ಶಿವರಾಮ ಕಾರಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
[[ಜ್ಞಾನಪೀಠ]] ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು [[ಉಡುಪಿ]] ಜಿಲ್ಲೆಯ ಕೋಟದಲ್ಲಿ [[೧೯೦೨]], [[ಅಕ್ಟೋಬರ್ ೧೦]]ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು [[ಸೆಪ್ಟೆಂಬರ್ ೧೨]] [[೧೯೯೭]]ರಂದು ನಿಧನ ಹೊಂದಿದರು.
 
"ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಮಾತು ಕಾರಂತರ ಸಾಹಿತ್ಯ-ಸಾಹಿತ್ಯೇತರ ಬದುಕು ಕಂಡಾಗ ನಿಜ ಅನ್ನಿಸಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. [[ಕರ್ನಾಟಕ]]ದ ಮೂಲೆ ಮೂಲೆ, [[ಭಾರತ | ಭಾರತದ]] ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ಸಾವಿನ ಹಿಂದಿನ ನಾಲ್ಕಾರು ದಿನಗಳವರೆಗೂ ಪ್ರವಾಸ ಮಾಡಿದ್ದರು.
 
[[ಜ್ಞಾನಪೀಠ]], [[ಪದ್ಮಭೂಷಣ]], [[ಪಂಪ ಪ್ರಶಸ್ತಿ]], [[ನಾಡೋಜ ಪುರಸ್ಕಾರ]], ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.
 
[[Image:Gondaranya.jpg|thumb|right|200px|[[ಗೊಂಡಾರಣ್ಯ]]]]
[[Image:Chomanadudi.jpg|thumb|righ|200px|ಚೋಮನ ದುಡಿ ]]
 
==ಕೃತಿಗಳು==
"https://kn.wikipedia.org/wiki/ಶಿವರಾಮ_ಕಾರಂತ" ಇಂದ ಪಡೆಯಲ್ಪಟ್ಟಿದೆ