ಸೀನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:Q35830
ಚು clean up, replaced: Category: → ವರ್ಗ: (3) using AWB
೧ ನೇ ಸಾಲು:
{{Other uses}}
{{Refimprove|date=January 2008}}
[[File:Sneeze.JPG|thumb|300px|ಸೀನುವಿಕೆಯು ಗಾಳಿಗೆ ರೋಗವಾಹಕವನ್ನು ಬಿಡುಗಡೆ ಮಾಡುವ ಮೂಲಕ ರೋಗವನ್ನು ಹರಡಬಹುದು. ]]
'''ಸೀನು''' (ಅಥವಾ '''ಸೀನುವ ಪ್ರಕ್ರಿಯೆ''' ) ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ ಆಗಿದೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ಪೂರ್ತಿ ಹೊಟ್ಟೆ ತುಂಬಿದಾಗ, ಅಥವಾ ವೈರಲ್ ಸೋಂಕು ತಗುಲಿದಾಗ ಉಂಟಾಗುತ್ತದೆ . ಅಲ್ಲದೇ ರೋಗವು ಹರಡುವಂತೆ ಮಾಡುತ್ತದೆ.
 
೮ ನೇ ಸಾಲು:
 
===ಸಂಪೂರ್ಣ ಕಾರ್ಯವಿಧಾನ===
[[File:Hapci-fr.gif|184px|thumb|right|ಇದು ಥಾಮಸ್ ಎಡಿಸನ್ ಲ್ಯಾಬೊರೆಟರಿಯಿಂದ ತೆಗೆದುಕೊಂಡ ಫ್ರೆಡ್ ಆಟ್ ಸೀನುವಿಕೆಯ 1894 ರ ಕೈನೆಟ್ ಸ್ಕೋಪ್, ]]
 
ಸೀನುವಿಕೆಯು ಸಾಮಾನ್ಯವಾಗಿ ಹೊರಗಿನ ಕಣಗಳು ಅಥವಾ ಸಾಕಷ್ಟು ಬಾಹ್ಯ ಉತ್ತೇಜಕಗಳು, ಮೂಗಿನ ಲೋಳೆಪೊರೆಯನ್ನು ತಲುಪಲು ಮೂಗಿನ ಕೂದಲುಗಳ ಮೂಲಕ ಸಾಗಿದಾಗ ಉಂಟಾಗುತ್ತದೆ. ಇದು ಹಿಸ್ಟಮಿ‌ನ್‌ಗಳನ್ನು (ಒಂದು ಕಾರ್ಬನಿಕ ಪ್ರತ್ಯಾಮ್ಲ) ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಈ ಹಿಸ್ಟಮಿನ್ ಮೂಗಿನಲ್ಲಿರುವ ನರಕೋಶಗಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ. ಈ ಕಿರಿಕಿರಿಯಿಂದಾಗಿ ತಕ್ಷಣವೇ ಕಪಾಲ ನರ ಸಂಪರ್ಕ ದ ಮೂಲಕ [[ಮೆದುಳು|ಮೆದುಳಿಗೆ ]] ಸೀನುವ ಉಪಕ್ರಮಕ್ಕೆ ಸಂಕೇತವನ್ನು ಕಳುಹಿಸಲಾಗುತ್ತದೆ. ನಂತರ ಮೆದುಳು ಈ ಆರಂಭಿಕ ಸಂಕೇತವನ್ನು ತೆಗೆದುಕೊಂಡು, ಗಂಟಲ ಕುಳಿ(ಫ್ಯಾರಿಂಗಲ್)ಯ ಮತ್ತು ಶ್ವಾಸನಾಳದ ಸ್ನಾಯುಗಳನ್ನು ಕ್ರಿಯಾಶೀಲವಾಗಿಸುತ್ತದೆ. ಅಲ್ಲದೇ ಬಾಯಿ ಮತ್ತು ಮೂಗಿನ ಕುಹರಗಳನ್ನು ದೊಡ್ಡದಾಗಿ ತೆರೆದುಕೊಳ್ಳುವಂತೆ ಮಾಡುತ್ತದೆ. ಇದರಿಂದಾಗಿ ಗಾಳಿ ಮತ್ತು ಜೈವಿಕಕಣಗಳು ರಭಸವಾಗಿ ಹೊರಬರುತ್ತವೆ. ಪ್ರಬಲವಾದ ಸೀನು , ಮೇಲ್ಭಾಗದ ದೇಹದಲ್ಲಿರುವ ಅದರ ಅನೇಕ ಅಂಗಗಳು ಸೀನುವ ಕ್ರಿಯೆಯಲ್ಲಿ ಒಳಗೊಂಡಿರುವುದರ ಲಕ್ಷಣವಾಗಿದೆ. ಇದು ಆತ್ಮಾರ್ಥಕ ಪ್ರತಿಕ್ರಿಯೆಯಾಗಿದ್ದು, ಮುಖ, ಗಂಟಲು ಮತ್ತು ಎದೆಯ ಸ್ನಾಯುಗಳನ್ನು ಒಳಗೊಂಡಿದೆ.
 
ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನಡಿಯಲ್ಲಿ ಬರುವುದರಿಂದ ಸೀನು ಬರುತ್ತದೆ. ಈ ಪ್ರಕಾಶಮಾನವಾದ ಬೆಳಕನ್ನು ಫೋಟಿಕ್ ಸ್ನೀಸ್ ರಿಫ್ಲೆಕ್ಸ್ ಎಂದು ಕರೆಯಲಾಗುತ್ತದೆ.
 
ಸೀನುವಿಕೆಯು, ಸೈನಸ್ ಸೋಂಕು ಮತ್ತು ಅಲರ್ಜಿಗಳಿಂದಾಗುವ ಸೈನಸ್ ನರದ ಉದ್ದೀಪನದಿಂದಾಗಿಯೂ ಉಂಟಾಗುತ್ತದೆ.
 
ವಿರಳವಾದ ಸೀನನ್ನು ಕೆಲವು ವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ಇದು ಹೆಚ್ಚು ಊಟಮಾಡಿದ ನಂತರ ಹೊಟ್ಟೆ ತುಂಬಿದ ಕೂಡಲೇ ಬರುತ್ತದೆ. ಇದನ್ನು ಸ್ನ್ಯಾಟಿಯೇಷನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇದನ್ನು ಅಲಿಂಗವರ್ಣತಂತುವಿನ ಪ್ರಧಾನ ಲಕ್ಷಣವಾಗಿ ಆನುವಂಶಿಕವಾಗಿ ಬಂದಂತಹ ವೈದ್ಯಕೀಯ ಅಸ್ತವ್ಯಸ್ತತೆ ಎಂದು ಪರಿಗಣಿಸಲಾಗಿದೆ.
೩೧ ನೇ ಸಾಲು:
 
== ಐತಿಹಾಸಿಕ ಉದಾಹರಣೆಗಳು ಮತ್ತು ಅಭ್ಯಾಸಗಳು ==
ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳಭವಿಷ್ಯ ಸೂಚಕ ಸಂಕೇತಗಳು ಎಂದು ನಂಬಲಾಗುತ್ತಿತ್ತು. ಉದಾಹರಣೆಗೆ, ಕ್ರಿಸ್ತಪೂರ್ವ 410 ರಲ್ಲಿ, [[ಅಥೆನ್ಸ್|ಅಥೆನ್ಸ್]] ನ ಜನರಲ್ ಕ್ಸೆನೊಫೋನ್ , ಅವರ ಸೈನಿಕರನ್ನು ಪರ್ಷಿಯನ್ನರ ವಿರುದ್ಧ ಸ್ವತಂತ್ರ ಅಥವಾ ಮರಣಕ್ಕಾಗಿ ಅವರನ್ನು ಅನುಸರಿಸುವಂತೆ ಹುರಿದುಂಬಿಸಲು ಮನಮಟ್ಟುವ ಭಾಷಣವನ್ನು ಮಾಡಿದ. ಅವನು ತನ್ನ ಸೈನ್ಯವನ್ನು ಪ್ರೇರೇಪಿಸಲು ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದ ಹಾಗು ಅವರು ಸುರಕ್ಷಿತವಾಗಿ [[ಅಥೆನ್ಸ್|ಅಥೆನ್ಸ್]] ಗೆ ಹಿಂದಿರುಗುವುದಾಗಿ ಭರವಸೆ ನೀಡಿದ. [[ಸೈನಿಕ|ಸೈನಿಕರು]]ನೊಬ್ಬ ಅವನ ತೀರ್ಮಾನವನ್ನು ಸೀನಿನೊಂದಿಗೆ ಪ್ರತಿಕ್ರಿಯಿಸಿದಾಗ, ಈ ಸೀನು ದೇವತೆಗಳಿಂದ ದೊರೆತ ಅನುಕೂಲಕರ ಸಂಕೇತವೆಂದು ಭಾವಿಸಿ, ಸೈನಿಕರು ಕ್ಸೆನೊಫೋನ್‌ಗೆ ತಲೆಬಾಗಿದರು ಮತ್ತು ಅವನ ಆಜ್ಞೆಯನ್ನು ಅನುಸರಿಸಿದರು. ಗ್ರೀಕರಿಗೆ ಸೀನುವಿಕೆಯ ಮತ್ತೊಂದು ಪವಿತ್ರ ಕ್ಷಣವು ಓಡಿಸಿಯಸ್‌ನ ಕಥೆಯಲ್ಲಿ ಕಾಣಿಸಿಕೊಂಡಿದೆ. ಓಡಿಸಿಯಸ್ ಬಿಕ್ಷುಕನಂತೆ ವೇಷಧರಿಸಿ, ಅವನಿಗಾಗಿ ಕಾದುಕುಳಿತಿದ್ದ ಅವನ ಹೆಂಡತಿ ಪೆನೆಲೋಪ್ ಳೊಂದಿಗೆ ಮಾತನಾಡುತ್ತಾನೆ. ಆತ ಓಡಿಸಿಯಸ್ ಎಂಬುದನ್ನು ಅರಿಯದೆ ಆತನನ್ನು ಕುರಿತು ಅವಳು "[ಅವಳ ಗಂಡ] ಅವಳನ್ನು ಓಲೈಸುವ ಕನ್ಯಾರ್ಥಿಗಳಿಗೆ ಸವಾಲು ಹಾಕಲು ಆತ ಸುರಕ್ಷಿತವಾಗಿ ಹಿಂದಿರುಗುತ್ತಾನೆ"ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಅವರ ಮಗ ಜೋರಾಗಿ ಸೀನುತ್ತಾನೆ ಹಾಗು ಪೆನೆಲೋಪ್, ಇದು ದೇವರಿಂದ ಬಂದಂತಹ ಸಂಕೇತವೆಂಬ ಖಚಿತ ಭರವಸೆಯೊಂದಿಗೆ ಸಂತೋಷದಿಂದ ನಗುತ್ತಾಳೆ.(ಓಡಿಸ್ಸೆ 17: 541-550).
 
[[ಯುರೋಪ್|ಯುರೋಪ್]] ನಲ್ಲಿ, ಬಹುಮಟ್ಟಿಗೆ ಸುಮಾರು ಮಧ್ಯಕಾಲಿನ ಯುಗದ ಪೂರ್ವಾರ್ಧದಲ್ಲಿ, ಒಬ್ಬರ ಜೀವನವನ್ನು ಅವರ ಉಸಿರಿಗೆ ಕಟ್ಟಲಾಗುತ್ತದೆ ಎಂದು ನಂಬಲಾಗಿತ್ತು - ಈ ನಂಬಿಕೆಯು "ಅಂತ್ಯ" ಎಂಬ ಪದದಲ್ಲಿ ಪ್ರತಿಫಲಿಸುತ್ತದೆ (ಇದು ಮೂಲತಃ "ಉಸಿರುಬಿಡು" ಎಂಬ ಅರ್ಥವನ್ನು ಕೊಡುತ್ತದೆ) ಅಲ್ಲದೇ "ಕೊನೆಯ ಸ್ಥಿತಿಗೆ ಬರುವುದು" ಅಥವಾ "ಮರಣಹೊಂದುವುದು" ಎಂಬ ಅಧಿಕ ಅರ್ಥವನ್ನು ಕೊಡುತ್ತದೆ. ಸೀನುವಾಗ ಹೊರಹಾಕುವ ನಿರ್ದಿಷ್ಟ ಪ್ರಮಾಣದ ಗಾಳಿಯೊಂದಿಗೆ ಈ ಸಂಬಂಧ ಸೇರಿಕೊಂಡು {{Citation needed|date=November 2007}} ಸೀನು ಮಾರಣಾಂತಿಕವಾಗಿ ಪರಿಣಮಿಸಬಹುದು ಎಂದು ಜನರು ಸುಲಭವಾಗಿ ನಂಬುವಂತೆ ಮಾಡಿತು. ಈ ಸಿದ್ದಾಂತವು, ವ್ಯಕ್ತಿಯು ಸೀನಿದಾಗ ಸಾಂಪ್ರದಾಯಿಕವಾಗಿ ಹೇಳುವ "ಗಾಡ್ ಬ್ಲೆಸ್ ಯು "(ದೇವರು ಅನುಗ್ರಹಿಸಲಿ) ಎಂಬ ಪದಗಳನ್ನು ಏಕೆ ಹೇಳಲಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಈ ಪದದ ಹುಟ್ಟು ಇಲ್ಲಿವರೆಗು ಸ್ವಷ್ಟವಾಗಿಲ್ಲ. (ಪರ್ಯಾಯ ವಿವರಣೆಗಾಗಿ ಕೆಳಗೆ ಕೊಟ್ಟಿರುವ, "ಸೀನುವಿಕೆಯ ಬಗೆಗಿರುವ ಸಾಂಪ್ರದಾಯಿಕ ಪ್ರತಿಕ್ರಿಯೆಗಳನ್ನು" ನೋಡಿ ). ಉದಾಹರಣೆಗೆ, ಸರ್ ರೆಮಂಡ್ ಹೆನ್ರಿ ಪೈನೆ ಕ್ರೌಫರ್ಡ್, ಇವರು ವೈದ್ಯರ ರಾಯಲ್ ಕಾಲೇಜ್ ನಲ್ಲಿ ಮಾಜಿ ರೆಜಿಸ್ಟ್ರಾರ್{{dn}} ಆಗಿದ್ದರು, "ಚಾಲ್ಸ್ IIನ ಕೊನೆಯ ದಿನಗಳು" ಎಂಬ ಅವರ 1909 ರ ಪುಸ್ತಕದಲ್ಲಿ, ವಿವಾದಾತ್ಮಕ ಅರಸ ಆತನ ಅಂತ್ಯಕಾಲದಲ್ಲಿದ್ದಾಗ, ಸೀನುವಂತೆ ಮಾಡಲು ಆತನ ಖಾಸಗಿ ವೈದ್ಯರು, ಕೌವ್ ಸ್ಲೀಪ್ಸ್(ಸೇವಂತಿಗೆ) ಮಿಶ್ರಣ ಮತ್ತು ಅಮೋನಿಯಾದ ಸಾರವನ್ನು ಬಳಸಿದರು ಎಂದು ಬರೆದಿದ್ದಾರೆ.<ref>{{cite journal | author = Wylie, A, | title = Rhinology and laryngology in literature and Folk-Lore | journal = The Journal of Laryngology & Otology | volume = 42 | issue = 2 | pages = 81–87 | year = 1927}}</ref> ಆದರೂ, ಆತ ಬೇಗ ಮರಣಹೊಂದಲೆಂದು ಈ ರೀತಿ ಸೀನು ಉದ್ದೀಪಿಸುವ ಕ್ರಿಯೆ ಮಾಡಲಾಯಿತೇ (ಕೂಪ್ ದಿ ಗ್ರೇಸ್(ಸಾವಿನ ಪೆಟ್ಟು) ), ಅಥವಾ ಚಿಕಿತ್ಸೆಯ ಕೊನೆಯ ಪ್ರಯತ್ನವೆಂಬಂತೆ ಇದನ್ನು ಮಾಡಲಾಯಿತೇ ಎಂಬುದು ತಿಳಿದಿಲ್ಲ.
 
ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ, ವಿಶೇಷವಾಗಿ ಚೀನೀ ಸಂಸ್ಕೃತಿ, ಜಪಾನೀ ಸಂಸ್ಕೃತಿ ಮತ್ತು ವಿಯಟ್ನಾಂ ಸಂಸ್ಕೃತಿ ಯಲ್ಲಿ , ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡುವ ಸಂಕೇತ ಎಂದು ಭಾವಿಸಲಾಯಿತು. ಇದನ್ನು ಪ್ರಾಚೀನ ಚೀನಾದಲ್ಲಿ ಕ್ರಿಸ್ತಪೂರ್ವ 1000 ದ ಉತ್ತರಾರ್ಧದಲ್ಲಿ ಬರೆಯಲಾದ ಬುಕ್ ಆಫ್ ಸಾಂಗ್ಸ್ ನಲ್ಲಿ ನೋಡಬಹುದಾಗಿದೆ (ಚೀನೀ ಹಾಡುಗಳ ಸಂಗ್ರಹ)<ref>《诗经·终风》 「寤言不寐,愿言则嚏」</ref> ಅಲ್ಲದೇ ಈ ನಂಬಿಕೆಯನ್ನು ಇನ್ನೂ ಇಂದಿನ ಮಾಂಗ ಮತ್ತು ಅನಿಮ್ ನಲ್ಲಿ ಚಿತ್ರಿಸಲಾಗಿದೆ. ಉದಾಹರಣೆಗೆ, [[ಚೀನಾ|ಚೀನಾ]], [[ವಿಯೆಟ್ನಾಮ್|ವಿಯೆಟ್ನಾಂ]] ಮತ್ತು [[ಜಪಾನ್|ಜಪಾನ್]]ನಲ್ಲಿ , ಯಾರಾದರು ಒಬ್ಬ ವ್ಯಕ್ತಿಯನ್ನು ಕುರಿತು ಹಿಂದಿನಿಂದ ಮಾತನಾಡಿದರೆ ಆ ವ್ಯಕ್ತಿಗೆ ಸೀನು ಬರುತ್ತದೆ ಎಂಬ ಮೂಢ ನಂಬಿಕೆಯಿದೆ; ಇದೇ ರೀತಿಯಲ್ಲಿ ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು (ಒಂಟಿ ಸೀನು ಬಂದರೆ), ಅಥವಾ ಕೆಟ್ಟ ಮಾತನಾಡಿದ್ದಾರೆಂದು(ಒಟ್ಟಿಗೆ ಜೋಡಿ ಸೀನುಬಂದರೆ) , ಯಾರಾದರು ಅವನನ್ನು ಪ್ರೀತಿಸುತ್ತಿದ್ದಾರೆಂದು (ಸಾಲಾಗಿ ಮೂರು ಸೀನು ಬಂದರೆ) ಸೀನುವಾತ ಹೇಳಬಹುದು ಅಥವಾ ಇದು ಅವರಿಗೆ ಶೀತವಾಗಲಿರುವ ಸೂಚಕವಾಗಿರಬಹುದು (ಬಹು ಸೀನು ಬಂದರೆ).
 
ಇಂತಹದ್ದೆ ನಂಬಿಕೆಗಳು ಪ್ರಪಂಚದಲ್ಲೆಲ್ಲಾ ಇವೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಈ ರೀತಿಯ ನಂಬಿಕೆಗಳು ಸಮಕಾಲೀನ ಗ್ರೀಕ್, ಸೆಲ್ಟಿಕ್, ಇಂಗ್ಲೀಷ್, ಫ್ರೆಂಚ್, ಮತ್ತು ಭಾರತೀಯ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಇದೆ ರೀತಿಯಾಗಿ, [[ನೇಪಾಳ|ನೇಪಾಳ]]ದಲ್ಲಿ, ಸೀನು ಬಂದರೆ ಆ ಕ್ಷಣದಲ್ಲಿ ಆ ವ್ಯಕ್ತಿಯನ್ನು ಯಾರಾದರು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಂಬಲಾಗುತ್ತದೆ.
 
[[ಭಾರತೀಯ ಸಂಸ್ಕೃತಿ|ಭಾರತೀಯ ಸಂಸ್ಕೃತಿಯಲ್ಲಿ]], ಅದರಲ್ಲೂ ವಿಶೇಷವಾಗಿ ಭಾರತದ ಉತ್ತರ ಭಾಗಗಳಲ್ಲಿ, ಮತ್ತು [[ಇರಾನ್|ಇರಾನ್]] ನಲ್ಲಿಯೂ ಕೂಡ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಸೀನು ಬಂದರೆ ಅದು ಕೆಟ್ಟ ಅಡಚಣೆಯ ಮುನ್ಸೂಚನೆ ಎಂಬ ಸಾಮಾನ್ಯ ಮೂಢನಂಬಿಕೆಯಿದೆ. ಆದ್ದರಿಂದ, ಯಾವುದೇ ದುರದೃಷ್ಟ ಘಟಿಸದಂತೆ ತಡೆಯಲು ಸೀನು ಬಂದಾಗ ಸ್ವಲ್ಪ ಕಾಲ ನಿಂತು ನೀರು ಕುಡಿಯಬೇಕು ಅಥವಾ ಕೆಲಸವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸುವುದು ವಾಡಿಕೆಯಾಗಿದೆ.
 
ಪಾಕಿಸ್ತಾನಿ ಸಂಸ್ಕೃತಿಯಲ್ಲಿ, ಯಾರದರೂ ಅಚ್ಚು ಮೆಚ್ಚಿನವರು , ಅದರಲ್ಲೂ ಮುಖ್ಯವಾಗಿ ಪತ್ನಿ ನೆನಪಿಸಿಕೊಂಡಾಗ ಸೀನು ಬರುತ್ತದೆ ಎಂಬ ಮೂಢ ನಂಬಿಕೆಯಿದೆ.
೫೫ ನೇ ಸಾಲು:
* ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಸೀನುವ ವ್ಯಕ್ತಿ, "ಅಲ್ ಹಮ್ ದುಲಿಲ್ಹ್" ಎಂದು ಹೇಳಬೇಕು. ಇದರ ಅರ್ಥ "ದೇವರನ್ನು ಸ್ತುತಿಸು" ಅಥವಾ "ಎಲ್ಲಾ ಪ್ರಶಂಸೆಯು ಅಲ್ಲಾನಿಂದಾಗಿ."
* ಸ್ಯೆನ್ ಫೆಲ್ಡ್ ನ ಎಪಿಸೋಡ್ "ದಿ ಗಾಡ್ ಸ್ಮ್ಯಾರಿಟನ್" ನಲ್ಲಿ "ನೀವು ತುಂಬ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳಬೇಕೆಂದು ಜೆರಿ ಸೂಚಿಸಿದನು.
!" ಸೀನಿದಾಗ "ಗಾಡ್ ಬ್ಲೆಸ್ ಯು" ಎಂದು ಪ್ರತಿಕ್ರಿಯಿಸುವ ಬದಲು ಮೇಲೆ ಹೇಳಿರುವಂತೆ ಪ್ರತಿಕ್ರಿಯಿಸಲು ಸೂಚಿಸಿದನು.
 
''ಅಕೂ'' , ''ಅಟ್ಕೂ'' , ''ಆಖಿವ್'' , ಮತ್ತು ''ಅಟ್ಶೂ'' ಎಂಬ ಶಬ್ದಗಳು ಸೀನುವಿಕೆಗಿರುವಂತಹ ಇಂಗ್ಲೀಷ್ ನ ಸಾಮಾನ್ಯ ಅನುಕರಣ ಶಬ್ದಗಳಾಗಿವೆ. ಈ ಶಬ್ದಗಳಲ್ಲಿ ಮೊದಲನೆಯ ಅಕ್ಷರವು ಇದ್ದಕ್ಕಿದ್ದಂತೆ ತೆಗೆದುಕೊಳ್ಳುವ ಗಾಳಿಗೆ ಅನುಗುಣವಾಗಿದೆ. ಅಲ್ಲದೇ ಕೊನೆ ಅಕ್ಷರ ಸೀನಿನ ಶಬ್ದಕ್ಕೆ ಸಂಬಂಧಿಸಿದೆ.
೮೫ ನೇ ಸಾಲು:
{{Common Cold}}
 
[[Categoryವರ್ಗ:ಪ್ರತಿಫಲಿತಗಳು]]
[[Categoryವರ್ಗ:ಶರೀರಶಾಸ್ತ್ರ]]
[[Categoryವರ್ಗ: ರಕ್ತಪರಿಚಲನೆಯ ಮತ್ತು ಉಸಿರಾಟದ ವ್ಯವಸ್ಥೆಗಳು ]]
[[ವರ್ಗ:ಮಾನವ ಶರೀರ]]
"https://kn.wikipedia.org/wiki/ಸೀನು" ಇಂದ ಪಡೆಯಲ್ಪಟ್ಟಿದೆ