ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
==ಹುಟ್ಟು ಮತ್ತು ಬಾಲ್ಯ==
 
ವಿಠ್ಠಲಪಂತ ಮತ್ತು ರುಕ್ಮಿಣಿಬಾಯಿ ಕುಲಕರ್ಣಿ ಎಂಬ ಧರ್ಮಭೀರು ದಂಪತಿಗಳ ನಾಲ್ಕು ಮಕ್ಕಳಲ್ಲಿ ಎರಡನೆಯವನಾಗಿ ಜ್ಞಾನದೇವ ಪೈಠಣದ ಹತ್ತಿರದ . [[ಗೋದಾವರಿ ನದಿ]] ತೀರದ , ಅಪೆಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ.
 
ಚಿಕ್ಕವಯಸ್ಸಿನಲ್ಲಿಯೇ ವೇದ ಶಾಸ್ತ್ರಗಳನ್ನು ಅಭ್ಯಾಸಮಾಡಿ ವಿದ್ವತ್ತನ್ನು ಸಂಪಾದಿಸಿದ್ದ ವಿಠ್ಠಲಪಂತ,ಲೌಕಿಕ ವಿಷಯಗಳಲ್ಲಿ ನಿರಾಸಕ್ತಿಯಿಂದಿದ್ದು , ಧರ್ಮಪರಾಯಣನಾಗಿ ಸದಾ ತೀರ್ಥಯಾತ್ರೆಯಲ್ಲಿರುತ್ತಿದ್ದ. ಅಂತಹ ಒಂದು ಯಾತ್ರೆಯ ಸಂದರ್ಭದಲ್ಲಿ ಅವನು [[ಪುಣೆ]]ಯಿಂದ 30 ಕಿ.ಮೀದೂರದ ಆಳಂದಿ ಎಂಬಲ್ಲಿ ಹನುಮಾನ್ ದೇವಾಲಯದಲ್ಲಿ ತಂಗಿದ. ಈ ಯುವಕನ್ನು ನೋಡಿದ ಸಿದ್ಧೋಪಂತ ಎಂಬ ಬ್ರಾಹ್ಮಣನು[[ಬ್ರಾಹ್ಮಣ]]ನು ತನ್ನ ಮಗಳು ರುಕ್ಮಿಣಿಗೆ ಇವನೇ ತಕ್ಕ ವರ ಎಂದು ನಿರ್ಧರಿಸಿದ. ಲೌಕಿಕ ವ್ಯವಹಾರಗಳಲ್ಲಿ ಆಸಕ್ತಿಯಿಲ್ಲದ ವಿಠ್ಠಲಪಂತನು ಈ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದರೂ, ನಂತರ , ದರ್ಶನವೊಂದರಲ್ಲಿ ಕೇಳಿದ ಸೂಚನೆಯ ಪ್ರಕಾರ ಮದುವೆಯಾಗಲು ಒಪ್ಪಿದ.
 
ಮದುವೆಯ ನಂತರ ವಿಠ್ಠಲಪಂತ ಸ್ವಲ್ಪಕಾಲ ಆಳಂದಿಯಲ್ಲಿ ತಂಗಿದ. ಕೌಟುಂಬಿಕ ವ್ಯವಹಾರಗಳಲ್ಲಿ ಅವನ ನಿರಾಸಕ್ತಿಯನ್ನು ಗಮನಿಸಿದ ಅವನ ಮಾವ , ಅವನ ಊರಾದ ಅಪೆಗಾಂವ್ ಗ್ರಾಮಕ್ಕೆ ಕರೆದೊಯ್ದನು. ಅವನ ತಂದೆ ತಾಯಿಯರು ಅವನನ್ನು ಕಂಡು ಬಹಳ ಸಂತೋಷಪಟ್ಟರೂ, ಕೆಲಕಾಲದಲ್ಲಿಯೇ ಅವರಿಬ್ಬರೂ ಮೃತರಾದದ್ದರಿಂದ , ಸಂಸಾರದ ಪೂರ್ಣ ಜವಾಬ್ದಾರಿ ವಿಠ್ಠಲಪಂತನ ಮೇಲೆ ಬಿತ್ತು. ಮೊದಲೇ ಸಾಂಸಾರಿಕ ವಿಷಯಗಳಲ್ಲಿ ವಿರಕ್ತನಾದ ವಿಠ್ಠಲಪಂತ ಈ ಹೊರೆಯನ್ನು ಹೊರಲಾರದೆ ತತ್ತರಿಸಿದ. ಅವನ ಮಾವ ಸಿದ್ಧೋಪಂತನು ಅವನನ್ನು ಮತ್ತೆ ಆಳಂದಿಗೆ ಕರೆದುಕೊಂಡು ಹೋದನು. ಇದರಿಂದ ಯಾವುದೇ ಬದಲಾವಣೆಯಾಗದೆ, ಒಂದು ದಿನ ನದಿಗೆ ಸ್ನಾನಕ್ಕೆ ಹೋದ ವಿಠ್ಠಲಪಂತನು ಮನೆಗೆ ವಾಪಸಾಗದೇ, ವಾರಾಣಸಿಗೆ[[ವಾರಾಣಸಿ]]ಗೆ ಹೋಗಿಬಿಟ್ಟನು.
 
ವಾರಾಣಸಿಯಲ್ಲಿ[[ವಾರಾಣಸಿ]]ಯಲ್ಲಿ ವಿಠ್ಠಲಪಂತನಿಗೆ ರಮಾನಂದಸ್ವಾಮಿ ಎಂಬ ಸಂತನ ದರ್ಶನವಾಯಿತು. ತನ್ನ ವಿವಾಹವಾದ ವಿಷಯವನ್ನು ಮರೆಮಾಚಿದ ವಿಠ್ಠಲಪಂತನು , ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ , ಸನ್ಯಾಸ ದೀಕ್ಷೆಕೊಡುವಂತೆ ಬೇಡಿದನು. ಶಾಸ್ತ್ರಗಳ ಪ್ರಕಾರ , ಪತ್ನಿಯ ಅನುಮತಿಯಲ್ಲದೆ ಪತಿ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳುವಂತಿರಲಿಲ್ಲ. ಮೃತರಿಗೆ ಮಾಡುವ ಕರ್ಮಗಳನ್ನೂ ಸನ್ಯಾಸದೀಕ್ಷೆಯನ್ನು ಅಂಗವಾಗಿ ಮಾಡಬೇಕಾಗುತ್ತದೆ. ಅವನ ಎಲ್ಲಾ ನಂಟುಗಳೂ ಹೋಗಿ , ಅವನಿಗೆ ಹೊಸ ಹೆಸರನ್ನೂ ಹೊಸ ಹುಟ್ಟನ್ನೂ ಕೊಡಲಾಗುವುದು. ಅದರಂತೆ ವಿಠ್ಠಲಪಂತ ಸನ್ಯಾಸಿಯಾಗಿ ಚೈತನ್ಯಾಶ್ರಮ ಎಂಬ ನಾಮಧಾರಣೆ ಮಾಡಿದ.
 
ನಂತರ, ಹೀಗೆಯೇ ತೀರ್ಥಯಾತ್ರೆಗೆ ಹೋದ ರಮಾನಂದ ಸ್ವಾಮಿಯು ಯೋಗಾಯೋಗದಿಂದ ಆಳಂದಿಯಲ್ಲಿ ತಂಗಿದ. ಗಂಡನ ನಿರ್ಗಮನದ ನಂತರ , ತನ್ನ ದುಃಖವನ್ನು ಮರೆಯಲು ಸಂಪೂರ್ಣ ಧಾರ್ಮಿಕ ಕ್ರಿಯೆಗಳಲ್ಲಿ ಮುಳುಗಿದ್ದ ರುಕ್ಮಿಣಿಯು, ರಮಾನಂದಸ್ವಾಮಿಯನ್ನು ಭೇಟಿಯಾಗಿ ನಮಸ್ಕರಿಸಿದಳು. ರಮಾನಂದ ಸ್ವಾಮಿಯು ಅವಳಿಗೆ "ಪುತ್ರವತೀಭವ" (ನಿನಗೆ ಮಕ್ಕಳಾಗಲಿ) ಎಂದು ಆಶೀರ್ವಾದ ಮಾಡಿದ. ಇದನ್ನು ಕೇಳಿ ನಕ್ಕ ರುಕ್ಮಿಣೀಬಾಯಿಯನ್ನು ವಿಚಾರಿಸಿದ ರಮಾನಂದಸ್ವಾಮಿಗೆ ಆಕೆ ತನ್ನ ಗಂಡ ತನ್ನನ್ನು ತೊರೆದ ಬಗ್ಯೆ ಹೇಳಿದಳು. ಹೆಚ್ಚು ಹೆಚ್ಚು ವಿಚಾರಣೆ ಮಾಡಿದಂತೆ ಅವಳ ಗಂಡನ ವಿವರಗಳು ಚೈತನ್ಯಾಶ್ರಮನೊಂದಿಗೆ ಹೋಲುವುದು ಗಮನಕ್ಕೆ ಬಂತು. ಶಾಸ್ತ್ರದ ಪ್ರಕಾರ , ಸನ್ಯಾಸದೀಕ್ಷೆ ಕೊಟ್ಟ ಅವನಿಗೂ ದೋಷ ಅಂಟಿಕೊಂಡಿತು. ತಕ್ಷಣವೇ ವಾರಾಣಸಿಗೆ ಹಿಂತಿರುಗಿದ ರಮಾನಂದ ಸ್ವಾಮಿಯು ಚೈತನ್ಯಾಶ್ರಮನನ್ನು ಗದರಿಸಲು, ಆತ ತಪ್ಪೊಪ್ಪಿಕೊಂಡ. ರಮಾನಂದ ಸ್ವಾಮಿಯು ಅವನಿಗೆ ತಕ್ಷಣವೇ ವಾಪಸು ಹೋಗಿ ಹೆಂಡತಿಯೊಂದಿಗೆ ಸಂಸಾರ ಮಾಡುವಂತೆ ಆಜ್ಞಾಪಿಸಿದನು.
 
ಅದರಂತೆ ಆತ ಆಳಂದಿಗೆ ಹಿಂದಿರುಗಿ ಸಂಸಾರವನ್ನು ಪುನಃ ಪ್ರಾರಂಭಿಸಿದರೂ, ಅಲ್ಲಿಯ ಸಮಾಜ , ಸನ್ಯಾಸಿಯು ಸಂಸಾರ ಮಾಡುವ ಈ ಕಂಡುಕೇಳರಿಯದ ಪರಿಯನ್ನು ನೋಡಿ ಕೋಪಗೊಂಡು ಅವನ ಕುಟುಂಬವನ್ನು ಬಹಿಷ್ಕರಿಸಿತು. ವಿಠ್ಠಲಪಂತನು ಸಂಪೂರ್ಣ ವೇದಶಾಸ್ತ್ರಗಳ ವ್ಯಾಸಂಗದಲ್ಲಿ ಮುಳುಗಿದನು. ಕಾಲಕ್ರಮೇನಕಾಲಕ್ರಮೇ ಈ ದಂಪತಿಗಳಿಗೆ ನಾಲ್ಕು ಮಕ್ಕಳಾದರು. 1273ರಲ್ಲಿ೧೨೭೩ರಲ್ಲಿ ನಿವೃತ್ತಿ, 1275ರಲ್ಲಿ೧೨೭೫ರಲ್ಲಿ ಜ್ಞಾನದೇವ, 1277ರಲ್ಲಿ೧೨೭೭ರಲ್ಲಿ ಸೋಪಾನ ಎಂಬ ಮೂವರು ಗಂಡು ಮಕ್ಕಳು ಮತ್ತು 1279ರಲ್ಲಿ೧೨೭೯ರಲ್ಲಿ ಮುಕ್ತಾಬಾಯಿ ಎಂಬ ಹೆಣ್ಣು ಮಗು. ಏಳು ವರ್ಷದವನಾದ ನಿವೃತ್ತಿಗೆ ಉಪನಯನ ಮಾಡುವುದಕ್ಕಾಗಿ ವಿಠ್ಠಲಪಂತನ ಕೋರಿಕೆಯನ್ನು ಅಲ್ಲಿಯ ಸ್ಥಳೀಯ ಬ್ರಾಹ್ಮಣರು ತಿರಸ್ಕರಿಸಿದರು.
 
ಇದರಿಂದ ಅತ್ಯಂತ ವ್ಯಥಿಥನಾದವ್ಯಥಿತನಾದ ವಿಠ್ಠಲಪಂತನು, [[ನಾಸಿಕ್ |ನಾಸಿಕದ]] ಹತ್ತಿರದ ತ್ರ್ಯಂಬಕೇಶ್ವರಕ್ಕೆ ಹೋಗಿ ಅಲ್ಲಿ ಶಿವದೇವಾಲಯದಲ್ಲಿ ಕುಟುಂಬದೊಂದಿಗೆ ಪೂಜೆಯನ್ನು ಕೈಗೊಂಡನು. ತ್ರ್ಯಂಬಕೇಶ್ವರ ಶಿವ ಹನ್ನರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿದೆ. ಅಲ್ಲಿ ಒಮ್ಮೆ ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವಾಗ ಒಂದು ಹುಲಿ ಅವರಿಗೆ ಎದುರಾಯಿತು ( ಆ ಕಾಲದಲ್ಲಿ ಅಲ್ಲೆಲ್ಲಾ ದಟ್ಟ ಕಾಡುಗಳ್ಳಿದ್ದವು.) ಮನೆಮಂದಿಯೆಲ್ಲಾ ಭಯಭೀತರಾಗಿ ಚಲ್ಲಾಪಿಲ್ಲಿಯಾಗಿ ಓಡಿದರು. ನಿವೃತ್ತಿಯು ಓಡುತ್ತಾ, ಒಂಭತ್ತು ನಾಥರುಗಳಲ್ಲಿ ಒಬ್ಬರಾಗಿದ್ದ ಗಹಿನಿನಾಥರು, ಸದ್ಯ ವಾಸವಾಗಿದ್ದ ಅಂಜನಿ ಗುಡ್ಡದ ಗುಹೆಯೊಂದನ್ನು ಹೊಕ್ಕನು. ಈ ಬಾಲಕನಿಂದ ಆರ್ಷಿತರಾದ ಗಹಿನಿನಾಥರು , ಅವನ ಸಣ್ಣವಯಸ್ಸನ್ನೂ ಲೆಕ್ಕಿಸದೆ , ಸನ್ಯಾಸದೀಕ್ಷೆ ಕೊಟ್ಟು , ಅವನಿಗೆ "ರಾಮಕೃಷ್ಣ ಹರಿ" ಮಂತ್ರವನ್ನು ಅನುಗ್ರಹಿಸಿದರು. ಹಾಗೂ ಶ್ರೀಕೃಷ್ಣ ಭಕ್ತಿಯನ್ನು ಪ್ರಸಾರ ಮಾಡುವಂತೆ ಆಜ್ಞಾಪಿಸಿದರು. ಅಂದಿನಿಂದ ನಿವೃತ್ತಿಯು ನಿವೃತ್ತಿನಾಥನಾದನು.
 
==ವೇದಾಭ್ಯಾಸ==
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ