೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೧ ನೇ ಸಾಲು:
===ಯಾರಿವರು?===
54 ವರ್ಷದ ಬೆಟ್ಜಿಗ್ ಅವರು ಅಮೇರಿಕದ ವರ್ಜಿನಿಯಾದಲ್ಲಿರುವ ಹೋವರ್ಡ್ ಹ್ಯೂಸ್ ವೈದ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದಾರೆ. 51ರ ಹರೆಯದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಜೀವ ಭೌತರಸಾಯನಶಾಸ್ತ್ರ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಮೋರ್ನರ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
=='''ಶಾಂತಿ'''==
ವಿಶ್ವದ ಅತ್ಯುನ್ನತ ಶಾಂತಿ ಗೌರವ ಎಂದೇ ಪ್ರಸಿದ್ದಿಯಾಗಿರುವ ನೊಬೆಲ್ ಶಾಂತಿ ಪ್ರಶಸ್ತಿ ಸರಿಯಾಗಿ 35 ವರ್ಷಗಳ ಬಳಿಕ ಭಾರತಿಯರೊಬ್ಬರಿಗೆ ಜಂಟಿಯಾಗಿ ಲಭಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಪರ ಅವಿರತ ಹೋರಾಟ ನಡೆಸುತ್ತಿರುವ ಭಾರತದ [[ಕೈಲಾಸ್ ಸತ್ಯಾರ್ಥಿ]] 2014ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಪರ ದನಿ ಎತ್ತಿ ತಾಲಿಬಾನಿಂದ ಶಿಕ್ಷೆಗೂ ಒಳಗಾಗಿದ್ದ ಪಾಕ್ ನ 17 ವರುರ್ಷದ ಬಾಲಕಿ [[ಮಲಾಲ ಯೂಸಫ್ ಝಾಯಿ]] ಜತೆ ಸತ್ಯಾರ್ಥಿ ಅವರು ಈ ಗೌರವವನ್ನು ಹಂಚ್ಚಿಕೊಂಡಿದ್ದಾರೆ.
===ಸಾಧನೆ===
ಮಕ್ಕಳ ಹಾಗೂ ಯುವ ಜನರ ಶೋಷಣೆಯ ವಿರುದ್ದ ಹಾಗೂ ಮಕ್ಕಳ ಶಿಕ್ಷಣ ಹಕ್ಕುಗಳ ಪರ ಹೋರಾಡುವಲ್ಲಿ ವೈಯಕ್ತಿಕ ದಿಟ್ಟತನ ತೋರಿದ್ದು.
ಗಾಂಧೀವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ '''ಬಚಪನ್ ಬಚಾವೋ''' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಶೋಷಿತರ ಧ್ವನಿಯಾಗಿ ನಿಂತಿದ್ದಾರೆ. ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳ ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತರಾಷ್ಟ್ರಿಯ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿಕೊಂಡಿದ್ದಾರೆ. ಮಲಾಲಾ ಸಹ ಉಗ್ರರ ಬೆದರಿಕೆಗೆ ಮಣಿಯದೇ ಕಿರಿಯ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಹೋರಟಗಾರ್ತಿಯಾಗಿ ರೂಪುಗೊಂಡು, ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಹಕ್ಕು ದೊರೆಯುವಂತಾಗಿದೆ.
===ಯಾರಿವರು?===
'''ಅತಿ ಕಿರಿಯ ವ್ಯಕ್ತಿ'''
ತಾಲಿಬಾನ್ ಉಗ್ರರ ದಾಳಿಗೆ ಸಿಲುಕಿ ಕೂದಳಲತೆಯಲ್ಲಿ ಪಾರಾಗಿ ಬಂದ ಮಲಾಲ ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ೧೯೧೫ರಲ್ಲಿ ತಂದೆಯ ಜೊತೆಗೆ ನೊಬೆಲ್ ಪಡೆದ ವಿಜ್ಞಾನಿ ಲಾರೆನ್ಸ್ ಬ್ರ್ಯಾಗ್(೨೫) ಅವರ ಹೆಸರಿನಲ್ಲಿತ್ತು.
ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು