"ಪಿ ಹೆಚ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
‘[[ಮೆಟಬಾಲಿಸಮ್]]’ ([[ಉಪಾಪಚಯ]]) ಪ್ರಕ್ರಿಯೆ ನಿರ್ದಿಷ್ಟ ಪ್ರಮಾಣದಲ್ಲಿ ನಡೆಯುವುದು ಆರೋಗ್ಯವಂತ ದೇಹದ ಪ್ರಧಾನ ಲಕ್ಷಣ. ಇದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಸಾಮಾನ್ಯವಾಗಿ [[ನಾಡಿಮಿಡಿತ]], [[ಉಷ್ಣತೆ]], [[ರಕ್ತದೊತ್ತಡ]], [[ರಕ್ತ ]]ಅಥವಾ [[ಮೂತ್ರ]]ದಲ್ಲಿನ [[ಸಕ್ಕರೆ]] ಮುಂತಾದ ಅಂಶಗಳನ್ನು ಪರಿಶೀಲಿಸುತ್ತಾರೆ. ಹಾಗೆಯೇ ಕೆಲವೊಂದು ಸಂದರ್ಭಗಳಲ್ಲಿ ದೇಹ ಹೊರಸೂಸುವ [[ಬೆವರು]] ಅಥವಾ ಮೂತ್ರವು [[ಆಮ್ಲೀಯ]]ವಾಗಿದೆಯೊ ಅಥವಾ [[ಕ್ಷಾರೀಯ]]ವಾಗಿದೆಯೊ ಎಂಬ ಅಂಶಗಳನ್ನೂ ಗಣನೆ ಮಾಡಬೇಕಾಗುತ್ತದೆ. ಇದರ ಮಾನಕದ ಹೆಸರು ‘[[ಪಿಎಚ್]] - [[pH]] (potential of Hydrogen)'. ಉದಾಹರಣೆಗೆ [[ಆಮ್ಲ ]]ಅಥವಾ [[ಕ್ಷಾರ]] ಗುಣದಲ್ಲಿ [[ತಟಸ್ಥ]]ವಾಗಿರುವ ಶುದ್ಧ ನೀರಿನ ‘ಪಿಎಚ್’ ಅಳತೆ 7. ‘ಪಿಎಚ್’ 7ಕ್ಕಿಂತಲೂ ಕಡಿಮೆಯಾದರೆ ದ್ರವ ಆಮ್ಲೀಯ ಗುಣ ಪಡೆಯುತ್ತದೆ. ಅಂತೆಯೇ ‘ಪಿಎಚ್’ 7ಕ್ಕಿಂತಲೂ ಹೆಚ್ಚಿದ್ದರೆ ದ್ರವ ಕ್ಷಾರೀಯ ಗುಣ ಪಡೆಯುತ್ತದೆ. ಈ ಬಗೆಯ ಜೀವರಾಸಾಯನಿಕ ಗುಣಲಕ್ಷಣಗಳನ್ನು ‘ಥಟ್ಟೆಂದು ಹೇಳಲು’ ಸಾಧ್ಯವಿಲ್ಲ. ಪ್ರಯೋಗಶಾಲೆಯಲ್ಲಿನ ಸೂಕ್ಷ್ಮ ಪರಿಶೀಲನೆಯಲ್ಲಿ ಮಾತ್ರ ಅಳತೆ ಮಾಡಬಹುದು. ನಮಗ್ಯಾರಿಗೂ ಈ ಬಗೆಯ ಅಂಕೆ-ಅಂಶಗಳು ಸಾಮಾನ್ಯವಾಗಿ ಬೇಕಾಗುವುದಿಲ್ಲ. ತಿಳಿದುಕೊಂಡರೂ ಯಾವ ಅಂಶಗಳು ಯಾವ ಬಗೆಯ ಪರಿಣಾಮಗಳನ್ನು ಮಾಡುತ್ತವೆ ಅಥವಾ ದೇಹದ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ಮನದಟ್ಟಾಗುವುದಿಲ್ಲ.
 
[[ವರ್ಗ:ಭೌತಶಾಸ್ತ್ರ]]
೧೪,೯೨೯

edits

"https://kn.wikipedia.org/wiki/ವಿಶೇಷ:MobileDiff/542818" ಇಂದ ಪಡೆಯಲ್ಪಟ್ಟಿದೆ