟಾಗಿ ಸೇರಿಸುವ ಕೆಲಸವನ್ನು ಈ ಕಾರ್ಯಕ್ರಮವು ಮಾಡುತ್ತದೆ.<ref>[http://news.bbc.co.uk/2/hi/business/7830834.stm ''Q&amp;A: ವರ್ಲ್ಡ್‌ ಇಕನಾಮಿಕ್‌ ಫೋರಂ 2009'' ], BBC ಆನ್‌ಲೈನ್‌‌, 16 ಜನವರಿ 2009, 2009ರ ಜನವರಿ 16ರಂದು ಮರುಸಂಪಾದಿಸಲಾಯಿತು.</ref> ಐದು-ದಿನದ ಕಾರ್ಯಕ್ರಮಕ್ಕಾಗಿ ಸುಮಾರು 2200 ಸಹಭಾಗಿಗಳು ಜಮಾವಣೆಯಾಗುತ್ತಾರೆ ಮತ್ತು ಅಧಿಕೃತ ಕಾರ್ಯಸೂಚಿಯಲ್ಲಿರುವ ಸುಮಾರು 220 ವಿಚಾರ ಸಂಕಿರಣಗಳಿಗೆ ಹಾಜರಾಗುತ್ತಾರೆ. ಜಾಗತಿಕ ಕಾಳಜಿಯ ಪ್ರಮುಖ ಸಮಸ್ಯೆಗಳು (ಅಂತರರಾಷ್ಟ್ರೀಯ ಘರ್ಷಣೆಗಳು, ಬಡತನ ಮತ್ತು ಪರಿಸರೀಯ ಸಮಸ್ಯೆಗಳಂಥವು) ಮತ್ತು ಸಂಭವನೀಯ ಪರಿಹಾರೋಪಾಯಗಳ ಸುತ್ತಲೂ ಚರ್ಚೆಗಳು ಗಮನಹರಿಸುತ್ತವೆ.<ref name="Pigman p41-42">< /ref> ಒಟ್ಟಾರೆಯಾಗಿ ಹೇಳುವುದಾದರೆ, ಆನ್‌ಲೈನ್‌‌, ಮುದ್ರಣ ಮಾಧ್ಯಮ, [[ರೇಡಿಯೋ|ರೇಡಿಯೋ]] ಮತ್ತು TV ಮಾಧ್ಯಮಗಳಿಗೆ ಸೇರಿದ ಸುಮಾರು 500 ಪತ್ರಕರ್ತರು ಇಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಅಧಿಕೃತ ಕಾರ್ಯಸೂಚಿಯಲ್ಲಿರುವ ಎಲ್ಲಾ ವಿಚಾರ ಸಂಕಿರಣಗಳಿಗೆ ಅವರಿಗೆ ಪ್ರವೇಶಾವಕಾಶವನ್ನು ಒದಗಿಸಲಾಗುತ್ತದೆ; ಅಧಿಕೃತ ಕಾರ್ಯಸೂಚಿಯ ಪೈಕಿಯ ಕೆಲವೊಂದನ್ನು ಅಂತರ್ಜಾಲದಲ್ಲಿಯೂ ಪ್ರಸಾರ ಮಾಡಲಾಗುತ್ತದೆ.<ref>{{cite web|url=http://www.weforum.org/en/events/ArchivedEvents/AnnualMeeting2008/ |title=Forum’s homepage |publisher=Weforum.org |date= |accessdate=2010-03-07}}</ref>
 
ದಾವೋಸ್‌ನಲ್ಲಿ ನಡೆಯುವ ಎಲ್ಲಾ ಸರ್ವಸದಸ್ಯರ ಚರ್ಚೆಗಳು [[ಯೂಟ್ಯೂಬ್‌|ಯುಟ್ಯೂಬ್‌‌‌]]ನಲ್ಲೂ<ref>{{cite web|url=http://www.youtube.com/user/WorldEconomicForum |title=Kanaal van WorldEconomicForum |publisher=YouTube |date=2010-01-31 |accessdate=2010-03-07}}</ref> ಲಭ್ಯವಿರುತ್ತವೆ; ಸಂಬಂಧಿತ ಚಿತ್ರಗಳು ಫ್ಲಿಕರ್‌‌<ref>{{cite web|url=http://www.flickr.com/photos/worldeconomicforum |title=World Economic Forum's Photostream |publisher=Flickr |date= |accessdate=2010-03-07}}</ref> ತಾಣದಲ್ಲಿ ಉಚಿತವಾಗಿ ಲಭ್ಯವಿದ್ದರೆ, ಪ್ರಮುಖ ಉಲ್ಲೇಖಗಳು ಟ್ವಿಟ್ಟರ್‌‌ ತಾಣದಲ್ಲಿ ಲಭ್ಯವಿರುತ್ತವೆ.<ref>[http://twitter.com/worldeconomicforum ]{{dead link|date=March 2010}}</ref> 2007ರಲ್ಲಿ,
೫೯ ನೇ ಸಾಲು:
 
===ಹೊಸ ಚಾಂಪಿಯನ್ನರ ವಾರ್ಷಿಕ ಸಭೆ===
2007ರಲ್ಲಿ, ಹೊಸ ಚಾಂಪಿಯನ್ನರ ವಾರ್ಷಿಕ ಸಭೆಯನ್ನು (ಇದಕ್ಕೆ ಬೇಸಿಗೆಯ ದಾವೋಸ್‌ ಎಂದೂ ಕರೆಯಲಾಗುತ್ತದೆ) WEF ಹುಟ್ಟುಹಾಕಿತು. [[ಚೀನಾ|ಚೀನಾ]]ದಲ್ಲಿ ವಾರ್ಷಿಕವಾಗಿ ಆಯೋಜಿಸಲ್ಪಡುವ ಈ ಸಭೆಯು ಡೇಲಿಯನ್‌ ಮತ್ತು ಟಿಯಾಂಜಿನ್‌ ನಡುವಣ ಪರ್ಯಾಯವಾಗಿ ಬದಲಾಗುತ್ತಿರುತ್ತದೆ. ಜಾಗತಿಕ ಬೆಳವಣಿಗೆಯ ಕಂಪನಿಗಳು ಎಂಬುದಾಗಿ ವೇದಿಕೆಯಿಂದ ಕರೆಯಲ್ಪಟ್ಟಿರುವ ಕಂಪನಿಗಳ 1,500 ಪ್ರಭಾವಿ ಹೂಡಿಕೆದಾರರನ್ನು ಈ ಸಭೆಯು ಒಟ್ಟಾಗಿ ಸೇರಿಸುತ್ತದೆ. ಪ್ರಧಾನವಾಗಿ [[ಚೀನಾ|ಚೀನಾ]], [[ಭಾರತ|ಭಾರತ]], [[ರಷ್ಯಾ|ರಷ್ಯಾ]], [[ಮೆಕ್ಸಿಕೋ|ಮೆಕ್ಸಿಕೊ]], ಮತ್ತು [[ಬ್ರೆಜಿಲ್|ಬ್ರೆಜಿಲ್‌‌‌]]ನಂಥ ಕ್ಷಿಪ್ರವಾಗಿ ಬೆಳೆಯುತ್ತಿರುವ, ಅಭಿವೃದ್ಧಿಶೀಲ ದೇಶಗಳಿಗೆ ಈ ಪ್ರಭಾವಿ ಹೂಡಿಕೆದಾರರು ಸೇರಿದ್ದು, ಅಭಿವೃದ್ಧಿಹೊಂದಿದ ದೇಶಗಳಿಗೆ ಸೇರಿದ ಕ್ಷಿಪ್ರ ಬೆಳವಣಿಗೆಯ ಹೂಡಿಕೆದಾರರೂ ಇವರೊಂದಿಗೆ ಸೇರಿಕೊಳ್ಳುತ್ತಾರೆ ಎಂಬುದು ಗಮನಾರ್ಹ ಅಂಶ. ಮುಂದಿನ ಪೀಳಿಗೆಯ ಜಾಗತಿಕ ನಾಯಕರು, ವೇಗವಾಗಿ-ಬೆಳೆಯುತ್ತಿರುವ ಪ್ರದೇಶಗಳು, ಸ್ಪರ್ಧಾತ್ಮಕ ನಗರಗಳು ಹಾಗೂ ಭೂಮಂಡಲದೆಲ್ಲೆಡೆ ವ್ಯಾಪಿಸಿರುವ ತಂತ್ರಜ್ಞಾನದ ಪಥನಿರ್ಮಾಪಕರನ್ನೂ ಸಹ ಈ ಸಭೆಯು ತನ್ನಲ್ಲಿ ತೊಡಗಿಸಿಕೊಳ್ಳುತ್ತದೆ.<ref>[http://www.china.org.cn/english/business/222969.htm "ವರ್ಲ್ಡ್‌ ಇಕನಾಮಿಕ್‌ ಫೋರಂ: ದಿ ಇನಾಗರಲ್‌ ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌"], China.org, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref><ref>[http://english.peopledaily.com.cn/90001/90778/6228850.html ''ಸಮ್ಮರ್‌ ದಾವೋಸ್‌ ಟು ಪುಟ್‌ ಡೇಲಿಯನ್‌ ಆನ್‌ ಬಿಸಿನೆಸ್‌ ಮ್ಯಾಪ್‌'' ], ಪೀಪಲ್‌‌'ಸ್‌ ಡೇಲಿ, 1 ಆಗಸ್ಟ್‌‌ 2007, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref> ಪ್ರತಿ ವಾರ್ಷಿಕ ಸಭೆಯಲ್ಲೂ ಮುಖ್ಯಸ್ಥನಾದ ವೆನ್‌ ಜಿಯಾಬಾವೊ ಸರ್ವಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುತ್ತಾನೆ.
 
===ಪ್ರಾದೇಶಿಕ ಸಭೆಗಳು===
ಪ್ರತಿ ವರ್ಷವೂ ಹತ್ತು ಪ್ರಾದೇಶಿಕ ಸಭೆಗಳು ನಡೆಯುತ್ತವೆ. ಸಾಂಸ್ಥಿಕ ವ್ಯವಹಾರದ ನಾಯಕರು, ಸ್ಥಳೀಯ ಸರ್ಕಾರದ ನಾಯಕರು ಮತ್ತು NGOಗಳ ನಡುವೆ ನಿಕಟ ಸಂಪರ್ಕವು ಏರ್ಪಡುವಲ್ಲಿ ಇವು ನೆರವಾಗುತ್ತವೆ. [[ಆಫ್ರಿಕಾ|ಆಫ್ರಿಕಾ]], [[ಪೂರ್ವ ಏಷ್ಯಾ|ಪೂರ್ವ ಏಷ್ಯಾ]], [[ಲ್ಯಾಟಿನ್ ಅಮೇರಿಕ|ಲ್ಯಾಟಿನ್‌ ಅಮೆರಿಕಾ]] ಮತ್ತು [[ಮಧ್ಯ ಪ್ರಾಚ್ಯ|ಮಧ್ಯ ಪ್ರಾಚ್ಯ]] ದೇಶಗಳಲ್ಲಿ ಸಭೆಗಳು ಆಯೋಜಿಸಲ್ಪಟ್ಟಿವೆ. ಅತಿಥೇಯ ದೇಶಗಳ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆಯಾದರೂ, ಚೀನಾ ಮತ್ತು ಭಾರತ ದೇಶಗಳು ಹಿಂದಿನ ದಶಕದಲ್ಲಿ ಸಭೆಗಳನ್ನು ಸುಸಂಗತವಾಗಿ ಆಯೋಜಿಸಿವೆ.<ref>{{cite web|url=http://www.weforum.org/en/events/ |title=World Economic Forum — Events |publisher=Weforum.org |date= |accessdate=2010-03-07}}</ref>
 
===ಯುವ ಜಾಗತಿಕ ನಾಯಕರು===
೭೩ ನೇ ಸಾಲು:
ಒಂದು ಚಿಂತಕರ ಚಾವಡಿಯಾಗಿಯೂ WEF ಸೇವೆ ಸಲ್ಲಿಸುತ್ತದೆ, ಹಾಗೂ ವೇದಿಕೆಯ ಸಮುದಾಯಗಳಿಗೆ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳಾಗಿ ಪರಿಣಮಿಸಿರುವ ಸಮಸ್ಯೆಗಳ ಕುರಿತಾಗಿ ಗಮನಹರಿಸುವ ಒಂದು ವ್ಯಾಪಕ ಶ್ರೇಣಿ ವರದಿಗಳನ್ನು ಅದು ಪ್ರಕಟಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಪರ್ಧಾತ್ಮಕತೆ, ಜಾಗತಿಕ ಅಪಾಯಗಳು ಮತ್ತು ಭವಿಷ್ಯದ ಘಟನಾವಳಿಗಳ ಕುರಿತಾದ ಚಿಂತನೆಯಂಥ ಕ್ಷೇತ್ರಗಳಲ್ಲಿ ಪ್ರಸ್ತುತತೆಯ ವರದಿಗಳನ್ನು ರೂಪಿಸುವುದರ ಕುರಿತಾಗಿ ಕಾರ್ಯತಂತ್ರದ ಅಂತರ್ದೃಷ್ಟಿಯ ತಂಡಗಳು ಗಮನಹರಿಸುತ್ತವೆ.
 
[http://www.weforum.org/en/initiatives/gcp/index.htm ಸ್ಪರ್ಧಾತ್ಮಕತೆಯ ತಂಡ] ವು ವಾರ್ಷಿಕ ಆರ್ಥಿಕ ವರದಿಗಳ ಒಂದು ಶ್ರೇಣಿಯನ್ನು ರೂಪಿಸುತ್ತದೆ (ಅವರಣಗಳಲ್ಲಿರುವುದು ಮೊದಲು ಪ್ರಕಟಿಸಲ್ಪಟ್ಟ ವರ್ಷ): ಜಾಗತಿಕ ಸ್ಪರ್ಧಾತ್ಮಕತೆಯ ವರದಿಯು (1979) ದೇಶಗಳು ಮತ್ತು ಆರ್ಥಿಕತೆಗಳ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ; ಜಾಗತಿಕ ಮಾಹಿತಿ ತಂತ್ರಜ್ಞಾನದ ವರದಿಯು (2001) ಅವುಗಳ IT ಸನ್ನದ್ಧತೆಯನ್ನು ಆಧರಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಲಿಂಗ ಅಂತರದ ವರದಿಯು (2005) ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ವಿಷಮಾವಸ್ಥೆಯ ಪ್ರದೇಶಗಳನ್ನು ಅವಲೋಕಿಸುತ್ತದೆ; ಜಾಗತಿಕ ಅಪಾಯಗಳ ವರದಿಯು (2006) ಪ್ರಮುಖವಾದ ಜಾಗತಿಕ ಅಪಾಯಗಳ ಕುರಿತು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಪರ್ಯಟನೆ ಮತ್ತು ಪ್ರವಾಸೋದ್ಯಮದ ವರದಿಯು (2007) ಪರ್ಯಟನೆ ಮತ್ತು ಪ್ರವಾಸೋದ್ಯಮದ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ ಮತ್ತು ಜಾಗತಿಕ ವ್ಯಾಪಾರವನ್ನು ಅನುವುಗೊಳಿಸುವ ವರದಿಯು (2008) ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಸರಾಗಗೊಳಿಸುವ, ಬೃಹತ್‌‌ ಸಂಖ್ಯೆಯಲ್ಲಿರುವ ಕ್ರಮಗಳ ಒಂದು ದೇಶಾದ್ಯಂತದ ವಿಶ್ಲೇಷಣೆಯನ್ನು ಸಾದರಪಡಿಸುತ್ತದೆ.<ref>ಪಿಗ್‌ಮನ್‌ ಪುಟಗಳು 43, 92-112</ref>
 
ಜಾಗತಿಕ ವ್ಯಾಪ್ತಿಯನ್ನು ಹೊಂದಿವೆ ಎಂಬುದಾಗಿ ಪರಿಗಣಿಸಲ್ಪಟ್ಟಿರುವ, ವಿಭಿನ್ನ-ಕೈಗಾರಿಕಾ ಪ್ರಸ್ತುತತೆಯನ್ನು ಹೊಂದಿರುವ, ಅನಿಶ್ಚಿತವಾಗಿರುವ, 10 ಶತಕೋಟಿ US$ಗೂ ಹೆಚ್ಚಿನ ಪ್ರಮಾಣದ ಆರ್ಥಿಕ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರುವ, ಮಾನವಕುಲಕ್ಕೆ ಬೃಹತ್ತಾದ ಸಂಕಟವನ್ನು ತಂದೊಡ್ಡಬಲ್ಲ ಸಾಮರ್ಥ್ಯ ಹೊಂದಿರುವ ಹಾಗೂ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಒಂದು ಬಹು-ಹೂಡಿಕೆದಾರ ವಿಧಾನವನ್ನು ಬಯಸುವ ಅಪಾಯಗಳನ್ನು ನಿರ್ಣಯಿಸುವ ವಾರ್ಷಿಕ ವರದಿಯೊಂದನ್ನು [http://www.weforum.org/en/initiatives/globalrisk/index.htm ಗ್ಲೋಬಲ್‌ ರಿಸ್ಕ್‌ ನೆಟ್‌ವರ್ಕ್‌] ರೂಪಿಸುತ್ತದೆ.<ref name="riskreport">[http://www.weforum.org/pdf/globalrisk/2009.pdf 2009ರ ಜಾಗತಿಕ ಅಪಾಯದ ವರದಿ], ವಿಶ್ವ ಆರ್ಥಿಕ ವೇದಿಕೆ.</ref>
೮೦ ನೇ ಸಾಲು:
 
===ಉಪಕ್ರಮಗಳು===
ಜಾಗತಿಕ ಆರೋಗ್ಯದ ಉಪಕ್ರಮ (ಗ್ಲೋಬಲ್‌ ಹೆಲ್ತ್‌ ಇನಿಷಿಯೆಟಿವ್‌-GHI) ಎಂಬ ಪರಿಕಲ್ಪನೆಗೆ 2002ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ [[ಕೋಫಿ ಅನ್ನಾನ್|ಕೋಫಿ ಅನ್ನಾನ್‌]] ಚಾಲನೆ ನೀಡಿದ. HIV/[[ಏಡ್ಸ್ ರೋಗ|AIDS]], TB, [[ಮಲೇರಿಯಾ|ಮಲೇರಿಯಾ]]ದಂಥ ಕಾಯಿಲೆಗಳು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿಭಾಯಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಲ್ಲಿ ವ್ಯವಹಾರದ-ಅಸ್ತಿತ್ವಗಳನ್ನು ತೊಡಗಿಸುವುದು GHIನ ನಿಶ್ಚಿತಗುರಿಯಾಗಿದೆ.
 
[[File:Henry Kissinger, at the World Economic Forums India Economic Summit 2008, New Delhi.jpg|left|upright|thumb|2008ರ ನವೆಂಬರ್‌‌ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 'ಭಾರತದ ಆರ್ಥಿಕ ಶೃಂಗಸಭೆ'ಯಲ್ಲಿ ಹೆನ್ರಿ ಕಿಸಿಂಜರ್‌‌]]
೮೭ ನೇ ಸಾಲು:
ಹವಾಮಾನ ಬದಲಾವಣೆ ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಸರೀಯ ಉಪಕ್ರಮವು ಒಳಗೊಳ್ಳುತ್ತದೆ. 2005ರಲ್ಲಿ ಗ್ಲೆನೀಗಲ್ಸ್‌ನಲ್ಲಿ ನಡೆದ G8 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಗ್ಲೆನೀಗಲ್ಸ್‌ ಮಾತುಕತೆಯ ಅಡಿಯಲ್ಲಿ, ವಿಶ್ವ ಆರ್ಥಿಕ ವೇದಿಕೆಯೊಂದಿಗೆ UK ಸರ್ಕಾರವು ಮಾತನಾಡುತ್ತಾ, ಹಸಿರುಮನೆ ಅನಿಲದ ಹೊರಸೂಸುವಿಕೆಗಳ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಅಭಿವೃದ್ಧಿಪಡಿಸಲು ವ್ಯವಹಾರ ಸಮುದಾಯದೊಂದಿಗಿನ ಒಂದು ಮಾತುಕತೆಯನ್ನು ಸುಗಮಗೊಳಿಸುವಂತೆ ಕೇಳಿಕೊಂಡಿತು. CEOಗಳ ಒಂದು ಜಾಗತಿಕ ಸಮೂಹದಿಂದ ಅಂಗೀಕರಿಸಲ್ಪಟ್ಟ ಈ ಶಿಫಾರಸುಗಳನ್ನು, ಮುಂದೆ 2008ರ ಜುಲೈನಲ್ಲಿ ಟೋಕಿಯೋ/ಹೊಕಾಯ್ಡೊದಲ್ಲಿ ಆಯೋಜಿಸಲ್ಪಟ್ಟ G8 ಶೃಂಗಸಭೆಯ ನಾಯಕರ ಮುಂದೆ ಸಾದರಪಡಿಸಲಾಯಿತು.<ref>[http://news.bbc.co.uk/2/hi/science/nature/7464517.stm "ಬಿಸಿನೆಸ್‌ ಚೀಫ್ಸ್‌ ಅರ್ಜ್‌ ಕಾರ್ಬನ್‌ ಕರ್ಬ್ಸ್‌"], BBC, 20 ಜೂನ್‌ 2008, 2008ರ ಸೆಪ್ಟೆಂಬರ್‌‌ 3ರಂದು ಮರುಸಂಪಾದಿಸಲಾಯಿತು.</ref><ref>[http://www.reuters.com/article/environmentNews/idUSL1944804220080620?feedType=RSS&amp;feedName=environmentNews "ಬಿಸಿನೆಸ್‌ ಚೀಫ್ಸ್‌ ಕಾಲ್‌ ಫಾರ್‌ G8 ಕ್ಲೈಮೇಟ್‌ ಲೀಡರ್‌ಷಿಪ್‌"], ರಾಯಿಟರ್ಸ್‌‌, 19 ಜೂನ್‌ 2008, 2008ರ ಸೆಪ್ಟೆಂಬರ್‌‌ 3ರಂದು ಮರುಸಂಪಾದಿಸಲಾಯಿತು,</ref>
 
[[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾ]] ಮತ್ತು ಭಾರತದಲ್ಲಿ ನೀರಿನ ನಿರ್ವಹಣೆಯ ಕುರಿತಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಲೆಂದು, ನೀರಿಗೆ ಸಂಬಂಧಿಸಿದ ಉಪಕ್ರಮವು ವಿಭಿನ್ನ ಹೂಡಿಕೆದಾರರನ್ನು ಒಂದೆಡೆ ಸೇರಿಸುತ್ತದೆ. ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಮೀಸಲಾದ ಸ್ವಿಸ್‌ ಸಂಸ್ಥೆಯಾದ ಆಲ್ಕಾನ್‌ ಇಂಕ್‌., USAID ಇಂಡಿಯಾ, UNDP ಇಂಡಿಯಾ, ಭಾರತೀಯ ಕೈಗಾರಿಕಾ ಒಕ್ಕೂಟ (ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ-CII), [[ರಾಜಸ್ಥಾನ|ರಾಜಾಸ್ಥಾನ]]ದ ಸರ್ಕಾರ ಹಾಗೂ NEPAD ಬಿಸಿನೆಸ್‌ ಫೌಂಡೇಷನ್‌ ಇವೇ ಆ ಹೂಡಿಕೆದಾರ ಸಂಸ್ಥೆಗಳಾಗಿವೆ.
 
ಭ್ರಷ್ಟಾಚಾರದ ವಿರುದ್ಧ ಸೆಣಸುವ ಒಂದು ಪ್ರಯತ್ನವಾಗಿ ಪಾರ್ಟ್‌ನರಿಂಗ್‌ ಎಗೇನ್ಸ್ಟ್‌ ಕರಪ್ಷನ್‌ ಇನಿಷಿಯೆಟಿವ್‌ (PACI) ಎಂಬ ಉಪಕ್ರಮಕ್ಕೆ, 2004ರ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ [[ಎಂಜಿನಿಯರಿಂಗ್‌|ಎಂಜಿನಿಯರಿಂಗ್‌]] ಮತ್ತು ನಿರ್ಮಾಣ, [[ಶಕ್ತಿ|ಶಕ್ತಿ]] ಮತ್ತು ಲೋಹಗಳು ಹಾಗೂ ಗಣಿಗಾರಿಕೆ ಉದ್ಯಮಗಳಿಗೆ ಸೇರಿದ CEOಗಳು ಚಾಲನೆ ನೀಡಿದರು. PACI ಎಂಬುದು ಪ್ರಾಯೋಗಿಕ ಅನುಭವ ಮತ್ತು ದ್ವಂದ್ವದ ಸನ್ನಿವೇಶಗಳ ಕುರಿತಾದ ಸಮಾನಸ್ಕಂದ ವಿಷಯಗಳ ವಿನಿಮಯಕ್ಕೆ ಸಂಬಂಧಿಸಿದ ಒಂದು ವೇದಿಕೆಯಾಗಿದೆ. ಸುಮಾರು 140 ಕಂಪನಿಗಳು ಇದಕ್ಕೆ ಸಹಿಹಾಕಿವೆ.<ref>ಪಿಗ್‌ಮನ್‌ ಪುಟ 115</ref>
 
===ಪ್ರಶಸ್ತಿಗಳು===
೧೦೩ ನೇ ಸಾಲು:
1990ರ ದಶಕದ ಅಂತ್ಯಭಾಗದಲ್ಲಿ, G7, ವಿಶ್ವ ಬ್ಯಾಂಕು, WTO, ಮತ್ತು IMFಗಳ ಜೊತೆಯಲ್ಲಿ WEF ಸಂಘಟನೆಯೂ ಸಹ ಜಾಗತೀಕರಣ-ವಿರೋಧಿ ಕ್ರಿಯಾವಾದಿಗಳಿಂದ ಭಾರೀ ಟೀಕೆಗೆ ಒಳಗಾಯಿತು. ಬಂಡವಾಳ ನೀತಿ ಮತ್ತು ಜಾಗತೀಕರಣಗಳು ಬಡತನವನ್ನು ಹೆಚ್ಚಿಸುತ್ತಿವೆ ಮತ್ತು ಪರಿಸರವನ್ನು ನಾಶಪಡಿಸುತ್ತಿವೆ ಎಂಬುದು ಈ ಕ್ರಿಯಾವಾದಿಗಳ ಸಮರ್ಥನೆಯಾಗಿತ್ತು. [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]]ದ ಮೆಲ್ಬೋರ್ನ್‌‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಗೆ ಬರುತ್ತಿದ್ದ 200 ಪ್ರತಿನಿಧಿಗಳ ಸಾಗಣೆಗೆ ತಡೆಯೊಡ್ಡುವ ಮೂಲಕ, 1500 ಪ್ರದರ್ಶನಕಾರರು ಈ ಸಭೆಗೆ ಅಡ್ಡಿಪಡಿಸಿದರು.<ref>[http://web.archive.org/web/20090131144221/http://www.iht.com/articles/2000/09/12/protest.2.t_0.php "ಇಕನಾಮಿಕ್‌ ಟಾಕ್ಸ್‌ ಓಪನ್‌ ಮೈನಸ್‌ 200 ಡೆಲಿಗೇಟ್ಸ್‌: ಡೆಮಾನ್ಸ್‌ಟ್ರೇಟರ್ಸ್‌ ಹರಾಸ್‌ ಮೆಲ್ಬೋರ್ನ್‌ ಕಾನ್ಫರೆನ್ಸ್‌"], ''ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌‌'' , 12 ಸೆಪ್ಟೆಂಬರ್‌‌ 2000, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref> ಬೊನೊ ಎಂಬ ರಾಕ್‌ ಸಂಗೀತದ ಗಾಯಕನು ಸದರಿ ಸಭೆಯ ಕುರಿತು ಮಾತನಾಡುತ್ತಾ ಇದು "ಹಿಮದಲ್ಲಿ ಕೊಬ್ಬಿದ ಬೆಕ್ಕುಗಳು" ಆಯೋಜಿಸಿರುವ ಸಭೆ ಎಂಬುದಾಗಿ ಕುಹಕವಾಗಿ ಉಲ್ಲೇಖಿಸಿದ್ದರ ವಿರುದ್ಧ ಪ್ರತಿಭಟಿಸಲೆಂದು, ದಾವೋಸ್‌ನಲ್ಲಿ ಪ್ರತಿಭಟನೆಗಳು ಪದೇ ಪದೇ ಆಯೋಜಿಸಲ್ಪಟ್ಟವು; ನೋಡಿ: ಸ್ವಿಜರ್‌ಲೆಂಡ್‌ನಲ್ಲಿನ WEF-ವಿರೋಧಿ ಪ್ರತಿಭಟನೆಗಳು, ಜನವರಿ 2003.<ref>[http://www.forbes.com/facesinthenews/2006/01/26/bono-davos-red-cx_cn_0126autofacescan02.html "ಬೊನೊ ಟೀಮ್ಸ್‌ ಅಪ್‌ ವಿತ್‌ ಅಮೆಕ್ಸ್‌, ಗ್ಯಾಪ್‌ ಫಾರ್‌ ಪ್ರಾಡಕ್ಟ್‌ ರೆಡ್‌"], ''ಫೋರ್ಬ್ಸ್‌'' , 21 ಜನವರಿ 2006, 2008ರ ಆಗಸ್ಟ್‌‌ 29ರಂದು ಮರುಸಂಪಾದಿಸಲಾಯಿತು.</ref>
 
[[ನೋಅಮ್ ಚಾಮ್ಸ್ಕೀ|ನೊವಾಮ್‌ ಚೋಮ್ಸ್‌ಕಿ]] ಎಂಬ ಅಮೆರಿಕಾದ ಓರ್ವ ಭಾಷಾಶಾಸ್ತ್ರಜ್ಞ ಮತ್ತು ಸಾರ್ವಜನಿಕ ಬುದ್ಧಿಜೀವಿಯ ಅಭಿಪ್ರಾಯದ ಅನುಸಾರ, ಹೂಡಿಕೆದಾರರು ಮತ್ತು ವಿಶೇಷ ಹಕ್ಕುಪಡೆದ ಗಣ್ಯರು ಅಥವಾ ವಿಶ್ವ ಆರ್ಥಿಕ ವೇದಿಕೆಯ ಕೆಲವೊಂದು ಸಹಭಾಗಿಗಳ ದೃಷ್ಟಿಕೋನದಲ್ಲಿ ಜಾಗತೀಕರಣ ಎಂಬುದು ಒಂದು ಪ್ರಚಾರ ಪರಿಭಾಷೆಯಾಗಿದೆ.
 
ಚೋಮ್ಸ್‌ಕಿಯು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ಪ್ರಬಲವಾದ ಪ್ರಚಾರ ವ್ಯವಸ್ಥೆಗಳು "ಜಾಗತೀಕರಣ" ಎಂಬ ಶಬ್ದವನ್ನು ತಾವು ಒಲವು ತೋರುವ ಅಂತರರಾಷ್ಟ್ರೀಯ ಆರ್ಥಿಕ ಸಮಗ್ರೀಕರಣದ ಉದ್ದೇಶಿತ ರೂಪಾಂತರವನ್ನು ಉಲ್ಲೇಖಿಸಲೆಂದು ಮೀಸಲಿಟ್ಟಿವೆ; ಈ ರೂಪಾಂತರವು ಹೂಡಿಕೆದಾರರು ಮತ್ತು ಸಾಲದಾತರ, ಪ್ರಾಸಂಗಿಕವಾಗಿರುವ ಜನರ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಬಳಕೆಯ ಅನುಸಾರ, ಮಾನವ ಜೀವಿಗಳ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುವ ಅಂತರರಾಷ್ಟ್ರೀಯ ಸಮಗ್ರೀಕರಣದ ಒಂದು ವಿಭಿನ್ನ ಸ್ವರೂಪಕ್ಕೆ ಒಲವು ತೋರುವವರು 'ಜಾಗತಿಕತಾ-ವಿರೋಧಿ' ಎನಿಸಿಕೊಳ್ಳುತ್ತಾರೆ. ಅಸಹ್ಯ ಹುಟ್ಟಿಸುವ ಬಹುಪಾಲು ಕಾಮಿಸಾರ್‌‌ಗಳಿಂದ (ಸೋವಿಯೆಟ್‌ ಸರ್ಕಾರದಲ್ಲಿನ ಯಾವುದೇ ಇಲಾಖೆಯ ಮುಖ್ಯಾಧಿಕಾರಿಗಳು) ಬಳಸಲ್ಪಡುವ "ಸೋವಿಯೆಟ್‌-ವಿರೋಧಿ" ಎಂಬ ಪರಿಭಾಷೆಯ ರೀತಿಯಲ್ಲಿಯೇ, ಇದು ಭಿನ್ನಮತೀಯರನ್ನು ಉಲ್ಲೇಖಿಸಲೆಂದು ಇರುವ ಅಸಭ್ಯ ಪ್ರಚಾರವಾಗಿದೆ. ಇದು ಅಸಭ್ಯ ಮಾತ್ರವೇ ಅಲ್ಲದೇ ಹೆಡ್ಡತನದ ಪರಿಭಾಷೆಯೂ ಆಗಿದೆ. ಪ್ರಚಾರ ವ್ಯವಸ್ಥೆಯಲ್ಲಿ "ಜಾಗತೀಕರಣ-ವಿರೋಧಿ" ಎಂಬುದಾಗಿ ಕರೆಯಲ್ಪಡುವ ವಿಶ್ವ ಸಾಮಾಜಿಕ ವೇದಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ- ಇದು ಅಪರೂಪದ ವಿನಾಯಿತಿಗಳನ್ನು ಹೊಂದಿರುವ ಮಾಧ್ಯಮಗಳು, ಶಿಕ್ಷಿತ ವರ್ಗಗಳು ಇತ್ಯಾದಿಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. WSF ಸಂಘಟನೆಯು ಜಾಗತೀಕರಣದ ಒಂದು ಮಾದರಿ ಉದಾಹರಣೆಯಾಗಿದೆ. ಸ್ಪರ್ಧಾತ್ಮಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಭೆ ಸೇರುವ ಅಥವಾ ಭೇಟಿಮಾಡುವ ಅತೀವವಾಗಿ ಸಂಕುಚಿತ ಸ್ವರೂಪದ, ಹೆಚ್ಚಿನ ವಿಶೇಷ ಹಕ್ಕುಪಡೆದ ಗಣ್ಯರ, ಮತ್ತು ಪ್ರಚಾರ ವ್ಯವಸ್ಥೆಯಿಂದ "ಜಾಗತೀಕರಣದ-ಪರ" ಎಂದು ಕರೆಯಲ್ಪಡುವವರ ಹೊರತಾಗಿಯೂ, ಇದು ವಿಶ್ವದ ಎಲ್ಲ ಭಾಗಗಳಿಗೂ ಸೇರಿದ ಬೃಹತ್‌‌ ಸಂಖ್ಯೆಯ ಜನರ, ಓರ್ವರು ಭಾವಿಸಬಹುದಾದ ಜೀವನದ ಎಲ್ಲ ಮೂಲೆಗಳಿಗೂ ಸೇರಿದ ಜನರ ಒಂದು ಜಮಾವಣೆಯಾಗಿದೆ. ಮಂಗಳಗ್ರಹದಿಂದ ಈ ಪ್ರಹಸನವನ್ನು ವೀಕ್ಷಿಸುತ್ತಿರುವ ಓರ್ವ ವೀಕ್ಷಕನು, ಶಿಕ್ಷಿತ ವರ್ಗಗಳ ವಿಕಟವರ್ತನೆಗಳನ್ನು ನೋಡುತ್ತಾ ನಗುವನ್ನು ನಿಯಂತ್ರಿಸಲಾಗದೆಯೇ ಕುಸಿದುಬೀಳುತ್ತಾನೆ" ಎಂದು ನುಡಿದ.
೧೧೫ ನೇ ಸಾಲು:
==ಇವನ್ನೂ ನೋಡಿ==
*ಜಾಗತೀಕರಣ-ವಿರೋಧಿ ಆಂದೋಲನ
*[[ಜಾಗತೀಕರಣ|ಜಾಗತೀಕರಣ]]
*ವಿಶ್ವ ಸಾಮಾಜಿಕ ವೇದಿಕೆ
*ವಿಶ್ವ ಜ್ಞಾನ ವೇದಿಕೆ
೧೩೭ ನೇ ಸಾಲು:
* [http://www.cbsnews.com/stories/2010/02/12/60minutes/main6202302.shtml?tag=currentVideoInfo;segmentUtilities "ಬಿಹೈಂಡ್‌ ದಿ ಸೀನ್ಸ್‌ ಅಟ್‌ ದಾವೋಸ್‌"], ''60 ಮಿನಿಟ್ಸ್‌'' ನಲ್ಲಿ 2010ರ ಫೆಬ್ರುವರಿ 14ರಂದು ಪ್ರಸಾರವಾದುದು
 
[[Categoryವರ್ಗ:ಅರ್ಥಶಾಸ್ತ್ರದ ಸಂಘಟನೆಗಳು]]
[[Categoryವರ್ಗ:ಸ್ವಿಜರ್‌ಲೆಂಡ್‌ನ ಆರ್ಥಿಕತೆ ]]
[[Categoryವರ್ಗ:ಸ್ವಿಜರ್‌ಲೆಂಡ್‌ನಲ್ಲಿ ಮೂಲವನ್ನು ಹೊಂದಿರುವ ಪ್ರತಿಷ್ಠಾನಗಳು]]
[[Categoryವರ್ಗ:ಜಾಗತೀಕರಣ]]
[[Categoryವರ್ಗ:1971ರಲ್ಲಿ ಸ್ಥಾಪಿತವಾದ ಸಂಘಟನೆಗಳು]]
[[ವರ್ಗ:ಅಂತರರಾಷ್ಟ್ರೀಯ ಸಂಘಟನೆಗಳು]]