ರಾಹು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: Category: → ವರ್ಗ: (8) using AWB
೨೨ ನೇ ಸಾಲು:
| Planet =
}}
[[ಹಿಂದೂ ಧರ್ಮ|ಹಿಂದೂ]] ನಂಬಿಕೆಯ ಪ್ರಕಾರ, '''ರಾಹು''' ಎಂಬುದು [[ಸೂರ್ಯ|ಸೂರ್ಯ]] ಅಥವಾ [[ಚಂದ್ರ|ಚಂದ್ರ]]ನನ್ನು ನುಂಗಿ [[ಗ್ರಹಣ|ಗ್ರಹಣ]]ಗಳನ್ನು ಉಂಟುಮಾಡುವ ಒಂದು ಹಾವು. ರಾಹುವನ್ನು, ಎಂಟು ಕಪ್ಪು ಕುದುರೆಗಳ ರಥವನ್ನು ಓಡಿಸುತ್ತಿರುವ, ದೇಹವಿಲ್ಲದ ಒಂದು ಡ್ರ್ಯಾಗನ್ ಆಗಿ ಚಿತ್ರಕಲೆಯಲ್ಲಿ ಮೂಡಿಸಲಾಗಿದೆ.
ವೇದ ಜ್ಯೋತಿಶ್ಶಾಸ್ತ್ರದಲ್ಲಿ ರಾಹು ನವಗ್ರಹಗಳಲ್ಲಿ(ಒಂಬತ್ತು ಗ್ರಹಗಳು) ಒಂದಾಗಿದೆ. ''ರಾಹು ಕಾಲ'' ವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
 
ಪುರಾಣದ ಪ್ರಕಾರ, ''[[ಸಮುದ್ರ ಮಂಥನ|ಸಮುದ್ರ ಮಂಥನ]]'' ದ ಸಮಯದಲ್ಲಿ, ಅಸುರನಾದ ರಾಹು ಸ್ವಲ್ಪ ಅಮೃತವನ್ನು ಕುಡಿದನು. ಆದರೆ ಅಮೃತವು ಆತನ ಗಂಟಲಿನ ಮೂಲಕ ಹಾದು ಹೋಗುವಷ್ಟರಲ್ಲಿ, ಮೋಹಿನಿ([[ವಿಷ್ಣು|ವಿಷ್ಣು]]ವಿನ ಸ್ತ್ರೀ ಅವತಾರ) ಆತನ ತಲೆ ಕತ್ತರಿಸಿ ಹಾಕಿದಳು. ಆದಾಗ್ಯೂ, ತಲೆಯ ಭಾಗವು, ಅಮರ್ತ್ಯವಾಗಿ ಸಾವಿನಿಂದ ಪಾರಾಗಿ ಉಳಿಯಿತು. ಈ ಸಜೀವ ತಲೆಯು ಸಂದರ್ಭಾನುಸಾರವಾಗಿ ಸೂರ್ಯ ಅಥವಾ ಚಂದ್ರನನ್ನು ನುಂಗಿ, ಗ್ರಹಣಗಳನ್ನು ಉಂಟು ಮಾಡುತ್ತದೆಂದು ನಂಬಲಾಗಿದೆ. ನಂತರ, ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರಬಂದು ಗ್ರಹಣವನ್ನು ಅಂತ್ಯಗೊಳಿಸುತ್ತದೆ.
 
[[ಖಗೋಳಶಾಸ್ತ್ರ|ಖಗೋಳ ವಿಜ್ಞಾನ ರೀತ್ಯಾ]], ರಾಹು ಹಾಗು ಕೇತು, [[ಸೂರ್ಯ|ಸೂರ್ಯ]] ಹಾಗು [[ಚಂದ್ರ|ಚಂದ್ರ]]ರು [[ಖಗೋಳ|ಖಗೋಳ]]ಕ್ಕೆ ನೀಲಾಕಾಶ ಪರಿಧಿಯಲ್ಲಿ ಚಲಿಸುವಾಗ ಅವರ ಮಾರ್ಗಗಳಲ್ಲಿ ಉಂಟಾಗುವ ಎರಡು ಛೇದಕ ಬಿಂದುಗಳನ್ನು ಸೂಚಿಸುತ್ತವೆ. ಹೀಗಾಗಿ, ರಾಹು ಹಾಗು ಕೇತುವನ್ನು ಕ್ರಮವಾಗಿ ಉತ್ತರ ಹಾಗು ದಕ್ಷಿಣ ಚಾಂದ್ರ ಸಂಪಾತಗಳೆಂದು ಕರೆಯಲಾಗುತ್ತದೆ. ಸೂರ್ಯ ಹಾಗು ಚಂದ್ರರು ಈ ಎರಡರಲ್ಲಿ ಒಂದು ಬಿಂದುವಿನಲ್ಲಿದ್ದಾಗಿ [[ಗ್ರಹಣ|ಗ್ರಹಣ]]ಗಳು ಉಂಟಾಗುತ್ತದೆಂಬ ವಾಸ್ತವವು, ಸೂರ್ಯನು ಹಾವಿನಿಂದ ನುಂಗಲ್ಪಟ್ಟನೆಂಬ ಪುರಾಣದ ಉಗಮಕ್ಕೆ ದಾರಿ ಮಾಡಿಕೊಟ್ಟಿದೆ.
 
ರಾಹುವನ್ನು, ಮೋಸ ಪ್ರವೃತ್ತಿಯ ಒಬ್ಬ ಪೌರಾಣಿಕ ನಾಯಕನೆಂದು ಪರಿಗಣಿಸಲಾಗಿದೆ. ಈತ ಮೋಸ ಮಾಡುವವರು, ಕೇವಲ ಸಂತೋಷವನ್ನು ಅರಸುವವರು, ಪರಕೀಯರ ಭೂಮಿಯನ್ನು ಕಬಳಿಸುವವರು, ಮಾದಕದ್ರವ್ಯಗಳ ಮಾರಾಟಗಾರರು, ವಿಷವನ್ನು ಮಾರಾಟ ಮಾಡುವವರು, ಅಪ್ರಾಮಾಣಿಕರು ಮತ್ತು ಅನೈತಿಕ ಚಟುವಟಿಕೆಗಳನ್ನು ನಡೆಸುವವರು ಮುಂತಾದವರನ್ನು ಈತ ಪ್ರತಿನಿಧಿಸುತ್ತಾನೆ. ಈತ ಅಧರ್ಮೀಯ, ಬಹಿಷ್ಕೃತ, ಕಠಿಣ ಮಾತು, ಭ್ರಾಂತಿಕಾರಕತೆ, ಅಸತ್ಯ, ಅಶುಚಿತ್ವ, ಹೊಟ್ಟೆಯ ಹುಣ್ಣುಗಳು, ಮೂಳೆಗಳು, ಹಾಗು ದೇಹಾಂತರ ವೇಷಧಾರಿ ರೂಪವನ್ನು ಸೂಚಿಸುತ್ತಾನೆ. ರಾಹು, ಬೇರೊಬ್ಬರ ಶಕ್ತಿಯನ್ನು ಬಲಪಡಿಸುವಲ್ಲಿ ಹಾಗು ಒಬ್ಬ ಸ್ನೇಹಿತನನ್ನು ಶತ್ರುವನ್ನಾಗಿ ಬದಲಿಸಲು ಕಾರಣೀಭೂತವಾಗಿದ್ದಾನೆ. ವಿಷಕಾರಿ ಹಾವು ಕಡಿತಗಳನ್ನು ರಾಹುವಿನ ಕೃಪೆಯಿಂದ ಗುಣಪಡಿಸಬಹುದು.
೪೩ ನೇ ಸಾಲು:
</imagemap>
 
ಬಹುಶಃ ಶಿವ ಪುರಾಣದಿಂದ ಆಯ್ದುಕೊಳ್ಳಲಾದ [[ಶಿವ|ಶಿವ]] ಹಾಗು ರಾಹುವಿನ ಮತ್ತೊಂದು ಲೀಲೆಯನ್ನು ಜೋಸೆಫ್ ಕ್ಯಾಂಪ್ಬೆಲ್ ತಮ್ಮ ಪುಸ್ತಕ ''ದಿ ಪವರ್ ಆಫ್ ಮಿಥ್'' ನಲ್ಲಿ ಭಾವಾನುವಾದ ಮಾಡಿದ್ದಾರೆ. ಗಣ ಚಕ್ರವೂ ಸಹ ಈ ಪುರಾಣದ ಅರ್ಥವಿವರಣೆಯನ್ನು:
<blockquote>
ದೈತ್ಯ ರಾಜ ಜಲಂಧರನ ಪೌರಾಣಿಕ ಕಥೆಯಲ್ಲಿ ಬರುವಂತೆ, ಜಲಂಧರನು ರಾಹುವನ್ನು ಶಿವನ ಬಳಿಗೆ ಕಳುಹಿಸಿ, ಆತನ ಮೂಲಕ [[ಪಾರ್ವತಿ|ಪಾರ್ವತಿ]]ಯನ್ನು ಜಲಂಧರನಿಗೆ ಒಪ್ಪಿಸಬೇಕೆಂಬ ಸಂದೇಶ ನೀಡುತ್ತಾನೆ. ಈ ಸಂದೇಶದಿಂದ ಶಿವನು ಕೊಪೋದ್ರಿಕ್ತನಾಗುತ್ತಾನೆ, ಆಗ ಈ ಕೋಪವು ಆತನ ಲಲಾಟದಿಂದ(ಹಣೆಯಿಂದ) ಹುಟ್ಟಿಕೊಂಡ ಒಂದು ಭಯಾನಕ ಜೀವಿಯ ರೂಪವನ್ನು ತಾಳುತ್ತದೆ. ಇದು ಸಿಂಹದ ಮುಖವನ್ನು, ಉರಿಯುತ್ತಿರುವ ಕಣ್ಣುಗಳು, ಸ್ಪರ್ಶಿಸಲು ಒರಟಾಗಿದ್ದ ಶುಷ್ಕವಾದ ದೇಹ, ಉದ್ದನೆಯ ತೋಳುಗಳು ಹಾಗು ಕೋಪದಿಂದ ಜೋಲುಬೀಳುತ್ತಿದ್ದ ನಾಲಗೆಯನ್ನು ಹೊಂದಿತ್ತು. ಈ ಭಯಾನಕ ಜೀವಿಯು ರಾಹುವಿನೆಡೆಗೆ ನುಗ್ಗಿ ಬರುವುದರ ಜೊತೆಗೆ ಆತನನ್ನು ನುಂಗಲು ತಯಾರಾಯಿತು. "ನಾವು ದೂತರನ್ನು ಕೊಲ್ಲುವುದಿಲ್ಲ" ಎಂಬ ಶಿವನ ಸ್ಪಷ್ಟ ನುಡಿಗಳನ್ನು ಕೇಳಿದ ನಂತರ ಗಣವು ಶಿವನನ್ನು ಪ್ರಾರ್ಥಿಸಿ, ಅದು ಹಸಿವೆಯಿಂದ ಯಾತನೆಯನ್ನು ಅನುಭವಿಸುತ್ತಿದೆಯೆಂದು ಹೇಳಿತು. ಗಣಕ್ಕೆ ಶಿವನು, ಆ ಜೀವಿಯು ಅಷ್ಟೊಂದು ಹಸಿವೆಯಿಂದ ಬಳಲುತ್ತಿದ್ದರೆ, ಅದು ತನ್ನದೇ ಆದ ಮಾಂಸವನ್ನು ಭಕ್ಷಿಸಬೇಕೆಂದು ಹೇಳುತ್ತಾನೆ. ಆತನ ಮಾತುಗಳಂತೆ ಗಣವು ನಡೆದುಕೊಂಡಿತು, ಅದು ತಲೆ ಭಾಗವನ್ನು ಬಿಟ್ಟು ಬೇರೆಲ್ಲವನ್ನು ನುಂಗಿ ಹಾಕಿತು. ಇದರ ಭಕ್ತಿಗೆ ಮೆಚ್ಚಿದ ಶಿವನು, ಇದನ್ನು ತನ್ನ ದ್ವಾರಪಾಲಕನನ್ನಾಗಿ ನೇಮಿಸಿ, ಎಲ್ಲ ಕ್ರೂರ ಜನರಿಗೆ ಭಯವನ್ನು ಉಂಟುಮಾಡಬೇಕೆಂದು ಆದೇಶಿಸಿದ. ಶಿವನು ತನ್ನನ್ನು ಪೂಜಿಸುವುದರೊಂದಿಗೆ ಗಣವನ್ನು ಆರಾಧಿಸಬೇಕೆಂದು ಕಟ್ಟಳೆ ಹಾಕುವುದರ ಜೊತೆಗೆ ಅದಕ್ಕೆ ಕೀರ್ತಿಮುಖ ಎಂಬ ಹೆಸರನ್ನು ನೀಡಿದ.<ref>http://www.philhine.org.uk/writings/tt_gannas.html (ಸಂಕಲನ: ಶುಕ್ರವಾರ, 30 ಮಾರ್ಚ್ 2007)</ref>
</blockquote>
 
==ಹನುಮಾನ್ ಹಾಗು ರಾಹು ==
 
[[ಹನುಮಂತ|ಹನುಮಾನ್]] ನು, ತನ್ನ ಬಾಲ್ಯದಲ್ಲಿ, ಸೂರ್ಯನು ಒಂದು ದೊಡ್ಡ ಹಣ್ಣೆಂಬ ಭ್ರಮೆಯಿಂದ ಆತನೆಡೆಗೆ ನೆಗೆದು ಹಿಡಿಯಲು ಪ್ರಯತ್ನಿಸಿದ್ದ. ಆ ದಿವಸ ಸೂರ್ಯ ಗ್ರಹಣವಾದ್ದರಿಂದ, ರಾಹು ಸೂರ್ಯನನ್ನು ನುಂಗಬೇಕಿತ್ತು. ಹನುಮಂತನು ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತಿದ್ದುದನ್ನು ರಾಹು ನೋಡುತ್ತಾನೆ; ರಾಹುವನ್ನು ನೋಡಿದ ಬಾಲಕ ಹನುಮಂತ, ಅದರ ಪ್ರತ್ಯೇಕಗೊಂಡ ತಲೆ ಕಂಡು ಕುತೂಹಲದಿಂದ ಆಕರ್ಷಿತನಾಗಿ, ರಾಹುವನ್ನು ಹಿಡಿದುಕೊಳ್ಳುತ್ತಾನೆ.
 
ರಾಮಾಯಣ ಯುದ್ಧದ ಮತ್ತೊಂದು ಸಂದರ್ಭದಲ್ಲಿ, ರಾವಣ ನವಗ್ರಹಗಳನ್ನು ಸೆರೆಯಾಳಾಗಿರಿಸಿದ್ದ. ಆಗ ಹನುಮಂತನು ಬಂದು ನವಗ್ರಹಗಳನ್ನು ಬಂಧನಮುಕ್ತಗೊಳಿಸುತ್ತಾನೆ. ನಂತರ ಈ ನವಗ್ರಹಗಳು ಹನುಮಂತನಿಗೆ ಆಶೀರ್ವದಿಸಿ, "ನಿನ್ನನ್ನು ಪೂಜಿಸುವ ಭಕ್ತರು ನಮ್ಮಿಂದಲೂ ಅನುಗ್ರಹವನ್ನು ಪಡೆಯುತ್ತಾರೆ" ಎಂದು ಹೇಳುತ್ತವೆ. ಪ್ರತ್ಯೇಕವಾಗಿ ಎಲ್ಲ ಗ್ರಹಗಳು ಹನುಮಾನ್ ನಿಗೆ ಅನುಗ್ರಹಿಸುತ್ತವೆ. ಈ ರೀತಿಯಾಗಿ, ರಾಹುವಿನಿಂದ ಪ್ರಭಾವಿತ ತೊಂದರೆಗಳು ಭಗವಾನ್ ಹನುಮಾನ್ ಆರಾಧನೆಯಿಂದ ಶಮನಗೊಳ್ಳುತ್ತವೆ.
೫೬ ನೇ ಸಾಲು:
==ಜ್ಯೋತಿಶ್ಶಾಸ್ತ್ರ==
{{Unreferenced section|date=July 2010}}
[[File:Rahudeva.jpg|thumb|ರಾಹು ತನ್ನ ಜೊತೆಗಾರ ಕರಲಿಯೊಂದಿಗೆ ]]
ವೇದ ಜ್ಯೋತಿಶ್ಶಾಸ್ತ್ರದಲ್ಲಿ ರಾಹುವನ್ನು ಒಂದು ಅಸುರನನ್ನಾಗಿ ಅಥವಾ ಕೆಡುಕನ್ನು ಉಂಟುಮಾಡುವ ರಾಕ್ಷಸ ರೂಪದಲ್ಲಿ ಕಾಣಲಾಗುತ್ತದೆ. ಈತ ನಿಯಂತ್ರಿಸುವ ಬದುಕಿನ ಯಾವುದೇ ಕ್ಷೇತ್ರವನ್ನು ಅಸ್ತವ್ಯಸ್ತತೆ, ಅಸ್ಪಷ್ಟತೆ, ಹಾಗು ಕ್ರೂರತೆಯಲ್ಲಿ ಮುಳುಗಿಸುತ್ತಾನೆ. ಈತನನ್ನು ಭೌತಿಕ ಜಗತ್ತಿನ ನಶ್ವರತೆ ಸಂಕೇತ ರೂಪ,ಸ್ವಾರ್ಥ,ಗೊತ್ತುಗುರಿಯಿಲ್ಲದ ವರ್ತನೆ,ಅಥವಾ ಯಾವುದೇ ಜಾಣ್ಮೆ ಇಲ್ಲವೆ ತಿಳಿವಳಿಕೆ ಇಲ್ಲದ ಅನಿಯಂತ್ರಿತ ಬೆಳವಣಿಗೆಗೆ ಕಾರಣನಾಗುತ್ತಾನೆ ಎಂದು ಹೋಲಿಕೆ ಮಾಡಲಾಗುತ್ತದೆ.
 
ರಾಹು, ಮಾಯೆಯ(ಪ್ರಕೃತಿಯ ಭ್ರಾಮಕ ಶಕ್ತಿಯ) ಅತ್ಯಂತ ಬಲಿಷ್ಠ ಹಾಗು ಹಠಮಾರಿ ಮಗನೆಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ ಆತನ ಮಾಯಾವಿ(ಭ್ರಾಮಕ)ಸ್ವಭಾವಕ್ಕೆ ಹಲವು ದ್ವಂದ್ವಗಳು ಜೊತೆಗೂಡಿವೆ. ಇದು ಹೆಚ್ಚಾಗಿ ಸೆವೆಂತ್ ರೇಗೆ ಸಂಬಂಧಿಸಿದೆ (ಏಳು ಕಂಟಕಗಳ ಪಾತ್ರ ವಿವರಿಸುವ ಪೌರಾಣಿಕ ಕಥಾವಳಿ)
ಇದು ಅಧಿಕೃತ ಜ್ಯೋತಿಶ್ಶಾಸ್ತ್ರದ ಶಕ್ತಿ, ಏಕೆಂದರೆ ಇದು ಎಲ್ಲ ಸಂಭಾವ್ಯತೆಗಳನ್ನು
ಲೋಕದ ಅಸ್ತಿತ್ವದೊಳಗೆ ಒತ್ತಾಯಪೂರ್ವಕವಾಗಿ ಪ್ರದರ್ಶಿಸುವ ಒಂದು ಬಲವಾಗಿದೆ.
 
ವೇದ ಗ್ರಂಥಗಳಲ್ಲಿ ರಾಹುವಿಗೆ ನೀಡಲಾಗಿರುವ ವಿವಿಧ ಹೆಸರುಗಳೆಂದರೆ - ಮುಖ್ಯಸ್ಥ; ಅಸುರರ ಸಲಹೆಗಾರ; ಅಸುರರುಗಳಿಗೆ ಮಂತ್ರಿ; ಕೋಪೋದ್ರಿಕ್ತ; ಹಿಂಸಕ; ಪ್ರಭಾವಶಾಲಿಗಳ ಪರಮಶತ್ರು; ಭ್ರಾಮಕಗಳ ಒಡೆಯ,ಸೂರ್ಯನನ್ನು ಬೆದರಿಸುವ ವ್ಯಕ್ತಿ; ಚಂದ್ರನ ಕಾಂತಿಯನ್ನು ತಗ್ಗಿಸುವವನು; ಸಂಧಿಗಾರ; ಸಾವಿಲ್ಲದವನು,(ಅಮೃತವನ್ನು ಸೇವನೆ ಮಾಡಿದ ಕಾರಣಕ್ಕಾಗಿ); ಏಳಿಗೆಯನ್ನು ಅನುಗ್ರಹಿಸುವವನು, ಸಂಪತ್ತು ಹಾಗು ಅಂತಿಮ ಜ್ಞಾನ- ಅದರ ಮೂಲ ಶಕ್ತಿ ಹಾಗು ವಿಶೇಷ ಲಕ್ಷಣಕ್ಕೆ ಸಂಕೇತದ ಸುಳಿವು ನೀಡುವವನು.
೬೮ ನೇ ಸಾಲು:
 
ಒಂದು ಕುಂಡಲಿಯಲ್ಲಿ ಗುರು ಹಾಗು ಶುಕ್ರ ಒಟ್ಟುಗೂಡಿದ್ದರೆ, ಅವುಗಳನ್ನು ಒಟ್ಟಾರೆಯಾಗಿ ರಾಹು ಎಂದು ಪರಿಗಣಿಸಬಹುದೆಂಬ ಕುತೂಹಲಕಾರಿ ಅಂಶವನ್ನು ಲಾಲ್ ಕಿತಾಬ್ ಉಲ್ಲೇಖಿಸುತ್ತದೆ. ಇಲ್ಲಿ ರಾಹು, ಗುರುವಿಗೆ ತಲುಪುವ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾನೆಂಬ ವಾಸ್ತವಕ್ಕೆ ಸಂಬಂಧಿಸಿದೆ.
ಗುರುವು ದೇವತೆಗಳ ಬೋಧಕನಾಗಿದ್ದರೆ, ಶುಕ್ರ ಅಸುರರಿಗೆ ಬೋಧಕನಾಗಿದ್ದಾನೆ.
 
ವೇದ ಜ್ಯೋತಿಶ್ಶಾಸ್ತ್ರದ ಪ್ರಕಾರ ರಾಹು ಉರಿಯುವ,ಧಗಧಗಿಸುವ ವಸ್ತುವಾಗಿರುವ ಪೆಟ್ರೋಲಿಯಂನ ಗಣಿಗಾರಿಕೆಗೆ ಸೂಚಿತವಾಗಿದೆ.
೭೮ ನೇ ಸಾಲು:
ಹೆಸರು ಹಾಗು ಖ್ಯಾತಿಯನ್ನು ನೀಡಿ ಉನ್ನತಿಗೇರಿಸುವಲ್ಲಿ ರಾಹುವಿಗೆ ಸಮನಾರಿಲ್ಲ, ಹಠಾತ್ ಅದೃಷ್ಟದ ಮೂಲಕ ಜೂಜಿನಲ್ಲಿ ದೊರೆಯುವ ಆದಾಯ, ಇದೆಲ್ಲದರಿಂದಾಗಿ ಪಾಶ್ಚಿಮಾತ್ಯ ಜ್ಯೋತಿಶ್ಶಾಸ್ತ್ರಜ್ಞರು ಇದನ್ನು ಅತ್ಯಂತ ಸತ್ಪರಿಣಾಮಕಾರಿಯಾದ, ಶುಭಕರ ಶಕ್ತಿಯೆಂದು ಪರಿಗಣಿಸುತ್ತಾರೆ. ಯಾವುದೇ ವಲಯದಲ್ಲಾದರೂ
ಯಶಸ್ಸು ದೊರಕುವ ಯಾವುದೇ ಕ್ಷೇತ್ರವು ಸಾಮಾನ್ಯವಾಗಿ ರಾಹು ಸ್ಥಿತವಾಗಿರುವ ಮನೆಯ ಮಹತ್ವಕ್ಕೆ ಸಂಬಂಧಿಸಿರುತ್ತದೆ.
ರಾತ್ರಿಯ ಸಮಯದಲ್ಲಿ ಸಂಪೂರ್ಣ ಜಗತ್ತಿಗೆ ಬೆಳಕು ನೀಡುವ ಎಲ್ಲ ವಿದ್ಯುತ್ ದೀಪಗಳು ರಾಹುವಿನೊಂದಿಗೆ ಸಂಭಂದದ ಹೋಲಿಕೆ ಹೊಂದಿರುತ್ತವೆ. ರಾಹುವನ್ನು 'ಕೃತಕ ಸೂರ್ಯನೆಂದು' ಕರೆಯಲಾಗುತ್ತದೆ. ನಿಯಾನ್ ದೇವತೆಯನ್ನು ಜಗತ್ತಿಗೆ ಪರಿಚಯಿಸಿದ್ದನ್ನು ಪರಿಗಣಿಸಿ, ಆಧುನಿಕ ಜಗತ್ತಿನಲ್ಲಿ ಮಿಥ್ಯಾಜ್ಞಾನ ಹಾಗು ಮಾಯಾಜಾಲ ಹೆಚ್ಚಿಸುವುದರ ಮೂಲಕ ಈ ವ್ಯಾಖ್ಯಾನದಲ್ಲಿನ ನಿರೂಪಣೆಯು ಸಮಂಜಸವೆನಿಸುತ್ತದೆ. ರಾಹು ತನ್ನದೇ ಆದ ರೀತಿಯಲ್ಲಿ ಕೃತಕ ಸೂರ್ಯನನ್ನು ಅತ್ಯಂತ ಅಗತ್ಯದ ಸಮಯಯಲ್ಲಿ ಸೃಷ್ಟಿಸಿದ್ದಾನೆ,ಆತನಿಗೆ ರಾತ್ರಿಯೇ ಸೂಕ್ತ ಸಮಯ.
 
'''ಪ್ರಭುತ್ವ, ಮೇಲಕ್ಕೆ ಏರಿಸುವಿಕೆ, ದುರ್ಬಲಗೊಳಿಸುವುದು ಮತ್ತು ಮೂಲತ್ರಿಕೋಣ( ತನ್ನದೇ ಸ್ಥಾನದಲ್ಲಿ ಸ್ಥಿರವಾಗಿರುವಿಕೆಯ ಶಕ್ತಿ):-'''
 
ಕುಂಡಲಿಗಳಲ್ಲಿ ಇದು ಅತ್ಯಂತ ವಿವಾದಾಸ್ಪದ ಮನೆಯಾಗಿದೆ. ಏಕೆಂದರೆ ಹಲವು ಅಭಿಪ್ರಾಯಗಳ ಪ್ರಕಾರ ರಾಹು ಗೋಚರಿಸುವ ಸಂಕೇತದ ಗುರುತು, ಪ್ರಭುತ್ವದ ಸುತ್ತ ಹರಡಿಕೊಂಡಿದೆ. ಪಾಶ್ಚಿಮಾತ್ಯ ಪದ್ದತಿಯಲ್ಲಿ ರಾಹುವಿಗೆ ಯಾವುದೇ ರೀತಿಯ ಆಳ್ವಿಕೆಯನ್ನು ನಿಗದಿಪಡಿಸಲು ನಿರಾಕರಿಸುತ್ತದೆ.(ರಾಹುವಿಗೆ ಆಳುವ ಸಾಮರ್ಥ್ಯವಿಲ್ಲ ಎಂಬುದನ್ನು ತೋರಿಸುತ್ತದೆ.) ವೇದ ಜ್ಯೋತಿಶ್ಶಾಸ್ತ್ರದ ವಿವಿಧ ಪದ್ದತಿಗಳನುಸಾರ, ಪ್ರಭುತ್ವ ನೀಡಿಕೆ,ಮೇಲಕ್ಕೆ ಏರಿಸುವುದು(ಮೇಲ್ದರ್ಜೆಗೆ ಹೋಗುವುದು) ಹಾಗು ದುರ್ಬಲಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಹುವಿಗೆ ವಿವಿಧ ಸಂಕೇತಗಳನ್ನು ನಿಗದಿಪಡಿಸುತ್ತದೆ. ಪ್ರಭುತ್ವ, ಮೇಲಕ್ಕೆ ಏರಿಸುವುದು ಹಾಗು ದುರ್ಬಲಗೊಳಿಸುವ ರಾಹುವಿನ ಗುರುತುಗಳ ಸ್ಥಿರಗೊಳಿಸುವ ಬಗ್ಗೆ ಒಳಹೊಕ್ಕು ಪರಿಶೀಲಿಸುವ ಮುಂಚೆ ನಾವು
೮೭ ನೇ ಸಾಲು:
ಇದು ಶನಿ, ಬುಧ ಹಾಗು ಶುಕ್ರನೊಂದಿಗೆ ಮಿತ್ರನಾಗಿದೆ.
ಮಂಗಳ, ಗುರು ಗ್ರಹದೊಂದಿಗೆ ತಟಸ್ಥವಾಗಿದೆ.
ಸೂರ್ಯ ಹಾಗು ಚಂದ್ರರಿಗೆ ವೈರಿಯಾಗಿದೆ.
 
ರಾಹುವು, ಚಂದ್ರನಿಗೆ ಹೋಲಿಸಿದರೆ ಸೂರ್ಯನೊಂದಿಗೇ ಹೆಚ್ಚು ಶತ್ರುತ್ವ ಹೊಂದಿದೆ ಎಂಬ ಸಂಗತಿ ಗಮನಾರ್ಹವಾಗಿದೆ.
 
ರಾಹುವು ಮೂರು ನಕ್ಷತ್ರಗಳು ಅಥವಾ ಚಂದ್ರನ ಮನೆಗಳಾದ ಆರ್ದ್ರಾ, ಸ್ವಾತಿ ಹಾಗು ಶತಭಿಷಗಳಿಗೆ ಅಧಿಪತಿಯಾಗಿದ್ದಾನೆ. ರಾಹುವನ್ನು ಇದರೊಂದಿಗೆ ಸಮೀಕರಿಸಬಹುದು:ರಾಹುವಿನ ಬಣ್ಣ ಹೊಗೆಮಸುಕಾಗಿರುತ್ತದೆ, ಸೀಸ ಅದರ ಲೋಹವಾಗಿದೆ ಹಾಗು ರತ್ನದ ವರ್ಣಗಳಲ್ಲಿ ಜೇನುತುಪ್ಪದ ಬಣ್ಣದ ಹೆಸ್ಸೋನೈಟ್ (ಹಳದಿಯಿಂದ ಕಂದು ಬಣ್ಣ)ಅದರ ಸಂಕೇತವಾಗಿದೆ. ಗಾಳಿ ಇದರ ನಿಸರ್ಗ ಶಕ್ತಿಯ ಅಂಶವಾಗಿದ್ದು, ನೈಋತ್ಯ ಇದರ ದಿಕ್ಕಾಗಿದೆ.
 
ವೈಜ್ಞಾನಿಕ ಜ್ಯೋತಿಶ್ಶಾಸ್ತ್ರದ ಪ್ರಕಾರ ರಾಹು ಹಾಗು ಕೇತು, ಭೂಮಿ ಹಾಗು ಚಂದ್ರನ ಮಾರ್ಗದಲ್ಲಿ ಬರುವ ಎರಡು ಛೇದಕ ಬಿಂದುಗಳಾಗಿವೆ.
೧೦೭ ನೇ ಸಾಲು:
==ಬೌದ್ಧಧರ್ಮ==
 
ರಾಹುವಿನ ಬಗ್ಗೆ ಪಾಲಿ ಭಾಷೆಯ ಗ್ರಂಥಗಳಾದ ಸಂಯುತ್ತ ನಿಕಾಯದ ಗ್ರಂಥಮಾಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.(ಬೌದ್ದ ಧರ್ಮಗ್ರಂಥಗಳಲ್ಲಿನ ಐದನೆಯ ಅಧ್ಯಾಯದ ಮೂರನೆಯ ಪಠ್ಯದಲ್ಲಿನ ಸಂಕಷ್ಟಕಾರಕಗಳ ವಿವರ) ಚಂದಿಮಾ(ಚಾಂದ್ರಮಾನದ ಅಧ್ಯಾಯ) ಸೂತ್ತ ಹಾಗು ಸೂರ್ಯ (ಸೂರಿಯಾ)ಸೂತ್ತದಲ್ಲಿ, ರಾಹುವು ಚಂದ್ರ, ಚಂದ್ರ ದೇವತೆ ಹಾಗು ಸೂರಿಯ, ಸೂರ್ಯ ದೇವತೆಯ ಮೇಲೆ ಆಕ್ರಮಣ ಮಾಡುತ್ತಾನೆ. ಇವರನ್ನು [[ಗೌತಮ ಬುದ್ಧ|ಬುದ್ಧ]]ನ ಬಗ್ಗೆ ತಮ್ಮ ಭಕ್ತಿಭಾವ ಪ್ರಕಟಪಡಿಸುವ ಒಂದು ಸಂಕ್ಷಿಪ್ತ ಶ್ಲೋಕದ ನುಡಿಚರಣ ಪಠಿಸಿ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವ ಮುಂಚೆ ಅಹವಾಲನ್ನು ಒಪ್ಪಿಸುವವರು ಎಂದು ಹೇಳಲಾಗುತ್ತದೆ.<ref>[http://www.accesstoinsight.org/tipitaka/sn/sn02/sn02.009.piya.html ಚಂದಿಮ ಸುತ್ತ]</ref><ref name="Suriya Sutta">[http://www.accesstoinsight.org/tipitaka/sn/sn02/sn02.010.piya.html ಸೂರಿಯ ಸುತ್ತ]</ref>(ರಾಹುವಿನಂತಹ ತೊಂದರೆದಾಯಕಗಳ ನಿವಾರಣೆಗೆ ಪರಿಹಾರ ಸೂತ್ರವೇ ಸೂತ್ತ ಎನ್ನಲಾಗುತ್ತದೆ.) ಬುದ್ಧನು ಅವರಿಗೆ ಸ್ಪಂದಿಸುತ್ತಾ, ಅವರನ್ನು ಬಿಡುಗಡೆಗೊಳಿಸಬೇಕೆಂದು ರಾಹುವಿಗೆ ಆದೇಶಿಸುತ್ತಾನೆ, ಈ ಆದೇಶವನ್ನು ಪಾಲಿಸಿದ ರಾಹು "ತನ್ನ ತಲೆ ಏಳು ತುಂಡಾಗುವುದರಿಂದ" ತಪ್ಪಿಸಿಕೊಳ್ಳುತ್ತಾನೆ.<ref name="Suriya Sutta">< /ref> ಇಬ್ಬರು ಆಕಾಶ ದೇವತೆಗಳು ಹಾಗು ಬುದ್ಧನು ಪಠಿಸಿದ ಶ್ಲೋಕಚರಣಗಳನ್ನು ಅಲ್ಲಿಂದೀಚೆಗೆ ಬೌದ್ಧ ಪೂಜಾ,ಪ್ರಾರ್ಥನಾ ವಿಧಿಗಳಲ್ಲಿನ ಸೂತ್ರಗಳಲ್ಲಿ ರಕ್ಷಕ ಮಂತ್ರಗಳೆಂದು(ಪರಿತ್ತ)ದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಸನ್ಯಾಸಿಗಳು ಎಲ್ಲರಿಗೂ ರಕ್ಷಣೆ ನೀಡುವ ಪ್ರಾರ್ಥನೆಗಳಲ್ಲಿ ಪಠಿಸುತ್ತಾರೆ.<ref>[http://www.accesstoinsight.org/tipitaka/sn/index.html ಎಕ್ಸೆಸ್ ಟು ಇನ್ ಸೈಟ್-ಸೀ ದಿ ಸಮ್ಮರಿ ಇನ್ ದಿ ದೇವಪುಟ್ಟ್-ಸಂಯುತ್ತ ಸೆಕ್ಸನ್]</ref>
 
ಟಿಬೆಟಿಯನ್ ಬೌದ್ಧ ಧರ್ಮ ಸಂಪ್ರದಾಯದಲ್ಲಿ, ರಾಹುವು (ಅಥವಾ ರಾಹುಲ; ಟಿಬ್. ''ಗ್ಜ'' )ಪದ್ಮಸಂಭವರಿಂದ(ತಾವರೆ ಹೂವಲ್ಲಿ ಗೋಚರಿಸುವ ಬಾಲಬುದ್ದನಿಂದ) ನಿಗ್ರಹಿಸಲ್ಪಟ್ಟವನೆಂದು ಪರಿಗಣಿಸಲಾಗುತ್ತದೆ, ಇವರು ದ್ಜೊಗ್ಚೆನ್ (ಧ್ಯಾನಾಸಕ್ತ ಶುದ್ದ ಮನಸುಗಳ)ಉಪದೇಶಗಳ ಪ್ರಮುಖ ಸಂರಕ್ಷಕರಲ್ಲಿ ಒಬ್ಬರೆನಿಸಿದ್ದಾರೆ, ಅದರಲ್ಲೂ ವಿಶೇಷವಾಗಿ ಲೊಂಗ್ಚೆನ್ ನ್ಯಿಂಗ್ಥಿಕ್ ಮೊದಲಿಗರಾಗಿದ್ದಾರೆ. ರಾಹುವನ್ನು ಸಾಮಾನ್ಯವಾಗಿ ಒಂಬತ್ತು ತಲೆಗಳು ಹಾಗು ತನ್ನ ಗಾಢ ಕಪ್ಪು ವರ್ಣದ ದೇಹದ ಸುತ್ತಲೂ ಸಾವಿರ ಕಣ್ಣುಗಳನ್ನು ಹೊಂದಿರುವಂತೆ ಚಿತ್ರಿಸಲಾಗುತ್ತದೆ. ತನ್ನ ನಾಲ್ಕು ತೋಳುಗಳಲ್ಲಿ ಬಿಲ್ಲು ಮತ್ತು ಬಾಣ ಹಾಗು ಸಾಮಾನ್ಯವಾಗಿ ಒಂದು ಕಂಠಪಾಶ ಹಾಗು ವಿಜಯ ಪತಾಕೆ ಹೊಂದಿರುತ್ತಾನೆ. ಈತ ಕಾಣಲು ಕ್ರುದ್ಧನಾಗಿರುತ್ತಾನೆ, ಬೆಂಕಿಯಂತೆ ಉರಿಯುತ್ತಿರುತ್ತಾನೆ, ಹಾಗು ಆತನ ದೇಹದ ಕೆಳ ಭಾಗವು ಹಾವಿನ ಆಕಾರದಲ್ಲಿರುತ್ತದೆ. ರಾಹು(ಲ) ಒಬ್ಬ ''ಸಾ'' ಆಗಿದ್ದಾನೆ,'ಸಾ'ಎಂದರೆ ಈತ ಇಲ್ಲಿ ಆಕಾಶಕಾಯಗಳೊಂದಿಗೆ ಸಂಬಂಧವಿರುವ ಸ್ವರ್ಗದೇವತೆಗಳ ಒಂದು ವರ್ಗಕ್ಕೆ ಸೇರಿದ್ದಾನೆ ಎನ್ನಲಾಗುತ್ತದೆ.
೧೧೪ ನೇ ಸಾಲು:
* ಕೇತು
* ನವಗ್ರಹ
* ಸ್ವರ್ಭಾನು
 
==ಟಿಪ್ಪಣಿಗಳು==
೧೩೧ ನೇ ಸಾಲು:
{{HinduMythology}}
 
[[Categoryವರ್ಗ:ಸಂಸ್ಕೃತ ಪದಗಳು ಮತ್ತು ಪದಗುಚ್ಚಗಳು ]]
[[Categoryವರ್ಗ:ಅಸುರ ]]
[[Categoryವರ್ಗ:ಗ್ರಹ]]
[[Categoryವರ್ಗ:ಸೂರ್ಯ ಬಗ್ಗೆ ಇರುವ ಪುರಾಣ ಕಥೆಗಳು ]]
[[Categoryವರ್ಗ:ಚಂದ್ರನ ಬಗ್ಗೆ ಇರುವ ಪುರಾಣ ಕಥೆಗಳು ]]
[[Categoryವರ್ಗ:ಗ್ರಹಣಗಳು ]]
[[Categoryವರ್ಗ:ಭಾರತೀಯ ಜ್ಯೋತಿಶ್ಶಾಸ್ತ್ರ ]]
[[Categoryವರ್ಗ:ಜ್ಯೋತಿಶ್ಶಾಸ್ತ್ರದ ಇತಿಹಾಸ ]]
[[ವರ್ಗ:ಜ್ಯೋತಿಷ್ಯ]]
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ರಾಹು" ಇಂದ ಪಡೆಯಲ್ಪಟ್ಟಿದೆ